Asianet Suvarna News Asianet Suvarna News

Bhanupriya: ತಮ್ಮ ಬದುಕಿನ ಬಹುದೊಡ್ಡ ದುರಂತ ತೆರೆದಿಟ್ಟ ನಟಿ ಭಾನುಪ್ರಿಯಾ!

ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ನಟಿಸಿ 1990ರ ದಶಕದಲ್ಲಿ ಚಿತ್ರರಂಗ ಆಳಿದ್ದ ನಟಿ ಭಾನುಪ್ರಿಯಾ ತಮ್ಮ ಬದುಕಿನ ಬಹುದೊಡ್ಡ ದುರಂತದ ಕುರಿತು ಮಾತನಾಡಿದ್ದಾರೆ. ಏನದು?
 

Bhanupriya Opens Up About Memory Loss After Husband's Death
Author
First Published Feb 5, 2023, 5:51 PM IST

1994ರಲ್ಲಿ ಬಿಡುಗಡೆಯಾದ ರವಿಚಂದ್ರನ್ ಅಭಿನಯದ 'ರಸಿಕ' (Rasika) ಚಿತ್ರ ನೋಡಿದವರಿಗೆ ಮುದ್ದುಮೊಗದ ನಾಯಕಿ ಭಾನುಪ್ರಿಯಾ ಅವರ ನೆನಪು ಮರೆಯಾಗಲು ಸಾಧ್ಯವೇ ಇಲ್ಲ. ಇದಾಗ ಮೇಲೆ  'ಕನ್ನಡದಲ್ಲಿ ದೇವರ ಮಗ',`ಸಿಂಹಾದ್ರಿಯ ಸಿಂಹ' (Simhadriya Simha),`ಕದಂಬ',`ಮೇಷ್ಟ್ರು' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಈ ಸುಂದರಿ,  ಕನ್ನಡ ಮಾತ್ರವಲ್ಲದೇ ತೆಲುಗು,ತಮಿಳು,ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.  ಪ್ರಸಿದ್ಧ ಕೂಚುಪುಡಿ ನೃತ್ಯಗಾರ್ತಿಯೂ ಆಗಿರುವ ಭಾನುಪ್ರಿಯಾ ಅವರ ನೃತ್ಯಕ್ಕೆ ಮನಸೋಲದವರೇ ಇಲ್ಲ. ಇದೀಗ 56 ವರ್ಷ ಪೂರೈಸಿರುವ ನಟಿ ತಮ್ಮ ಜೀವನದ ಬಹುದೊಡ್ಡ ದುರಂತವೊಂದನ್ನು ತೆರೆದಿಟ್ಟಿದ್ದಾರೆ. 

ಕೆಲ ದಶಕಗಳವರೆಗೆ ಬಹುಭಾಷೆಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಕೊನೆಗೊಂದು ದಿನ ಚಿತ್ರರಂಗದಿಂದ ದೂರವಾಗಿಬಿಟ್ಟರು. 90ರ ದಶಕದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದ ಭಾನುಪ್ರಿಯಾ (Bhanupriya) ಅವರ ಅಭಿಮಾನಿಗಳು ಕೆಲಕಾಲ ಆತಂಕಕ್ಕೂ ಒಳಗಾಗಿದ್ದರು. ಆದರೆ ಯಾವುದೇ ಕ್ಷೇತ್ರವಾದರೂ ಅಷ್ಟೇ ತಾನೆ? ಪ್ರಚಲಿತದಲ್ಲಿ ಇರುವಾಗ ಅಭಿಮಾನ, ಅದೂ, ಇದೂ ಎಂದೆಲ್ಲಾ ಒಂದಿಷ್ಟು ವರ್ಷ ಹೇಳಿದರೂ ನಂತರ ಅವರ ಬಗ್ಗೆ ಮರೆತೇ ಬಿಡುತ್ತಾರೆ. ಇಲ್ಲಿಯೂ ಹಾಗೆಯೇ ಆಯಿತು. ಭಾನುಪ್ರಿಯಾ ಅವರ ಬಗ್ಗೆ ಜನ ಮರೆತೇ ಬಿಟ್ಟರು.

ಮಗಳೇ ಎಂದು ಬಾಯ್ತುಂಬ ಕರೆದವಳನ್ನೇ ಮದ್ವೆಯಾದ ಈ ಬಾಲಿವುಡ್​ ಸ್ಟಾರ್​!

ಆದರೆ ಇದೀಗ ತಮ್ಮ ಜೀವನದ ಬಲು ದೊಡ್ಡ ದುರಂತವೊಂದನ್ನು ಭಾನುಪ್ರಿಯಾ ತೆರೆದಿಟ್ಟಿದ್ದಾರೆ. 1998ರಲ್ಲಿ ಭಾನುಪ್ರಿಯಾ ಸಿನಿಮಾಟೋಗ್ರಫರ್ ಆದರ್ಶ್ ಕೌಶಲ್ (Adarsh Koushak) ಕೈ ಹಿಡಿದಿದ್ದರು. 2005ರಲ್ಲಿ ಡಿವೋರ್ಸ್ ಪಡೆದಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ನಟಿ, ನಾವಿಬ್ಬರೂ  ಚೆನ್ನಾಗಿಯೇ ಇದ್ದೇವೆ.  ಕೆಲ ಕಾರಣಗಳಿಂದ ಬೇರೆ ಬೇರೆ ಕಡೆ ವಾಸ ಮಾಡುತ್ತಿದ್ದೇವೆ ಅಷ್ಟೇ. ವಿಚ್ಛೇದನ ಏನೂ ಆಗಲಿಲ್ಲ.  ಡಿವೋರ್ಸ್ ಸುದ್ದಿಯೂ ಸುಳ್ಳು ಎಂದಿದ್ದರು. ಆದರೆ 2018 ಭಾನುಪ್ರಿಯಾ ಅವರ ಜೀವನದಲ್ಲಿ ಬಹುದೊಡ್ಡ ಆಘಾತವಾಗಿ ಹೋಯಿತು. ಅವರ ಪತಿ ಆದರ್ಶ್​ ಅವರು ಹೃದಯಾಘಾತದಿಂದ (Heart attack) ಸಾವನ್ನಪ್ಪಿದ್ದರು. ಪತಿಯ ಸಾವಿನ ಬಳಿಕ ನಟಿ ಭಾನುಪ್ರಿಯಾ ಖಿನ್ನತೆಗೆ ಜಾರಿಹೋದರು. ಇದೀಗ ಅದೇ ನೋವಿನಿಂದ ತಮಗೆ ಆಗಿರುವ ನೆನಪಿನ ಶಕ್ತಿ ಕುಂದುವಿಕೆ (memory loss) ಕುರಿತು ನಟಿ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ. 

ಪತಿಯ ಅಗಲಿಕೆ ನಂತರ ನಾನು  ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಮಾಡಿದೆ. ಏಕೋ ಮನಸ್ಸಿಗೆ ನೆಮ್ಮದಿ ಇರಲಿಲ್ಲ. ಅವರ ಸಾವಿನ ಶಾಕ್​ನಿಂದ ನಾನು ಹೊರಬರುವುದು ಕಷ್ಟವೇ ಆಗಿಹೋಯಿತು.  ಆರೋಗ್ಯ ಸಮಸ್ಯೆ ತಲೆದೋರಿತು. ಕ್ರಮೇಣ ಈಗ ನೆನಪಿನ ಶಕ್ತಿ ಕುಂದುತ್ತಾ ಬಂದಿದೆ ಎಂದು ನಟಿ ಹೇಳಿಕೊಂಡಿದ್ದಾರೆ. ಕಳೆದ 2 ವರ್ಷಗಳಿಂದ ಈ ಸಮಸ್ಯೆ ಎದುರಾಗಿದೆ. ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಲ್ಲೂ ನಟಿಸುತ್ತಿಲ್ಲ ಎಂದಿದ್ದಾರೆ.  ಸದ್ಯ ಎರಡು ಸಿನಿಮಾಗಳಿಗೆ (Cinema) ಸಹಿ ಹಾಕಿದ್ದಿದೆ. ಅದರಲ್ಲಿ  ಪೋಷಕ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಅದು ತಮಿಳು ಮತ್ತು ತೆಲುಗು ಸಿನಿಮಾ. ನಾನು ಕೂಚುಪುಡಿ ನೃತ್ಯ ತರಗತಿ ನಡೆಸಬೇಕು ಎಂದುಕೊಂಡಿದ್ದೆ. ಆದರೆ ಮೆಮೊರಿ ಲಾಸ್​ನಿಂದ ಅದೂ ಸಾಧ್ಯವಾಗುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.

Shamita Shetty ಇನ್ನೂ ಯಾಕೆ ಸಿಂಗಲ್​? 44ನೇ ಬರ್ತ್​ಡೆಗೆ ಸೀಕ್ರೇಟ್​ ಬಯಲು!
ಡೈಲಾಗ್ಸ್ ನೆನಪಿನಲ್ಲಿ ಉಳಿಯದ ಕಾರಣ ಸಿನಿಮಾ ಮಾಡಲು ಆಗುತ್ತಿಲ್ಲ. ನೃತ್ಯ ತರಗತಿ ನಡೆಸೋಣ ಎಂದರೆ ನೃತ್ಯ ಪಟ್ಟುಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಆಗುತ್ತಿಲ್ಲ. ಸದ್ಯ ಡಾನ್ಸ್ ಸ್ಕೂಲ್ (Dance school) ಕನಸು ಕನಸಾಗಿಯೇ ಉಳಿದಿದೆ.  ನನಗೂ ಪ್ರದರ್ಶನ ನೀಡಲು ಆಗುತ್ತಿಲ್ಲ.  ತಮಿಳು ಸಿನಿಮಾ ಶೂಟಿಂಗ್ ವೇಳೆ ಡೈಲಾಗ್ಸ್ ಎಲ್ಲಾ ಮರೆತು ಹೋಗಿ ಬ್ಲಾಂಕ್ ಆಗಿಬಿಟ್ಟಿದ್ದೆ. ಸದ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದಿದ್ದಾರೆ. 

ಚಿತ್ರರಂಗ ನನಗೆ ಸಾಕಷ್ಟು ಕೊಟ್ಟಿದೆ. ಜನ ಇವತ್ತಿಗೂ ನನ್ನನ್ನು ಗುರುತಿಸುತ್ತಾರೆ. ನಾನು ಇತ್ತೀಚೆಗೆ ಸಿನಿಮಾಗಳಲ್ಲಿ ನಟಸ್ತಿಲ್ಲ. ಒಳ್ಳೆ ಪಾತ್ರಗಳು ಸಿಕ್ಕರೆ ನಟಿಸಬೇಕು ಎಂದುಕೊಂಡಿದ್ದೇನೆ. ನಟನೆಗೆ ಅವಕಾಶ ಇರುವ ಪಾತ್ರ ಸಿಕ್ಕಿದರೆ ನಟಿಸುವೆ ಎಂದೂ ಹೇಳಿದ್ದಾರೆ. ಸದ್ಯ ಇವರ ಮಗಳು ಲಂಡನ್‌ನಲ್ಲಿ ಓದುತ್ತಿದ್ದಾರೆ.  ಚಿತ್ರರಂಗಕ್ಕೆ ಬರುವ ಆಸೆ ಆಕೆಗಿಲ್ಲ ಎಂದಿದ್ದಾರೆ ನಟಿ.  

Follow Us:
Download App:
  • android
  • ios