ಮನೆ ಕಟ್ಟಿ ನೋಡು: ಮಧ್ಯಮ ವರ್ಗದ ಜನರಿಗೆ ಕನಸಿಗೆ ಹೋಮ್ ಲೋನ್
'ಮನೆ ಕಟ್ಟಿ ನೋಡು, ಮದ್ವೆ ಮಾಡಿ ನೋಡು' ಎನ್ನೋದು ಗಾದೆ. ಪ್ರತಿಯೊಬ್ಬ ಮನುಷ್ಯನಿಗೂ ತನ್ನದೇ ಸೂರು ಬೇಕೆಂಬ ಕನಸಿರುತ್ತದೆ. ಕನಸ ನನಸಾಗಿಸಲು ಸಾಲ ಸೋಲ ಮಾಡಲೂ ಹಿಂಜರಿಯೋಲ್ಲ. ಆದರೆ, ಸಾಲ ಹೇಗೆ, ಎಷ್ಟು ತೆಗೆದುಕೊಳ್ಳಬೇಕು. ಇಲ್ಲಿವೆ ವಿವರ.
ಮನೆ ಕಟ್ಟುವ ಆಸೆ ಈಡೇರಬೇಕೆಂದರೆ ಮಧ್ಯಮ ವರ್ಗದ ಜನರು ಗೃಹ ಸಾಲದ ಮೊರೆ ಹೋಗಲೇ ಬೇಕು. ಇಲ್ಲವೆಂದರೆ ಅವರ ಕನಸು ನನಸಾಗೋದು ಅಸಾಧ್ಯ. ಹಣಕಾಸು ಸಂಸ್ಥೆಗಳು, ಖಾಸಗಿ ಹಾಗೂ ಕೇಂದ್ರೀಯ ಬ್ಯಾಂಕುಗಳು ವಿವಿಧ ಆಫರ್ಸ್ ಜೊತೆ ಗೃಹ ಸಾಲ ನೀಡುತ್ತವೆ. ಆದರೆ, ಅಳೆದು ತೂಗಿ, ಲೆಕ್ಕ ಹಾಕಿ, ಹೆಚ್ಚು ಹೊರೆ ಬೀಳದ ಹಾಗೆ ಸಾಲ ತೆಗೆದುಕೊಳ್ಳುವುದೊಂದು ಆರ್ಟ್. ಈ ಬಗ್ಗೆ ಸೂಕ್ತ ಜ್ಞಾನ ಪಡೆದು ಒಂದಡಿ ಹೆಜ್ಜೆ ಮುಂದಿಟ್ಟರೆ ಹೋಮ್ ಲೋನ್ ಹೊರೆ ಆಗದಂತೆ ನೋಡಿಕೊಳ್ಳಬಹುದು. ಇಎಂಐ ಹಾಗೂ ಕಟ್ಟುವ ಬಡ್ಡಿ ಜೊತೆ ನಿಮ್ಮ ಆದಾಯವನ್ನು ಗಮನದಲ್ಲಿಟ್ಟುಕೊಂಡು ಸಾಲ ಮಾಡುವುದು ಜಾಣತನ. ಇಂಥ ಹೋಮ್ ಲೋನ್ ಬಗ್ಗೆ ಇಲ್ಲಿದೆ ಅಗತ್ಯ ಮಾಹಿತಿ.
ಏನೇನು ಗೃಹ ಸಾಲ ಲಭ್ಯ?
ಮನೆ ಖರೀದಿಸಲು ಅಥವಾ ಇರುವ ಜಾಗದಲ್ಲಿ ಮನೆ ನಿರ್ಮಿಸಲು ಹಣಕಾಸು ಸಂಸ್ಥೆಗಳಿಂದ ಸಾಲ ನೀಡಲಾಗುತ್ತದೆ. ಅಷ್ಟೇ ಅಲ್ಲ ಮನೆಯ ನವೀಕರಣ ಹಾಗೂ ವಿಸ್ತರಣೆಗೂ ಸಾಲ ಪಡೆಯಬಹುದು. ಪಡೆದ ಹಣವನ್ನು ಮಾಸಿಕ ಕಂತುಗಳ ಮೂಲಕ ತೀರಿಸಬೇಕು. ನಿರ್ದಿಷ್ಟ ಬಡ್ಡಿ ಮತ್ತು ಅವಧಿಯಲ್ಲಿಯೇ ತೆಗೆದುಕೊಂಡ ಸಾಲ ಮರುಪಾವತಿಸಬೇಕು. ಸಾಮಾನ್ಯವಾಗಿ ಸಾಲ ಪಡೆಯುವವರ ಸಾಮಾಜಿಕ-ಆರ್ಥಿಕ ಹಿನ್ನೆಲೆ ಹಾಗೂ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ವಿವಿಧ ನಮೂನೆಯ ಸಾಲ ನೀಡಲಾಗುತ್ತದೆ.
1.ಮನೆ ಖರೀದಿ ಸಾಲ: ಅಭಿವೃದ್ಧಿಗೊಳಿಸಿದ ಅಥವಾ ನಿರ್ಮಾಣ ಹಂತದ ಮನೆ ಕೊಳ್ಳಲು ನೀಡುವ ಸಾಲವಿದು.
2.ಮನೆ ನಿರ್ಮಾಣ ಸಾಲ: ಭೂಮಿ ಹೊಂದಿರುವ ವ್ಯಕ್ತಿಗಳಿಗೆ ಮನೆ ಕಟ್ಟಲೆಂದೇ ಈ ಸಾಲ ನೀಡಲಾಗುತ್ತದೆ.
3.ಮನೆ ನವೀಕರಣ ಸಾಲ: ಅಸ್ತಿತ್ವದಲ್ಲಿರುವ ಮನೆಗಳನ್ನು ನವೀಕರಿಸಲು ನೀಡುವ ಸಾಲವಿದು.
4.ಮನೆ ವಿಸ್ತರಣಾ ಸಾಲ: ಹೆಚ್ಚುವರಿ ವಾಸಸ್ಥಳ ಸೃಷ್ಟಿಸಲು ನೂತನ ಕೊಠಡಿ, ಮಹಡಿ ಅಥವಾ ಇತರೆ ಸೌಲಭ್ಯಗಳನ್ನು ನಿರ್ಮಿಸಲು ನೀಡುವ ಸಾಲ.
5. ಹಸಿರು ಮನೆ ಸಾಲ: ಪರಿಸರ ಸ್ನೇಹಿ ವಸತಿ ಯೋಜನೆಗಳಿಗೆ, ಎನರ್ಜಿ ಮಿತವ್ಯಯ ಸಾಧನಗಳ ಖರೀದಿ ಹಾಗೂ ಇತರೆ ಕಾರಣಕ್ಕೆ ಈ ಸಾಲ ನೀಡಲಾಗುತ್ತದೆ.
ಸಾಲ | ಉದ್ದೇಶ |
ಮನೆ ಖರೀದಿ ಸಾಲ | ಹೊಸ ವಸತಿ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವುದು |
ಮನೆ ನಿರ್ಮಾಣ ಸಾಲ | ಸ್ವಂತ ಭೂಮಿಯಲ್ಲಿ ನಿರ್ಮಾಣಕ್ಕೆ ಹಣಕಾಸು ಒದಗಿಸುವುದು |
ಮನೆ ನವೀಕರಣ ಸಾಲ | ಮನೆ ನವೀಕರಣ ಅಥವಾ ದುರಸ್ತಿಗೆ ಹಣಕಾಸು ಒದಗಿಸುವುದು |
ಮನೆ ವಿಸ್ತರಣಾ ಸಾಲ | ಹೆಚ್ಚುವರಿ ವಾಸಸ್ಥಳಗಳನ್ನು ಸೇರಿಸುವುದು |
ಹಸಿರು ಮನೆ ಸಾಲ | ಸುಸ್ಥಿರ ಮತ್ತು ಪರಿಸರ ಸ್ನೇಹಿ ಮನೆಗಳನ್ನು ಉತ್ತೇಜಿಸುವುದು |
ಗಮನಿಸಬೇಕಾದ ಅಂಶಗಳು
1.ಅರ್ಹತೆ: ಸ್ಥಿರ ಆದಾಯ, ವಯಸ್ಸು ಹಾಗೂ ಕ್ರೆಡಿಟ್ ಸ್ಕೋರ್, ನೀಡಿದ ಸಾಲವನ್ನು ಹಿಂಪಡೆಯುವ ಸಾಮಾರ್ಥ್ಯವನ್ನು ಲೆಕ್ಕಚಾರ ಮಾಡಿ, ಸಾಲ ನೀಡಲಾಗುತ್ತದೆ. ಸಾಲ ಕೊಡುವಾಗ ಹಣಕಾಸು ಸಂಸ್ಥೆಗಳು ಪ್ರತಿಯೊಂದೂ ಮಾನದಂಡವನ್ನೂ ಅಳೆದು, ತೂಗಿ, ಲೆಕ್ಕ ಹಾಕಿಯೇ ಸಾಲ ಕೊಡಲು ಮುಂದಾಗುತ್ತದೆ.
2. ಬಡ್ಡಿ ದರ: ಸಾಲ ಪಡೆಯುವವರು ಸ್ಥಿರ ಹಾಗೂ ಫ್ಲೋಟಿಂಗ್ ದರಗಳ (ಮಾರುಕಟ್ಟೆಗೆ ಏರಿಳಿತಗಳಿಗೆ ಅನುಗುಣವಾಗಿ ಬದಲಾಗೋ ಮೌಲ್ಯ) ನಡುವೆ ಸಾಲ ಪಡೆಯುವ ಮಾದರಿಯನ್ನು ಆಯ್ಕೆ ಮಾಡಬೇಕು. ಆರ್‌ಬಿಐ ರೆಪೋ ದರ ತೆಗೆದುಕೊಳ್ಳುವ ಸಾಲದ ಮೂಲ ಧನ ಹಾಗೂ ಬಡ್ಡಿ ಮೇಲೆ ಪ್ರಭಾವ ಬೀರುವುದರಿಂದ ಈ ಎಲ್ಲ ಅಂಶಗಳನ್ನು ಸಾಲ ತೆಗದುಕೊಳ್ಳುವಾಗಲೇ ಯೋಚಿಸಬೇಕು.
3. ಸಾಲ ಪ್ರಮಾಣ ಮತ್ತು ಮಾರ್ಜಿನ್: ಆಸ್ತಿ ಮೌಲ್ಯದ ಶೇ.75 ರಿಂದ ಶೇ.90ರಷ್ಟು ಮೊತ್ತದ ಸಾಲ ಸಾಮಾನ್ಯವಾಗಿ ಮಂಜೂರಾಗುತ್ತದೆ. ಇದು ಸಾಲಗಾರರ ಸ್ವಂತ ಹೂಡಿಕೆಯ ಮಹತ್ವಜ ಮೇಸೆ ನಿರ್ಧರಿತವಾಗಿರುತ್ತದೆ.
4. ಅವಧಿ ಆಯ್ಕೆ: ಸುದೀರ್ಘ ಅವಧಿಗೆ ತೆಗೆದುಕೊಳ್ಳುವ ಸಾಲಗಳು ಸಾಮಾನ್ಯವಾಗಿ ಕಡಿಮೆ ಮಾಸಿಕ ಕಂತುಗಳಾದರೂ, ನೀಡುವ ಬಡ್ಡಿ ದರವನ್ನು ಹೆಚ್ಚಿಸುತ್ತದೆ. ಸಾಲ ನೀಡುವ ಹಣಕಾಸು ಸಂಸ್ಥೆಗಳು ಇದನ್ನು ಗಮನದಲ್ಲಿಟ್ಟುಕೊಳ್ಳುತ್ತವೆ.
5.ದಾಖಲಾತಿ ಸಿದ್ಧತೆ: ಆದಾಯ ಪುರಾವೆ, ಆಸ್ತಿ ಪತ್ರಗಳು ಮತ್ತು ಗುರುತಿನ ಪರಿಶೀಲನೆಯಲ್ಲಿ ಸ್ಪಷ್ಟತೆ ಹೆಚ್ಚಿದಷ್ಟು ಸಾಲದ ಹೊರೆ ಕಡಿಮೆಯಾಗುತ್ತದೆ. ಸಾಲ ಪಡೆದು ಕೊಳ್ಳುವ ಪ್ರಕ್ರಿಯನ್ನೂ ಸುಲಭಗೊಳಿಸುತ್ತದೆ.
6. ತೆರಿಗೆ ದಕ್ಷತೆ: ಮನೆ ಕಟ್ಟಲು ಪಡೆಯುವ ಸಾಲ ಆದಾಯ ತೆರಿಗೆ ಕಾಯ್ದೆಯ 80ಸಿ ಮತ್ತು 24ಬಿ ಸೆಕ್ಷನ್ ಅಡಿಯಲ್ಲಿ ತೆರಿಗೆ ಪಾವತಿಯಿಂದ ಸ್ವಲ್ಪ ಮಟ್ಟಿಗಿನ ಆದಾಯಕ್ಕೆ ವಿನಾಯತಿ ನೀಡುತ್ತದೆ.
7.ಕ್ರೆಡಿಟ್ ಸ್ಕೋರ್ ಮಹತ್ವ: 750 ಅಥವಾ ಅಧಿಕ ಕ್ರೆಡಿಟ್ ಸ್ಕೋರ್ ಮೆಂಟೈನ್ ಮಾಡಿದರೆ ಸಾಲ ಪಡೆದುಕೊಳ್ಳುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಇಎಂಐ ಹಾಗೂ ಬಡ್ಡಿ ದರದ ಮೇಲೆ ಬೀರುವ ಪ್ರಭಾವ:
1.ಬಡ್ಡಿ ದರ ವಿಧಿಸುವ ಲೆಕ್ಕಾಚಾರ
- ಇಎಂಐ ಕಂತುಗಳು ಹೆಚ್ಚಿದಂತೆ ಬಡ್ಡಿ ದರವೂ ಹೆಚ್ಚುತ್ತದೆ.
- ತಿಂಗಳಿಗೆ ಶೇ.0.5ರಷ್ಟು ಬಡ್ಡಿ ಪ್ರಮಾಣ ಹೆಚ್ಚಾದರೂ 20 ವರ್ಷಗಳ ಸಾಲ ತೀರಿಸುವ ಅವಧಿಯಲ್ಲಿ ಆ ಮೊತ್ತ ಗಣನೀಯವಾಗಿ ಏರಿಕೆಯಾಗುತ್ತದೆ.
- ಸಾಲ ಪಡೆಯುವಾಗ ಕಡಿಮೆ ಬಡ್ಡಿ ದರವನ್ನು ಗಮನದಲ್ಲಿಟ್ಟುಕೊಳ್ಳುವ ಜೊತೆಗೆ, ಮಾರುಕಟ್ಟೆ ಇತಿಮಿತಿಗಳ ಪರಿಜ್ಞಾನವಿದ್ದರೆ ಫ್ಲೋಟಿಂಗ್ ದರಗಳನ್ನು ಲೆಕ್ಕ ಹಾಕಿ ಸಾಲ ತೆಗೆದುಕೊಳ್ಳಬೇಕು.
2.ಅವಧಿ ಪಾತ್ರ:
- ಮಾಸಿಕ ಕಂತುಗಳನ್ನು ನಿರ್ವಹಿಸಲು ಈಸಿಯಾದರೂ ಸುದೀರ್ಘ ಕಾಲದವರೆಗೆ ಪಡೆಯುವ ಸಾಲ, ಬಡ್ಡಿ ಪಾವತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಆದಾಯವನ್ನು ಗಮನದಲ್ಲಿಟ್ಟುಕೊಂಡೇ ಸಾಲ ಪಡೆಯಬೇಕು.
- ಕಡಿಮೆ ಅವಧಿಯ EMI ಗಳು ಹೆಚ್ಚಾಗಿರುತ್ತವೆ ಆದರೆ ಬಡ್ಡಿ ವೆಚ್ಚವನ್ನು ಗಣನೀಯವಾಗಿ ಉಳಿಸುತ್ತವೆ.
ಬಡ್ಡಿ | ಸಾಲದ ಮೊತ್ತ | ಅವಧಿ (ವರ್ಷಗಳು) | ಇಎಂಐ | ಒಟ್ಟು ಬಡ್ಡಿ |
8% | 50,00,000 | 10 | 60,663 | 22,79,556 |
8% | 50,00,000 | 20 | 41,822 | 50,37,322 |
9% | 50,00,000 | 10 | 63,297 | 25,95,685 |
9% | 50,00,000 | 20 | 44,986 | 55,96,690 |
3. ಬ್ಯಾಲೆನ್ಸ್ ಮಾಡೋದು ಹೇಗೆ?
- ಸಾಲಗಾರರು ಹಣಕಾಸು ಸಾಮರ್ಥ್ಯಕ್ಕೆ ತಕ್ಕಂತೆ ಮಾಸಿಕ ಕಂತಿನ ಮೌಲ್ಯ ಹಾಗೂ ಬಡ್ಡಿ ನಿಗದಿಯಾಗುವಂತೆ ನೋಡಿಕೊಳ್ಳಬೇಕು.
- ಮುಂಗಡ ಪಾವತಿ ನಂತರ ಇಎಂಐ ಅವಧಿ ಕಡಿಮೆ ಮಾಡಿ ಕೊಳ್ಳಲು ಅವಕಾಶ ಇರುತ್ತದೆ ಎಂಬುವುದು ನೆನಪಿನಲ್ಲಿರಲಿ.
ಮನೆ ಸಾಲಕ್ಕೆ ಸೂಕ್ತ ವಯಸ್ಸೇನು?
1. ಗೃಹ ಸಾಲ ಪಡೆಯಲು ಸೂಕ್ತ ವಯಸ್ಸು: ಸಾಮಾನ್ಯವಾಗಿ 25 ಮತ್ತು 35 ವರ್ಷಗಳ ನಡುವೆ ಗೃಹ ಸಾಲದ ಮೋರೆ ಹೋದರೆ ಸೇಫ್. ಆಗ ಹೆಚ್ಚು ವರ್ಷಗಳ ಕಾಲ ಇಎಂಐ ಕಟ್ಟಲು ಸಮಯ ಸಿಗುತ್ತದೆ. ಅಲ್ಲದೇ ನಿವೃತ್ತಿಗೂ ಮುನ್ನ ಸಾಲ ತೀರಿಸಬಹುದು. ಅಷ್ಟೇ ಅಲ್ಲ ವಯಸ್ಸು ಕಡಿಮೆಯಾದ್ದರೆ ಸಾಲ ನೀಡಲು ಹಣಕಾಸು ಸಂಸ್ಥೆಗಳು ಹಿಂದು ಮುಂದು ನೋಡುವುದಿಲ್ಲ. ನೀವು ಬೇಗ ಲೋನ್ ಪ್ರಕ್ರಿಯೆಯನ್ನೂ ಮುಗಿಸಬಹುದು. ಅಲ್ಲದೇ ವೃತ್ತಿಯಲ್ಲಿ ಬೆಳೆಯೋ ಅವಕಾಶ ಇರೋದ್ರಿಂದ ಜೀವನದಲ್ಲಿ ಆರ್ಥಿಕ ಸಂಕಷ್ಟ ಎದುರಿಸುವ ಸಾಧ್ಯತೆಯೂ ಕಡಿಮೆಯಾಗಿರುತ್ತದೆ. ಕಿರಿಯ ವಯಸ್ಸಿನ ಸಾಲಗಾರರಿಗೆ ಉತ್ತಮ ಕ್ರೆಡಿಟ್ ಪ್ರೊಫೈಲ್ ಮತ್ತು ಆದಾಯ ವೃದ್ಧಿಯ ಸಾಮರ್ಥ್ಯ ಇರುವುದರಿಂದ ಸಾಲ ಸಿಗೋದು ಸುಲಭ.
2. ಯಾವಾಗ ಸಾಲ ತೀರಿಸಿದರೆ ಬೆಸ್ಟ್? : 55-60 ವಯಸ್ಸಿನಲ್ಲಿ ಸಾಲ ತೀರಿಸಿದರೆ, ನಿವೃತ್ತಿ ವೇಳೆ ಹಣಕಾಸು ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಪ್ರಮುಖ ಆದಾಯ ವರ್ಷಗಳಲ್ಲಿ (40-50) ಸಾಲ ಮುಂಗಡ ಪಾವತಿಸಿದರೆ ಬಡ್ಡಿ ಹರಿವನ್ನೂ ಮತ್ತು ಹಣಕಾಸು ಹೊರೆಯನ್ನೂಇಳಿಸುತ್ತದೆ.
3.ಮನೆ ಸಾಲದ ಅಪಾಯ:
- ಉದ್ಯೋಗ ಅಸ್ಥಿರತೆ: ಉದ್ಯೋಗ ಕಳೆದುಕೊಳ್ಳುವುದು ಅಥವಾ ಆದಾಯ ಕಡಿಮೆಯಾಗುವುದು ಸಾಲ ಮರಳಿಸುವ ಸಾಮರ್ಥ್ಯದ ಮೇಲೆ ಪ್ರಭಾವ ಬೀರಬಹುದು।
- ಮಾರುಕಟ್ಟೆ ಅಪಾಯಗಳು: ಫ್ಲೋಟಿಂಗ್ ಬಡ್ಡಿ ದರ ಮಾಸಿಕ ಕಂತನ್ನು ಅನಿರೀಕ್ಷಿತವಾಗಿ ಹೆಚ್ಚಿಸಬಹುದು.
- ಆರೋಗ್ಯ ಸಮಸ್ಯೆ: ಸುದೀರ್ಘ ಆರೋಗ್ಯ ಸಮಸ್ಯೆ, ಹಾಗೂ ಇತರೆ ಅನಿರೀಕ್ಷಿತ ಪರಿಸ್ಥಿತಿಗಳು ಮಾಸಿಕ ಕಂತನ್ನು ಕಟ್ಟುವ ಮೇಲೆ ಪರಿಣಾಮ ಬೀರಬಹುದು.
- ಹೆಚ್ಚಿನ ಸಾಲ: ಅಗತ್ಯಕ್ಕಿಂತ ಹೆಚ್ಚಿನ ಸಾಲ ಮೊತ್ತ ಹಣಕಾಸು ಒತ್ತಡ ಹೆಚ್ಚಿಸಬಹುದು.
4.ಅಪಾಯ ಕಡಿಮೆ ಮಾಡಿಕೊಳ್ಳುವುದು ಹೇಗೆ?
- ಅನಿರೀಕ್ಷಿತ ಪರಿಸ್ಥಿತಿಗಳಲ್ಲಿ ಸಾಲ ಮರಳಿಸುವ ವಿಮಾ ನೀತಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು.
- ಅನಗತ್ಯ ಸಾಲ ತೆಗೆದುಕೊಳ್ಳಬೇಡಿ; ಮಾಸಿಕ ಕಂತನ್ನು ತಿಂಗಳ ಆದಾಯದ 30-35% ರಲ್ಲಿ ಕಾಯ್ದಿರಿಸಿ.
- ಅಷ್ಟೇ ಅಲ್ಲ 6-12 ತಿಂಗಳ ವೆಚ್ಚಕ್ಕೆ ಸಮನಾದ ತುರ್ತು ನಿಧಿಯನ್ನು ಇಟ್ಟುಕೊಂಡು ಮುಂದುವರಿಯಿರಿ.
ಬಡ್ಡಿ ಹಾಗೂ ತೆರಿಗೆ ಉಳಿಸೋದು ಹೇಗೆ?
1. ಬಡ್ಡಿ ಉಳಿತಾಯ
- ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದರೆ, ಸಾಲ ತೀರಿಸಲು ಕಡಿಮೆ ಅವಧಿಯನ್ನು ಆಯ್ಕೆ ಮಾಡಿ.
- ನಿಯಮಿತ ಮುಂಗಡ ಪಾವತಿ (ಸಣ್ಣ ಮೊತ್ತವಾದರೂ ಸರಿ)ಯೂ ಉಳಿದ ಸಾಲದ ಮೊತ್ತವನ್ನು ಕಡಿಮೆ ಮಾಡಿ, ಬಡ್ಡಿ ಹೊರೆಯನ್ನು ಕಡಿತಗೊಳಿಸುತ್ತದೆ.
- ಕಡಿಮೆ ಬಡ್ಡಿ ದರ ನೀಡುವ ಸಾಲಗಾರರಿಗೆ ಬ್ಯಾಲೆನ್ಸ್ ಟ್ರಾನ್ಸ್ಫರ್ ಮಾಡಬಹುದು.
2.ತೆರಿಗೆ ಲಾಭ:
- ಆದಾಯ ತೆರಿಗೆ ಸಲ್ಲಿಕೆಯ ಹಳೆ ಪದ್ಧತಿ ಆಯ್ಕೆ ಮಾಡಿಕೊಂಡರೆ, ತೆರಿಗೆಗೆ ವಿನಾಯತಿ ಸಿಗುವುದರಿಂದ ನಿಮಗೆ ಸ್ವಲ್ಪ ಹಣ ಉಳಿತಾಯವಾಗುತ್ತದೆ. ಅಲ್ಲದೇ ಮೊದಲ ಮನೆ ಖರೀದಿಸುವವರೆಗೆ ಹೆಚ್ಚಿನ ಲಾಭವಿದ್ದು, ₹50,000 ದಷ್ಟು ಹೆಚ್ಚುವರಿ ಹಣವನ್ನು ಉಳಿಸಬಹುದು. ಮೂಲಧನ ಮರಳಿಸಲು ಸೆಕ್ಷನ್ 80C ಅಡಿಯಲ್ಲಿ ₹1.5 ಲಕ್ಷದವರೆಗೆ ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯಬಹುದು.
- ಸೆಕ್ಷನ್ 24(b) ಅಡಿಯಲ್ಲಿ ಬಡ್ಡಿ ಇಳಿಕೆ (ಸ್ವಂತ ಮನೆಗಳಿಗೆ ₹2 ಲಕ್ಷ).
- ಮೊದಲ ಬಾರಿ ಮನೆ ಖರೀದಿಸುವವರಿಗೆ ವಿಭಾಗ 80EE ಅಡಿಯಲ್ಲಿ ₹50,000 ಹೆಚ್ಚಿನ ಆದಾಯ ಉಳಿಸಬಹುದು.
3. ಗರಿಷ್ಠ ಉಳಿಕೆ ಹೇಗೆ:
- ವೃತ್ತಿ ಜೀವನದಲ್ಲಿ ಬೋನಸ್ ಸಿಕ್ಕಾಗ ಅಥವಾ ವೇತನ ಏರಿಕೆಯಾದಾಗ ಸ್ಪಷ್ಟವಾದ ಪ್ಲ್ಯಾನ್ ಮಾಡಿ ಸಾಲದ ಬಾಕಿ ಮೊತ್ತವನ್ನು ಮುಂಗಡವಾಗಿ ಕಟ್ಟವ ವ್ಯವಸ್ಥೆ ಮಾಡಿಕೊಳ್ಳಿ. ಆ ಮೂಲಕ ಇಎಂಐ ಕಡಿಮೆ ಮಾಡ್ಕೊಂಡು, ಆರ್ಥಿಕ ಹೊರೆ ಕಡಿಮೆ ಮಾಡಿಕೊಳ್ಳಬಹುದು.
- ಕಡಿಮೆ ಸಾಲ ನೀಡೋರಿಂದ ಹಣ ಪಡೆದು, ಹೆಚ್ಚಿನ ಬಡ್ಡಿ ನೀಡುವುದನ್ನು ಕಡಿಮೆ ಮಾಡಿಕೊಳ್ಳಬಹುದು. ಹಾಗಾಗಿ ಪ್ರತಿ ವರ್ಷವೂ ಮಂಡನೆಯಾಗುವ ಬಜೆಟ್ ಹಾಗೂ ಆರ್‌ಬಿಐ ರೆಪೋ ದರವನ್ನು ತಪ್ಪದೇ ಗಮನಿಸಿ. ಹೇಗೆ ಲಾಭ ಪಡೆಯಲು ಸಾಧ್ಯವೋ ಹಾಗೆ ಹಣವನ್ನು ಬಳಸಿ.
- ಜಂಟಿ ಸಾಲ, ಆರ್ಥಿಕ ಹೊರೆಯನ್ನು ಕಡಿತಗೊಳಿಸಬಹುದು.
ಗೃಹ ಸಾಲ ಪಡೆಯಲು ವಿಸ್ತೃತ ಮಾರ್ಗಸೂಚಿ:
1.ಆರಂಭಿಕ ಅರ್ಜಿ
- ವ್ಯಕ್ತಿಗತ, ಹಣಕಾಸು ಮತ್ತು ಆಸ್ತಿ ಮಾಹಿತಿ ವಿವರವಾಗಿರುವ ಅರ್ಜಿಯನ್ನು ಮೊದಲು ಸಲ್ಲಿಸಬೇಕು. ಅರ್ಜಿದಾರರ ಆದಾಯದ ಬಗ್ಗೆ ಸೂಕ್ತ ಮಾಹಿತಿ ಪಡೆಯಲು ಹಣಕಾಸು ಸಂಸ್ಥೆಗಳಿಗೆ ಇದು ನೆರವಾಗುತ್ತದೆ.
2. ಪ್ರಕ್ರಿಯೆ ಶುಲ್ಕ
- ಸಾಲ ಮೊತ್ತದ 0.25% ರಿಂದ 0.50% ವರೆಗೆ ಪ್ರಕ್ರಿಯಾ ಶುಲ್ಕ ಪಾವತಿಸಬೇಕು. ಸಾಧ್ಯವಾದರೆ ಈ ವೆಚ್ಚವನ್ನೂ ಕಡಿಮೆ ಮಾಡಿಕೊಳ್ಳಲು ಹಣಕಾಸು ಸಂಸ್ಥೆಯೊಂದಿಗೆ ಮಾತನಾಡಬಹುದು.
3.ಹಣಕಾಸು ಸಂಸ್ಥೆ-ಸಾಲಗಾರರ ಸಂವಹನ
- ಸಂಸ್ಥೆಯೊಂದಿಗೆ ಸಾಲ ಬಯಸುವವರು ಕೆಲವು ಕಾಲ ನೇರ ಸಂಭಾಷಣೆ ನಡೆಸಿದಲ್ಲಿ ಸಾಲ ಮರು ಪಾವತಿ ಬಗ್ಗೆ ಸಾಲ ನೀಡುವವರಿಗೆ ಸ್ಪಷ್ಟತೆ ಸಿಗಲಿದೆ.
4. ಪರಿಶೀಲನೆ ಮತ್ತು ಮೌಲ್ಯಮಾಪನ
- ಸಲ್ಲಿಸಿದ ಅರ್ಜಿಯೊಂದಿಗೆ ಲಗತ್ತಿಸಿರುವ ದಾಖಲೆಗಳ ಕಠಿಣ ಪರಿಶೀಲನೆ ನಡೆಯುತ್ತದೆ. ಆಸ್ತಿ ಮೌಲ್ಯಮಾಪನವು ಸಾಲ ನೀಡುವವರ ಹಿತಾಸಕ್ತಿಯನ್ನು ರಕ್ಷಿಸುತ್ತವೆ.
5.ಮಂಜೂರು ಯಾವಾಗ?
- ಅರ್ಜಿ ಸಲ್ಲಿಕೆ ನಂತರ ಸಾಲ ಮಂಜೂರು ಆಗುತ್ತದೆ. ಬಳಿಕ ಬ್ಯಾಂಕ್ ಸಾಲದ ಷರತ್ತುಗಳನ್ನು ವಿವರಿಸುವ ಅನುಮೋದನಾ ಪತ್ರವನ್ನು ನೀಡುತ್ತದೆ. ಈ ದಾಖಲೆಯು ಹಣ ಬಿಡುಗಡೆಯ ಪ್ರಕ್ರಿಯೆಯ ಆರಂಭಿಕ ಹಂತ.
6.ಕಾನೂನು ಮತ್ತು ತಾಂತ್ರಿಕ ತಪಾಸಣೆ
- ಆಸ್ತಿಗೆ ಸಂಬಂಧಿಸಿದ ಕಾನೂನಿನ ಪರಿಶೀಲನೆಗಳು ಮಾಲೀಕತ್ವ ಮಾನ್ಯತೆಯನ್ನು ಖಚಿತಪಡಿಸುತ್ತವೆ. ಅಲ್ಲದೇ ಆಸ್ತಿಯ ಮಾರುಕಟ್ಟೆ ಮೌಲ್ಯ ಸೇರಿ ಇತರೆ ವಿಷಯಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡುತ್ತದೆ.
7. ಒಪ್ಪಂದ ಅನುಷ್ಠಾನ
- ಒಪ್ಪಂದಗಳಿಗೆ ಸಾಲ ಪಡೆಯುವವರ ಸಹಿ ಮಾಡಿದ ನಂತರ ಸಾಲ ಮಂಜೂರು ಮಾಡಲು ಅಂತಿಮ ಮುದ್ರೆ ಬೀಳಲಿದೆ. ನಂತರ ಪ್ರೀ ಡೇಟೆಡೆ ಚೆಕ್ ನೀಡಲಾಗುತ್ತದೆ.
8. ಹಣ ಬಿಡುಗಡೆ
- ಸಾಲ ನೀಡುವವರು ಹಣವನ್ನು ಹಂತ ಹಂತದಲ್ಲಿ (ನಿರ್ಮಾಣವಾಗುವ ಆಸ್ತಿಗಳಿಗೆ) ಅಥವಾ ಒಂದೇ ಬಾರಿ (ಸಿದ್ಧ ಮನೆಗಳಿಗೆ) ಬಿಡುಗಡೆ ಮಾಡಲಾಗುತ್ತದೆ. ಬಿಡುಗಡೆ ನೀತಿಗಳ ಬಗ್ಗೆ ಸ್ಪಷ್ಟ ಮಾಹಿತಿ ಪಡೆದರೆ ಒಳ್ಳೇದು.
ಗೃಹ ಸಾಲದಲ್ಲಿ ಹೊಸ ಟ್ರೆಂಡ್ಸ್:
ಕಾಲ ಬದಲಾಗಿದೆ. ಎಲ್ಲ ವ್ಯವಹಾರಗಳೂ ಇದೀಗ ಡಿಜಿಟಲ್ ಮೂಲಕವೇ ನಡೆಯುತ್ತಿದೆ. ಇದೇ ಪ್ರಕ್ರಿಯೆಯೂ ಗೃಹ ಸಾಲ ಯೋಜನೆಗೂ ಅನ್ವಯಿಸುತ್ತದೆ. ಏನೇನು ಬದಲಾವಣೆಗಳಾಗಿವೆ?
1. ಡಿಜಿಟಲ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ: ಅರ್ಜಿ ಸಲ್ಲಿಕೆ ಹಾಗೂ ಸಾಲ ಮುಂಜೂರಾತಿಗೆ ಹಣಕಾಸು ಸಂಸ್ಥೆಗಳು ಡಿಜಿಟಲ್ ಪ್ರಕ್ರಿಯೆಯನ್ನು ಅವಲಂಬಿಸಿದೆ.
2. ಹಸಿರು ಹಣಕಾಸು ಯೋಜನೆಗಳು: ಪರಿಸರ ಸ್ನೇಹಿ ಮನೆ ಹಾಗೂ ಇಂಧನ ಉಳಿಸುವ ಯೋಜನೆಗಳನ್ನು ಅಳವಳಿಸಿಕೊಳ್ಳೋರಿಗೆ ಅಗತ್ಯ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ನೀಡುವ ಯೋಜನೆಗಳನ್ನು ಪರಿಚಯಿಸಲಾಗಿದೆ.
3. ಅಗತ್ಯಕ್ಕೆ ತಕ್ಕಂತೆ ಇಎಂಐ ಯೋಜನೆಗಳು: ಫ್ರೀಲ್ಯಾನ್ಸಿಂಗ್ ಮೇಲೆ ಆದಾಯವನ್ನು ನೆಚ್ಚಿಕೊಂಡವವರು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಸಿಕ ಕಂತುಗಳನ್ನು ಕಟ್ಟುವಂತೆ ಕಸ್ಟಮೈಸ್ ಮಾಡಿಕೊಳ್ಳಬಹುದು. ಆದಾಯದಲ್ಲಿ ಏರಿಳಿತಗಳಿದ್ದವರಿಗೆಂದೇ ಇಎಂಐ ರಚನೆಗಳನ್ನು ಬದಲಾಯಿಸಲಾಗುತ್ತದೆ.
4. ಟಾಪ್-ಅಪ್ ಸಾಲ: ಸ್ಪರ್ಧಾತ್ಮಕ ದರಗಳಲ್ಲಿ ಹೆಚ್ಚುವರಿ ಹಣಕಾಸಿನ ಅಗತ್ಯಗಳಿಗೆ ಸಾಲ ನೀಡಲಾಗುತ್ತದೆ. ಇವು ಮನೆಯ ನವೀಕರಣ ಹಾಗೂ ಆಗತ್ಯ ವಸ್ತುಗಳ ಖರೀದಿಗೆ ವಿನಿಯೋಗಿಸಬಹುದು. ಪ್ರತ್ಯೇಕ ಸಾಲ ಅರ್ಜಿಯ ಅಗತ್ಯವಿಲ್ಲದೆ ಅಗತ್ಯ ಹಣಕಾಸಿನ ಹೊಣೆಯನ್ನು ಬರಿಸಲು ಈ ಯೋಜನೆ ಅನುವು ಮಾಡಿಕೊಳ್ಳುತ್ತದೆ.
5. ಸಾಲ ಕೊನೆಗೊಳಿಸುವ ಆಯ್ಕೆ: ಅನೇಕ ಸಾಲಗಾರರು ಬಡ್ಡಿಯನ್ನು ಉಳಿಸಲು ಅವಧಿ ಮುಗಿಯುವ ಮುನ್ನವೇ ಸಾಲ ಮರುಪಾವತಿಸುವ ಗುರಿ ಹೊಂದಿರುತ್ತಾರೆ. ಫೋರ್‌ಕ್ಲೋಸರ್ ಎಂದರೆ ಬಾಕಿ ಇರುವ ಅಸಲು ಮೊತ್ತವನ್ನು ಒಂದೇ ಬಾರಿಗೆ ಪಾವತಿಸುವುದು. ಇದಕ್ಕೆ ಕನಿಷ್ಠ ದಂಡ ಕಟ್ಟಬೇಕಾಗುತ್ತದೆ. ಕೆಲವೊಮ್ಮೆ ಫ್ಲೋಟಿಂಗ್ ಸಾಲದ ಮೇಲೆ ಯಾವುದೇ ಬದಲಾವಣೆಗಳೂ ಆಗದಿರಬಹುದು.
ಆದ್ದರಿಂದ ಸರಿಯಾಗಿ ಲೆಕ್ಕ ಹಾಕಿ, ಯಾವುದು ಹೆಚ್ಚು ಲಾಭ ತರುತ್ತದೋ ಹಾಗೆ ಮಾಡಬೇಕು. ಆ ಮೂಲಕ ಹಣವೆಷ್ಟು ಉಳಿಯುತ್ತದೆ ಎಂಬುದನ್ನು ಲೆಕ್ಕ ಹಾಕಿಕೊಳ್ಳಬೇಕು. ಇದರಲ್ಲಿ ಯಾವುದು ಹೆಚ್ಚು ಲಾಭವೋ ಯೋಚಿಸಿ, ಟಾಪ್-ಅಪ್ ಸಾಲ ಅಥವಾ ಅವಧಿಗೂ ಮುನ್ನವೇ ಸಾಲ ಮರುಪಾವತಿಸಬಹುದು. ಆರ್ಥಿಕ ದಕ್ಷತೆಗಾಗಿ ಸಾಲಗಾರರು ಒಳ್ಳೇ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯ.
ಉತ್ತಮ ಗೃಹಸಾಲದ ಅವಧಿ ಯಾವುದು?
ಸೂಕ್ತ ಸಾಲದ ಅವಧಿಯನ್ನು ಆಯ್ಕೆ ಮಾಡಲು ಆದಾಯ, ಬಡ್ಡಿ ವೆಚ್ಚ ಮತ್ತು ಹಣಕಾಸಿನ ಗುರಿಗಳನ್ನು ಮೌಲ್ಯಮಾಪನ ಮಾಡಬೇಕು. ಅದಕ್ಕೆ ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
1. ಆದಾಯ-ಇಎಂಐ ಸಮತೋಲನ: ನಿಮ್ಮ ಆದಾಯದ ಶೇ.35ಕ್ಕಿಂತ ಹೆಚ್ಚು ಮರು ಪಾವತಿ ಮಾಡುವಂತೆ ಇಎಂಐ ಇರಬಾರದು.
2. ವಯಸ್ಸು ಮತ್ತು ಉದ್ಯೋಗ: ಕಿರಿಯ ಅರ್ಜಿದಾರರು ತಮ್ಮ ವಿಸ್ತೃತ ಗಳಿಕೆಯ ಪರಿಧಿಯಿಂದಾಗಿ ದೀರ್ಘಾವಧಿಯ ಅವಧಿಗಳಿಂದ ಪ್ರಯೋಜನ ಪಡೆಯಬಹುದು.
3. ಸಾಲ ಜೋಡಣೆ: ಸಾಲವನ್ನು ಪಡೆಯುವ ಮೊದಲು ಅಸ್ತಿತ್ವದಲ್ಲಿರುವ ಆರ್ಥಿಕ ಹೊಣೆಗಳಿಗೆ ಮುಕ್ತಿ ಕಾಣಿಸುವುದು ನಿಮ್ಮ ಹಣಕಾಸಿನ ಹೊರೆಯನ್ನು ಕಡಿಮೆ ಮಾಡುತ್ತದೆ.
4. ಪೂರ್ವಪಾವತಿ ಅವಕಾಶಗಳು: ಆರಂಭಿಕ ಮರುಪಾವತಿ ಆಯ್ಕೆಗಳು ದೀರ್ಘಾವಧಿಯ ಬಡ್ಡಿ ಹೊರೆಯನ್ನು ಕಡಿಮೆ ಮಾಡುತ್ತದೆ, ಹಣಕಾಸು ಚಟುವಟಿಕೆಗಳನ್ನು ಸಕ್ರಿಯಗೊಳಿಸುತ್ತದೆ.
ಸಾಲಗಾರನ ಪ್ರೊಫೈಲ್ | ಶಿಫಾರಸು ಮಾಡಲಾದ ಅವಧಿ |
ಆರಂಭಿಕ ವೃತ್ತಿಜೀವನ (25-35) | 25-30 ವರ್ಷಗಳು |
ಮಧ್ಯ ವೃತ್ತಿ ಜೀವನ (36-45) | 15-20 ವರ್ಷಗಳು |
ವೃತ್ತಿ ಜೀವನದ ಕೊನೇ ಹಂತ (46-55) | 10-15 ವರ್ಷಗಳು |
ಗೃಹ ಸಾಲದ ಅರ್ಹತೆ ಹೆಚ್ಚಿಸೋದು ಹೇಗೆ?
1.ಜಂಟಿ ಅರ್ಜಿಗಳು: ಸಹ-ಅರ್ಜಿದಾರರನ್ನು ಸೇರಿಸುವುದರಿಂದ ಆದಾಯದ ಅರ್ಹತೆ ಹೆಚ್ಚಾಗುತ್ತದೆ ಮತ್ತು ಮರುಪಾವತಿ ಜವಾಬ್ದಾರಿಯನ್ನು ಶೇರ್ ಮಾಡಲಾಗುತ್ತದೆ.
2. ಸಾಲ ಮರುಪಾವತಿ: ಅಸುರಕ್ಷಿತ ಸಾಲಗಳ ಇತ್ಯರ್ಥಕ್ಕೆ ಆದ್ಯತೆ ನೀಡುವುದರಿಂದ ಸಾಲ-ಆದಾಯದ ಅನುಪಾತ ಸುಧಾರಿಸುತ್ತದೆ.
3.ಕ್ರೆಡಿಟ್ ಸ್ಕೋರ್ ನಿರ್ವಹಣೆ: 750 ಕ್ಕಿಂತ ಹೆಚ್ಚಿನ ಅಂಕಗಳನ್ನು ಕಾಯ್ದುಕೊಳ್ಳುವುದು ಆರ್ಥಿಕ ವಿಶ್ವಾಸಾರ್ಹತೆಯನ್ನು ಪ್ರದರ್ಶಿಸುತ್ತದೆ.
4.ಆಸ್ತಿ ಆಯ್ಕೆ: ಪ್ರಮುಖ ಸ್ಥಳಗಳಲ್ಲಿ ಕಾನೂನುಬದ್ಧವಾಗಿ ಅನುಸರಿಸುವ ಆಸ್ತಿಗಳನ್ನು ಆಯ್ಕೆ ಮಾಡುವುದರಿಂದ ಸಾಲದಾತನ ಎದುರಾಗಬಹುದಾದ ಅಪಾಯಗಳನ್ನು ಕಡಿಮೆ ಮಾಡುತ್ತದೆ.
5.ಆದಾಯ ವರ್ಧನೆ: ಬಾಡಿಗೆ ಗಳಿಕೆಯಂತಹ ಹೆಚ್ಚುವರಿ ಆದಾಯದ ಮೂಲಗಳನ್ನು ಕಂಡು ಕೊಳ್ಳುವ ಮೂಲಕ ಆರ್ಥಿಕ ಹೊರೆಯನ್ನು ಇಳಿಸಿಕೊಳ್ಳಬಹುದು.
ಸವಾಲುಗಳು
1. ಹೆಚ್ಚಿನ ಬಡ್ಡಿದರ: ಕಡಿಮೆ ದರಗಳನ್ನು ನೀಡುವ ಸಾಲದಾತರಿಗೆ ಬ್ಯಾಲೆನ್ಸ್ ವರ್ಗಾವಣೆ ಆರಿಸಿಕೊಳ್ಳಿ.
2. ದೀರ್ಘ ಅನುಮೋದನೆ ಸಮಯ: ಪೂರ್ವ-ಅನುಮೋದಿತ ಸಾಲ ವಿತರಣೆಯನ್ನು ತ್ವರಿತಗೊಳಿಸಬಹುದು.
3. ಗುಪ್ತ ಶುಲ್ಕ: ಸಾಲ ಒಪ್ಪಂದಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ, ಎಲ್ಲ ಶುಲ್ಕಗಳ ಬಗ್ಗೆಯೂ ಸ್ಪಷ್ಟವಾಗಿ ವಿಚಾರಿಸಿ.
4.ದಾಖಲಾತಿಯಲ್ಲಿ ತೊಂದರೆ: ಸುಗಮ ಪ್ರಕ್ರಿಯೆಗಾಗಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಅಥವಾ ಮೂರನೇ ವ್ಯಕ್ತಿಯ ಏಜೆಂಟ್‌ಗಳನ್ನು ಬಳಸಿ.
ಗೃಹ ಸಾಲಗಳ ಕುರಿತು FAQಗಳು
1. ಮಂಜೂರಾತಿ ಪತ್ರ ಎಂದರೇನು?
- ಸಾಲದ ನಿಯಮಗಳನ್ನು ನಿರ್ದಿಷ್ಟಪಡಿಸುವ ಪ್ರಾಥಮಿಕ ಅನುಮೋದನೆ ದಾಖಲೆ, ಹೆಚ್ಚಿನ ಪರಿಶೀಲನೆಗಳಿಗೆ ಒಳಪಟ್ಟಿರುತ್ತದೆ. ಎಲ್ಲವನ್ನೂ ಬ್ಯಾಂಕ್ ಹಾಗೂ ಇತರೆ ಹಣಕಾಸು ಸಂಸ್ಥೆಗಳು ಪರಿಶೀಲಿಸಿದ ನಂತರ ನಿರ್ದಿಷ್ಟ ಮೊತ್ತದ ಸಾಲ ನೀಡಲು ಅನುಮೋದಿಸುತ್ತದೆ. ಇದಕ್ಕೆ ಮಂಜೂರಾತಿ ಪತ್ರ ಎನ್ನುತ್ತಾರೆ. ಅಲ್ಲಿರುವ ಒಪ್ಪಂದಗಳಿಗೆ ಸಾಲ ಪಡೆಯುವವರು ಸಹಿ ಮಾಡಿದರೆ ಮಾತ್ರ, ಹಣ ಬಿಡುಗಡೆ ಮಾಡುವ ಮುಂದಿನ ಪ್ರಕ್ರಿಯೆ ನಡೆಯುತ್ತದೆ.
2. ಪೂರ್ಣ ಮತ್ತು ಭಾಗಶಃ ವಿತರಣೆಗಳು ಹೇಗೆ ಭಿನ್ನವಾಗಿವೆ?
- ಪೂರ್ಣಗೊಂಡ ಆಸ್ತಿಗಳಿಗೆ ಪೂರ್ಣ ವಿತರಣೆ ಅನ್ವಯಿಸುತ್ತವೆ, ಆದರೆ ಭಾಗಶಃ ವಿತರಣೆಗಳು ನಿರ್ಮಾಣದ ಹಂತಗಳೊಂದಿಗೆ ತಾಳೆಯಾಗಲಿದೆ.
3. ಪೂರ್ವಪಾವತಿ ಸೂಕ್ತವೇ?
- ಹೌದು, ಇದು ಅವಧಿ ಅಥವಾ EMIಗಳನ್ನು ಕಡಿಮೆ ಮಾಡುತ್ತದೆ, ಹೊಂದಿಕೊಳ್ಳುವ ಸಾಲದ ನಿಯಮಗಳ ಅಡಿಯಲ್ಲಿ ದಂಡವಿಲ್ಲದೆ, ಬಡ್ಡಿ ಕಟ್ಟುವುದನ್ನು ಕಡಿತಗೊಳಿಸಬಹುದು.
4. ಗೃಹ ಸಾಲ ಅರ್ಜಿಗಳಿಗೆ ಯಾವ ದಾಖಲೆಗಳು ಅತ್ಯಗತ್ಯ?
- ಆದಾಯ ಪುರಾವೆ, ID ಮತ್ತು ವಿಳಾಸ ಪುರಾವೆ, ಆಸ್ತಿ ದಾಖಲೆಗಳು ಮತ್ತು ಇತ್ತೀಚಿನ ಬ್ಯಾಂಕ್ ಹೇಳಿಕೆಗಳನ್ನು ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಸಲ್ಲಿಸಬೇಕು.
5. ಪ್ರಕ್ರಿಯೆ ಸಮಯದ ಮೇಲೆ ಬೀರೋ ಪರಿಣಾಮವೇನು?
- ದಾಖಲೆ ಸಲ್ಲಿಕೆಯಲ್ಲಿ ದಕ್ಷತೆ ಮತ್ತು ಬ್ಯಾಂಕಿನ ಪರಿಶೀಲನಾ ಪ್ರಕ್ರಿಯೆ ಸಾಮಾನ್ಯವಾಗಿ 2-4 ವಾರಗಳವರೆಗೆ ವ್ಯಾಪಿಸಬಹುದು. ಸಮಯಾವಧಿ ಮೇಲೆ ಇದು ಪ್ರಭಾವ ಬೀರುತ್ತದೆ.
6. ಪೂರ್ವಪಾವತಿ ಎಂದರೇನು?
- ಅವಧಿಗೂ ಮುನ್ನವೇ ಸಾಲದ ಇಎಂಐಗಳನ್ನು ಪಾವತಿಸುವುದಕ್ಕೆ ಪೂರ್ವ ಪಾವತಿ ಎನ್ನುತ್ತೇವೆ. ಆದರೆ, ಹೀಗೆ ಮಾಡುವಾಗ ಮಾಡಿರುವ ಒಪ್ಪಂದದ ಕಡೆ ಸ್ಪಷ್ಟ ಮಾಹಿತಿ ಇರಬೇಕು. ಕೆಲವೊಮ್ಮೆ ಬೇಗ ಸಾಲ ತೀರಿಸಿದರೂ ಕಟ್ಟುವಷ್ಟು ಬಡ್ಡಿ ಕಟ್ಟಲೇಬೇಕು. ಪೂರ್ವಪಾವತಿಯಿಂದ ಉಪಯೋಗವಿಲ್ಲವೆಂದರೆ ಸಾಲದಿಂದ ಮುಕ್ತಿ ಪಡೆಯಲು ಬೇರೆ ದಾರಿ ಪಡೆದುಕೊಳ್ಳಬೇಕು.
7.ಹಸಿರು ಗೃಹ ಸಾಲಗಳು ಹೇಗೆ ಕಾರ್ಯನಿರ್ವಹಿಸುತ್ತವೆ?
- ಇಂಧನ ಉಳಿತಾಯಕ್ಕೆ ಸಮರ್ಥ ಉಪಕರಣಗಳು ಮತ್ತು ಪರಿಸರ-ಸೇರಿ ಯೋಜನೆಗಳು ಸೇರಿ ಸುಸ್ಥಿರತೆಯ ಮಾನದಂಡಗಳನ್ನು ಪೂರೈಸುವ ಯೋಜನೆಗಳಿಗೆ ಕಡಿಮೆ ಬಡ್ಡಿದರಗಳಲ್ಲಿ ಗೃಹ ಸಾಲ ಸಿಗುತ್ತದೆ. ಇವನ್ನು ಮನೆಗೆ ಅಳವಡಿಸಿ, ಹೆಚ್ಚಿನ ಲಾಭ ಪಡೆಯಬಹುದು ಅಲ್ಲದೇ ಪರಿಸರ ಸ್ನೇಹಿಯಾಗಿರುವುದರಿಂದ ಇಂಧನ ಉಳಿತಾಯಕ್ಕೆ ಒತ್ತು ನೀಡಬಹುದು.
ಆರ್ಥಿಕ ಯಶಸ್ಸು ಹಾಗೂ ಗೃಹ ಸಾಲ:
ಗೃಹ ಸಾಲಗಳು ಆಸ್ತಿ ಸ್ವಾಧೀನವನ್ನು ಮೀರಿ ವಿಸ್ತರಿಸುವ ನಿರ್ಣಾಯಕ ಆರ್ಥಿಕ ಬದ್ಧತೆಯನ್ನು ಬಯಸುತ್ತದೆ. ಹಣಕಾಸು ಮೇಜರ್‌ಗಳಿಗೆ, ಸಾಲಗಾರರ ಮೌಲ್ಯಮಾಪನದಿಂದ ವಿತರಣೆಯವರೆಗೆ ಗೃಹ ಸಾಲಗಳ ಕಾರ್ಯಾಚರಣೆ ಮತ್ತು ಕಾರ್ಯತಂತ್ರದ ಆಯಾಮಗಳನ್ನು ಪರಿಶೀಲಿಸುವುದು, ಗ್ರಾಹಕ ಕ್ರೆಡಿಟ್ ವ್ಯವಸ್ಥೆ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ನೀಡುತ್ತದೆ. ಮಾಹಿತಿಯುಕ್ತ ಯೋಜನೆ, ಪರಿಣಾಮಕಾರಿ ಮಾತುಕತೆ ಮತ್ತು ಹಣಕಾಸಿನ ಗುರಿಗಳ ಸ್ಪಷ್ಟ ತಿಳುವಳಿಕೆಯೊಂದಿಗೆ, ಸಂಭಾವ್ಯ ಮನೆ ಮಾಲೀಕರು ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಬಹುದು. ನಿರಂತರ ಆರ್ಥಿಕ ಬೆಳವಣಿಗೆ ಮತ್ತು ವೈಯಕ್ತಿಕ ಆಸೆ ಈಡೇರಿಕೆಗೆ ಗೃಹ ಸಾಲ ದಾರಿ ಮಾಡಿಕೊಳ್ಳುತ್ತದೆ.