ಅಂಬಾನಿಯಿಂದ ಮತ್ತೊಂದು ಕೊಡುಗೆ,ವಿಶ್ವದ ಅತೀ ದೊಡ್ಡ ಡೇಟಾ ಸೆಂಟರ್ ಘೋಷಣೆ
ಮುಕೇಶ್ ಅಂಬಾನಿ ಇದೀಗ ಮಹತ್ವದ ಘೋಷಣೆ ಮಾಡಿದ್ದಾರೆ. ವಿಶ್ವದ ಅತೀ ದೊಡ್ಡ ಡೇಟಾ ಸೆಂಟರ್ ಭಾರತದಲ್ಲಿ ತಲೆ ಎತ್ತಲಿದೆ. ಈ ಕುರಿತು ಮಹತ್ವದ ಘೋಷಣೆ ಹೊರಬಿದ್ದಿದೆ. ಇದರಿಂದ ಲಾಭ ಏನು?
ಮುಂಬೈ(ಜ.24) ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಗ್ರೂಪ್ ಹಲವು ಕ್ಷೇತ್ರದ ಉದ್ಯಮದಲ್ಲಿ ಮುಂಚೂಣಿಯಲ್ಲಿದೆ. ಜಿಯೋ ಮೂಲಕ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಟೆಲಿಕಾಂ ಸೇವೆ ಸೇರಿದಂತೆ ಹಲವು ಕೊಡುಗೆ ನೀಡುತ್ತಿದೆ. ಇದೀಗ ಮುಕೇಶ್ ಅಂಬಾನಿ ವಿಶ್ವದ ಅತೀ ದೊಡ್ಡ ಡೇಟಾ ಸೆಂಟರ್ ಘೋಷಿಸಿದ್ದಾರೆ. ಗುಜರಾತ್‌ನ ಜಾಮ್‌ನಗರದಲ್ಲಿ ಈ ಡೇಟಾ ಸೆಂಟರ್ ಆರಂಭಗೊಳ್ಳುತ್ತಿದೆ. ಆರ್ಟಿಪೀಶಿಯಲ್ ಇಂಟಲಿಜೆನ್ಸ್ ಕ್ಷೇತ್ರದಲ್ಲಿ ಭಾರತ ಇದೀಗ ಜಗತ್ತಿಗೆ ಗುರುವಾಗಲಿದೆ. ಕಾರಣ, ರಿಲಯನ್ಸ್ ಜಾಮ್‌ನಗರ ಡೇಟಾ ಸೆಂಟರ್ ಎಐ ಆಧಾರಿತ ಎಲ್ಲಾ ಚಿಪ್, ಸೆಮಿಕಂಡಕ್ಟರ್, ಎಐ ಟೆಕ್ ಸೇರಿದಂತೆ ಎಲ್ಲವೂ ಈ ಡೇಟಾ ಸೆಂಟರ್ ಮೂಲಕ ಭಾರತ ಹಾಗೂ ವಿಶ್ವಕ್ಕೆ ರವಾನೆಯಾಗಲಿದೆ.
ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸೇವೆಗಳ ಬೇಡಿಕೆ ಹೆಚ್ಚುತ್ತಿರೋದನ್ನ ಗಮನದಲ್ಲಿಟ್ಟುಕೊಂಡು ಅಂಬಾನಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ರಿಲಯನ್ಸ್ ಗ್ರೂಪ್ NVIDIAದ ಪವರ್‌ಫುಲ್ AI ಸೆಮಿಕಂಡಕ್ಟರ್‌ಗಳನ್ನ ಖರೀದಿಸಿ ಡೇಟಾ ಸೆಂಟರ್ ನಿರ್ಮಿಸುತ್ತಿದೆ ಎಂದು ವರದಿ ಹೇಳಿದೆ. NVIDIA ಅಮೆರಿಕದ ಟಾಪ್ AI ತಂತ್ರಜ್ಞಾನ ಕಂಪನಿಗಳಲ್ಲಿ ಒಂದು. 2024ರ ಅಕ್ಟೋಬರ್ ತಿಂಗಳಲ್ಲಿ ರಿಲಯನ್ಸ್ ಹಾಗೂ NVIDIA ಒಪ್ಪಂದ ಮಾಡಿಕೊಂಡಿತ್ತು. ಜಂಟಿಯಾಗಿ ಮಹತ್ವದ ಯೋಜನೆ ರೂಪಿಸುವುದಾಗಿ ಘೋಷಿಸಿದೆ.
ಈತ ವಿಶ್ವದ 5ನೇ ಶ್ರೀಮಂತ, ಆದರೂ ಅಂಬಾನಿಗೆ ಪ್ರತಿ ತಿಂಗಳು ಪಾವತಿಸುತ್ತಾರೆ 40 ಲಕ್ಷ ರೂ
ವಿಶ್ವದ ಅತಿ ದೊಡ್ಡ ಡೇಟಾ ಸೆಂಟರ್ ಹೇಗಿರುತ್ತೆ?
ರಿಲಯನ್ಸ್ 3 ಗಿಗಾವ್ಯಾಟ್ ಸಾಮರ್ಥ್ಯದ ಗುರಿ ಹೊಂದಿದೆ ಅಂತ ವರದಿ ಹೇಳುತ್ತೆ. ಈ ಡೇಟಾ ಸೆಂಟರ್ ವಿಶ್ವದಲ್ಲೇ ಅತಿ ದೊಡ್ಡದಾಗಿರುತ್ತೆ ಮತ್ತು ತುಂಬಾ ಹೈಟೆಕ್ ಆಗಿರುತ್ತೆ. ಹೊಸ ಡೇಟಾ ಸೆಂಟರ್ ನವೀಕರಿಸಬಹುದಾದ ಇಂಧನ ಮೂಲಗಳನ್ನ ಗರಿಷ್ಠ ಮಟ್ಟಕ್ಕೆ ಸಂಯೋಜಿಸುತ್ತೆ. ಇದರಲ್ಲಿ ಸೌರ, ಹಸಿರು ಹೈಡ್ರೋಜನ್ ಮತ್ತು ಗಾಳಿ ಯೋಜನೆಗಳು ಸೇರಿವೆ. ನಿರಂತರ ವಿದ್ಯುತ್ ಪೂರೈಕೆಗಾಗಿ, ಈ ಸೌಲಭ್ಯಕ್ಕೆ ಬ್ಯಾಟರಿ ವ್ಯವಸ್ಥೆ ಮತ್ತು ಪಳೆಯುಳಿಕೆ ಇಂಧನದಂತಹ ಪೂರಕ ಸಂಪನ್ಮೂಲಗಳ ಅಗತ್ಯವಿರುತ್ತದೆ. ಈ ಡೇಟಾ ಸೆಂಟರ್ ದೇಶದ AI ಮೂಲಸೌಕರ್ಯವನ್ನ ಹೆಚ್ಚಿಸುವುದಲ್ಲದೆ, ನಮ್ಮ ಡೇಟಾ ಸೆಂಟರ್ ಸಾಮರ್ಥ್ಯವನ್ನೂ ಮೂರು ಪಟ್ಟು ಹೆಚ್ಚಿಸುತ್ತದೆ, ಇದು ಈಗ ಒಂದು ಗಿಗಾವ್ಯಾಟ್‌ಗಿಂತ ಕಡಿಮೆ ಇದೆ.
ಅಕ್ಟೋಬರ್ 2023 ರಲ್ಲಿ ಪಾಲುದಾರಿಕೆ
ಕಳೆದ ವರ್ಷ ಅಕ್ಟೋಬರ್ 2023 ರಲ್ಲಿ ಮುಂಬೈನಲ್ಲಿ ನಡೆದ NVIDIA AI ಶೃಂಗಸಭೆಯ ಸಮಯದಲ್ಲಿ, NVIDIA CEO ಜೆನ್ಸನ್ ಹುವಾಂಗ್ ಭಾರತದಲ್ಲಿ ಹೈಟೆಕ್ AI ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ರಿಲಯನ್ಸ್ ಇಂಡಸ್ಟ್ರೀಸ್ ಜೊತೆ ಹೊಸ ಪಾಲುದಾರಿಕೆಯನ್ನ ಘೋಷಿಸಿದರು. ಆಗ ಮುಕೇಶ್ ಅಂಬಾನಿ, ಭಾರತವು ಅತಿ ದೊಡ್ಡ ಬುದ್ಧಿಮತ್ತೆ ಮಾರುಕಟ್ಟೆಗಳಲ್ಲಿ ಒಂದಾಗುವ ಶಕ್ತಿಯನ್ನು ಹೊಂದಿದೆ ಎಂದು ಹೇಳಿದ್ದರು. ಅವರು, 'ನಮ್ಮ ದೇಶವು ಅತಿ ದೊಡ್ಡ ಬುದ್ಧಿಮತ್ತೆ ಮಾರುಕಟ್ಟೆಗಳಲ್ಲಿ ಒಂದಾಗಿರುತ್ತದೆ. ಸಾಮಾನ್ಯ ಜನರಿಗೆ ಇದರ ಪ್ರವೇಶ ಕೈಗೆಟುಕುವ ಮತ್ತು ಸುಲಭವಾಗಿರುತ್ತದೆ' ಎಂದು ಹೇಳಿದ್ದರು.
ಎಷ್ಟು ಲಾಭವಾಗುತ್ತೆ?
ರಿಲಯನ್ಸ್ ಡೇಟಾ ಸೆಂಟರ್ ನಿರ್ಮಾಣದಿಂದ ಕಂಪನಿಯು ಅಮೆಜಾನ್, ಮೈಕ್ರೋಸಾಫ್ಟ್ ಮತ್ತು ಆಲ್ಫಾಬೆಟ್ (Google) ನಂತಹ ದೈತ್ಯ ತಂತ್ರಜ್ಞಾನ ಕಂಪನಿಗಳೊಂದಿಗೆ ಸೇರುತ್ತದೆ. ಈ ಕಂಪನಿಗಳು AI ಆಧಾರಿತ ಡೇಟಾ ಸೆಂಟರ್‌ಗಳಲ್ಲಿ ಭಾರಿ ಹೂಡಿಕೆ ಮಾಡುತ್ತಿವೆ, ಇದರಿಂದ AI ವಲಯದಲ್ಲಿ ತಮ್ಮ ಕಾರ್ಯಾಚರಣೆಗಳನ್ನು ಹೆಚ್ಚಿಸುವುದನ್ನು ಮುಂದುವರಿಸಬಹುದು.
ಅಂಬಾನಿ ಮನೆಗೆ ಬಂತು ಹೊಸ ಬುಲೆಟ್ ಪ್ರೂಫ್ ಕಾರು, ಇದರ ಬೆಲೆ ಎಷ್ಟು?