ವಾಷಿಂಗ್ಟನ್‌ನಲ್ಲಿರುವ ಯಹೂದಿ ಮ್ಯೂಸಿಯಂ ಬಳಿ ಪ್ಯಾಲೆಸ್ತೀನ್ ಪರ ದುಷ್ಕರ್ಮಿಯೊಬ್ಬ ಇಸ್ರೇಲ್ ರಾಯಭಾರಿ ಕಚೇರಿಯ ಇಬ್ಬರು ಅಧಿಕಾರಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ನಿಶ್ಚಿತಾರ್ಥ ಮಾಡಿಕೊಳ್ಳಲು ಸಿದ್ಧರಾಗಿದ್ದ ಈ ಜೋಡಿಯನ್ನು ಗುಂಡಿಕ್ಕಿ ಕೊಂದ ಆರೋಪಿ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ್ದಾನೆ.
ವಾಷಿಂಗ್ಟನ್: ಅಮೆರಿಕದ ವಾಷಿಂಗ್ಟನ್‌ನಲ್ಲಿರುವ ಯೆಹೂದಿ ಮ್ಯೂಸಿಯಂ ಸಮೀಪ ಪ್ಯಾಲೆಸ್ತೀನ್ ಪರ ದುಷ್ಕರ್ಮಿ ಯೊಬ್ಬ ಇಸ್ರೇಲ್‌ನ ರಾಯಭಾರಿ ಕಚೇರಿಯ ಇಬ್ಬರು ಅಧಿಕಾರಿಗಳು ಆಗಿರುವ ಭಾವಿ ದಂಪತಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಆತನನ್ನು ಬಂಧಿಸಲಾಗಿದೆ. ಆಗ ಆತ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿ ರಂಪಾಟ ಮಾಡಿದ್ದಾನೆ. ಬುಧವಾರ ಸಂಜೆ ಈ ದುರಂತ ನಡೆದಿದೆ. ಬುಧವಾರ ಸಂಜೆ ಇಲ್ಲಿನ ಯಹೂದಿ ವಸ್ತು ಸಂಗ್ರಹಾಲಯದಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ಇದರಲ್ಲಿ ಭಾಗಿಯಾ ಗಿದ್ದ ಇಸ್ರೇಲ್ ರಾಯಭಾರಿ ಕಚೇರಿಯ ಮಹಿಳಾ ಮತ್ತು ಪುರುಷ ಸಿಬ್ಬಂದಿ ಕಾರ್ಯಕ್ರಮ ಮುಗಿಸಿ ಹೊರಡುತ್ತಿದ್ದಾಗ ಶಂಕಿತ ವ್ಯಕ್ತಿ ಜನರ ಗುಂಪಿನ ನಡುವೆ ಗುಂಡು ಹಾರಿಸಿದ್ದಾನೆ. ಗುಂಡಿನ ದಾಳಿ ನಡೆಸುತ್ತಿದ್ದಂತೆ ಅಲ್ಲಿದ್ದ ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಆತನನ್ನು ಶಿಕಾಗೋದ 30 ವರ್ಷದ ಎಲಿ ಯಾಸ್ ರೊಡಿಗ್ರಸ್ ಎಂದು ಗುರ್ತಿಸಲಾಗಿದೆ.
ನಿಶ್ಚಿತಾರ್ಥಕ್ಕೆ ಸಿದ್ಧವಾಗುತ್ತಿದ್ದ ಜೋಡಿ
ಈ ದುರಂತದಲ್ಲಿ ಸಾವನ್ನಪ್ಪಿದ್ದ ಇಬ್ಬರೂ ಅಮೆರಿಕಾದ ಇಸ್ರೇಲ್ ರಾಯಭಾರ ಕಚೇರಿಯಲ್ಲಿ ಅಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದರು, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ನಿಶ್ಚಿತಾರ್ಥಕ್ಕೆ ಸಿದ್ಧರಾಗುತ್ತಿದ್ದರು. ಇವರ ನಿಶ್ಚಿತಾರ್ಥ ಮುಂದಿನ ವಾರ ನಡೆಯಬೇಕಿತ್ತು. ಇದಕ್ಕಾಗಿ ಪುರುಷ ಅಧಿಕಾರಿ ಮುಂದಿನ ವಾರ ಜೆರುಸಲೇಂನಲ್ಲಿ ನಡೆಯಲಿರುವ ಮದುವೆ ಪ್ರಸ್ತಾಪಕ್ಕೆ ಉಂಗುರ ಖರೀದಿಸಿದ್ದರು. ಮೃತರ ಪೈಕಿ ಮಹಿಳಾ ಅಧಿಕಾರಿ ಅಮೆರಿಕ ಮೂಲದವರಾಗಿದ್ದು, ಪುರುಷ ಅಧಿಕಾರಿ ಇಸ್ರೇಲ್ ಮೂಲದವರು.