ಲಾಸ್ಏಂಜಲೀಸ್(ಮಾ.26): ಕಾಲೇಜಿನ ಕ್ಯಾಂಪಸ್ ಗೈನಕಾಲಜಿಸ್ಟ್ ಆಗಿದ್ದಾತ ಸ್ತನಗಳನ್ನು ಸ್ಪರ್ಶಿಸಿ, ಗುಪ್ತಾಂಗದ ಫೋಟೋ ತೆಗೆದು, ಲೈಂಗಿಕ ಕಿರುಕುಳ, ಅತ್ಯಾಚಾರ ಮಾಡಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ.

ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ದೀರ್ಘ ಕಾಲ ಗೈನಕಾಲಜಿಸ್ಟ್ ಆಗಿದ್ದ ವ್ಯಕ್ತಿ ವಿರುದ್ಧ 700ಕ್ಕೂ ಹೆಚ್ಚು ಮಹಿಳೆಯರು ದೂರು ನೀಡಿದ್ದರು. ಇದೀಗ ವಿಶ್ವವಿದ್ಯಾಲಯ ಸುಮಾರು 7,200 ಕೋಟಿ ದಂಡ ತೆರಬೇಕಾಗಿದೆ.

ಶೃಂಗೇರಿ; ಹೆಣ್ಣು ಕುಲಕ್ಕೆ ಕಳಂಕ ತಂದಳು, ಹೆತ್ತ ಮಗಳನ್ನೇ ಕಾಮಾಂಧರ ಕೈಗೆ ಕೊಟ್ಟಳು!

74 ವರ್ಷದ ಟಿಂಡಲ್ ಲೈಂಗಿಕ ದೌರ್ಜನ್ಯ ಸಂಬಂಧಿಸಿ 35 ಪ್ರಕರಣ ಎದುರಿಸುತ್ತಿದ್ದಾರೆ. 2009ರಿಂದ 2016ರ ತನಕ ಹೆಲ್ತ್ ಸೆಂಟರ್ನಲ್ಲಿದ್ದ ಈತ ಬಹಳಷ್ಟು ಲೈಂಗಿಕ ದೌರ್ಜನ್ಯ ನಡೆಸಿದ್ದಾಗಿ ಆರೋಪ ಕೇಳಿ ಬಂದಿತ್ತು.

ಚಿಕಿತ್ಸೆಗೆ ಬಂದ ಹೆಣ್ಮಕ್ಕಳ ಸ್ತನ ಮುಟ್ಟುವುದು, ಗುಪ್ತಾಂಗದ ಫೋಟೋಳನ್ನು ತೆಗೆಯುವುದರಿಂದ ರೇಪ್ ತನಕ ಈತನ ಮೇಲೆ ಆರೋಪಗಳಿವೆ.