ಟಿವಿ ಪ್ರೆಸೆಂಟರ್‌ಗಳನ್ನು ಕುರ್ಚಿ ಮೇಲೆ ನಿಲ್ಲುವಂತೆ ಮಾಡಿದ ಕ್ರಿಕೆಟರ್ ಮಾರ್ಕೋ ಜಾನ್ಸೆನ್..!
ಸನ್‌ರೈಸರ್ ಈಸ್ಟರ್ನ್ ಕೆಫೆ ಪರ ಆಟವಾಡುತ್ತಿರುವ ಮಾರ್ಕೊ ಜಾನ್ಸೆನ್ ಅವರ ಎತ್ತರ 2.06 ಮೀಟರ್ ಎಂದರೆ 6.7 ಅಡಿ ಎತ್ತರವಾಗಿದ್ದು, ಆದರೆ ಅವರಿಗಿಂತ ಗಿಡ್ಡವಿದ್ದ ಟಿವಿ ಪ್ರಸಂಟರ್‌ಗಳು ಅವರ ಜೊತೆ ಮಾತುಕತೆ ನಡೆಸಲು ಕುರ್ಚಿ ಏರುವಂತೆ ಮಾಡಿತ್ತು.
ದಕ್ಷಿಣ ಆಫ್ರಿಕಾದ ಜನ ಮೂಲತಃ ಎತ್ತರದ ದೇಹಕ್ಕೆ ಹೆಸರಾದವರು, 5 - 6 ರಿಂದ 6.5 ಅವರ ಸಹಜವಾದ ಎತ್ತರ. ಹೀಗಿರುವಾಗ ದಕ್ಷಿಣ ಆಫ್ರಿಕಾದ ಕ್ರಿಕೆಟ್ ತಂಡ ಕೂಡ ಎತ್ತರೆತ್ತರದ ಆಟಗಾರರಿಗೆ ಹೆಸರಾಗಿದೆ. ಆದರೆ ಅವರ ಎತ್ತರ ಕ್ರಿಕೆಟ್ ಸಂದರ್ಶನಕಾರರು ಅವರ ಜೊತೆ ಚಿಟ್‌ಚಾಟ್ ನಡೆಸಲು ಕುರ್ಚಿ ಏರುವಂತೆ ಮಾಡಿದೆ. ಹೌದು ಇಂತಹ ಅಪರೂಪದ ಕ್ಷಣಕ್ಕೆ ಈಗ ನಡೆಯುತ್ತಿರುವ ಎಸ್‌ಎ-20 ಕ್ರಿಕೆಟ್ ಟೂರ್ನ್‌ಮೆಂಟ್ ಸಾಕ್ಷಿಯಾಗಿದೆ. ಭಾರತದಲ್ಲಿ ನಡೆಯುವ ಐಪಿಎಲ್‌ನಂತೆ ಸೌತ್ ಆಫ್ರಿಕಾದಲ್ಲಿ ಎಸ್‌ಎ-20 ಕ್ರಿಕೆಟ್ ಟೂರ್ನ್‌ಮೆಂಟ್ ನಡೆಯುತ್ತದೆ. ಒಟ್ಟು ಆರು ತಂಡಗಳು ಈ ಟೂರ್ನ್‌ಮೆಂಟ್‌ನಲ್ಲಿ ಆಟವಾಡುತ್ತವೆ. ಅದೇ ರೀತಿ ಇತ್ತೀಚೆಗೆ ಅಲ್ಲಿ ಸನ್ ರೈಸರ್ ಈಸ್ಟರ್ನ್ ಕೆಫೆ ಹಾಗೂ ಪ್ರಿಟೊರಿಯಾ ಕ್ಯಾಪಿಟಲ್ ಮಧ್ಯೆ ಪಂದ್ಯಾವಳಿ ನಡೆದಿದ್ದು, ಪಂದ್ಯಾವಳಿಗೂ ಮೊದಲು ಆಟಗಾರ ಮಾರ್ಕೊ ಜಾನ್ಸೆನ್ ಅವರನ್ನು ಮಾತನಾಡಿಸಲು ಮುಂದಾದ ಟಿವಿ ಪ್ರಸಂಟರ್‌ಗಳು ಅವರ ಎತ್ತರಕ್ಕೆ ತಮ್ಮನ್ನು ಸರಿಗಟ್ಟಿಸಿಕೊಳ್ಳಲು ಕುರ್ಚಿ ಏರಿದ ಘಟನೆ ನಡೆದಿದೆ. ಇದರ ಫೋಟೋ ವೀಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸನ್‌ರೈಸರ್ ಈಸ್ಟರ್ನ್ ಕೆಫೆ ಪರ ಆಟವಾಡುತ್ತಿರುವ ಮಾರ್ಕೊ ಜಾನ್ಸೆನ್ ಅವರ ಎತ್ತರ 2.06 ಮೀಟರ್ ಎಂದರೆ 6.7 ಅಡಿ ಎತ್ತರವಾಗಿದ್ದು, ಆದರೆ ಅವರಿಗಿಂತ ಗಿಡ್ಡವಿದ್ದ ಟಿವಿ ಪ್ರಸಂಟರ್‌ಗಳು ಅವರ ಜೊತೆ ಮಾತುಕತೆ ನಡೆಸಲು ಕುರ್ಚಿ ಏರುವಂತೆ ಮಾಡಿತ್ತು. ಸನ್‌ರೈಸರ್ ಈಸ್ಟರ್ನ್ ಕೆಫೆ ಈ ಕ್ಷಣದ ಫೋಟೋವನ್ನು ತನ್ನ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೀವು ಮಾರ್ಕೊ ಜೊತೆ ಮಾತನಾಡುವಾಗ ನಿಮ್ಮ ಎತ್ತರವನ್ನು ಅಕ್ಷರಶ ಹೆಚ್ಚು ಮಾಡಿಕೊಳ್ಳಬೇಕು ಎಂದು ಬರೆದುಕೊಂಡು ಸನ್‌ರೈಸರ್ ಈಸ್ಟರ್ನ್ ಕೆಫೆ ಈ ಫೋಟೋವನ್ನು ಪೋಸ್ಟ್ ಮಾಡಿದೆ. ಸಾವಿರಾರು ಜನ ಈ ಟ್ವಿಟ್ ವೀಕ್ಷಿಸಿದ್ದು, ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಇವರ ಎತ್ತರ ಏನು ಎಂದು ಕುತೂಹಲ ವ್ಯಕ್ತಪಡಿಸಿದರೆ ಮತ್ತೆ ಕೆಲವರು ಈತ ಬೀದಿ ದೀಪವನ್ನು ಬದಲಾಯಿಸಬಹುದು ಎಂದು ಕಾಮೆಂಟ್ ಮಾಡಿದ್ದಾರೆ.