ಬ್ಯಾಂಕಾಕ್‌[ಫೆ.09]: ಥಾಯ್ಲೆಂಡ್‌ನಲ್ಲಿ ಯೋಧನೊಬ್ಬ ಶಾಪಿಂಗ್‌ ಮಾಲ್‌ವೊಂದಕ್ಕೆ ನುಗ್ಗಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, 17 ಜನರನ್ನು ಹತ್ಯೆ ಮಾಡಿದ್ದಾನೆ. ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಳಗೊಳ್ಳುವ ಸಾಧ್ಯತೆ ಇದೆ.

ದಾಳಿ ನಡೆಸಿದ ಯೋಧನನ್ನು ಮೇಜರ್‌ ಜಕ್ರಪಂತ್‌ ಥೋಮರ್‌ ಎಂದು ಗುರುತಿಸಲಾಗಿದೆ. ಸೇನಾ ವಾಹನವೊಂದನ್ನು ಅಪಹರಿಸಿ ಓರ್ವ ಅಧಿಕಾರಿ ಮತ್ತು ಯೋಧರ ಮೇಲೆ ಗುಂಡು ಹಾರಿಸಿದ ಆತ, ಬಳಿಕ ಟರ್ಮಿನಲ್‌-21 ಶಾಪಿಂಗ್‌ ಮಾಲ್‌ಗೆ ನುಗ್ಗಿದ ಆತ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ. ಅಲ್ಲದೇ ತಾನು ನಡೆಸಿದ ಗುಂಡಿನ ದಾಳಿಯನ್ನು ಫೇಸ್‌ಬುಕ್‌ನಲ್ಲಿ ಲೈವ್‌ ಮಾಡಿದ್ದಾನೆ.

ಮಾಲ್‌ನಲ್ಲಿ ಅನೇಕರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಮಾಲ್‌ ಅನ್ನು ಸುತ್ತುವರಿದಿರುವ ಭದ್ರತಾ ಪಡೆಗಳು ರಕ್ಷಣಾ ಕಾರ್ಯಾಚರಣೆ ಕೈಗೊಂಡಿವೆ.