Asianet Suvarna News Asianet Suvarna News

ಡ್ರ್ಯಾಗನ್ ರಾಷ್ಟ್ರದ ಮೇಲೆ ಮತ್ತೆ ಬ್ರಹ್ಮಾಸ್ತ್ರ: ಚೀನಾ ಲಿಂಕ್ ಹೊಂದಿರುವ 138 ಬೆಟ್ಟಿಂಗ್, 94 ಲೋನ್‌ ಆ್ಯಪ್‌ ನಿಷೇಧ..!

ಇವುಗಳು ಭಾರತೀಯ ನಾಗರಿಕರ ಡೇಟಾಗೆ ಭದ್ರತಾ ಅಪಾಯ ಉಂಟು ಮಾಡುವುದರ ಜೊತೆಗೆ ಬೇಹುಗಾರಿಕೆ ಮತ್ತು ಪ್ರಚಾರಕ್ಕಾಗಿ ಸಾಧನಗಳಾಗಿ ದುರುಪಯೋಗಪಡಿಸಿಕೊಳ್ಳಬಹುದು ಎಂದೂ ಹೇಳಲಾಗಿದೆ. 

centre set to ban and block 138 betting apps 94 loan apps with china links on urgent basis ash
Author
First Published Feb 5, 2023, 12:43 PM IST

ನವದೆಹಲಿ (ಫೆಬ್ರವರಿ 5, 2023): ಚೀನಾ ಲಿಂಕ್ ಹೊಂದಿರುವ ಮತ್ತಷ್ಟು ಅಪ್ಲಿಕೇಷನ್‌ಗಳು ಬ್ಯಾನ್‌ ಮಾಡಲು ಕೆಂದ್ರ ಸರ್ಕಾರ ಮುಂದಾಗಿದೆ. ತುರ್ತು ಆಧಾರದ ಮೇಲೆ ಚೀನಾದೊಂದಿಗೆ ಸಂಬಂಧ ಹೊಂದಿರುವ 138 ಬೆಟ್ಟಿಂಗ್ ಅಪ್ಲಿಕೇಶನ್‌ಗಳು, 94 ಸಾಲದ ಅಪ್ಲಿಕೇಶನ್‌ಗಳನ್ನು ನಿಷೇಧಿಸಲು ಮತ್ತು ನಿರ್ಬಂಧಿಸಲು ಕೇಂದ್ರ ಸಜ್ಜಾಗಿದೆ. ಹೌದು, ಭಾರತ ಸರ್ಕಾರವು ಚೀನೀ ಲಿಂಕ್‌ಗಳೊಂದಿಗೆ ಅಪ್ಲಿಕೇಶನ್‌ಗಳನ್ನು ನಿಷೇಧಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು, ನೆರೆ ರಾಷ್ಟ್ರ ಚೀನಾಗೆ ಮತ್ತಷ್ಟು ಶಾಕ್‌ ನೀಡುತ್ತಿದೆ. 

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (Union Ministry of Home Affairs) ಮತ್ತು ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ (Ministry of Electronics and Information Technology) (MeitY) ಈ ಸಂಬಂಧ ಅಧಿಕೃತ ಮಾಹಿತಿ ನೀಡಿದ್ದು, 138 ಬೆಟ್ಟಿಂಗ್ ಅಪ್ಲಿಕೇಶನ್‌ಗಳು (Betting Apps) ಮತ್ತು 94 ಚೀನೀ ಸಂಪರ್ಕಗಳೊಂದಿಗೆ (China Link) ಸಾಲ  ನೀಡುವ ಅಪ್ಲಿಕೇಶನ್‌ಗಳನ್ನು (Loan Apps) "ತುರ್ತು" ಹಾಗೂ ‘’ಎಮರ್ಜೆನ್ಸಿ’’ ಆಧಾರದ ಮೇಲೆ ನಿಷೇಧಿಸಲಾಗುವುದು ಮತ್ತು ನಿರ್ಬಂಧಿಸಲಾಗುವುದು ಎಂದು ಹೇಳಿದೆ. 

ಇದನ್ನು ಓದಿ: ನಿಮ್ಮ ಫೋನ್‌ಗಳಲ್ಲಿದ್ಯಾ ಸಾಲ ನೀಡುವ ಈ ಚೀನಾ ಆಪ್‌ಗಳು... ಹಾಗಿದ್ರೆ ಈಗ್ಲೇ ಡಿಲಿಟ್ ಮಾಡಿ

ಈ ಬೆಟ್ಟಿಂಗ್, ಲೋನ್‌ ಆ್ಯಪ್‌ಗಳು ವ್ಯಕ್ತಿಗಳನ್ನು ದೊಡ್ಡ ಮಟ್ಟದ ಸಾಲದಲ್ಲಿ ಸಿಲುಕಿಸಲು ಅಪಾಯಕಾರಿ ನಡವಳಿಕೆಯನ್ನು ಪ್ರದರ್ಶಿಸುತ್ತವೆ. ಇವುಗಳು ಭಾರತೀಯ ನಾಗರಿಕರ ಡೇಟಾಗೆ ಭದ್ರತಾ ಅಪಾಯ (Security Threat) ಉಂಟು ಮಾಡುವುದರ ಜೊತೆಗೆ ಬೇಹುಗಾರಿಕೆ ಮತ್ತು ಪ್ರಚಾರಕ್ಕಾಗಿ ಸಾಧನಗಳಾಗಿ ದುರುಪಯೋಗಪಡಿಸಿಕೊಳ್ಳಬಹುದು ಎಂದೂ ಹೇಳಲಾಗಿದೆ. 

ಮೂಲಗಳ ಪ್ರಕಾರ, ಕೇಂದ್ರ ಸರ್ಕಾರವು  (Central Government) ಆರು ತಿಂಗಳ ಹಿಂದೆ 288 ಚೀನೀ ಅಪ್ಲಿಕೇಶನ್‌ಗಳ ವಿಶ್ಲೇಷಣೆಯನ್ನು ಪ್ರಾರಂಭಿಸಿತು. ಈ ಆ್ಯಪ್‌ಗಳು ಭಾರತೀಯ ನಾಗರಿಕರ ವೈಯಕ್ತಿಕ ಡೇಟಾವನ್ನು ಪ್ರವೇಶಿಸಬಹುದು ಎಂದೂ ತಿಳಿದುಬಂದಿದೆ.

ಇದನ್ನೂ ಓದಿ: China Apps Fraud: ಚೀನಾ ಆ್ಯಪ್‌ ಕಂಪನಿಗಳ ವ್ಯಾಲೆಟ್‌ನಲ್ಲಿದ್ದ 6 ಕೋಟಿ ಜಪ್ತಿ

2022 ರಲ್ಲಿ, ರಾಷ್ಟ್ರದ ಭದ್ರತೆಗೆ ಅಪಾಯವನ್ನುಂಟುಮಾಡುವ 54 ಚೀನೀ ಅಪ್ಲಿಕೇಶನ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿತ್ತು. ಇದಕ್ಕೂ ಮುನ್ನ 2020 ರಿಂದ 270 ಅಪ್ಲಿಕೇಶನ್‌ಗಳನ್ನು ಸರ್ಕಾರವು ನಿಷೇಧಿಸಿದೆ ಎಂಬುದು ಗಮನಿಸಬೇಕಾದ ಅಂಶವಾಗಿದೆ. ಈ ಅಪ್ಲಿಕೇಶನ್‌ಗಳು ಪ್ರಮುಖ ಚೀನೀ ಟೆಕ್ ಸಂಸ್ಥೆಗಳಾದ Tencent, Alibaba ಮತ್ತು ಗೇಮಿಂಗ್ ಕಂಪನಿ NetEase ನಿಂದ ಬಂದವು ಎಂದು ಕೆಲವು ವರದಿಗಳು ಸೂಚಿಸಿದ್ದವು. ಈ ಆ್ಯಪ್‌ಗಳು ಭಾರತೀಯರ ಸೂಕ್ಷ್ಮ ಡೇಟಾವನ್ನು ಚೀನಾದಂತಹ ವಿದೇಶಗಳಲ್ಲಿನ ಸರ್ವರ್‌ಗಳಿಗೆ ವರ್ಗಾಯಿಸುತ್ತಿವೆ ಎಂಬ ಆಧಾರದ ಮೇಲೆ ನಿಷೇಧವನ್ನು ಹೊರಡಿಸಲಾಗಿದೆ ಎಂದೂ ಮೂಲಗಳು ತಿಳಿಸಿವೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎ ಅಡಿಯಲ್ಲಿ ಬ್ಯಾನ್‌ ಮಾಡಲಾಗಿದೆ. 

ಇದನ್ನೂ ಓದಿ: 5 ಲಕ್ಷ ಜನಕ್ಕೆ ‘ಚೀನಿ ಆ್ಯಪ್‌’ 300 ಕೋಟಿ ದೋಖಾ! ಜನರೇ ಹುಷಾರ್‌

Follow Us:
Download App:
  • android
  • ios