Asianet Suvarna News Asianet Suvarna News

58 ಸಾವಿರ ಕೋಟಿ ರೂ. ಆನ್‌ಲೈನ್‌ ಬಹುಮಾನಕ್ಕೆ ತೆರಿಗೆಯೇ ಬಂದಿಲ್ಲ: ಟ್ಯಾಕ್ಸ್‌ ವಂಚಕರಿಗೆ IT Notice

ಆನ್‌ಲೈನ್‌ ಗೇಮ್‌ನಲ್ಲಿ 58 ಸಾವಿರ ಕೋಟಿ ರೂ. ಬಹುಮಾನ ಗೆದ್ದು ತೆರಿಗೆ ವಂಚಿಸಿದ ದೊಡ್ಡ ವಂಚನೆಯನ್ನು ಐಟಿ ಇಲಾಖೆ ಬಯಲಿಗೆ ಎಳೆದಿದೆ. ಹಾಗೂ, 3 ವರ್ಷ ಹಣ ಗೆದ್ದು ತೆರಿಗೆ ಕಟ್ಟದವರಿಗೆ ನೋಟಿಸ್‌ ನೀಡಲಾಗಿದೆ. 

it notices being sent to winners of online games for short payment of tax cbdt chief nitin gupta ash
Author
First Published Sep 28, 2022, 11:44 AM IST

ನವದೆಹಲಿ: ಕಳೆದ 3 ವರ್ಷದಲ್ಲಿ ಆನ್‌ಲೈನ್‌ ಗೇಮ್‌ನಲ್ಲಿ 58 ಸಾವಿರ ಕೋಟಿ ರೂ. ಬಹುಮಾನ ಗೆದ್ದು ತೆರಿಗೆ ವಂಚನೆ ಎಸಗಿದ ಜಾಲವನ್ನು ಆದಾಯ ತೆರಿಗೆ ಇಲಾಖೆ ಭೇದಿಸಿದೆ. ಹೀಗೆ ತೆರಿಗೆ ಕಟ್ಟದೇ ಮೋಸ ಮಾಡಿದ ವ್ಯಕ್ತಿಗಳಿಗೆ ಈಗ ನೋಟಿಸ್‌ ನೀಡಲು ಆರಂಭಿಸಿದೆ. ‘ವಿವಿಧ ಆನ್‌ಲೈನ್‌ ಗೇಮ್‌ ನಡೆಸುವ ಸಂಸ್ಥೆಗಳು ಕಳೆದ 3 ವರ್ಷದಲ್ಲಿ 58,000 ಕೋಟಿ ರೂ. ಬಹುಮಾನ ವಿತರಣೆ ಮಾಡಿವೆ. ಈ ಬಹುಮಾನದ ಹಣ ಯಾರಿಗೆ ಹೋಗಿದೆ ಎಂಬ ಮಾಹಿತಿ ನಮ್ಮ ಬಳಿ ಇದೆ. ಮತ್ತೊಂದೆಡೆ ಆದಾಯ ತೆರಿಗೆ ಪಾವತಿ ವೇಳೆ ಈ ಬಹುಮಾನದ ಹಣವನ್ನು ನಮೂದು ಮಾಡದೇ ಇರುವವರೂ ನಮ್ಮ ಗಮನಕ್ಕೆ ಬರುತ್ತಿದ್ದಾರೆ. ಇವರಿಗೆ ಈಗ ನೋಟಿಸ್‌ ನೀಡಲಾಗುತ್ತಿದೆ’ ಎಂದು ಸಿಬಿಡಿಟಿ ಮುಖ್ಯಸ್ಥ ನಿತಿನ್‌ ಗುಪ್ತಾ ಮಂಗಳವಾರ ಹೇಳಿದ್ದಾರೆ.

ಹೀಗೆ ಬಹುಮಾನದ ಮಾಹಿತಿ ಮುಚ್ಚಿಟ್ಟವರಿಗೆ ತೆರಿಗೆ ಪಾವತಿ ಪೋರ್ಟಲ್‌ನಲ್ಲೇ ನೋಟಿಸ್‌ ನೀಡಲಾಗಿದೆ. ಈ ಮೂಲಕ ಅವರು ಸ್ವಯಂ ತೆರಿಗೆ ಪಾವತಿ ಮಾಡುವಂತೆ ಮಾಡಲಾಗಿದೆ ಎಂದು ನಿತಿನ್‌ ಗುಪ್ತಾ ತಿಳಿಸಿದ್ದಾರೆ. ಆದಾಯ ಮತ್ತು ತೆರಿಗೆ ಪಾವತಿಯಲ್ಲಿ ಹೊಂದಾಣಿಕೆ ಇಲ್ಲದಿದ್ದಲ್ಲಿ ತೆರಿಗೆ ಅನುಸರಣೆ ಡ್ಯಾಶ್‌ಬೋರ್ಡ್‌ನಲ್ಲಿ ವಿಜೇತರನ್ನು ಇಲಾಖೆ ಎಚ್ಚರಿಸಲು ಪ್ರಾರಂಭಿಸಿದೆ.

ಇದನ್ನು ಓದಿ: ಆನ್‌ಲೈನ್ ಗೇಮ್‌ನಿಂದ ಗಳಿಸಿದ ಆದಾಯಕ್ಕೂ ತೆರಿಗೆ; ಐಟಿಆರ್-ಯು ಫೈಲ್ ಮಾಡದಿದ್ರೆ ಬೀಳುತ್ತೆ ದಂಡ

"ನಾವು ಈ (ಆನ್‌ಲೈನ್ ಗೇಮಿಂಗ್) ವಲಯದಲ್ಲಿ ಕ್ರಮ ಕೈಗೊಂಡಿದ್ದೇವೆ ಮತ್ತು ಕಳೆದ 3 ವರ್ಷಗಳಲ್ಲಿ ರೂ. 58,000 ಕೋಟಿ ಗೆಲುವುಗಳು ಕಂಡುಬಂದಿವೆ ಎಂದು ನಿರ್ಧರಿಸಿದ್ದೇವೆ. ಡೇಟಾ ನಮ್ಮ ಬಳಿ ಇದೆ. ನಾವು ನೋಟಿಸ್‌ಗಳನ್ನು ನೀಡುವ ಪ್ರಕ್ರಿಯೆಯಲ್ಲಿದ್ದೇವೆ" ಎಂದು ಸಿಬಿಡಿಟಿ ಮುಖ್ಯಸ್ಥ ನಿತಿನ್‌ ಗುಪ್ತಾ ಮಾಹಿತಿ ನೀಡಿದ್ದಾರೆ. ತೆರಿಗೆ ಅನುಸರಣೆ ಪೋರ್ಟಲ್‌ನಲ್ಲಿ ನೋಟಿಸ್‌ಗಳನ್ನು ಹಾಕಲಾಗುತ್ತಿದೆ ಮತ್ತು ವಿಜೇತರನ್ನು ಬಾಕಿ ತೆರಿಗೆ ಪಾವತಿಸುವಂತೆ ಒತ್ತಾಯಿಸಲಾಗುತ್ತಿದೆ ಎಂದೂ ಅವರು ಹೇಳಿದರು "ಅವರು ಸ್ವಯಂಪ್ರೇರಣೆಯಿಂದ ತೆರಿಗೆ ಪಾವತಿಯನ್ನು ಅನುಸರಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ" ಎಂದೂ ನಿತಿನ್‌ ಗುಪ್ತಾ ಹೇಳಿಕೊಂಡಿದ್ದಾರೆ. ಸಾಕ್ಷ್ಯಾಧಾರಗಳ ಆಧಾರದಲ್ಲಿ ದತ್ತಾಂಶಗಳು ಕಂಡುಬಂದಲ್ಲಿ ಇಲಾಖೆಯು ಜಾರಿ ಕ್ರಮವನ್ನು ಕೈಗೊಳ್ಳುತ್ತದೆ ಮತ್ತು ಅಂತಹ ಸಂದರ್ಭಗಳಲ್ಲಿ ನೋಟಿಸ್ ನೀಡಲಾಗುತ್ತದೆ ಎಂದು ಅವರು ಹೇಳಿದರು.

ಇತ್ತೀಚೆಗಷ್ಟೇ ಬೆಂಗಳೂರು ಮೂಲದ ಆನ್‌ಲೈನ್‌ ಗೇಮಿಂಗ್‌ ಪೋರ್ಟಲ್‌ ಆದ ಗೇಮ್ಸ್‌ಕ್ರಾಫ್ಟ್‌ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ಗೆ 21,000 ಕೋಟಿ ರೂ. ತೆರಿಗೆ ಪಾವತಿ ಮಾಡುವಂತೆ ಆದಾಯ ತೆರಿಗೆ ಇಲಾಖೆ ನೋಟಿಸ್‌ ಜಾರಿ ಮಾಡಿತ್ತು. ಅದರ ವಿರುದ್ಧ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು. ಅದರ ಬೆನ್ನಲ್ಲೇ ಇದೀಗ ವಿಜೇತರಿಗೂ ನೋಟಿಸ್‌ ರವಾನೆ ಪ್ರಕ್ರಿಯೆ ಆರಂಭವಾಗಿದೆ. 

ಇದನ್ನೂ ಓದಿ: ಮಕ್ಕಳನ್ನು ಆನ್‌ಲೈನ್ ಗೇಮ್ಸ್ ಚಟದಿಂದ ಬಿಡಿಸೋದು ಹೇಗೆ?

ಜಿಎಸ್‌ಟಿ ಗುಪ್ತಚರ ವಿಭಾಗವು ಈ ತಿಂಗಳ ಆರಂಭದಲ್ಲಿ ಬೆಂಗಳೂರು ಮೂಲದ ಆನ್‌ಲೈನ್ ಗೇಮಿಂಗ್ ಪೋರ್ಟಲ್ ಗೇಮ್ಸ್‌ಕ್ರಾಫ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ಗೆ 21,000 ಕೋಟಿ ತೆರಿಗೆ, ಬಡ್ಡಿ ಮತ್ತು ದಂಡದ ರೂಪದಲ್ಲಿ ಶೋಕಾಸ್‌ ನೋಟಿಸ್‌ ನೀಡಿತ್ತು. ಆನ್‌ಲೈನ್ ಗೇಮಿಂಗ್‌ನಲ್ಲಿ ಶೇಕಡಾ 28 ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆಧಾರದ ಮೇಲೆ ಈ ತೆರಿಗೆಯನ್ನು ಲೆಕ್ಕಹಾಕಲಾಗಿದೆ. ಪ್ರಸ್ತುತ, ಕೌಶಲ್ಯದ ಆನ್‌ಲೈನ್ ಗೇಮ್‌ಗಳ ಮೇಲೆ ಶೇಕಡಾ 18 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ, ಆದರೆ ಚಾನ್ಸ್‌ ಆನ್‌ಲೈನ್ ಗೇಮ್‌ಗಳ ಮೇಲೆ ಶೇಕಡಾ 28 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ.

Follow Us:
Download App:
  • android
  • ios