ಉಕ್ರೇನ್ ಯುದ್ಧದಲ್ಲಿ ಹೋರಾಡಲು ನಿರಾಕರಿಸಿದ ಯೋಧನ ತಲೆಗೆ ಸುತ್ತಿಗೆ ಬಡಿದು ಸಾಯಿಸಿದ ರಷ್ಯಾ!
ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧಖೈದಿಗಳ ವಿನಿಯಮವಾಗಿದೆ. ಈ ನಡುವೆ ರಷ್ಯಾದ ವ್ಯಾಗ್ನರ್ ಸೇನೆಯ ಯೋಧನೊಬ್ಬ ದೇಶದ ಪರವಾಗಿ ಹೋರಾಟ ಮಾಡಲು ನಿರಾಕರಿಸಿದ್ದರು. ಆತನನ್ನು ಖೈದಿಗಳ ವಿನಿಮಯದಲ್ಲಿ ವಾಪಾಸ್ ಕರೆದುಕೊಂಡ ರಷ್ಯಾ, ಸುತ್ತಿಗೆಯಲ್ಲಿ ಅವನ ತಲೆಯನ್ನು ಬಡಿದು ಸಾಯಿಸಿದ ವಿಡಿಯೋ ವೈರಲ್ ಆಗಿದೆ.
ನವದೆಹಲಿ (ಫೆ.14): ಪ್ರಸ್ತುತ ಉಕ್ರೇನ್ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ ತನ್ನದೇ ವ್ಯಾಗ್ನರ್ ಆರ್ಮಿಯ ಸೈನಿಕನನ್ನು ರಷ್ಯಾ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದೆ. ರಷ್ಯಾ ಸೇನೆಯ ವ್ಯಾಗ್ನರ್ ಗ್ರೂಪ್‌ನಲ್ಲಿ ಸೈನಿಕನಾಗಿದ್ದಈತನನ್ನು ಇತ್ತೀಚೆಗೆ ಎರಡೂ ದೇಶಗಳ ನಡುವಿನ ಯುದ್ಧಖೈದಿಗಳ ವಿನಿಮಯ ಸಂದರ್ಭದಲ್ಲಿ ರಷ್ಯಾಗೆ ಕರೆಸಿಕೊಳ್ಳಲಾಗಿತ್ತು. ಆಗಲೇ ಈ ಸೈನಿಕನಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು ಎಂದು ತೀರ್ಮಾನ ಮಾಡಿದ್ದ ರಷ್ಯಾ, ಇತ್ತೀಚೆಗೆ ಆತನ ತಲೆಗೆ ಸುತ್ತಿಗೆ ಬಡಿದು ಕ್ರೂರವಾಗಿ ಸಾಯಿಸಿದ್ದು ಅದರ ವಿಡಿಯೋವನ್ನು ರಿಲೀಸ್ ಮಾಡಿದೆ. ಅವರು ಉಕ್ರೇನಿಯನ್ ಕಡೆಯಿಂದ ಬಿಡುಗಡೆಯಾದ 63 ರಷ್ಯಾದ ಸೈನಿಕರಲ್ಲಿ ಒಬ್ಬರು. ಅವನ ಹೆಸರು ಡಿಮಿಟ್ರಿ ಯಕುಶಾಂಕೊ ಮತ್ತು ಅವನು ರಷ್ಯಾದ ಪರವಾಗಿ ಯುದ್ಧದಲ್ಲಿ ಭಾಗಿಯಾಗಿದ್ದ ಖಾಸಗಿ ವ್ಯಾಗ್ನರ್ ಸೈನ್ಯದ ಸದಸ್ಯನಾಗಿದ್ದ. ವ್ಯಾಗ್ನರ್ ಆರ್ಮಿಯ ಸೈನಿಕನಾಗಿದ್ದ ಡಿಮಿಟ್ರಿ ಯಕುಶಾಂಕೊ ಉದ್ದೇಶಪೂರ್ವಕವಾಗಿ ಸೈನ್ಯವನ್ನು ತೊರೆದು ಉಕ್ರೇನ್‌ಗೆ ಪರಾರಿಯಾಗಿದ್ದ ಎನ್ನುವ ಆರೋಪಗಳು ಕೇಳಿ ಬಂದಿದ್ದವು.
'ಯುದ್ಧಭೂಮಿಯಲ್ಲಿ ಹೋರಾಡುತ್ತಿರುವಾಗ, ಈ ಹೋರಾಟ ನನ್ನದಲ್ಲ ಎಂದು ನಾನು ಅರಿತುಕೊಂಡೆ' ಎಂದು ಆತ ಮಾತನಾಡಿರುವ ದೃಶ್ಯಗಳು ಕೂಡ ವಿಡಿಯೋದಲ್ಲಿ. ಫೆಬ್ರವರಿ 4 ರಂದು ರಷ್ಯಾ ಮತ್ತು ಉಕ್ರೇನ್ ಯುದ್ಧದ ಸಮಯದಲ್ಲಿ ವಶಪಡಿಸಿಕೊಂಡ ಸೈನಿಕರನ್ನು ವಿನಿಮಯ ಮಾಡಿಕೊಂಡವು. ದಿ ಇನ್‌ಸೈಡರ್ ಪ್ರಕಾರ, ಸಂಪೂರ್ಣ ಘಟನೆಯ ವೀಡಿಯೊವನ್ನು ವ್ಯಾಗ್ನರ್‌ಗೆ ಸಂಬಂಧಿಸಿದ ಗ್ರೇ ಝೋನ್ ಹೆಸರಿನ ಟೆಲಿಗ್ರಾಮ್ ಚಾನೆಲ್ ಪೋಸ್ಟ್ ಮಾಡಲಾಗಿದೆ.
ವಿಡಿಯೋದಲ್ಲಿ ಏನಿದೆ: ವಿಡಿಯೋದಲ್ಲಿ ಯಕುಶಾಂಕೋ ಅವರ ತಲೆಯನ್ನು ಪ್ಲಾಸ್ಟಿಕ್ ಟೇಪ್ ಮೂಲಕ ಗೋಡೆಗೆ ಹೊಂದಿಕೊಂಡತೆ ಇರುವ ಇಟ್ಟಿಗೆಗೆ ಕಟ್ಟಲಾಗಿತ್ತು. ಕೆಲ ಹೊತ್ತು ಮಾತನಾಡಿದ ಬಳಿಕ, ಆತನ ಹಿಂದೆ ಸೇನೆಯ ಸಮವಸ್ತ್ರದಲ್ಲಿಯೇ ನಿಂತಿರುವ ವ್ಯಕ್ತಿಯೊಬ್ಬ ಮೂರು ಬಾರಿ ತಲೆಗೆ ಸುತ್ತಿಗೆಯಿಂದ ಬಡಿಯುತ್ತಾನೆ. ಯಕುಶಾಂಕೋ ಅಲ್ಲಿಯೇ ಸಾಯುತ್ತಾರೆ. ಸಾಯುವ ಮುನ್ನ ಮಾತನಾಡಿದ ಯಕುಶಾಂಕೋ, 'ನಾನು ಇಂದು ಡಿನಿಪ್ರೋದಲ್ಲಿ ಇದ್ದೆ. ಈ ವೇಳೆ ನನಗೆ ಯಾರೋ ಒಬ್ಬರು ಬಂದು ತಲೆಗೆ ಹೊಡೆದಿದ್ದಾರೆ. ಎಚ್ಚರ ಬಂದಾಗ ನಾನು ನಿಮ್ಮ ಎದುರು ಈ ಕ್ಯಾಮೆರಾದ ಮುಂದೆ ಇದ್ದೇನೆ. ನನಗೆ ಮರಣದಂಡನೆ ಶಿಕ್ಷೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮಾಸ್ಕೋದಲ್ಲಿ ವ್ಲಾಡಿಮಿರ್ ಪುಟಿನ್-ಅಜಿತ್ ದೋವಲ್ ಭೇಟಿ
ಯುದ್ಧವನ್ನು ಬಿಡಿ ಎಂದಿದ್ದ ಯಕುಶಾಂಕೋ: ರಷ್ಯಾದ ಗಡಿಯನ್ನು ದಾಟಿ ಉಕ್ರೇನ್ ತುಲುಪಿದ ಬಳಿಕ, ಉಕ್ರೇನ್‌ನ ಸೈನಿಕರನ್ನು ಅವರನ್ನು ಬಂಧಿಸಿದ್ದರು. ಉಕ್ರೇನ್ ನೆಲಕ್ಕೆ ಬಂದಿದ್ದು ಹೇಗೆ ಎಂದು ಅವರಿಗೆ ಪ್ರಶ್ನೆ ಮಾಡಿದ್ದರು. ನಾನು ಗಡಿಯಲ್ಲಿ ತೆವಳಿಕೊಂಡು ದಾಟಿದ್ದೇನೆ. ಅಲ್ಲಿಯವರೆಗೂ ನನ್ನ ಮೇಲೆ ಫೈರಿಂಗ್ ಆಗುತ್ತಲೇ ಇತ್ತು. ನೆಲಕ್ಕೆ ಅಂಟಿಕೊಂಡೇ ಇದ್ದ ಕಾರಣ ಬಚಾವ್ ಆಗಿದ್ದೆ ಎಂದು ತಿಳಿಸಿದ್ದರು. ಯಕುಶೆಂಕೊ ಯುದ್ಧದ ನಾಲ್ಕು ದಿನಗಳ ನಂತರ ಬಖ್ಮತ್ ಮೂಲಕ ಉಕ್ರೇನ್‌ಗೆ ಪಲಾಯನ ಮಾಡಿದ್ದರು. ಅಪಾಯಗಳಿಂದ ರಕ್ಷಿಸಿಕೊಳ್ಳಲು ತನ್ನ ಬಳಿ ಮೆಷಿನ್ ಗನ್ ಮತ್ತು ಗ್ರೆನೇಡ್ ಗಳನ್ನೂ ಇಟ್ಟುಕೊಂಡಿದ್ದ. ನಿಧಾನವಾಗಿ ಉಕ್ರೇನ್‌ಗೆ ಪ್ರಯಾಣದ ಮಾಡಿದ್ದ ಅವರು, ಒಂದು ವಾರದ ಪ್ರಯಾಣದ ಬಳಿಕ ಉಕ್ರೇನ್ ಗಡಿ ಪ್ರವೇಶಿಸಿದ್ದರು. ಆ ಬಳಿಕ ರಷ್ಯಾದ ಇತರ ಸೈನಿಕರಿಗೂ ಯುದ್ಧವನ್ನು ತೊರೆದು ತಮ್ಮೊಂದಿಗೆ ಬರುವಂತೆ ಕೇಳಿಕೊಂಡಿದ್ದರು.
ರಷ್ಯಾ ಅಧ್ಯಕ್ಷರಿಗೆ ಅಂತೂ ಇಂತೂ ಬುದ್ಧಿ ಬಂತಾ..? ಯುದ್ಧ ಮುಗಿಸಲು ಬಯಸುತ್ತೇನೆ ಎಂದ ಪುಟಿನ್..!
ವ್ಯಾಗ್ನರ್ ಸೇನೆ ಸೇರುವ ಮುನ್ನ 19 ವರ್ಷ ಜೈಲಿನಲ್ಲಿದ್ದ ಯಕುಶಾಂಕೊ: ರಷ್ಯಾ ಸೇನೆಯಿಂದ ಹತನಾಗಿರುವ ಯಕುಶಾಂಕೊ ಮೂಲತಃ ಒಬ್ಬ ಕೊಲೆಗಾರ. ವ್ಯಾಗ್ನರ್ ಆರ್ಮಿನೆ ಸೇರಿಕೊಳ್ಳುವ ಮುನ್ನ ಆತನ ವಿರುದ್ಧ ಕಳ್ಳತನ ಹಾಗೂ ಕೊಲೆ ಆರೋಪಗಳಿದ್ದವು. ಕ್ರಿಮಿಯಾ ಜೈಲಿನಲ್ಲಿ 19 ವರ್ಷ ಶಿಕ್ಷೆ ಅನುಭವಿಸಿದ್ದರು. 2014ರಲ್ಲಿ ರಷ್ಯಾ ಸೇನೆ ಕ್ರಿಮಿಯಾವನ್ನು ಆಕ್ರಮಿಸಿಕೊಂಡ ಬಳಿಕ ಈತನನ್ನು ರಷ್ಯಾದ ಇಂಗ್ಲೆಸ್ ಜೈಲಿಗೆ ವರ್ಗಾವಣೆ ಮಾಡಲಾಗಿತ್ತು. 19 ವರ್ಷ ಜೈಲು ಸೇವೆ ಅನುಭವಿಸಿದ್ದ ಯಕುಶಾಂಕೊ ರಷ್ಯಾದ ಪರವಾಗಿ ಯುದ್ಧದಲ್ಲಿ ಹೋರಾಡುವ ಸಲುವಾಗಿ ಬಿಡುಗಡೆಯಾಗಿದ್ದರು. ಉಕ್ರೇನ್ ವಿರುದ್ಧ ಹೋರಾಟ ಮಾಡುವ ಸಲುವಾಗಿ ವ್ಯಾಗ್ನರ್ ಆರ್ಮಿಗೆ ರಷ್ಯಾ ಕ್ರಿಮಿನಲ್‌ಗಳನ್ನು ಸೇರಿಸಿಕೊಳ್ಳುತ್ತಿದೆ ಎನ್ನುವ ಆರೋಪಗಳು ಈಗಾಗಲೇ ಪುಟಿನ್ ಅವರ ಮೇಲಿದೆ.