Asianet Suvarna News Asianet Suvarna News

ಐಪಿಎಲ್‌ ಕಪ್​​​​​ ​​​​ಗೆದ್ದ ಬಿಗ್​​​ 3 ತಂಡಗಳು​ ಪ್ಲೇ ಆಫ್​​​ನಿಂದ ಔಟ್​​..!

* ನೀರಸ ಪ್ರದರ್ಶನದ ಮೂಲಕ ಐಪಿಎಲ್ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದ 3 ತಂಡಗಳು

* ಮುಂಬೈ ಇಂಡಿಯನ್ಸ್‌, ಕೆಕೆಆರ್ ಹಾಗೂ ಸಿಎಸ್‌ಕೆ ತಂಡಗಳು ಪ್ಲೇ ಆಫ್‌ ರೇಸ್‌ನಿಂದ ಔಟ್

* ಈ ಮೂರು ತಂಡಗಳು 11 ಬಾರಿ ಐಪಿಎಲ್ ಟ್ರೋಫಿ ಜಯಿಸಿವೆ

KKR CSK and Mumbai Indians fails to qualify IPL Play offs 2022 kvn
Author
Bengaluru, First Published May 20, 2022, 6:44 PM IST

ಮುಂಬೈ(ಮೇ.20): ಮುಂಬೈ ಇಂಡಿಯನ್ಸ್ (Mumbai Indians)​​, ಚೆನ್ನೈ ಸೂಪ್​ ಕಿಂಗ್ಸ್ (Chennai Super Kings)​ ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ (Kolkata Knight Riders)​​. ಮೂರು  ಐಪಿಎಲ್​​​​ನ ಮೋಸ್ಟ್ ಸಕ್ಸಸ್​ಫುಲ್​​​ ಫ್ರಾಂಚೈಸಿಗಳು. ಇಡೀ ಐಪಿಎಲ್​ ಲೋಕವನ್ನ ಆಳಿದ್ದು ಈ ಬಿಗ್​ ತ್ರಿ ಟೀಮ್ಸ್​​. 14 ಆವೃತ್ತಿಗಳ ಪೈಕಿ 11 ಬಾರಿ ಪ್ರಶಸ್ತಿಯನ್ನ ಈ ಮೂರು ತಂಡಗಳೇ ಬಾಚಿ ಕೊಂಡಿವೆ. ಮುಂಬೈ ಅತ್ಯಧಿಕ 5 ಬಾರಿ ಟ್ರೋಫಿ ಗೆದ್ರೆ, ಚೆನ್ನೈ 4 ಹಾಗೂ ಕೆಕೆಆರ್​ ತಂಡ 2 ಬಾರಿ ಚಾಂಪಿಯನ್ ಪಟ್ಟಕ್ಕೇರಿವೆ. ಇಂತಹ ಬಿಗ್ 3 ಟೀಮ್ಸ್ ಈ ಸಲ ಎಂದೂ ಕಾಣದಷ್ಟು ಘನ ಘೋರ ವೈಫಲ್ಯ ಅನುಭವಿಸಿವೆ.

ಹೌದು, ಯಾವ ದಿಗ್ಗಜ ಟೀಮ್ಸ್ ಐಪಿಎಲ್​​​​ ಪಾಯಿಂಟ್ಸ್​ ಟೇಬಲ್​​ನಲ್ಲಿ ಟಾಪ್​ ತ್ರಿನಲ್ಲಿ ಸ್ಥಾನ ಪಡೆಯುತಿದ್ವೋ, ಇಂದು ಅದೇ ತಂಡಗಳಿಗೆ ಹೀನಾಯ ಸ್ಥಿತಿ ಬಂದೊಂದಗಿದೆ. ಐಪಿಎಲ್​ ಹಿಸ್ಟರಿಯಲ್ಲಿ 11 ಬಾರಿ ಕಪ್ ಗೆದ್ದ ಬಿಗ್ ತ್ರಿ ಟೀಮ್ಸ್​ ಪ್ರಸಕ್ತ ಐಪಿಎಲ್​​ನಲ್ಲಿ ಪ್ಲೇ ಆಫ್​​​ನಿಂದಲೇ ಹೊರಬಿದ್ದು ತೀವ್ರ ಮುಖಭಂಗಕ್ಕೆ ತುತ್ತಾಗಿವೆ. ಅಷ್ಟೇ ಏಕೆ ಮುಂಬೈ, ಚೆನ್ನೈ ಹಾಗೂ ಕೆಕೆಆರ್​​ ತಂಡಗಳಿಲ್ಲದೇ ಮೊದಲ ಬಾರಿ ಪ್ಲೇ ಆಫ್ಸ್​ ನೋಡಬೇಕಾದ ಸ್ಥಿತಿ ಕ್ರಿಕೆಟ್ ಪ್ರಿಯರಿಗೆ ಬಂದೊದಗಿದೆ.

5 ಬಾರಿ ಚಾಂಪಿಯನ್​​​​ ಮುಂಬೈ ಮೊದಲ ತಂಡವಾಗಿ ಔಟ್​​:

ಯೆಸ್​​, ಈ ಸಲ ಮುಂಬೈ ಇಂಡಿಯನ್ಸ್ ಪರ್ಫಾಮೆನ್ಸ್​​ ಅಭಿಮಾನಿಗಳಿಗೆ ಸಾಕಷ್ಟು ಬೇಸರ ತರಿಸಿದೆ. ಕಪ್ ಗೆಲ್ಲುವ ಫೇವರಿಟ್​ ತಂಡವೆನಿಸಿದ್ದ ರೋಹಿತ್ ಪಡೆ ಮೊದಲ 8 ಪಂದ್ಯಗಳಲ್ಲೇ ಸತತವಾಗಿ ಸೋಲನುಭವಿಸಿತು. ಆಗಲೇ ಮುಂಬೈ ಮೊದಲ ತಂಡವಾಗಿ ಗ್ರೂಪ್ ಸ್ಟೇಜ್​ನಲ್ಲಿ ಹೊರಬಿದ್ದಿತು. ಈವರೆಗೆ ಆಡಿದ 13ರಲ್ಲಿ ಜಸ್ಟ್​ 3 ಗೆದ್ದಿದೆ. 10 ರಲ್ಲಿ ಮುಗ್ಗರಿಸಿ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದೆ. ಈ ಕಳಪೆ ಆಟ ರೋಹಿತ್​ ಪಡೆಗೆ ದೊಡ್ಡ ಲೆಸೆನ್​​​​​.

2ನೇ ಬಾರಿ ಗ್ರೂಪ್​ ಸ್ಟೇಜ್​​ನಲ್ಲೇ ಹೊರಬಿದ್ದ ಸಿಎಸ್​ಕೆ: 

ಇನ್ನು ಸಿಎಸ್​​ಕೆ ಕಥೆ ಮುಂಬೈಗಿಂತ ಏನೂ ಭಿನ್ನವಾಗಿಲ್ಲ. ಐಪಿಎಲ್  ಹಿಸ್ಟರಿಯಲ್ಲಿ 4 ಬಾರಿ ಟ್ರೋಫಿ, 9 ಬಾರಿ ಫೈನಲ್​​​​ಗೆ ಲಗ್ಗೆಯಿಟ್ಟಿದ್ದ ಚೆನ್ನೈ ಈ ಸಲ ಕರಾಬ್​ ಆಟವಾಡಿದೆ. 13 ಪಂದ್ಯಗಳ ಪೈಕಿ 4 ಜಯಿಸಿದ್ರೆ, 9 ರಲ್ಲಿ ಸೋತು ಪಾಯಿಂಟ್ಸ್ ಟೇಬಲ್​​​ನಲ್ಲಿ ಬಾಟಮ್​ನಿಂದ 2ನೇ ಸ್ಥಾನದಲ್ಲಿದೆ. ಪ್ಲೇ ಆಫ್​​ ಕನಸು ಕಮರಿದೆ. ಟೂರ್ನಿ ಇತಿಹಾಸದಲ್ಲಿ 2ನೇ ಸಲ ಧೋನಿ ಸೈನ್ಯ ಗುಂಪು ಹಂತದಲ್ಲಿ ಹೊರಬಿದ್ದ ಅಪಖ್ಯಾತಿಗೆ ಭಾಜನವಾಗಿದೆ.

ಪ್ಲೇ ಆಫ್​​​ ಪ್ರವೇಶಿಸಿರುವ ರಾಜಸ್ಥಾನ ರಾಯಲ್ಸ್ ಗೆಲ್ಲೋ ಒತ್ತಡದಲ್ಲಿರೋದ್ಯಾಕೆ..?

2 ಸಲ ಕಪ್​ ಗೆದ್ದ ಕೆಕೆಆರ್​ಗೆ ದೊಡ್ಡ ಮುಖಭಂಗ:

ಕೆಕೆಆರ್​​​​​​​​ 2012 ಮತ್ತು 2014ರಲ್ಲಿ ಕಪ್​​​​​​ ಗೆದ್ದ ಚಾಂಪಿಯನ್​ ತಂಡ. ಕಳೆದ ಸಲ ರನ್ನರ್ ಅಪ್​​​​​​ ಆಗಿ ಹೊರಹೊಮ್ಮಿತ್ತು. ಇಂತಹ ತಂಡಕ್ಕೆ ಈ ಬಾರಿ ಪ್ಲೇ ಆಫ್​ ಭಾಗ್ಯವಿಲ್ಲ. ಉತ್ತಮ ಆರಂಭದ ಹೊರತಾಗಿಯೂ ಸೋಲಿನತ್ತ ಮುಖಮಾಡಿದ ಕೆಕೆಆರ್​ ಆಗಲೇ 8 ರಲ್ಲಿ ಸೋತು ಪ್ಲೇ ಆಫ್​​​ ರೇಸ್​ನಿಂದ ಔಟ್ ಆಗಿದೆ. ಹೊಸ ಕ್ಯಾಪ್ಟನ್ ಶ್ರೇಯಸ್ ಅಯ್ಯರ್​​ ಮೊದಲ ಪ್ರಯತ್ನದಲ್ಲಿ ಎಡವಿ, ಟೀಕಾಕಾರರಿಗೆ ಆಹಾರವಾಗಿದ್ದಾರೆ. ಒಟ್ಟಿನಲ್ಲಿ ಐಪಿಎಲ್​​ನ ಬಿಗ್​ ತ್ರಿ ಟೀಮ್ಸ್​​ ಫ್ಯಾನ್ಸ್​ಗೆ ನಿರಾಸೆ ಮೂಡಿಸಿವೆ. ಮುಂದಿನ ಸಲವಾದ್ರು ಗ್ರ್ಯಾಂಡ್​ ಕಮ್​​ಬ್ಯಾಕ್​ ಮಾಡ್ತಾವ ಅನ್ನೋದನ್ನ ಕಾದು ನೋಡಬೇಕು.
 

Follow Us:
Download App:
  • android
  • ios