Asianet Suvarna News Asianet Suvarna News

ಪಾಕಿಸ್ತಾನಿ ಧ್ವಜವನ್ನು ಕಾಲಿನಲ್ಲಿ ಎತ್ತಿಟ್ಟ ಮೊಹಮದ್‌ ರಿಜ್ವಾನ್‌, ವಿಡಿಯೋ ವೈರಲ್!

ಪಾಕಿಸ್ತಾನ ತಂಡ ಸದ್ಯ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ 7 ಟಿ20 ಪಂದ್ಯಗಳ ಸರಣಿ ಆಡುತ್ತಿದೆ. ಸರಣಿಯ ಐದನೇ ಪಂದ್ಯ ಇಂದು ಲಾಹೋರ್‌ನಲ್ಲಿ ನಡೆಯಲಿದೆ. ಇದುವರೆಗೆ ಆಡಿದ 4 ಟಿ20 ಪಂದ್ಯಗಳಲ್ಲಿ ಉಭಯ ತಂಡಗಳು 2-2 ಪಂದ್ಯಗಳನ್ನು ಗೆದ್ದಿವೆ. ನಾಲ್ಕನೇ ಪಂದ್ಯದ ನಂತರ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಮೊಹಮ್ಮದ್ ರಿಜ್ವಾನ್ ತಮ್ಮದೇ ದೇಶದ ಧ್ವಜಕ್ಕೆ ಅವಮಾನ ಮಾಡಿರುವ ವಿಡಿಯೋ ವೈರಲ್ ಆಗಿದೆ. 

Mohammad Rizwan insulted the Pakistan flag raised it with his feet Viral VIDEO san
Author
First Published Sep 28, 2022, 12:28 PM IST

ಲಾಹೋರ್‌ (ಸೆ. 28):  ಪಾಕಿಸ್ತಾನ ಕ್ರಿಕೆಟ್‌ ತಂಡದ ಆಟಗಾರ, ವಿಕೆಟ್‌ ಕೀಪರ್‌ ಮೊಹಮದ್‌ ರಿಜ್ವಾನ್‌ ದೇಶದ ದೊಡ್ಡ ಸ್ಟಾರ್‌ ಆಟಗಾರ. ಆರಂಭಿಕ ಆಟಗಾರ ತಮ್ಮ ಬ್ಯಾಟಿಂಗ್‌ ಮೂಲಕ ಈಗಾಗಲೇ ಪಾಕಿಸ್ತಾನದಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಮಕ್ಕಳು, ದೊಡ್ಡವರೆನ್ನದೆ ಅಪಾರ ಅಭಿಮಾನಿ ಬಳಗವನ್ನು ಅವರು ಹೊಂದಿದ್ದಾರೆ. ಆದರೆ, ಇತ್ತೀಚೆಗೆ ಮೊಹಮದ್‌ ರಿಜ್ವಾನ್‌ ಅವರ ಒಂದು ವರ್ತನೆಯಿಂದಾಗಿ ದೇಶದ ಅಭಿಮಾನಿಗಳೇ ಅವರನ್ನು ಟೀಕೆ ಮಾಡಲು ಆರಂಭಿಸಿದ್ದಾರೆ. ರಿಜ್ವಾನ್‌ ಅವರ ಅಹಂಕಾರಕ್ಕೆ ಸೋಶಿಯಲ್‌ ಮೀಡಿಯಾದಲ್ಲಿ ಬೆಂಡೆತ್ತಿದ್ದಾರೆ. ವಿಚಾರ ಏನೆಂದರೆ, ಮೊಹಮದ್ ರಿಜ್ವಾನ್‌ ತನ್ನದೇ ದೇಶದ ಧ್ವಜಕ್ಕೆ ಅತ್ಯಂತ ಕೆಟ್ಟ ರೀತಿಯಲ್ಲಿ ಅವಮಾನ ಮಾಡಿದ್ದಾರೆ. ಪಂದ್ಯ ಮುಗಿದ ಬಳಿಕ ಪಾಕಿಸ್ತಾನದ ಅಭಿಮಾನಿಗಳಿಗೆ ರಿಜ್ವಾನ್‌ ಹಸ್ತಾಕ್ಷರ ನೀಡುತ್ತಿದ್ದರು. ಈ ವೇಳೆ ನೆಲಕ್ಕೆ ಬಿದ್ದ ಪಾಕಿಸ್ತಾನದ ಧ್ವಜವನ್ನು ಕಾಲಿನಿಂದ ಎತ್ತಿದ್ದಾರೆ. ಈ ವಿಡಿಯೋ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಇದನ್ನು ಒಬ್ಬ ವ್ಯಕ್ತಿ ವಿಡಿಯೋ ಮಾಡಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಹಾಕಿದ್ದಾರೆ. ರಿಜ್ವಾನ್‌ ಅವರ ವರ್ತನೆಗೆ ಪಾಕಿಸ್ತಾನದ ಜನ ಸೋಶಿಯಲ್‌ ಮೀಡಿಯಾದಲ್ಲಿ ಕಿಡಿಕಾರಿದ್ದು, ದೇಶದ ಧ್ವಜಕ್ಕೆ ಮರ್ಯಾದೆ ಕೊಡಿ, ಇಂಥ ಅಹಂಕಾರದ ವರ್ತನೆಯನ್ನು ಬಿಡಿ ಎಂದು ಸಲಹೆ ನೀಡಿದ್ದಾರೆ.

ವಿಡಿಯೋ ವೈರಲ್ (Mohammad Rizwan Pakistani Flag ) ಆದ ನಂತರ ಪಾಕಿಸ್ತಾನಿ (Pakistani) ಜನರು ರಿಜ್ವಾನ್ ಅವರನ್ನು ತೀವ್ರವಾಗಿ ಟೀಕೆ ಮಾಡುತ್ತಿದ್ದಾರೆ. ತಮ್ಮ ಗೌರವದ ಬಗ್ಗೆ ತಲೆಕೆಡಿಸಿಕೊಳ್ಳದವರಿಗೆ ದೇಶದ ಗೌರವದ ಬಗ್ಗೆ ಏನು ಕಾಳಜಿ ಇದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ರಿಜ್ವಾನ್‌ನ ದೊಡ್ಡ ಅಭಿಮಾನಿಗಳಾಗಿದ್ದವರು ಇಂದು ರಿಜ್ವಾನ್ (Mohammad Rizwan) ಬಗ್ಗೆ ಅಸಭ್ಯವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ರಿಜ್ವಾನ್‌ನನ್ನು ಪ್ರಾಣಿ ಎಂದೂ ಕಾಮೆಂಟ್‌ ಬಾಕ್ಸ್‌ನಲ್ಲಿ ಕರೆದಿದ್ದಾರೆ.

ಆಗಿದ್ದೇನು: ಪ್ರವಾಸಿ ಇಂಗ್ಲೆಂಡ್‌ (England) ವಿರುದ್ಧದ ನಾಲ್ಕನೇ ಟಿ20 ಪಂದ್ಯ ಮುಗಿದ ಬಳಿಕ ನಡೆದ ಘಟನೆ ಇದಾಗಿದೆ. ವಿಶ್ವದ ನಂ.1 ಟಿ20 ಬ್ಯಾಟ್ಸ್‌ಮನ್‌ ಮೊಹಮದ್‌ ರಿಜ್ವಾನ್‌ ಅವರ ಆಟೋಗ್ರಾಫ್‌ ಬಯಸಿ, ಪಾಕ್‌ ಅಭಿಮಾನಿಗಳು ಟಿ-ಶರ್ಟ್‌, ಕ್ಯಾಪ್‌ಗಳನ್ನು ಎಸೆಯುತ್ತಿದ್ದರು. ಇವಲ್ಲೆವನ್ನೂ ಪಡೆದುಕೊಂಡ ರಿಜ್ವಾನ್‌, ಅದನ್ನು ಟೇಬಲ್‌ನ ಮೇಲಿಟ್ಟು ಸಹಿ ಹಾಕಲು ಆರಂಭಿಸಿದ್ದಾರೆ. ಇದನ್ನು ಒಬ್ಬ ವ್ಯಕ್ತಿ ವಿಡಿಯೋ ಕೂಡ ಮಾಡಿದ್ದಾನೆ. ಇದೇ ಅವಧಿಯಲ್ಲಿ ಇನ್ನೊಬ್ಬ ವ್ಯಕ್ತಿ, ಪಾಕಿಸ್ತಾನದ ಧ್ವಜವನ್ನು ರಿಜ್ವಾನ್‌ನತ್ತ ಎಸೆದಿದ್ದಾರೆ. ರಿಜ್ವಾನ್‌ ಅದನ್ನು ಪಡೆದುಕೊಂಡು ಅದರ ಮೇಲೆ ಸಹಿ ಹಾಕುತ್ತಾರೆ. ಈ ಅವಧಿಯಲ್ಲಿ ಧ್ವಜದ ಒಂದಷ್ಟು ಭಾಗ ರಿಜ್ವಾನ್‌ನ ಕಾಲಿ ಬಳಿ ಬಿದ್ದಿತ್ತು.

ರಿಜ್ವಾನ್ ಅಭಿಮಾನಿಗಳ ನಡುವೆ ಆಟೋಗ್ರಾಫ್ ಕೊಡುವುದರಲ್ಲಿ ಮಗ್ನರಾಗಿದ್ದ ಕಾರಣ,  ಅವರು ತಮ್ಮದೇ ದೇಶದ ಧ್ವಜದತ್ತ ಗಮನ ಹರಿಸಲು ಸಾಧ್ಯವಾಗಿಲ್ಲ.ಧ್ವಜದ ಮೇಲೆ ಆಟೋಗ್ರಾಫ್ ನೀಡುತ್ತಾರೆ. ಎಲ್ಲದಕ್ಕೂ ಸಹಿ ಹಾಕಿದ ಬಳಿಕ, ಅದನ್ನು ಅಭಿಮಾನಿಗಳಿಗೆ ವಾಪಸ್‌ ನೀಡಲು ಆರಂಭಿಸುತ್ತಾರೆ. ಈ ವೇಳೆ ಕಾಲಿನತ್ತ ಬಿದ್ದಿದ್ದ ಧ್ವಜದ ಭಾಗವನ್ನು ಕಾಲಿನಿಂದಲೇ ಎತ್ತಿದ್ದಾರೆ. ಇದರ ಸಂಪೂರ್ಣ ವಿಡಿಯೋ ಇಲ್ಲಿದೆ.

 
 
 
 
 
 
 
 
 
 
 
 
 
 
 

A post shared by Khel Shel (@khelshel)

IND VS SA ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿಗಿಂದು ಭಾರತ ತಂಡ ಆಯ್ಕೆ

ಇಂದು ಐದನೇ ಟಿ20 ಪಂದ್ಯ: ಪಾಕಿಸ್ತಾನ ಪ್ರವಾಸಿ ಇಂಗ್ಲೆಂಡ್‌ ತಂಡದ ವಿರುದ್ಧ ತವರಿನಲ್ಲಿ ಏಳು ಪಂದ್ಯಗಳ ಟಿ20 ಸರಣಿ ಆಡುತ್ತಿದ್ದು, ಸರಣಿಯ ಐದನೇ ಪಂದ್ಯ ಲಾಹೊರ್‌ನಲ್ಲಿ ಬುಧವಾರ ನಡೆಯಲಿದೆ. ಈವರೆಗೂ ಆಡಿರುವ ನಾಲ್ಕು ಪಂದ್ಯಗಳಲ್ಲಿ ಎರಡೂ ತಂಡಗಳು ಒಂದೇ ರೀತಿಯ ಹೋರಾಟ ತೋರಿದ್ದು, ತಲಾ 2 ಪಂದ್ಯಗಳಲ್ಲಿ ಜಯ ಕಂಡಿವೆ.

ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗೂ ಮುನ್ನ ಭಾರತಕ್ಕೆ ಆಘಾತ, ಮೂವರು ಆಟಗಾರರು ಔಟ್‌!

ಸರಣಿಯ ನಾಲ್ಕನೇ ಪಂದ್ಯದಲ್ಲಿ ಮೊಹಮದ್‌ ರಿಜ್ವಾನ್‌ 88  ರನ್‌ ಬಾರಿಸಿದ್ದಾರೆ. ಈವರೆಗೂ ಆಡಿರುವ ನಾಲ್ಕು ಪಂದ್ಯಗಳಿಂದ 141.57ರ ಸರಾಸರಿಯಲ್ಲಿ ರಿಜ್ವಾನ್‌ 252 ರನ್‌ ಬಾರಿಸಿದ್ದಾರೆ. ಮೂರು ಅರ್ಧಶತಕದೊಂದಿಗೆ ಸರಣಿಯ ಗರಿಷ್ಠ ಸ್ಕೋರರ್‌ ಎನಿಸಿದ್ದಾರೆ.
 

Follow Us:
Download App:
  • android
  • ios