ಹಲವು ಭಾಗದಲ್ಲಿ ವಿಪರೀತ ಮಳೆ ಸುರಿಯುತ್ತಿದೆ. ಪರಿಣಾಮ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪ್ರವಾಹ ನೀರಿನಲ್ಲಿ ಮೂವರು ಗೆಳೆಯರು ಗಟ್ಟಿಯಾಗಿ ತಬ್ಬಿಕೊಂಡು ನಿಂತರೂ ಕೊಚ್ಚಿ ಹೋಗಿದ್ದಾರೆ. ಕೊನೆಯ ಕ್ಷಣದ ವಿಡಿಯೋ ಇಲ್ಲಿದೆ.
ಇಟಲಿ(ಜೂನ್ 03) ಮಳೆಗಾಲ ಆರಂಭಗೊಂಡಿದೆ. ಏಕಾಏಕಿ ಭಾರಿ ಮಳೆಯಾಗುತ್ತಿರುವ ಕಾರಣ ಹಲವು ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಹೀಗೆ ಪ್ರವಾಹ ನೀರು ಬರುತ್ತಿದ್ದಂತೆ ಮೂವರು ಗೆಳೆಯರು ಒಬ್ಬರನ್ನೊಬ್ಬರು ಗಟ್ಟಿಯಾಗಿ ತಬ್ಬಿಕೊಂಡು ನಿಂತಿದ್ದಾರೆ. ಪ್ರಾಣ ಉಳಿಸಲು ಕೊನೆಯ ಪ್ರಯತ್ನ ಮಾಡಿದ್ದಾರೆ. ಆದರೆ ನೀರಿನ ರಭಸಕ್ಕೆ ಮೂವರು ಕೊಚ್ಚಿ ಹೋದ ಘಟನೆ ಇಟಲಿಯಲ್ಲಿ ನಡೆದಿದೆ. ಇವರ ಕೊನೆಯ ಕ್ಷಣದ ವಿಡಿಯೋ ಲಭ್ಯವಾಗಿದೆ.
ಇಬ್ಬರು ಯುವತಿಯರು ಹಾಗೂ ಓರ್ವ ಯುವಕ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಈ ಪೈಕಿ ಇಬ್ಬರು ಯುವತಿರ ಮೃತದೇಹ ಪತ್ತೆಯಾಗಿದೆ. ಆದರೆ ಯುವಕನ ಮೃತದೇಹ ಇದುವರೆಗೂ ಪತ್ತೆಯಾಗಿಲ್ಲ. ಉತ್ತರ ಇಟಲಿಯ ನಾಟಿಸೊನ್ ನದಿ ಪಕ್ಕ ಪ್ರವಾಸ ತೆರಳಿದ್ದ ಮೂವರು ಗೆಳೆಯರು ಸಂತಸದ ಸಮಯ ಕಳೆದಿದ್ದಾರೆ.
ಬೆಂಗಳೂರು ಮಳೆಗೆ ಅವಾಂತರ, ಮೆಟ್ರೋ ಹಳಿ ಮೇಲೆ ಬಿದ್ದ ಮರದಿಂದ ರೈಲು ಸೇವೆ ಸ್ಥಗಿತ!
ನಾಟಿಸೋನ್ ನದಿ ಸುತ್ತ ಮುತ್ತ ಯಾವುದೇ ಮಳೆಯ ಸೂಚನೆ ಇರಲಿಲ್ಲ. ಇಷ್ಟೇ ಅಲ್ಲ ಪ್ರವಾಹ ಬಂದಾಗಲು ಈ ಮೂವರ ಇದ್ದ ಸ್ಥಳದ ಸುತ್ತ ಮತ್ತ ಮಳೆಯಾಗಿಲ್ಲ. ನದಿ ಪಕ್ಕದಲ್ಲಿ ಕುಳಿತು ಹಲವು ನೆನಪುಗಳನ್ನು ಮೆಲುಕು ಹಾಕಿದ ಗಳೆಯರು ಕುಶಲೋಪರಿಯಲ್ಲಿ ಕಾಲಕಳೆದಿದ್ದಾರೆ. ಆದರೆ ಉತ್ತರ ಇಟಲಿಯ ಇತರ ಕೆಲ ಭಾಗದಲ್ಲಿ ಭಾರಿ ಮಳೆಯಾಗಿದೆ. ಕೆಲ ದಿನದಿಂ ಸುರಿಯುತ್ತಿರುವ ಮಳೆಯಿಂದಾಗಿ ನಾಟಿಸೋನ್ ನದಿಗೆ ಏಕಾಏಕಿ ನೀರು ಹರಿದು ಬಂದಿದೆ.
ಹೆಚ್ಚಿನ ನೀರಿಲ್ಲದ ಕಾರಣ ಬಂಡೆ ಮೇಲೆ ಕುಳಿತಿದ್ದ ಮೂವರಿಗೆ ದಿಕ್ಕೇ ತೋಚದಂತಾಗಿದೆ. ಒಂದು ಕ್ಷಣದಲ್ಲಿ ನದಿ ತುಂಬಿ ಹೋಗಿದೆ. ಬೇರೆ ಮಾರ್ಗವಿಲ್ಲದೆ ಒಬ್ಬರನ್ನೊಬ್ಬರು ಗಟ್ಟಿಯಾಗಿ ತಬ್ಬಿಕೊಂಡು ಹಿಡಿದು ನಿಂತಿದ್ದಾರೆ. ಆದರೆ ನೋಡ ನೋಡುತ್ತಿದ್ದಂತ ನೀರಿನ ಮಟ್ಟ ಏರಿಕೆಯಾಗಿದೆ. ಮೂವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಈ ಮೂವರು ಕೊಚ್ಚಿ ಹೋಗುವ ಕೊನೆಯ ಕ್ಷಣದ ವಿಡಿಯೋ ಲಭ್ಯವಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ರಕ್ಷಣಾ ತಂಡ ಸ್ಥಳಕ್ಕೆ ಆಗಮಿಸಿದೆ. ತೀವ್ರ ಶೋಧ ಕಾರ್ಯ ನಡೆಸಿದೆ. ಡ್ರೋನ್ ಸೇರಿದಂತೆ ಅತ್ಯಾಧುನಿಕ ಸಲಕರಣೆ ಮೂಲಕ ಶೋಧ ಕಾರ್ಯ ನಡೆಸಿ ಇಬ್ಬರು ಯುವತಿಯರ ಮೃತದೇಹವನ್ನು ಹೊರಕ್ಕೆ ತೆಗೆಯಲಾಗಿದೆ. ಆದರೆ ಯುವಕನ ಮೃತದೇಹ ಪತ್ತೆಯಾಗಿಲ್ಲ. ಇಬ್ಬರು ಯುವತಿಯರ ಮೃತದೇಹ ಘಟನೆ ಸ್ಥಳದಿಂದ 700 ಮೀಟರ್ ದೂರದಲ್ಲಿ ಪತ್ತೆಯಾಗಿದೆ. ಮೃತರನ್ನು 20 ವರ್ಷದ ಯುವತಿ ಪತ್ರಿಜಿಯಾ ಕಾರ್ಮೋಸ್, ಆಕೆಯ ಗೆಳತಿ 23 ವರ್ಷದ ಬಿಯಾನ್ಕಾ ಬೊರೊಸ್ ಹಾಗೂ 25 ವರ್ಷದ ಕ್ರಿಸ್ಟಿಯನ್ ಮೊರ್ಲಾನ್ ಎಂದು ಗುರುತಿಸಲಾಗಿದೆ.
133 ವರ್ಷಗಳ ಹಿಂದಿನ ದಾಖಲೆ ಮುರಿದ ಒಂದೇ ದಿನದ ಬೆಂಗಳೂರು ಮಳೆ, ಸಹಾಯವಾಣಿ ತೆರೆದ ಬಿಬಿಎಂಪಿ!
