ವಾಷಿಂಗ್ಟನ್(ಫೆ.17) : ರೆಸ್ಟೋರೆಂಟ್‌ ಒಂದರ ನೌಕರ ಪಾತ್ರೆ ತೊಳೆಯೋ ಸಿಂಕ್‌ನಲ್ಲೇ ಆರಾಮವಾಗಿ ಸ್ನಾನ ಮಾಡಿದ ವಿಡಿಯೋ ವೈರಲ್ ಆಗಿದೆ. ಸಿಂಕ್ ತುಂಬಾ ನೀರು ತುಂಬಿಸಿ, ಸೋಪಿನ ನೀರಲ್ಲಿ ಯುವಕ ಜಾಲಿಯಾಗಿ ಸ್ನಾನ ಮುಗಿಸಿದ್ದಾನೆ.

ವಿಡಿಯೋ ಮೊದಲು ಟಿಕ್‌ಟಾಕ್‌ನಲ್ಲಿ ಹಾಕಲಾಗಿತ್ತು. ವಿಡಿಯೋ ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿದ್ದೇ ತಡ ಫುಲ್ ವೈರಲ್ ಆಗಿದೆ. ವೆಂಡೀ ಎಂಬ ರೆಸ್ಟೋರೆಂಟ್‌ ಕಿಚನ್‌ನಲ್ಲಿ ಸಿಂಕ್‌ನಲ್ಲಿಯೇ ಯುವಕ ಸ್ನಾನ ಮಾಡುತ್ತಿದ್ದು, ಪಕ್ಕದಲ್ಲಿದ್ದ ಇನ್ನೊಬ್ಬ ನೌಕರ ವಸ್ತುವೊಂದನ್ನು ಸಿಂಕ್‌ಗೆ ಎಸೆದು ಸ್ನಾನ ಮಾಡು ಎಂದಿದ್ದಾನೆ.

ದೇವಸ್ಥಾನದಲ್ಲಿ ಒಂದೇ ಬಾರಿ ಬೆತ್ತಲಾದ 10 ಸಾವಿರ ಮಂದಿ!

ಇದೊಂದು ಹಾಟ್‌ ಟಬ್‌ನಂತೆ ಅನಿಸುತ್ತಿದೆ ಎಂದು ಸ್ನಾನ ಮಾಡುತ್ತಿದ್ದ ಯುವಕ ಹೇಳಿದ್ದಾನೆ. ವಿಡಿಯೋ ಬಗ್ಗೆ ಜನ ಆಕ್ರೋಶ ವ್ಯಕ್ದತಪಡಿಸಿದ್ದು, ರೆಸ್ಟೋರೆಂಟ್ ಮ್ಯಾನೇಜರ್‌ ಹಾಗೂ ಯುವಕನನ್ನೂ ಕೆಲಸದಿಂದ ತೆಗೆಯಬೇಕೆಂದು ಒತ್ತಾಯಿಸಿದ್ದಾರೆ.

ಅಕ್ರಮ ಸಂಬಂಧ: ಪತ್ನಿಯ ಗುಪ್ತಾಂಗಕ್ಕೆ ಗಮ್ ಹಾಕಿದ ಪತಿ..!