Asianet Suvarna News Asianet Suvarna News

ಎಸ್ ಬಿಐ,ಎಚ್ ಡಿಎಫ್ ಸಿ, ಐಸಿಐಸಿಐ ಬ್ಯಾಂಕಿನ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಎಷ್ಟಿರಬೇಕು? ದಂಡ ಎಷ್ಟು?

ಬ್ಯಾಂಕಿನ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಮಾಡೋದು ಅಗತ್ಯ.ಇಲ್ಲವಾದ್ರೆ ದಂಡ ಬೀಳುತ್ತದೆ ಕೂಡ. ಹಾಗಾದ್ರೆ ಎಸ್ ಬಿಐ, ಎಚ್ ಡಿಎಫ್ ಸಿ, ಐಸಿಐಸಿಐ ಬ್ಯಾಂಕುಗಳ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಮಾಡದಿದ್ರೆ ಎಷ್ಟು ದಂಡ ಬೀಳುತ್ತದೆ? ಇಲ್ಲಿದೆ ಮಾಹಿತಿ.
 

Savings account minimum balance requirement SBI vs ICICI Bank vs HDFC Bank
Author
Bangalore, First Published Aug 6, 2022, 4:28 PM IST

Business Desk: ಉಳಿತಾಯದ ವಿಷಯ ಬಂದಾಗ ಬ್ಯಾಂಕಿನ ಉಳಿತಾಯ ಖಾತೆ ನೆನಪಾಗದೆ ಇರದು. ಸುರಕ್ಷೆ ಜೊತೆಗೆ ನಿರ್ದಿಷ್ಟ ಬಡ್ಡಿದರ ಸಿಗುವ ಕಾರಣಕ್ಕೆ ಇಂದಿಗೂ ಹಲವರು ಉಳಿತಾಯಕ್ಕೆ ಬ್ಯಾಂಕಿನ ಉಳಿತಾಯ ಖಾತೆಯನ್ನು ಆಯ್ದುಕೊಳ್ಳುತ್ತಾರೆ. ಆದರೆ, ನೀವು ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿದ್ರೆ, ಅದರಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಮಾಡೋದು ಅಗತ್ಯ. ಒಂದು ವೇಳೆ ನೀವು ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಮಾಡದಿದ್ರೆ ದಂಡ ಬೀಳೋದು ಖಚಿತ. ಉಳಿತಾಯ ಖಾತೆ ಹಾಗೂ ಬ್ಯಾಲೆನ್ಸ್ ಅಗತ್ಯಕ್ಕೆ ಅನುಗುಣವಾಗಿದಂಡ ವಿಧಿಸಲಾಗುತ್ತದೆ. ಅನೇಕ ವಿಧದ ಉಳಿತಾಯ ಖಾತೆಗಳಿರುತ್ತವೆ. ಹಾಗೆಯೇ ಪ್ರತಿ ವಿಧದ ಖಾತೆಗೂ ಒಂದು ನಿರ್ದಿಷ್ಟ ಕೆಲಸವಿರುತ್ತದೆ. ಸಾರ್ವಜನಿಕ ಹಾಗೂ ಖಾಸಗಿ ವಲಯದ ಬಹುತೇಕ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಮಾಸಿಕ ಕನಿಷ್ಠ ಠೇವಣಿ ನಿರ್ವಹಣೆ ಮಾಡದಿರೋದಕ್ಕೆ ದಂಡ ವಿಧಿಸುತ್ತವೆ. ಇನ್ನು ಈ ದಂಡದ ಮೊತ್ತ ಕೂಡ ಬ್ಯಾಂಕಿನ ಶಾಖೆಯಿರುವ ಪ್ರದೇಶ ಹಾಗೂ ಖಾತೆಯಲ್ಲಿ ನಿರ್ವಹಣೆ ಮಾಡಿರುವ ಮೊತ್ತದ ಆಧಾರದಲ್ಲಿ ವ್ಯತ್ಯಯವಾಗುತ್ತದೆ. ಹಾಗಾದ್ರೆ ದೇಶದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ ಬಿಐ), ಐಸಿಐಸಿಐ ಬ್ಯಾಂಕ್ ಹಾಗೂ ಎಚ್ ಡಿಎಫ್ ಸಿ ಬ್ಯಾಂಕುಗಳ ಉಳಿತಾಯ ಖಾತೆಯಲ್ಲಿ ಎಷ್ಟು ಕನಿಷ್ಠ ಬ್ಯಾಲೆನ್ಸ್ ಇರಬೇಕು? ಇಲ್ಲಿದೆ ಮಾಹಿತಿ.

ಎಸ್ ಬಿಐ
ಭಾರತದ ಸಾರ್ವಜನಿಕ ವಲಯದ ಅತೀದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆ ಗಳಿಸಿರುವ ಎಸ್ ಬಿಐ (SBI) ಮಾತ್ರ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಮಾಡಲು ವಿಫಲರಾದ್ರೆ ಗ್ರಾಹಕರ ಮೇಲೆ ಯಾವುದೇ ದಂಡ (Fine)ವಿಧಿಸುತ್ತಿಲ್ಲ. 2020ರ ಆಗಸ್ಟ್ ನಲ್ಲಿ ಎಸ್ ಬಿಐ (SBI) ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಕನಿಷ್ಠ ಬ್ಯಾಲೆನ್ಸ್ (Minimum balance) ನಿರ್ವಹಣೆ ಮಾಡದಿದ್ರೆ ಯಾವುದೇ ದಂಡ (Fine) ವಿಧಿಸೋದಿಲ್ಲ ಎಂದು ತಿಳಿಸಿದೆ.

ರೆಪೋದರ ಏರಿಕೆಯಿಂದ ಗೃಹಸಾಲ ಮತ್ತಷ್ಟು ದುಬಾರಿ;ಇಎಂಐ ಎಷ್ಟು ಹೆಚ್ಚಬಹುದು ?ಇಲ್ಲಿದೆ ಮಾಹಿತಿ

ಎಚ್ ಡಿಎಫ್ ಸಿ ಬ್ಯಾಂಕ್
ಎಚ್ ಡಿಎಫ್ ಸಿ (HDFC) ಬ್ಯಾಂಕ್ ಗ್ರಾಹಕರಿಗೆ ಸೇವೆ (Service) ಹಾಗೂ ವಹಿವಾಟು (Transaction) ಶುಲ್ಕಗಳನ್ನು ವಿಧಿಸಲಾಗುತ್ತದೆ. ಈ ಶುಲ್ಕವನ್ನು ಹಿಂದಿನ ತಿಂಗಳಲ್ಲಿ ಅವರ ಖಾತೆಯಲ್ಲಿ ನಿರ್ವಹಣೆ ಮಾಡಿದ ಸರಾಸರಿ ಮಾಸಿಕ ಬ್ಯಾಲೆನ್ಸ್ (AMB)ಆಧರಿಸಿ ಈ ತಿಂಗಳು ವಿಧಿಸಲಾಗುತ್ತದೆ. ಎಚ್ ಡಿಎಫ್ ಸಿ ಬ್ಯಾಂಕಿನ ಮೆಟ್ರೋ (Metro)  ಶಾಖೆಗಳ (Branches) ಗ್ರಾಹಕರು ಸರಾಸರಿ ಮಾಸಿಕ ಬ್ಯಾಲೆನ್ಸ್ (AMB) 10,000ರೂ. ಅಥವಾ ಒಂದು ವರ್ಷ ಒಂದು ದಿನದ ತನಕ 1ಲಕ್ಷ ರೂ. ಸ್ಥಿರ ಠೇವಣಿ (Fixed deposit) ನಿರ್ವಹಣೆ ಮಾಡೋದು ಅಗತ್ಯ. ಇದು 2022ರ ಜುಲೈ 1ರಿಂದ ಜಾರಿಗೆ ಬಂದಿದೆ. ಇನ್ನು ಎಚ್ ಡಿಎಫ್ ಸಿ ಬ್ಯಾಂಕಿನ ಅರೆನಗರ ಶಾಖೆಗಳಲ್ಲಿ 5,000 ಸರಾಸರಿ ಮಾಸಿಕ ಬ್ಯಾಲೆನ್ಸ್ (AMB) ಅಥವಾ 50,000 ರೂ. ಸ್ಥಿರ ಠೇವಣಿ ಹೊಂದಿರಬೇಕು. ಗ್ರಾಮೀಣ ಶಾಖೆಗಳಲ್ಲಿ 2,500 ರೂ. ಸರಾಸರಿ ತ್ರೈಮಾಸಿಕ ಬ್ಯಾಲೆನ್ಸ್ (AQB) ಅಥವಾ 25,000 ರೂ. ಸ್ಥಿರ ಠೇವಣಿ ನಿರ್ವಹಣೆ ಮಾಡಬೇಕು.

ಗ್ರಾಹಕರಿಗೆ ಶುಭ ಸುದ್ದಿ: ಅಡುಗೆ ಎಣ್ಣೆ ಬೆಲೆ ಶೀಘ್ರದಲ್ಲೇ 10 - 12 ರೂ. ಇಳಿಕೆ..!

ಐಸಿಐಸಿಐ ಬ್ಯಾಂಕ್
ಐಸಿಐಸಿಐ ಬ್ಯಾಂಕಿನ (ICICI Bank) ಮೆಟ್ರೋ (Metro) ಪ್ರದೇಶಗಳ ಉಳಿತಾಯ ಖಾತೆಯಲ್ಲಿ ಮಾಸಿಕ ಸರಾಸರಿ 10,000 ರೂ. ಕನಿಷ್ಠ ಬ್ಯಾಲೆನ್ಸ್ (Balance) ನಿರ್ವಹಣೆ ಮಾಡಬೇಕು. ಇನ್ನು ಅರೆನಗರ (Semi Urban) ಪ್ರದೇಶಗಳಲ್ಲಿ 5,000 ರೂ. ಹಾಗೂ ಗ್ರಾಮೀಣ (Rural) ಪ್ರದೇಶಗಳಲ್ಲಿ 2,000 ರೂ. ಕನಿಷ್ಠ ಬ್ಯಾಲೆನ್ಸ್  (Minimum balance) ನಿರ್ವಹಣೆ ಮಾಡಬೇಕು. 


 

Follow Us:
Download App:
  • android
  • ios