ಪಾಕಿಸ್ತಾನಿಯಿಂದ ತೆಲಂಗಾಣದ ಇಬ್ಬರು ಕೆಲಸಗಾರರ ಹತ್ಯೆ!

मामला स्पेन के नॉर्दर्न बाउंड्री के पास एक छोटे से पुर्तगाली गांव से सामने आया। इसके बाद पुलिस शख्स की तलाश में जुट गई। शख्स की पहचान सपनियर्ड कार्लोस संडे फिदाल्गो के रूप में हुई। लेकिन जब पुलिस ने उसे पकड़ा, तब तक उसने खुद ब्रिज से छलांग लगाकर जान दे दी।
Synopsis
ದುಬೈನ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ತೆಲಂಗಾಣದ ಇಬ್ಬರು ಯುವಕರನ್ನು ಪಾಕಿಸ್ತಾನಿ ಪ್ರಜೆಯೊಬ್ಬ ತಲವಾರಿನಿಂದ ಹತ್ಯೆ ಮಾಡಿದ್ದಾನೆ. ಮೃತರನ್ನು ಅಷ್ಟಪು ಪ್ರೇಮ್ ಸಾಗರ್ ಮತ್ತು ಶ್ರೀನಿವಾಸ್ ಎಂದು ಗುರುತಿಸಲಾಗಿದೆ..
ಹೈದರಾಬಾದ್: ಪಾಕಿಸ್ತಾನಿಯೊಬ್ಬ ತಲವಾರಿನಿಂದ ದಾಳಿ ಮಾಡಿದ ಪರಿಣಾಮ ತೆಲಂಗಾಣದ ಇಬ್ಬರು ಸಾವಿಗೀಡಾಗ ಘಟನೆ ನಡೆದಿದೆ. ಮೃತರಿಬ್ಬರು ದುಬೈನ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಧಾರ್ಮಿಕ ಘೋಷಣೆಯೊಂದನ್ನ ಕೂಗುತ್ತಾ ಬಂದ ಆರೋಪಿ ದುಬೈನ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ತೆಲಂಗಾಣದ ಇಬ್ಬರ ಮೇಲೆ ಖಡ್ಗದಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ. ತೆಲಂಗಾಣದ ನಿರ್ಮಲ್ ಜಿಲ್ಲೆಯ 35 ವರ್ಷದ ಅಶ್ಟಪು ಪ್ರೇಮ್ ಸಾಗರ್ ಹತ್ಯೆಯಾದವರಲ್ಲಿ ಒಬ್ಬರಾಗಿದ್ದು, ಏಪ್ರಿಲ್ 11 ರಂದು ಈ ಘಟನೆ ನಡೆದಿದೆ. ಇವರ ಚಿಕ್ಕಪ್ಪ ಪೊಶೆಟ್ಟಿ ಎಂಬುವವರು ಸುದ್ದಿಸಂಸ್ಥೆ ಪಿಟಿಐ ಜೊತೆ ಮಾತನಾಡುತ್ತಾ ಈ ವಿಚಾರ ತಿಳಿಸಿದ್ದಾರೆ.
ಅಶ್ಟಪು ಪ್ರೇಮ್ ಸಾಗರ್ ದುಬೈನ ಬೇಕರಿಯೊಂದಲ್ಲಿ ಕಳೆದ ಐದಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಎರಡು ವರ್ಷಗಳ ಹಿಂದೆ ಇವರು ಕೊನೆಯದಾಗಿ ಊರಿಗೆ ಬಂದು ಕುಟುಂಬದವರನ್ನು ಭೇಟಿ ಮಾಡಿ ಹೋಗಿದ್ದರು ಎಂದು ಪ್ರೇಮ್ ಸಾಗರ್ ಚಿಕ್ಕಪ್ಪ ಪೋಶೆಟ್ಟಿ ಹೇಳಿದ್ದಾರೆ. ಪಾಕಿಸ್ತಾನಿ ಪ್ರಜೆಯಿಂದ ಹತ್ಯೆಗೀಡಾದ ಪ್ರೇಮ್‌ಸಾಗರ್ ಅವರಿಗೆ ಹೆಂಡ್ತಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಇವರ ಕುಟುಂಬಕ್ಕೆ ಇನ್ನೂ ಈ ಘಟನೆಯ ಬಗ್ಗೆ ಮಾಹಿತಿ ನೀಡಿಲ್ಲ. ಪ್ರೇಮ್ ಸಾಗರ್ ಅವರ ಶವವನ್ನು ಭಾರತಕ್ಕೆ ತರಲು ಸರ್ಕಾರ ನೆರವಾಗಬೇಕು ಎಂದು ಪ್ರೇಮ್ ಸಾಗರ್ ಅವರ ಚಿಕ್ಕಪ್ಪ ಪೋಶೆಟ್ಟಿ ಹೇಳಿದ್ದಾರೆ. ಪ್ರೇಮಸಾಗರ್ ಕುಟುಂಬವೂ ಆರ್ಥಿಕ ಸ್ಥಿತಿ ದುರ್ಬಲವಾಗಿದ್ದು ಸಹಾಯ ಮಾಡುವಂತೆ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ನೀಲಿ ಕಣ್ಣಿನ ಪಾಕಿಸ್ತಾನಿ ಚಾಯ್‌ವಾಲಾ ಪಾಸ್‌ಪೋರ್ಟ್ ಬ್ಲಾಕ್, ಗಡೀಪಾರು ಭೀತಿ
ಹಾಗೆಯೇ ಈ ಘಟನೆಯಲ್ಲಿ ಸಾವನ್ನಪ್ಪಿದ ಇನ್ನೊಬ್ಬ ವ್ಯಕ್ತಿಯನ್ನು ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಈತ ನಿಜಮಾಬಾದ್ ಜಿಲ್ಲೆಯ ನಿವಾಸಿ ಎಂದು ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಮಾಹಿತಿ ನೀಡಿದ್ದಾರೆ. ಹಾಗೆಯೇ ಈ ತಲವಾರ್ ದಾಳಿಯಲ್ಲಿ ಸಾಗರ್ ಎಂಬ ಮತ್ತೊಬ್ಬ ಯುವಕ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆತನ ಪತ್ನಿ ಭವಾನಿ ಎಂಬುವವರು ಮಾಹಿತಿ ನೀಡಿದ್ದಾರೆ. ಗಾಯಾಳು ಸಾಗರ್ ಕೂಡ ನಿಜಮಾಬಾದ್ ಮೂಲದವರಾಗಿದ್ದಾರೆ.
ಈ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ, ಮೃತರ ದೇಹವನ್ನು ಭಾರತಕ್ಕೆ ತೆಗೆದುಕೊಂಡು ಬರುವುದಕ್ಕೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಜೊತೆ ಮಾತನಾಡಿ ಸಹಾಯ ಕೇಳಿದ್ದಾಗಿ ಹೇಳಿದ್ದಾರೆ. ದುಬೈನಲ್ಲಿ ತೆಲಂಗಾಣದ ಇಬ್ಬರು ತೆಲುಗು ಯುವಕರಾದ ನಿರ್ಮಲ್ ಜಿಲ್ಲೆಯ ಅಷ್ಟಪು ಪ್ರೇಮಸಾಗರ್ ಮತ್ತು ನಿಜಾಮಾಬಾದ್ ಜಿಲ್ಲೆಯ ಶ್ರೀನಿವಾಸ್ ಅವರ ಭೀಕರ ಹತ್ಯೆಯಿಂದ ತೀವ್ರ ಆಘಾತವಾಗಿದೆ. ಈ ವಿಷಯದ ಬಗ್ಗೆ ಗೌರವಾನ್ವಿತ ವಿದೇಶಾಂಗ ಸಚಿವ ಎಸ್ ಜೈಶಂಕರ್ ಜಿ ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಅವರು ಮೃತರ ಕುಟುಂಬಗಳಿಗೆ ಸಂಪೂರ್ಣ ಬೆಂಬಲ ಮತ್ತು ಮೃತದೇಹಗಳನ್ನು ತುರ್ತಾಗಿ ಸ್ವದೇಶಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ ಎಂದು ಸಚಿವ ಜಿ ಕಿಶನ್ ರೆಡ್ಡಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ವಿಷಯದಲ್ಲಿ ತ್ವರಿತವಾಗಿ ನ್ಯಾಯ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ವಿದೇಶಾಂಗ ಸಚಿವಾಲಯ (MEA) ಸಹ ಕೆಲಸ ಮಾಡುತ್ತದೆ ಎಂದು ಅವರು ಜೈಶಂಕರ್ ಅವರ ಸಹಾಯಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಅವರು ಕೂಡ ಘಟನೆಗೆ ದುಃಖ ವ್ಯಕ್ತಪಡಿಸಿದ್ದು, ವಿದೇಶಾಂಗ ಸಚಿವಾಲಯದ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಮತ್ತು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು.
ಪಾಕ್ ಹಿಂದೂಗಳ ಜನಸಂಖ್ಯೆ ಎಷ್ಟು? ಬೆಚ್ಚಿಬೀಳಿಸುತ್ತೆ ಅಂಕಿ-ಅಂಶ!
ಏಪ್ರಿಲ್ 11 ರಂದು ದುಬೈನ ಮಾಡ್ರನ್ ಬೇಕರಿ ಎಲ್ಎಲ್‌ಸಿ ಯಲ್ಲಿ ಕೆಲಸದ ಮಾಡುತ್ತಿದ್ದಾಗ ಪಾಕಿಸ್ತಾನಿ ಪ್ರಜೆಯಿಂದ ಕ್ರೂರವಾಗಿ ಹಲ್ಲೆಗೊಳಗಾದ ತೆಲಂಗಾಣದ ಕಾರ್ಮಿಕರಾದ ಅಷ್ಟಪು ಪ್ರೇಮ್ ಸಾಗರ್ ಮತ್ತು ಶ್ರೀನಿವಾಸ್ ಅವರ ದುರಂತ ಹತ್ಯೆಯಿಂದ ತೀವ್ರ ದುಃಖಿತನಾಗಿದ್ದೇನೆ ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಭಾರತೀಯ ದೂತಾವಾಸದ ಮೂಲಕ ದುಬೈ ಪೊಲೀಸರಿಗೆ ಪ್ರಕ್ರಿಯೆಯನ್ನು ಬೇಗನೆ ಮುಗಿಸುವಂತೆ ಒತ್ತಾಯಿಸಲಾಗಿದೆ ಎಂದು ಅವರು ಹೇಳಿದರು.
ಈ ವಿಷಯವನ್ನು ತುರ್ತಾಗಿ ಮುಂದುವರಿಸುವಲ್ಲಿ ವಿದೇಶಾಂಗ ಸಚಿವಾಲಯದ ತ್ವರಿತ ಸ್ಪಂದನೆಗಾಗಿ ಅವರು ಧನ್ಯವಾದ ಅರ್ಪಿಸಿದ್ದಾರೆ. ಸಂತ್ರಸ್ತರನ್ನು ಶೀಘ್ರವಾಗಿ ಸ್ವದೇಶಕ್ಕೆ ಕರೆತರಲು ನಾವು ಅಗತ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತಿದ್ದೇವೆ ಮತ್ತು ಈ ದುಃಖದ ಸಮಯದಲ್ಲಿ ಅವರ ಕುಟುಂಬಗಳೊಂದಿಗೆ ದೃಢವಾಗಿ ನಿಲ್ಲುತ್ತೇವೆ ಎಂದು ಅವರು ಹೇಳಿದ್ದಾರೆ.