Asianet Suvarna News Asianet Suvarna News

13 ವರ್ಷದ ಪ್ಯಾಲೆಸ್ತೀನ್‌ ಬಾಲಕನಿಂದ ಗುಂಡಿನ ದಾಳಿ: 7 ಯೆಹೂದಿಗಳ ಹತ್ಯೆ

ಇಸ್ರೇಲ್‌ ಮತ್ತು ಪ್ಯಾಲೇಸ್ತೀನ್‌ ನಡುವಿನ ಸಂಘರ್ಷ ಮತ್ತೆ ಭುಗಿಲೆದ್ದಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಪ್ಯಾಲೆಸ್ತೀನಿಯರು ನಡೆಸಿದ ಎರಡು ಗುಂಡಿನ ದಾಳಿಯ ಘಟನೆಗಳಲ್ಲಿ 7 ಇಸ್ರೇಲಿ ಪ್ರಜೆಗಳು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. 

Shooting by 13 year old Palestinian boy 7 Jews killed conflict between Israel and Palestine has flared up again akb
Author
First Published Jan 29, 2023, 9:08 AM IST

ಜೆರು​ಸ​ಲೆಂ: ಇಸ್ರೇಲ್‌ ಮತ್ತು ಪ್ಯಾಲೇಸ್ತೀನ್‌ ನಡುವಿನ ಸಂಘರ್ಷ ಮತ್ತೆ ಭುಗಿಲೆದ್ದಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಪ್ಯಾಲೆಸ್ತೀನಿಯರು ನಡೆಸಿದ ಎರಡು ಗುಂಡಿನ ದಾಳಿಯ ಘಟನೆಗಳಲ್ಲಿ 7 ಇಸ್ರೇಲಿ ಪ್ರಜೆಗಳು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಆತಂಕಕಾರಿ ವಿಷಯವೆಂದರೆ ಹೀಗೆ ನಡೆದ 2 ಗುಂಡಿನ ದಾಳಿಯ ಪೈಕಿ 7 ಜನರ ಬಲಿ ಪಡೆದ ಮೊದಲ ದಾಳಿಯನ್ನು 22 ವರ್ಷದ ಯುವಕ ನಡೆಸಿದ್ದರೆ, ಎರಡನೇ ಘಟನೆಯನ್ನು ಕೇವಲ 13 ವರ್ಷದ ಬಾಲಕನೊಬ್ಬ ನಡೆಸಿದ್ದಾನೆ.

ಇಸ್ರೇಲ್‌ ಮತ್ತು ಪ್ಯಾಲೆ​ಸ್ತೇನ್‌ (Israel and Palestine) ನಡುವೆ ಮತ್ತೆ ಗಲಾ​ಟೆ​ಗಳು ಆರಂಭ​ವಾ​ಗಿ​ರು​ವು​ದಕ್ಕೆ ಜಾಗ​ತಿ​ಕ​ವಾಗಿ ಕಳವಳ ವ್ಯಕ್ತವಾಗಿದೆ. ಜೊತೆಗೆ ಶೀಘ್ರವೇ ಇದಕ್ಕೆ ತಕ್ಕ ಪ್ರತಿಕ್ರಿಯೆ ಆರಂಭಿಸಲಾಗುವುದು ಎಂದು ಇಸ್ರೇಲ್‌ ಅಧ್ಯಕ್ಷ ಬೆಂಜಮಿನ್‌ ನೆತನ್ಯಾಹು (Israeli President Benjamin Netanyahu)ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಜೆರುಸಲೆಂ ಮಸೀದಿಗೆ ಪೊಲೀಸರ ಪ್ರವೇಶ: ಭುಗಿಲೆದ್ದ ಸಂಘರ್ಷ

7 ಜನರ ಹತ್ಯೆ:

ಪೂರ್ವ ಜೆರುಸಲೆಂನಲ್ಲಿ (East Jerusalem)ಶುಕ್ರವಾರ ರಾತ್ರಿ 22 ವರ್ಷದ ಯುವಕನೊಬ್ಬ ಯೆಹೂದಿಗಳ ಪ್ರಾರ್ಥನಾ (Jewish prayer) ಸ್ಥಳದಲ್ಲಿ ಸೇರಿದ್ದ ಜನರತ್ತ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ 7 ಜನರು ಸಾವನ್ನಪ್ಪಿದ್ದಾರೆ. ಈ ಘಟನೆ ಬೆನ್ನಲ್ಲೇ ಪ್ಯಾಲೆಸ್ತೀನ್‌ನಲ್ಲಿ ಭಾರೀ ಸಂಭ್ರಮಾಚರಣೆ ನಡೆಸಿದೆ. ಜೊತೆಗೆ ಅರಬ್ಬರಿಗೆ ಸಾವಾಗಲಿ ಎಂದು ಘೋಷಣೆ ಕೂಗಿದ್ದಾರೆ. ಇದಾದ ಕೆಲ ಹೊತ್ತಿನಲ್ಲೇ 13 ವರ್ಷದ ಬಾಲಕನೊಬ್ಬ ನಡೆಸಿದ ಮತ್ತೊಂದು ಗುಂಡಿನ ದಾಳಿಯಲ್ಲಿ ಇಸ್ರೇಲ್‌ನ ಅಪ್ಪ ಮತ್ತು ಮಗ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

#Trending: ಯಹೂದಿಗಳಿಂದಲೂ ಸಲಿಂಗಿ ವಿವಾಹಕ್ಕೆ ಒಪ್ಪಿಗೆ!

Follow Us:
Download App:
  • android
  • ios