Asianet Suvarna News Asianet Suvarna News

ಬಲೆಗೆ ಬಿತ್ತು 300 ಕೆಜಿ ತೂಗುವ ವಿಶ್ವದ ಅತಿದೊಡ್ಡ ಸಿಹಿ ನೀರಿನ ಮೀನು

ಕಾಂಬೋಡಿಯಾ: ವಿಶ್ವದ ಅತಿದೊಡ್ಡ ಸಿಹಿನೀರಿನ ಮೀನು, ದೈತ್ಯ ಸ್ಟಿಂಗ್ರೇ ಕಾಂಬೋಡಿಯಾದ ಮೆಕಾಂಗ್ ನದಿಯಲ್ಲಿ ಮೀನುಗಾರರಿಗೆ ಸಿಕ್ಕಿದೆ. ಆಗ್ನೇಯ ಏಷ್ಯಾ ರಾಷ್ಟ್ರ ಮತ್ತು ಯುನೈಟೆಡ್ ಸ್ಟೇಟ್ಸ್‌ನ ವಿಜ್ಞಾನಿಗಳ ಪ್ರಕಾರ ಇದು ವಿಶ್ವದ ಅತಿದೊಡ್ಡ ದಾಖಲಿತ ಸಿಹಿನೀರಿನ ಮೀನು ಎಂದು ತಿಳಿದು ಬಂದಿದೆ. 
 

Worlds largest freshwater fish caught in Cambodia akb
Author
Bangalore, First Published Jun 21, 2022, 5:14 PM IST

ಕಾಂಬೋಡಿಯಾ: ವಿಶ್ವದ ಅತಿದೊಡ್ಡ ಸಿಹಿನೀರಿನ ಮೀನು, ದೈತ್ಯ ಸ್ಟಿಂಗ್ರೇ ಕಾಂಬೋಡಿಯಾದ ಮೆಕಾಂಗ್ ನದಿಯಲ್ಲಿ ಮೀನುಗಾರರಿಗೆ ಸಿಕ್ಕಿದೆ. ಆಗ್ನೇಯ ಏಷ್ಯಾ ರಾಷ್ಟ್ರ ಮತ್ತು ಯುನೈಟೆಡ್ ಸ್ಟೇಟ್ಸ್‌ನ ವಿಜ್ಞಾನಿಗಳ ಪ್ರಕಾರ ಇದು ವಿಶ್ವದ ಅತಿದೊಡ್ಡ ದಾಖಲಿತ ಸಿಹಿನೀರಿನ ಮೀನು ಎಂದು ತಿಳಿದು ಬಂದಿದೆ. 

ಜೂನ್ 13 ರಂದು ಸೆರೆ ಸಿಕ್ಕಿದ ಈ ಸ್ಟಿಂಗ್ರೇ ಮೀನು ಮೂತಿಯಿಂದ ಬಾಲದವರೆಗೆ ಸುಮಾರು 4 ಮೀಟರ್ (13 ಅಡಿ) ಉದ್ದ ಅಳತೆಯನ್ನು ಹೊಂದಿತ್ತು ಮತ್ತು  300 ಕಿಲೋಗ್ರಾಂ ಗಳಷ್ಟು (660 ಪೌಂಡ್‌ಗಳು) ತೂಗುತ್ತಿತ್ತು ಎಂದು ಕಾಂಬೋಡಿಯನ್-ಅಮೆರಿಕ. ಜಂಟಿ ಸಂಶೋಧನಾ ಯೋಜನೆಯಾದ ವಂಡರ್ಸ್ ಆಫ್ ದಿ ಮೆಕಾಂಗ್ ಹೇಳಿದೆ. 

2005 ರಲ್ಲಿ ಥೈಲ್ಯಾಂಡ್‌ನಲ್ಲಿ ಈ ಹಿಂದೆ ಸಿಕ್ಕ ಅತೀ ದೊಡ್ಡ ಸಿಹಿ ನೀರಿನ ಮೀನಿನ ಗಾತ್ರ 293 ಕಿಲೋಗ್ರಾಂ (646-ಪೌಂಡ್) ಆಗಿತ್ತು. ಮೆಕಾಂಗ್ ದೈತ್ಯ ಕ್ಯಾಟ್‌ ಫಿಶ್ ಇದಾಗಿತ್ತು. ಪ್ರಸ್ತುತ ಈಗ ಸಿಕ್ಕಿರುವ ಮೀನು ಈಶಾನ್ಯ ಕಾಂಬೋಡಿಯಾದ ಸ್ಟಂಗ್ ಟ್ರೆಂಗ್‌ನ ದಕ್ಷಿಣದಲ್ಲಿ ಸ್ಥಳೀಯ ಮೀನುಗಾರರಿಗೆ ಕಾಣ ಸಿಕ್ಕಿದೆ. ಬಳಿಕ ಮೀನುಗಾರರು ವಂಡರ್ಸ್ ಆಫ್ ದಿ ಮೆಕಾಂಗ್ ಪ್ರಾಜೆಕ್ಟ್‌ಗೆ ಸಂಬಂಧಿಸಿದ ವಿಜ್ಞಾನಿಗಳ ತಂಡಕ್ಕೆ ಈ ವಿಚಾರ ತಿಳಿಸಿದರು.  ನಂತರ ಪ್ರಾಜೆಕ್ಟ್‌ ತಂಡ ನದಿಯ ಉದ್ದಕ್ಕೂ  ಸಂರಕ್ಷಣಾ ಕಾರ್ಯದ ಪ್ರಚಾರ ಮಾಡಿದೆ.

Shivamogga: ಮಲೆನಾಡಿನಲ್ಲಿ ನೋಡುಗರ ಕಣ್ಮನ ಸೆಳೆದ ಕೆರೆಬೇಟೆ ಹಬ್ಬ!

ಅಲ್ಲದೇ ಮೀನುಗಾರರ ಕರೆಯ ನಂತರ ಮಧ್ಯರಾತ್ರಿಯೇ ಬಂದಿಳಿದ ವಿಜ್ಞಾನಿಗಳ ತಂಡ ಈ ಮೀನನ್ನು ನೋಡಿ ಅಚ್ಚರಿಗೊಂಡಿದ್ದರು. ವಿಶೇಷವಾಗಿ ಸಿಹಿನೀರಿನಲ್ಲಿ ಇಷ್ಟು ದೊಡ್ಡ ಮೀನನ್ನು ನೋಡಲು ಅಚ್ಚರಿಯಾಗುತ್ತಿದೆ. ಹಾಗಾಗಿ ನಮ್ಮ ತಂಡವು ದಿಗ್ಭ್ರಮೆಗೊಂಡಿತು ಎಂದು ಸಂಶೋಧನಾ ಸಂಸ್ಥೆ ಮೆಕಾಂಗ್ ನ ಮುಖ್ಯಸ್ಥ ಝೆಬ್ ಹೊಗನ್ (Zeb Hogan) ಅವರು ರೆನೊದಲ್ಲಿನ ನೆವಾಡಾ ವಿಶ್ವವಿದ್ಯಾಲಯದ ಆನ್‌ಲೈನ್ ಸಂದರ್ಶನದಲ್ಲಿ ಹೇಳಿದರು. ವಿಶ್ವವಿದ್ಯಾನಿಲಯವು ಕಾಂಬೋಡಿಯನ್ ಫಿಶರೀಸ್ ಅಡ್ಮಿನಿಸ್ಟ್ರೇಷನ್ (Cambodian Fisheries Administration) ಮತ್ತು USAID, ಅಮೆರಿಕಾದ ಸರ್ಕಾರದ ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಯೊಂದಿಗೆ ಪಾಲುದಾರಿಕೆ ಹೊಂದಿದೆ.

ಬ್ಲೂಫಿನ್ ಟ್ಯೂನ ಮತ್ತು ಮಾರ್ಲಿನ್ ನಂತಹ (marlin) ದೈತ್ಯ ಸಮುದ್ರ ಜಾತಿಯ ಮೀನುಗಳಿಗೆ ವಿರುದ್ಧವಾಗಿ ಅಥವಾ ದೊಡ್ಡ ಬೆಲುಗಾ ಸ್ಟರ್ಜನ್ ನಂತಹ ತಾಜಾ ಮತ್ತು ಉಪ್ಪುನೀರಿನ (saltwater) ನಡುವೆ ವಲಸೆ ಹೋಗುವ ಮೀನುಗಳಿಗೆ ತದ್ವಿರುದ್ಧವೆಂಬಂತೆ ಸಿಹಿನೀರಿನ ಮೀನುಗಳು ತಮ್ಮ ಸಂಪೂರ್ಣ ಜೀವನವನ್ನು ಸಿಹಿನೀರಿನಲ್ಲಿ ಕಳೆಯುತ್ತವೆ ಎಂದು ನಂಬಲಾಗಿದೆ.

Udupi; ಕಲುಷಿತ ನೀರು ಕುಡಿದು ಲಕ್ಷಾಂತರ ಮೀನುಗಳ ಸಾವು, ಕೊಳಕು ನೀರು ಬಂದಿದ್ದೆಲ್ಲಿಂದ?

ಸ್ಟಿಂಗ್ರೇ ಬಲೆಗೆ ಬಿದ್ದಿದ್ದು ಒಂದು ದಾಖಲೆ ಮಾತ್ರವಲ್ಲ. ಈ ಮೀನುಗಳು ಇನ್ನೂ ದೊಡ್ಡದಾಗಿ ಬೆಳೆಯಬಹುದು ಎಂದು ಹೋಗನ್ ಹೇಳಿದರು. ಮೆಕಾಂಗ್ ನದಿಯು ಚೀನಾ (China), ಮ್ಯಾನ್ಮಾರ್ (Myanmar), ಲಾವೋಸ್ (Laos), ಥೈಲ್ಯಾಂಡ್ (Thailand), ಕಾಂಬೋಡಿಯಾ ಮತ್ತು ವಿಯೆಟ್ನಾಂ (Vietnam) ಮೂಲಕ ಹರಿಯುತ್ತದೆ. ಇದು ಹಲವಾರು ಜಾತಿಯ ದೈತ್ಯ ಸಿಹಿನೀರಿನ ಮೀನುಗಳಿಗೆ ನೆಲೆಯಾಗಿದೆ. ಆದರೆ ಪರಿಸರದ ಒತ್ತಡಗಳು ಹೆಚ್ಚುತ್ತಿವೆ. ಹೀಗಾಗಿ ನಿರ್ದಿಷ್ಟವಾಗಿ ಹೇಳುವುದಾದರೆ, ಇತ್ತೀಚಿನ ವರ್ಷಗಳಲ್ಲಿ ಅಣೆಕಟ್ಟು ನಿರ್ಮಾಣದ ಪ್ರಮುಖ ಕಾರ್ಯಕ್ರಮಗಳು ಈ ಮೀನುಗಳು ಮೊಟ್ಟೆಯಿಡುವ ಮೈದಾನಕ್ಕೆ ಅಡ್ಡಿಪಡಿಸುತ್ತಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.  

ಜಾಗತಿಕವಾಗಿ ದೊಡ್ಡ ಮೀನುಗಳು ಅಳಿವಿನಂಚಿನಲ್ಲಿವೆ. ಅವು ಹೆಚ್ಚಿನ ಮೌಲ್ಯವುಳ್ಳ ಪ್ರಬೇಧಗಳಾಗಿವೆ, ಅವು ಬೆಳೆಯಲುಬಹಳ ಸಮಯ ತೆಗೆದುಕೊಳ್ಳುತ್ತಾರೆ. ಹಾಗಾಗಿ ಅವು ಬೆಳೆಯುವ ಮೊದಲು ಹಿಡಿಯಲ್ಪಟ್ಟರೆ, ಅವುಗಳಿಗೆ ಸಂತಾನೋತ್ಪತ್ತಿ ಮಾಡಲು ಅವಕಾಶವಿಲ್ಲದಂತಾಗುತ್ತದೆ ಎಂದು ಹೊಗನ್ ಹೇಳಿದರು. ಈ ದೊಡ್ಡ ಮೀನುಗಳಲ್ಲಿ ಹೆಚ್ಚಿನವು ವಲಸೆ ಹೋಗುತ್ತವೆ. ಆದ್ದರಿಂದ ಅವು ಬದುಕಲು ದೊಡ್ಡ ಪ್ರದೇಶಗಳು ಬೇಕಾಗುತ್ತವೆ. ಅಣೆಕಟ್ಟುಗಳಿಂದ ಆವಾಸಸ್ಥಾನದ ವಿಘಟನೆ ಅತಿಯಾದ ಮೀನುಗಾರಿಕೆ ಮುಂತಾದ ಕಾರಣಗಳಿಂದ ಅವುಗಳು ಸಂತತಿ ಕಡಿಮೆ ಆಗುತ್ತಿದೆ ಎಂದರು.

Follow Us:
Download App:
  • android
  • ios