Asianet Suvarna News Asianet Suvarna News

ಐರ್ಲೆಂಡ್ ಎದುರಿನ ಸರಣಿಯಲ್ಲಾದ್ರೂ ಟೀಂ ಇಂಡಿಯಾದಲ್ಲಿ ಹೊಸಬರಿಗೆ ಸಿಗುತ್ತಾ ಚಾನ್ಸ್..?

ಭಾರತ-ಐರ್ಲೆಂಡ್ ನಡುವಿನ ಎರಡು ಪಂದ್ಯಗಳ ಟಿ20 ಸರಣಿಗೆ ಕ್ಷಣಗಣೆ
ಜೂನ್ 26ರಿಂದ ಐರ್ಲೆಂಡ್ ಎದುರು ಚುಟುಕು ಕ್ರಿಕೆಟ್ ಸರಣಿ ಆರಂಭ
ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಲು ಎದುರು ನೋಡುತ್ತಿದ್ದಾರೆ ಯುವ ಆಟಗಾರರು

India Tour of Ireland Umran Malik Arshdeep Singh eyes on India debut against Ireland kvn
Author
Bengaluru, First Published Jun 25, 2022, 3:46 PM IST

ಬೆಂಗಳೂರು(ಜೂ.25): ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಮುಗಿದು ವಾರದ ಬಳಿಕ ಟೀಂ ಇಂಡಿಯಾ (Team India) ಭಾನುವಾರ(ಜೂನ್ 26)ದಿಂದ ಐರ್ಲೆಂಡ್ ವಿರುದ್ಧ ಟಿ20 ಸರಣಿ ಆಡಲಿದೆ. ಜಸ್ಟ್ ಎರಡು ಪಂದ್ಯಗಳ ಸರಣಿ. ಭಾನುವಾರ ಮತ್ತು ಮಂಗಳವಾರ ಎರಡು ಮ್ಯಾಚ್​ಗಳು ನಡೆದು ಹೋಗಲಿವೆ. ಆಫ್ರಿಕಾ ವಿರುದ್ಧದ ಐದು ಟಿ20 ಪಂದ್ಯಗಳಲ್ಲೂ ಟೀಂ ಇಂಡಿಯಾ ಪ್ಲೇಯಿಂಗ್​-11 ಅನ್ನ ಬದಲಾಯಿಸಲಿಲ್ಲ. ದ್ರಾವಿಡ್ ಕೋಚ್ ಆದ್ಮೇಲೆ ಫಸ್ಟ್ ಟೈಮ್ ಇಡೀ ಸಿರೀಸ್​ನಲ್ಲಿ ಒಂದೇ ತಂಡವನ್ನ ಆಡಿಸಿದ್ದು.

ಆಫ್ರಿಕಾ ಸರಣಿಯಲ್ಲಿ ಪ್ಲೇಯಿಂಗ್-11 ಚೇಂಜ್ ಮಾಡದೆ ಇರೋದಕ್ಕೂ ಕಾರಣವಿದೆ. ಮೊದಲೆರಡು ಪಂದ್ಯ ಸೋತಿದ್ದರಿಂದ ಉಳಿದ ಎರಡು ಪಂದ್ಯದಲ್ಲಿ ಹೊಸಬರಿಗೆ ಚಾನ್ಸ್ ಕೊಡಲಾಗಲಿಲ್ಲ. ಆ ಎರಡು ಪಂದ್ಯ ಗೆದ್ದಿದ್ದರಿಂದ ಕೊನೆ ಪಂದ್ಯ ಡು ಆರ್ ಡೈ ಆಯ್ತು. ಹಾಗಾಗಿ ಇಡೀ ಸಿರೀಸ್​ನಲ್ಲಿ ಪ್ಲೇಯಿಂಗ್-11 ಬದಲಿಸದೆ ಒಂದೇ ತಂಡವನ್ನ ಆಡಿಸಲಾಯ್ತು. ಇದೀಗ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಟೀಂ ಇಂಡಿಯಾ, ಕ್ರಿಕೆಟ್ ಶಿಶು ಐರ್ಲೆಂಡ್ ಸವಾಲು ಸ್ವೀಕರಿಸಲು ಸಜ್ಜಾಗಿದೆ 

ಒಂದೇ ತಂಡವೇ ಎರಡು ಪಂದ್ಯವನ್ನ ಆಡುತ್ತಾ..?: 

ಐರ್ಲೆಂಡ್ ದುರ್ಬಲ ತಂಡ ನಿಜ. ಹಾಗಂದ ಮಾತ್ರಕ್ಕೆ ಸುಲಭವಾಗಿ ಪರಿಗಣಿಸೋ ಹಾಗಿಲ್ಲ. ಸರಣಿ ಗೆಲ್ಲಬೇಕು ಅಂದರೆ ಬಲಿಷ್ಠ ತಂಡವನ್ನೇ ಕಣಕ್ಕಿಳಿಸಬೇಕು. ಆಫ್ರಿಕಾ ಸರಣಿ ಆಡಿದ್ದ ರಿಷಭ್ ಪಂತ್ (Rishabh Pant) ಮತ್ತು ಶ್ರೇಯಸ್ ಅಯ್ಯರ್ (Shreyas Iyer) ಐರ್ಲೆಂಡ್ ಸಿರೀಸ್ ಆಡ್ತಿಲ್ಲ. ಈ ಇಬ್ಬರು ಇಂಗ್ಲೆಂಡ್​ನಲ್ಲಿ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯಕ್ಕೆ ಭಾರತ ಟೆಸ್ಟ್​ ಟೀಂ ಸೇರಿಕೊಂಡಿದ್ದಾರೆ. ಈ ಇಬ್ಬರು ಬದಲು ಆಡಲು ಕಾಂಪಿಟೇಶನ್ ಶುರುವಾಗಿದೆ.

ಹೊಸಬರಿಗೆ ಮತ್ತೆ ಬೆಂಚೇ ಗತಿನಾ..?:

ಶ್ರೇಯಸ್ ಅಯ್ಯರ್ - ರಿಷಭ್ ಪಂತ್ ಬದಲಿಗೆ ಸೂರ್ಯಕುಮಾರ್ ಯಾದವ್ (Suryakumar Yadav) ಮತ್ತು ಸಂಜು ಸ್ಯಾಮ್ಸನ್ (Sanju Samson) ಆಡೋದು ಪಕ್ಕಾ. ಸಂಜು ಬದಲು ದೀಪಕ್ ಹೂಡಾ (Deepak Hooda)  ಅಥವಾ ವೆಂಕಟೇಶ್ ಅಯ್ಯರ್​ ಆಡಿದ್ರೂ ಆಶ್ಚರ್ಯವಿಲ್ಲ. ಉಳಿದಂತೆ ಆಫ್ರಿಕಾ ಸರಣಿ ಆಡಿದ ತಂಡವೇ ಕಣಕ್ಕಿಳಿಯಲಿದೆ. ಯಾಕಂದರೆ ಟಿ20 ವಿಶ್ವಕಪ್ ದೃಷ್ಟಿಯಿಂದ ಆಟಗಾರರನ್ನು ಹೆಚ್ಚಾಗಿ ಬದಲಿಸೋಕೆ ಹೋಗಲ್ಲ. ಅಲ್ಲಿಗೆ ಮೂವರು ಹೊಸಬರು ಇಂಟರ್ ನ್ಯಾಷನಲ್ ಕ್ರಿಕೆಟ್​ಗೆ ಡೆಬ್ಯು ಮಾಡೋದು ಕಷ್ಟ.

India Tour of Ireland: 2 ಪಂದ್ಯಗಳ ಟಿ20 ಸರಣಿಯಾಡಲು ಐರ್ಲೆಂಡ್‌ಗೆ ಬಂದಿಳಿದ ಭಾರತ

ಆಫ್ರಿಕಾ ಸರಣಿಯಲ್ಲೂ ಬೆಂಚ್ ಕಾಯಿಸಿದ್ದ ಮಲಿಕ್​-ಸಿಂಗ್: 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಉಮ್ರಾನ್ ಮಲ್ಲಿಕ್ ಮತ್ತು ಅರ್ಶದೀಪ್ ಸಿಂಗ್ ಟೀಂ ಇಂಡಿಯಾಗೆ ಡೆಬ್ಯು ಮಾಡಲು ಕಾಯ್ತಿದ್ದಾರೆ. ಈ ಇಬ್ಬರು ಆಫ್ರಿಕಾ ಸಿರೀಸ್​ನಲ್ಲೂ ಬೆಂಚ್ ಕಾಯಿಸಿದ್ದರು. ಈಗ ಐರ್ಲೆಂಡ್ ಸಿರೀಸ್​ನಲ್ಲೂ ಈ ಇಬ್ಬರಿಗೆ ಬೆಂಚೇ ಗತಿ ಅನಿಸುತ್ತೆ. ಇನ್ನು ರಾಹುಲ್ ತ್ರಿಪಾಠಿ ಬೇರೆ ಡೆಬ್ಯು ಮಾಡಲು ಎದುರು ನೋಡ್ತಿದ್ದಾರೆ. ಸದ್ಯದ ಪರಿಸ್ಥಿತಿ ನೋಡಿದ್ರೆ ತ್ರಿಮೂರ್ತಿಗಳು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಲು ಇನ್ನಷ್ಟು ದಿನ ಕಾಯಬೇಕಾಗಬಹುದು.

ಐರ್ಲೆಂಡ್ ಎದುರಿನ ಸರಣಿಗೆ ಭಾರತ ತಂಡ ಹೀಗಿದೆ ನೋಡಿ

ಹಾರ್ದಿಕ್ ಪಾಂಡ್ಯ(ನಾಯಕ), ಭುವನೇಶ್ವರ್ ಕುಮಾರ್(ಉಪನಾಯಕ), ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್, ಯುಜುವೇಂದ್ರ ಚಹಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯಿ, ಹರ್ಷಲ್ ಪಟೇಲ್, ಆವೇಶ್ ಖಾನ್, ಆರ್ಶದೀಪ್ ಸಿಂಗ್, ಉಮ್ರಾನ್ ಮಲಿಕ್.

Follow Us:
Download App:
  • android
  • ios