Asianet Suvarna News Asianet Suvarna News

Flipkart Big Billion Daysನಲ್ಲಿ ಆರ್ಡರ್ ಮಾಡಿದ್ದು ಲ್ಯಾಪ್‌ಟಾಪ್‌; ಬಂದಿದ್ದು ಡಿಟರ್ಜೆಂಟ್‌ ಸೋಪ್..!

ಫ್ಲಿಪ್‌ಕಾರ್ಟ್‌ನಲ್ಲಿ ಲ್ಯಾಪ್‌ಟಾಪ್‌ ಆರ್ಡರ್‌ ಮಾಡಿದರೆ ಅದರ ಬದಲು ಡಿಟರ್ಜೆಂಟ್‌ ಸೋಪ್‌ ಬಂದಿದೆ ಎಂದು ಐಐಎಂ ಪದವೀಧರರೊಬ್ಬರು ಆರೋಪಿಸಿದ್ದಾರೆ. ಈ ಬಗ್ಗೆ ಅವರು ಲಿಂಕ್ಡ್‌ಇನ್‌ ಸಾಮಾಜಿಕ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ. 

man orders laptop during big billion days sale on flipkart ash
Author
First Published Sep 27, 2022, 2:09 PM IST

ಹಬ್ಬ (Festival) ಅಂದರೆ ಭಾರತೀಯರಿಗೆ (Indians) ಸಂಭ್ರಮದ ವಾತಾವರಣ ಇರುತ್ತದೆ. ಅದರಲ್ಲೂ, ವರ್ಷಾಂತ್ಯದ (Year End) ಕೊನೆಯ ಕೆಲವು ತಿಂಗಳುಗಳು ಜನರು ಸಂತೋಷ ಪಡಲು ಬಹಳಷ್ಟು ಕಾರಣಗಳಿವೆ. ಒಂದು ಕಾರಣವೆಂದರೆ ಬ್ಯಾಕ್ ಟು ಬ್ಯಾಕ್ ಸೇಲ್. ಹಲವಾರು ಆನ್‌ಲೈನ್ ವೆಬ್‌ಸೈಟ್‌ಗಳು (Online Websites) ಈ ಸಮಯದಲ್ಲಿ ಗ್ರಾಹಕರನ್ನು ಆಕರ್ಷಿಸಲು ಉತ್ತಮ ರಿಯಾಯಿತಿಗಳನ್ನು ನೀಡುತ್ತವೆ. ಈ ಮೂಲಕ ತಮಗಾಗಿ ಅಥವಾ ಇತರರಿಗಾಗಿ ವಸ್ತುಗಳನ್ನು ಖರೀದಿಸಲು ಜನರಿಗೆ ಆಕರ್ಷಿಸಲಾಗುತ್ತದೆ. ಆದರೂ, ಕೆಲವೊಮ್ಮೆ, ಜನರು ಆನ್‌ಲೈನ್ ಮಾರಾಟದೊಂದಿಗೆ ವಿಲಕ್ಷಣ ಅನುಭವಗಳನ್ನು ಹೊಂದಿರುತ್ತಾರೆ.

ಇದೇ ರೀತಿ, ಐಐಎಂ ಅಹಮದಾಬಾದ್‌ (IIM Ahmedabad) ಪದವೀಧರರೊಬ್ಬರಿಗೆ ಇತ್ತೀಚೆಗೆ ಫ್ಲಿಪ್‌ಕಾರ್ಟ್‌ನೊಂದಿಗೆ (Flipkart) ಅವರ ಮಾರಾಟದ ಅನುಭವವು ಕಹಿ ಅನುಭವ ನೀಡಿದೆ. ತನ್ನ ತಂದೆಗೆ ಲ್ಯಾಪ್‌ಟಾರ್ಪ ಆರ್ಡರ್ ಮಾಡಿದ್ದ ಐಐಎಂ ಪದವೀಧರ ಯಶಸ್ವಿ ಶರ್ಮಾ ಅದರ ಬದಲು ಫ್ಲಿಪ್‌ಕಾರ್ಟ್‌, ಘಡಿ ಡಿಟರ್ಜೆಂಟ್‌ ಸೋಪ್‌ (Ghadi Detergent Soap) ಪ್ಯಾಕೆಟ್‌ಗಳನ್ನು ಡೆಲಿವರಿ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ. ಬಿಗ್‌ ಬಿಲಿಯನ್ ಡೇಸ್‌ (Big Billion Days) ಸೇಲ್‌ ಸಮಯದಲ್ಲಿ ಇದನ್ನು ಖರೀದಿ ಮಾಡಲಾಗಿದೆ. ಅಲ್ಲದೆ ಫ್ಲಿಪ್‌ಕಾರ್ಟ್‌ ತನ್ನ ತಪ್ಪನ್ನು ಒಪ್ಪಿಕೊಳ್ಳಲು ನಿರಾಕರಿಸಿದೆ ಎಂದೂ ಅವರು ಹೇಳಿಕೊಂಡಿದ್ದಾರೆ.  

ಇದನ್ನು ಓದಿ: Flipkart Sale: ಕಡಿಮೆ ರೇಟಿಗೆ ಸಿಗಲಿದೆ 5 ದುಬಾರಿ ಫೋನ್‌ಗಳು!

ಯಶಸ್ವಿ ಶರ್ಮಾ ಅವರ ಲಿಂಕ್ಡ್‌ಇನ್ (LinkedIn) ಹಾಗೂ ಟ್ವಿಟ್ಟರ್‌ (Twitter) ಪೋಸ್ಟ್ ಪ್ರಕಾರ, ಲ್ಯಾಪ್‌ಟಾಪ್ ಬದಲಿಗೆ ಘಡಿ ಡಿಟರ್ಜೆಂಟ್ ಸ್ಯಾಚೆಟ್‌ಗಳನ್ನು ಕಳುಹಿಸಿದ್ದರೂ ಸಹ ಫ್ಲಿಪ್‌ಕಾರ್ಟ್‌ನ ಕಸ್ಟೋಮರ್‌ ಕೇರ್‌ ತನ್ನನ್ನೇ ದೂಷಿಸುತ್ತಿದೆ ಎಂದಿದ್ದಾರೆ. ತನ್ನ ಬಳಿ ಸಿಸಿಟಿವಿ ದೃಶ್ಯಗಳಿದ್ದರೂ, ಅದು ವ್ಯರ್ಥವಾಯಿತು ಎಂದೂ ಐಐಎಂ ಪದವೀಧರ ಆರೋಪಿಸಿದ್ದಾರೆ. ಇನ್ನು, ಪ್ಯಾಕೇಜ್ ಅನ್ನು ಸ್ವೀಕರಿಸುವಲ್ಲಿ ತನ್ನ ತಂದೆಯ ಒಂದು "ತಪ್ಪು" ಇದಕ್ಕೆ ಕಾರಣವಾಗಿದೆ ಎಂದೂ ಅವರು ಪೋಸ್ಟ್‌ನಲ್ಲಿ ಹೇಳಿಕೊಮಡಿದ್ದಾರೆ. ತನ್ನ ತಂದೆಗೆ  "ಓಪನ್-ಬಾಕ್ಸ್" ಡೆಲಿವರಿಯ ಬಗ್ಗೆ  ತಿಳಿದಿರಲಿಲ್ಲ. ಈ ಹಿನ್ನೆಲೆ ಅವರು ಚೆಕ್‌ ಮಾಡದೆ ಡೆಲಿವರಿ ಪಡೆದುಕೊಂಡಿದ್ದಾರೆ ಎಂದೂ ಹೇಳಿಕೊಂಡಿದ್ದಾರೆ. ಓಪನ್ ಬಾಕ್ಸ್‌ ವಿತರಣೆ ಪರಿಕಲ್ಪನೆಯ ಪ್ರಕಾರ, ಖರೀದಿದಾರನು ಡೆಲಿವರಿ ಮಾಡುವ ವ್ಯಕ್ತಿಯ ಎದುರು ಬಾಕ್ಸ್ ಓಪನ್ ಮಾಡಬೇಕು ಮತ್ತು ಉತ್ಪನ್ನವನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ನಂತರ ಮಾತ್ರ OTP ಅನ್ನು ಒದಗಿಸಬೇಕು. ಆದರೆ, ಹೆಚ್ಚಿನ ಪ್ರೀ-ಪೇಯ್ಡ್ ಡೆಲಿವರಿಗಳಲ್ಲಿ ರೂಢಿಯಲ್ಲಿರುವಂತೆ ಪಾರ್ಸೆಲ್ ಪಡೆದ ನಂತರ OTP ನೀಡಲಾಗುವುದು ಎಂದು ಅವರ ತಂದೆ ನಂಬಿದ್ದರು ಎಂದು ಯಶಸ್ವಿ ಶರ್ಮಾ ಹೇಳಿಕೊಂಡಿದ್ದಾರೆ.

ಈ ಸಂಬಂಧ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಯಶಸ್ವಿ ಶರ್ಮಾ: "ಬಾಕ್ಸ್ ಅನ್ನು ಪರಿಶೀಲಿಸದೆ ಡೆಲಿವರಿ ಬಾಯ್ ಬಂದು ಹೋಗಿದ್ದಕ್ಕೆ ನನ್ನ ಬಳಿ ಸಿಸಿಟಿವಿ ಪುರಾವೆ ಇದೆ. ಮತ್ತು ಬಳಿಕ ಅನ್‌ಬಾಕ್ಸಿಂಗ್ ಮಾಡಿದ ನಂತರ ಲ್ಯಾಪ್‌ಟಾಪ್ ಅದರೊಳಗೆ ಇರಲಿಲ್ಲ" ಎಂದು ಹೇಳಿದ್ದಾರೆ. ಆದರೆ, ಫ್ಲಿಪ್‌ಕಾರ್ಟ್‌ನ ಹಿರಿಯ ಗ್ರಾಹಕ ಸೇವಾ ಕಾರ್ಯನಿರ್ವಾಹಕರು ಒಟಿಪಿಯನ್ನು ಸ್ವೀಕರಿಸಿರುವುದರಿಂದ ಯಾವುದೇ ಮರುಪಾವತಿ ಸಾಧ್ಯವಿಲ್ಲ ಎಂದು ಹಣ ವಾಪಸ್‌ ನೀಡಲು ನಿರಾಕರಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಹಾಗೂ, "ನನ್ನ ತಂದೆಯ ತಪ್ಪು ಎಂದರೆ - ಫ್ಲಿಪ್‌ಕಾರ್ಟ್ ಖಚಿತವಾದ ಮಾರಾಟಗಾರರಿಂದ ಬಂದ ಪ್ಯಾಕೇಜ್ ಲ್ಯಾಪ್‌ಟಾಪ್ ಅನ್ನು ಹೊಂದಿರುತ್ತದೆ, ಡಿಟರ್ಜೆಂಟ್ ಅಲ್ಲ ಎಂದು ಅವರು ಊಹಿಸಿದ್ದಾರೆ. ಇನ್ನೊಂದೆಡೆ, OTP ಕೇಳುವ ಮೊದಲು ಡೆಲಿವರಿ ಬಾಯ್ ಓಪನ್‌ ಬಾಕ್ಸ್ ಪರಿಕಲ್ಪನೆಯ ಬಗ್ಗೆ ರಿಸೀವರ್‌ಗೆ ಏಕೆ ತಿಳಿಸಲು ಸಾಧ್ಯವಾಗಲಿಲ್ಲ?" ಎಂದು ಲಿಂಕ್ಡ್‌ಇನ್‌ನಲ್ಲಿ ಯಶಸ್ವಿ ಶರ್ಮಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Flipkart Big Billion Days: ಎಲೆಕ್ಟ್ರಾನಿಕ್ಸ್‌, ಸ್ಮಾರ್ಟ್‌ಫೋನ್ಸ್ ಮೇಲೆ ಭರ್ಜರಿ ಡಿಸ್ಕೌಂಟ್‌

ಇನ್ನು, ಗ್ರಾಹಕರ ವೇದಿಕೆಗೆ ತೆರಳುವ ಮೊದಲು ತಿಳಿಸಲು ಕೊನೆಯ ಹತಾಶ ಪ್ರಯತ್ನವಾಗಿ ಅವರು ದೂರನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ರುವುದಾಗಿಯೂ ಐಐಎಂ ಪದವೀಧರ ಯಶಸ್ವಿ ಶರ್ಮಾ ಹೇಳಿದ್ದಾರೆ. ಅವರು ತಮ್ಮ ಪೋಸ್ಟ್‌ನಲ್ಲಿ ಕೇಂದ್ರ ಸಚಿವ ಪಿಯೂಶ್ ಗೋಯಲ್ ಮತ್ತು ಫ್ಲಿಪ್‌ಕಾರ್ಟ್ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಅವರನ್ನು ಟ್ಯಾಗ್ ಮಾಡಿದ್ದು, ಅದು ಈಗ ವೈರಲ್ ಆಗಿದೆ.

ಪ್ಲಿಫ್‌ಕಾರ್ಟ್ ಸ್ಪಷ್ಟನೆ

ಫ್ಲಿಪ್ ಕಾರ್ಟ್ ಒಂದು ಗ್ರಾಹಕ ಕೇಂದ್ರಿತ ಸಂಸ್ಥೆಯಾಗಿದ್ದು, ಗ್ರಾಹಕರ ನಂಬಿಕೆ ಮೇಲೆ ಪರಿಣಾಮ ಬೀರುವಂತಹ ಎಲ್ಲಾ ಪ್ರಕರಣಗಳ ಮೇಲೆ ಶೂನ್ಯ –ಸಹಿಷ್ಣುತೆ ನೀತಿಯನ್ನು ಅಳವಡಿಸಿಕೊಂಡಿದೆ. ಸಾಧ್ಯವಾದಷ್ಟೂ ನಮ್ಮ ಗ್ರಾಹಕರಿಗೆ ಉತ್ತಮವಾದ ಆನ್ ಲೈನ್ ಶಾಪಿಂಗ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಇದು ನಮಗೆ ಅತ್ಯಂತ ಮಹತ್ವಪೂರ್ಣವಾಗಿದೆ. ಓಪನ್ ಬಾಕ್ಸ್ ಡೆಲಿವರಿ ಆಯ್ಕೆಯನ್ನು ನೀಡುವ ಈ ನಿರ್ದಿಷ್ಟ ಸಂದರ್ಭದಲ್ಲಿ ಗ್ರಾಹಕರು ಪ್ಯಾಕೇಜನ್ನು ತೆರೆಯದೇ ಡೆಲಿವರಿ ಪ್ರತಿನಿಧಿಯೊಂದಿಗೆ ಒಟಿಪಿಯನ್ನು ಹಂಚಿಕೊಂಡಿದ್ದಾರೆ. ಈ ಘಟನೆಯ ವಿವರಗಳನ್ನು ಪರಿಶೀಲಿಸಿದ ನಂತರ ನಮ್ಮ ಗ್ರಾಹಕ ಸೇವಾ ತಂಡವು ಗ್ರಾಹಕರಿಗೆ ಮರುಪಾವತಿ ಮಾಡುವ ಪ್ರಕ್ರಿಯೆಯನ್ನು ಆರಂಭಿಸಿದೆ ಮತ್ತು 3-4 ಕರ್ತವ್ಯದ ದಿನಗಳಲ್ಲಿ ಹಣ ಅವರ ಖಾತೆಗೆ ಜಮಾ ಆಗಲಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳುತ್ತಿದ್ದೇವೆ.

ಫ್ಲಿಪ್ ಕಾರ್ಟ್ ನ ಓಪನ್ ಬಾಕ್ಸ್ ಡೆಲಿವರಿಯು ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವ ನಿಟ್ಟಿನಲ್ಲಿ ಒಂದು ಪ್ರತ್ಯೇಕವಾದ ಉತ್ತಮ ಉಪಕ್ರಮವಾಗಿದೆ. ಈ ಓಪನ್ ಬಾಕ್ಸ್ ಡೆಲಿವರಿ ಪ್ರಕ್ರಿಯೆಯ ಭಾಗವಾಗಿ ಫ್ಲಿಪ್ ಕಾರ್ಟ್ ವಿಶ್ ಮಾಸ್ಟರ್ಸ್ (ಡೆಲಿವರಿ ಪಾಲುದಾರು) ಉತ್ಪನ್ನವನ್ನು ಡೆಲಿವರಿ ಮಾಡುವ ಸಂದರ್ಭದಲ್ಲಿ ಗ್ರಾಹಕರ ಮುಂದೆ ಪ್ಯಾಕೇಜ್ ಅನ್ನು ಓಪನ್ ಮಾಡಲಾಗುತ್ತದೆ. ಗ್ರಾಹಕರು ತಮ್ಮ ಆರ್ಡರ್ ಗಳು ಸರಿಯಾದ ಸ್ಥಿತಿಯಲ್ಲಿದ್ದರೆ ಮಾತ್ರ ಅದನ್ನು ಸ್ವೀಕರಿಸಬೇಕು ಮತ್ತು ನಂತರವಷ್ಟೇ ಒಟಿಪಿಯನ್ನು ಹಂಚಿಕೊಳ್ಳಬೇಕು. ಇದು ಗ್ರಾಹಕರ ಕಡೆಯಿಂದ ಯಾವುದೇ ಹಣಕಾಸಿನ ಹೊರೆ ಅಥವಾ ನಷ್ಟವನ್ನು ತಡೆಯುತ್ತದೆ. ಒಟ್ಟಾರೆ ಗ್ರಾಹಕರ ಅನುಭವವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಮತ್ತು ಉತ್ತಮ ಪೂರೈಕೆ ಜಾಲವನ್ನು ನಿರ್ಮಾಣ ಮಾಡುವ ದಿಸೆಯಲ್ಲಿ ಫ್ಲಿಪ್ ಕಾರ್ಟ್ ಹಲವು ವರ್ಷಗಳಿಂದ ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದ್ದು, ವಿವಿಧ ಉಪಕ್ರಮಗಳನ್ನು ವಿಸ್ತರಣೆ ಮಾಡುತ್ತಾ ಬಂದಿದೆ.

Follow Us:
Download App:
  • android
  • ios