ಬೆಂಗಳೂರಿನಲ್ಲಿ 1BHK ಮನೆ ಬಾಡಿಗೆ 70 ಸಾವಿರ ರೂ. ! ಇದಕ್ಕೆ ಕಾರಣ ಯಂಗ್ ಟೆಕ್ಕಿಗಳು?
ಬೆಂಗಳೂರಿನಲ್ಲಿ ದಿನ ದಿನಕ್ಕೂ ಬಾಡಿಗೆ ಏರಿಕೆಯಾಗ್ತಿದೆ. ಒಂದು ಬೆಡ್ ರೂಮ್ ಮನೆ ಬಾಡಿಗೆ ಪಡೆಯೋದೆ ಕಷ್ಟ ಎನ್ನುವಂತಾಗಿದೆ. ಇದಕ್ಕೆ ಕಾರಣವೇನು ಎಂಬುದು ರೆಡ್ಡಿಟ್ ಪೋಸ್ಟ್ ನಲ್ಲಿ ಬಹಿರಂಗವಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿ (Silicon City Bangalore) ನಲ್ಲಿ ಮದ್ಯಮ ವರ್ಗದ ಕುಟುಂಬಕ್ಕೆ ಬಾಡಿಗೆ ಮನೆ (rent House) ಪಡೆಯೋದು ಕಷ್ಟ ಎನ್ನುವ ಸ್ಥಿತಿ ಬಂದಿದೆ. ಇದಕ್ಕೆ ಕಾರಣ ದಿನ ದಿನಕ್ಕೂ ಏರಿಕೆಯಾಗ್ತಿರುವ ಬಾಡಿಗೆ. ಈ ವಿಷ್ಯ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯ ವಿಷ್ಯವಾಗಿದೆ. ರೆಡ್ಡಿಟ್ ನಲ್ಲಿ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ ಬಾಡಿಗೆ ಇಷ್ಟೊಂದು ಏರಿಕೆಯಾಗಲು ಕಾರಣ ಏನು ಎಂಬುದನ್ನು ಹೇಳಿದ್ದಾರೆ.
ಅವರ ಪ್ರಕಾರ, ಹೆಚ್ಚಿನ ಸಂಭಾವನೆ (salary) ಪಡೆಯುವ ಯುವ ಟೆಕ್ಕಿ (young techie)ಗಳ ಅಜಾಗರೂಕತೆಯಿಂದ ಮನೆಯ ಬಾಡಿಗೆ ಏರಿಕೆಯಾಗ್ತಿದೆ. ಬೆಂಗಳೂರಿನಲ್ಲಿ ಬೆಳೆಯುತ್ತಿರುವ ಸಮಸ್ಯೆಯನ್ನು ನಾನು ಗಮನಿಸಿದ್ದೇನೆ, ಯುವ ತಂತ್ರಜ್ಞರು, ವಿಶೇಷವಾಗಿ ತಮ್ಮ ವೃತ್ತಿಜೀವನವನ್ನು ಈಗಷ್ಟೆ ಪ್ರಾರಂಭಿಸುತ್ತಿರುವವರು, ತುಂಬಾ ಸುಲಭವಾದ ರೀತಿಯಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ರೆಡ್ಡಿಟ್ ಬಳಕೆದಾರರು ಬರೆದಿದ್ದಾರೆ. ಬಹಳಷ್ಟು ಯುವ ಎಂಜಿನಿಯರ್‌ಗಳು, ವಿಶೇಷವಾಗಿ ಕೇವಲ 2-3 ವರ್ಷಗಳ ಅನುಭವ ಹೊಂದಿರುವವರು, ಈ ಹೆಚ್ಚಿನ ಸಂಬಳದ ಉದ್ಯೋಗಗಳನ್ನು ಪಡೆಯುತ್ತಿದ್ದಾರೆ. ಅವರಿಗೆ 40 ಲಕ್ಷ, 50 ಲಕ್ಷ ಇಲ್ಲವೆ 60 ಲಕ್ಷದವರೆಗೆ ವಾರ್ಷಿಕ ಸಂಬಳ ಬರುತ್ತಿದೆ. ಇದು ಅದ್ಭುತವೆನಿಸುತ್ತದೆ. ಆದ್ರೆ ಸಮಸ್ಯೆಯೆಂದರೆ ಇಷ್ಟು ಸಂಬಳವನ್ನು ಏನು ಮಾಡಬೇಕೆಂದು ಅವರಿಗೆ ನಿಜವಾಗಿಯೂ ತಿಳಿದಿಲ್ಲ. ಅವರು ತಿಂಗಳಿಗೆ ಸುಮಾರು 1.5 ಲಕ್ಷದಿಂದ 2.5 ಲಕ್ಷ ರೂಪಾಯಿ ಸಂಬಳ ಪಡೆಯುತ್ತಾರೆ. ಆದ್ರೆ ಬಂದ ಹಣವನ್ನು ಬಜೆಟ್ ಮಾಡಿ ಖರ್ಚು ಮಾಡೋದಿಲ್ಲ. ಸರಿಯಾದ ಜಾಗದಲ್ಲಿ ಹೂಡಿಕೆ ಮಾಡುವುದು ಅಥವಾ ಭವಿಷ್ಯಕ್ಕಾಗಿ ಯೋಜಿಸುವುದು ಹೇಗೆ ಎಂಬುದು ಅವರಿಗೆ ತಿಳಿದಿಲ್ಲ. ಅವರು ಬಾಡಿಗೆ ಮನೆಗೆ 50, 60 ಸಾವಿರವಲ್ಲ 70 ಸಾವಿರವನ್ನು ತಿಂಗಳಿಗೆ ನೀಡಲು ಸಿದ್ಧವಿರ್ತಾರೆ. ಅಗ್ಗದ ಬೆಲೆಗೆ ಎಲ್ಲಿ ಮನೆ ಬಾಡಿಗೆಗೆ ಸಿಗುತ್ತೆ ಎಂಬುದನ್ನು ಅವರು ಹುಡುಕುವುದಿಲ್ಲ. ಬಿಸಿಲಿನ ಝಳದಲ್ಲಿ ವಾರಾಂತ್ಯದಲ್ಲಿ ಮನೆ ಹುಡುಕಲು ಅವರು ಹೋಗೋದಿಲ್ಲ. 70 ಸಾವಿರ ತಿಂಗಳ ಬಾಡಿಗೆ ನೀಡೋದು ಅವರಿಗೆ ಸಮಸ್ಯೆಯಿಲ್ಲ. ಹತ್ತಿರ, ದುಬಾರಿ ಬೆಲೆಗೆ ಅವರು ಬಾಡಿಗೆ ಮನೆ ಪಡೆಯಲು ಮುಂದಾಗ್ತಾರೆ. ಈ ಸತ್ಯ ಮನೆ ಮಾಲೀಕರಿಗೆ ತಿಳಿದಿದೆ. ಹಾಗಾಗಿ ಬಾಯಿಗೆ ಬಂದಂತೆ ಬಾಡಿಗೆ ಹೇಳ್ತಾರೆ. ಒಬ್ಬರಲ್ಲ ಒಬ್ಬ ಮೂರ್ಖ ಐಟಿ ಬಾಡಿಗೆಗೆ ಬರ್ತಾನೆ ಎಂಬುದು ಮನೆ ಅಥವಾ ಅಪಾರ್ಟ್ಮೆಂಟ್ ಮಾಲೀಕರಿಗೆ ತಿಳಿದಿದೆ. ಇದ್ರಿಂದಾಗಿ ಬಾಡಿಗೆ ಬೆಲೆಗಳು ಏರುತ್ತಲೇ ಇರುತ್ತವೆ ಎಂದು ಅವರು ರೆಡ್ಡಿಟ್ ಪೋಸ್ಟ್ ನಲ್ಲಿ ಬರೆದಿದ್ದಾರೆ. ಅಷ್ಟೇ ಅಲ್ಲ ಈ ಬೆಲೆ ಏರಿಕೆ ಸಾಮಾನ್ಯ ಎಂಜಿನಿಯರ್‌ಗಳು ಅಥವಾ ಸಾಮಾನ್ಯ ಸಂಬಳ ತೆಗೆದುಕೊಳ್ಳುವವರಿಗೆ ಸಮಸ್ಯೆಯಾಗ್ತಿದೆ. ಅವರು ಹಾಸ್ಯಾಸ್ಪದ ಬಾಡಿಗೆ ಬೆಲೆಗಳನ್ನು ಸಹ ಎದುರಿಸಬೇಕಾಗುತ್ತದೆ ಎಂದು ಬರೆದಿದ್ದಾರೆ.
15 ಲಕ್ಷಕ್ಕಿಂತ ಕಮ್ಮಿ ಆದಾಯಕ್ಕೆ ತೆರಿಗೆ ವಿನಾಯಿತಿ ಸಾಧ್ಯತೆ
ಪೋಸ್ಟ್ ನಲ್ಲಿ ಹೆಚ್ಚು ಬಾಡಿಗೆ ನೀಡುವ ಯುವಕರಿಗೆ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ. ನೀವು ಶಾಶ್ವತವಾಗಿ ಬ್ರಹ್ಮಚಾರಿಯಾಗಿ ಉಳಿಯುವುದಿಲ್ಲ. ನೀವು ಮದುವೆಯಾಗಬೇಕಾದ ಅಥವಾ ನಿಮ್ಮ ಸಂಗಾತಿಯೊಂದಿಗೆ ವಾಸಿಸಬೇಕಾದ ಸಮಯ ಬರುತ್ತದೆ. ಆಗ ಬೆಲೆ ಏರಿಕೆ ಬೆಂಕಿಗೆ ತುಪ್ಪ ಸುರಿದಿದ್ದು ನೀವೇ ಎಂಬುದು ನಿಮಗೆ ಅರಿವಿಲ್ಲದೆ ಕೂಗಾಡ್ತೀರಿ ಎಂದು ರೆಡ್ಡಿಟ್ ಪೋಸ್ಟ್ ಹಂಚಿಕೊಳ್ಳಲಾಗಿದೆ.
ಬಜೆಟ್‌ನಲ್ಲಿ ರೈಲು ಟಿಕೆಟ್ ದರ ಏರಿಕೆ ಆಗಲಿದ್ಯಾ? ಸರ್ಕಾರ ನೀಡಿರುವ ಸೂಚನೆ ಏನು..
ಈ ಪೋಸ್ಟ್ ವೈರಲ್ ಆಗಿದೆ. ಅನೇಕರು ಮನೆ ಬಾಡಿಗೆ ಬಗ್ಗೆ ದನಿ ಎತ್ತಿದ್ದಾರೆ. ಎಲ್ಲ ಕಡೆ ಈ ಪರಿಸ್ಥಿತಿ ಇಲ್ಲ. ಅದು ಕೆಲವೊಂದು ಏರಿಯಾ ಅವಲಂಭಿಸಿದೆ. ನಾನು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೆಲಸ ಮಾಡುತ್ತಿದ್ದೆ ಮತ್ತು ನಾನು 15000 ರೂಪಾಯಿಗೆ ಉತ್ತಮವಾದ 2BHK ಬಾಡಿಗೆಗೆ ಪಡೆದಿದ್ದೆ. ಆದರೆ ನನ್ನ ಸಹೋದ್ಯೋಗಿ ಕೋರಮಂಗಲದಲ್ಲಿ 35000ಕ್ಕೆ 1 BHK ಬಾಡಿಗೆ ಮನೆಯಲ್ಲಿ ಇದ್ದರು ಎಂದು ಕಮೆಂಟ್ ಮಾಡಿದ್ದಾರೆ. ಮಾತುಕತೆ ನಡೆಸಲು ಟೆಕ್ಕಿಗಳ ಅಸಮರ್ಥತೆ ಅಥವಾ ಇಷ್ಟವಿಲ್ಲದಿರುವುದು ಉಳಿದವರ ಜೀವನವನ್ನು ದುಬಾರಿ ಮಾಡಿದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
Why Are Young Techies Getting Duped and Exploited in Bangalore so easily?
byu/Tiny_Interaction_432 inbangalore