ವಾಷಿಂಗ್ಟನ್(ನ.26): ಐಸಿಸ್ ಉಗ್ರ ಸಂಘಟನೆಯ ನಾಯಕ ಅಬು ಬಕರ್-ಅಲ್-ಬಾಗ್ದಾದಿಯನ್ನು ಹತ್ಯೆ ಮಾಡುವಲ್ಲಿ ಸಹಕರಿಸಿದ್ದ ಅಮೆರಿಕ ಸೇನಾ ಶ್ವಾನ ಕ್ಯಾನನ್’ಗೆ ಶ್ವೇತ ಭವನದಲ್ಲಿ ಅದ್ಧೂರಿ ಸ್ವಾಗತ ದೊರೆತಿದೆ. 

ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕ್ಯಾನನ್’ಗೆ ಸೇನಾ ಸನ್ಮಾನ ಮಾಡಿದ್ದು, ಬಾಗ್ದಾದಿ ಓಡಿ ಹೋದ ಸುರಂಗಕ್ಕೆ ನುಗ್ಗಿದ ಈ ನಾಯಿಯ ಧೈರ್ಯವನ್ನು ಕೊಂಡಾಡಿದ್ದಾರೆ.

ಈ ವೇಳೆ ಮಾತನಾಡಿದ ಟ್ರಂಪ್, ಕಾರ್ಯಾಚರಣೆ ವೇಳೆ ಉಂಟಾದ ಗಾಯಗಳಿಂದ ಬೇಗ ಚೇತರಿಕೆ ಕಂಡಿರುವ ಕ್ಯಾನನ್ ತಮಗೆ ಅತ್ಯಂತ ಪ್ರೀಯವಾದ ಶ್ವಾನ ಎಂದು ಹೇಳಿದ್ದಾರೆ. 

ಇನ್ನು ಕ್ಯಾನನ್’ಗೆ ಪದಕ ಮತ್ತು ಫಲಕ ನೀಡಲಾಗಿದ್ದು, ಈ ಶ್ವಾನ ಅಮೆರಿಕದ ಸೇನಾ ಇತಿಹಾಸದಲ್ಲಿ ಅಮರ ಎಂದು ಟ್ರಂಪ್ ಹೊಗಳಿದ್ದಾರೆ.

ಹೆಸರು ಹೇಳಲ್ಲ, ಫೋಟೋ ನೋಡಿ: ಬಾಗ್ದಾದಿ ಬೆನ್ನತ್ತಿದ್ದ ನಾಯಿ ತೋರಿಸಿದ ಟ್ರಂಪ್!

ಪತ್ರಕರ್ತರು ಬಾಯಿ ಬಿಟ್ಟರೆ ಈ ಶ್ವಾನ ದಾಳಿ ಮಾಡುತ್ತದೆ ಎಂದು ಹಾಸ್ಯ ಚಟಾಕಿ ಹಾರಿಸಿರುವ ಟ್ರಂಪ್, ಸೂಕ್ತ ತರಬೇತಿ ಪಡೆದಿರುವ ಈ ಶ್ವಾನದ ಕುರಿತು ಎಚ್ಚರಿಕೆಯಿಂದ ಇರಬೇಕು ಎಂದು ಕಿಚಾಯಿಸಿದ್ದಾರೆ.