Asianet Suvarna News Asianet Suvarna News

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ 1 ಕೋಟಿ ರೂ ದಂಡ ವಿಧಿಸಿದ RBI, ಗ್ರಾಹಕರಿಗೆ ಬೀಳುತ್ತಾ ಹೊರೆ?

  • SBIಗೆ 1 ಕೋಟಿ ರೂಪಾಯಿ ದಂಡ ಹಾಕಿದ ಆರ್‌ಬಿಐ
  • RBI ಮಾನದಂಡ ಅನುಸರಿಸಲು ವಿಫಲವಾದ SBI
  • ದಂಡದ ಪರಿಣಾಮ ಗ್ರಾಹಕರ ಮೇಲೆ ಬೀಳುತ್ತಾ ಹೊರೆ?
Fraud classification criteria RBI slap RS 1 crore fine to State bank of India ckm
Author
Bengaluru, First Published Oct 18, 2021, 8:52 PM IST

ನವದೆಹಲಿ(ಅ.18): ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ(SBI) ತೀವ್ರ ಹಿನ್ನಡೆಯಾಗಿದೆ. ವಂಚನೆ ವರ್ಗೀಕರಣ ಮಾನದಂಡ ಅನುಸರಿಸಲು ವಿಫಲವಾದ SBIಗೆ ಬರೋಬ್ಬರಿ 1 ಕೋಟಿ ರೂಪಾಯಿ ದಂಡ ವಿಧಿಸಿದೆ. ಈ ಕುರಿತು ತನಿಖೆ ನಡೆಸಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಂಚನೆ ಪತ್ತೆ ಮಾಡಿದೆ.

SBIನಿಂದ ಪ್ರೊಬೆಷನರಿ ಆಫೀಸರ್ ಹುದ್ದೆಗಳ ನೇಮಕಾತಿ ಶುರು

ಗ್ರಾಹಕರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಗಳನ್ನು ಪರಿಶೀಲನೆ ನಡೆಸಿತು. ಈ ಕುರಿತ ಪತ್ರ ವ್ಯವಹಾರಗಳನ್ನು ಆರ್‌ಬಿಐ ಪರಿಶೀಲನೆ ನಡೆಸಿದೆ. ಈ ವೇಳೆ ಆರ್‌ಬಿಐ ಮಾನದಂಡ ಪಾಲನೆ ಮಾಡದ ಬ್ಯಾಂಕ್‌ಗೆ 1 ಕೋಟಿ ರೂಪಾಯಿ ದಂಡ ಹಾಕಿದೆ.

ಇನ್ನು ಕನ್ನಡದಲ್ಲೇ ಬರೆಯಬಹುದು ಬ್ಯಾಂಕಿಂಗ್ ಪರೀಕ್ಷೆ

RBI 1 ಕೋಟಿ ರೂಪಾಯಿ ದಂಡದಿಂದ ಗ್ರಾಹಕರಿಂದ ಯಾವುದೇ ಸಮಸ್ಯೆ ಇಲ್ಲ. ಈ ಹಣವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪಾವತಿ ಮಾಡಬೇಕಿದೆ. ಈ ದಂಡ ಗ್ರಾಹಕರ ಮೇಲೆ ಯಾವುದೇ ಹೊರೆ ಬೀಳುವುದಿಲ್ಲ.

ಈ ವಂಚನೆ ಕುರಿತು ರಿವಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ನೊಟಿಸ್ ನೀಡಿತ್ತು. ಮಾನದಂತೆ ಪಾಲನೆಯಲ್ಲಿ ಆರ್‌ಬಿಐ ನಿಯಮ ಉಲ್ಲಂಘಿಸಿದ ಕಾರಣ 1 ಕೋಟಿ ರೂಪಾಯಿ ದಂಡ ವಿಧಿಸಿದೆ.

ಭಾರತದ ಆರ್ಥಿಕತೆ ಅವಶ್ಯಕತೆ ಪೂರೈಸಲು 4 ರಿಂದ 5 SBI ರೀತಿ ಬ್ಯಾಂಕ್ ಅಗತ್ಯವಿದೆ: ನಿರ್ಮಲಾ!

ಸಾಲು ಸಾಲು ರಜೆ:
ಅಕ್ಟೋಬರ್ ತಿಂಗಳ ಸಾಲು ಸಾಲು ಹಬ್ಬಗಳಿಂದ ಬ್ಯಾಂಕ್ ರಜೆ ಇದೆ. ಹೀಗಾಗಿ ಗ್ರಾಹಕರು ಬ್ಯಾಂಕ್ ಕಚೇರಿಗೆ ತೆರಳುವ ಮುನ್ನ ರಜಾ ದಿನದ ವಿವರ ಅರಿತುಕೊಂಡರೆ ಒಳಿತು. 

ಅಕ್ಟೋಬರ್ 19ಕ್ಕೆ ಈದ್ ಮಿಲಾದ್ ಹಬ್ಬದ ರಜಾ ದಿನವಾಗಿದೆ. ಇನ್ನು ಅಕ್ಟೋಬರ್ 20 ರಂದು ಮಹರ್ಷಿ ವಾಲ್ಮಿಕಿ ಜಯಂತಿ ರಜಾ ದಿನವಾಗಿದೆ. ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ ಮಾತ್ರ ಈ ರಜಾ ದಿನ ಬ್ಯಾಂಕ್‌ಗೆ ಅನ್ವಯವಾಗಲಿದೆ. ಅಕ್ಟೋಬರ್ 22 ರಂದು ಜಮ್ಮು ಮತ್ತು ಕಾಶ್ಮೀರದ ಬ್ಯಾಂಕ್‌ಗಳಿಗೆ ಈದ್ ಮಿಲಾದ್ ರಜಾ ದಿನವಾಗಿದೆ. ಅಕ್ಟೋಬರ್ 23 ಹಾಗೂ ಅಕ್ಟೋಬರ್ 24 ರಂದು ಶನಿವಾರ ಹಾಗೂ ಭಾನುವಾರವಾಗಿದ್ದು ವಾರದ ರಜಾ ದಿನಗಳಾಗಿವೆ.

 

Follow Us:
Download App:
  • android
  • ios