userpic
user icon
0 Min read

ಅಣ್ಣಾ ತುಂಬಾ ಲಾಸ್ ಆಗಿದೆ ಸಾಲ ಕೊಡಿ, ಪಾಕ್ ಮನವಿ ವೈರಲ್ ಬೆನ್ನಲ್ಲೇ ಹ್ಯಾಕ್ ಸಮರ್ಥನೆ

Pakistan seek more loan after hefty losses official clarifies account hack

Synopsis

ಪಾಕಿಸ್ತಾನ ಈಗಾಗಲೇ ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಸಾಲ ಕೇಳಿದೆ. ಇದರ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಭಾರತದ ಆಪರೇಶನ್ ಸಿಂದೂರ್ ಬಳಿಕ ಪಾಕಿಸ್ತಾನ ಅಂತಾರಾಷ್ಟ್ರೀಯ ಪಾಲುದಾರರ ರಾಷ್ಟ್ರಗಳಲ್ಲಿ ತುಂಬಾ ನಷ್ಟ ಆಗಿದೆ. ಸಾಲ ಬೇಕು ಎಂದು ಮನವಿ ಮಾಡಿದೆ. ಪಾಕಿಸ್ತಾನದ ಭಾರಿ ಮುಖಭಂಗ ಅನುಭವಿಸುತ್ತಿದ್ದಂತೆ ನಮ್ಮ ಖಾತೆ ಹ್ಯಾಕ್ ಆಗಿದೆ ಎಂದು ಸಮರ್ಥನೆ ನೀಡಿದೆ.

ಇಸ್ಲಾಮಾಬಾದ್(ಮೇ.09) ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹೇಗಿದ ಅನ್ನೋದು ಜಗತ್ತಿಗೆ ತಿಳಿದಿದೆ. ಪಾಕಿಸ್ತಾನದ ಸಾಲ ಮೇಲೆ ನಡೆಯುತ್ತಿರುವ ದೇಶ. ಈಗಾಗಲೇ ಅಂತಾರಾಷ್ಟ್ರೀಯ ಹಣಕಾಸು ನಿಧಿ ಬಳಿ ಸಾಲ ಕೇಳಿದೆ. ಈ ಸಾಲ ನೀಡಬೇಕೋ, ಬೇಡವೋ ಅನ್ನೋದು ಇಂದು ನಿರ್ಧಾರವಾಗಲಿದೆ. ಹಣಕಾಸು ನಿಧಿ ಸಾಲ ನೀಡಲು ಹಲವು ಪ್ರಶ್ನೆಗಳನ್ನು ಪಾಕಿಸ್ತಾನಕ್ಕೆ ಕೇಳಿದೆ. ಇದರಿಂದ ಐಎಂಎಫ್‌ನಿಂದ ಸಾಲ ಸಿಗುವುದು ಕಷ್ಟ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬೆನ್ನಲ್ಲೆ ಪಾಕಿಸ್ತಾನದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪಾಕಿಸ್ತಾನ ಜೊತೆಗಿನ ಅಂತಾರಾಷ್ಟ್ರೀಯ ಪಾಲುದಾರರ ರಾಷ್ಟ್ರಗಳಲ್ಲಿ ನಷ್ಟಕ್ಕೆ ಹೆಚ್ಚಿನ ಸಾಲ ನೀಡುವಂತೆ ಮನವಿ ಮಾಡಿ ಟ್ವೀಟ್ ಮಾಡಲಾಗಿದೆ. ಈ ಟ್ವೀಟ್ ಪಾಕಿಸ್ತಾನಕ್ಕೆ ಭಾರಿ ಮುಖಭಂಗ ತರಿಸಿದೆ. ಟ್ವೀಟ್ ವೈರಲ್ ಆಗಿ ಟ್ರೋಲ್ ಆಗುತ್ತಿದ್ದಂತೆ ಇದೀಗ ತಮ್ಮ ಟ್ವಿಟರ್ ಖಾತೆ ಹ್ಯಾಕ್ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಿಕ್ಷೆ ಬೇಡುತ್ತಿದೆ ಪಾಕಿಸ್ತಾನ
ಪಾಕಿಸ್ತಾನ ಆರ್ಥಿಕ ವ್ಯವಹಾರಗಳ ವಿಭಾಗದ ಅಧಿಕೃತ ಎಕ್ಸ್ ಖಾತೆಯಿಂದ ಈ ಟ್ವೀಟ್ ಮಾಡಲಾಗಿದೆ. ಪಾಕಿಸ್ತಾನ ಹಲವು ರಾಷ್ಟ್ರಗಳ ಜೊತೆಗೆ ಮಾಡಿಕೊಂಡ ಮನವಿಯ ಸಾರಾಂಶವನ್ನು ಟ್ವೀಟ್ ಮೂಲಕ ಪೋಸ್ಟ್ ಮಾಡಿದೆ. ಭಾರತ ವಿರುದ್ದ ಸಂಘರ್ಷ ಹೆಚ್ಚಾಗುತ್ತಿದ್ದಂತೆ ಪಾಕಿಸ್ತಾನಕ್ಕೆ ಎಲ್ಲೆಡೆಗಳಿಂದ ಹಿನ್ನಡೆಯಾಗುತ್ತಿದೆ. ಭಾರತೀಯ ಸೇನೆಯ ಹೊಡೆತಕ್ಕೆ ತ್ತರಿಸಿರುವ ಪಾಕಿಸ್ತಾನಕ್ಕೆ ಇತ್ತ ಆರ್ಥಿಕ ಸಂಕಷ್ಟದಲ್ಲಿ ಮುಳುಗಿದೆ. ಇದರ ಬೆನ್ನಲ್ಲೇ ಟ್ವೀಟ್ ಪಾಕಿಸ್ತಾನಕ್ಕೆ ತೀವ್ರ ಮುಖಭಂಗವನ್ನುಂಟು ಮಾಡಿತ್ತು. 

ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ 7 ಉಗ್ರರ ಹತ್ಯೆ: ಪಾಕ್‌ ಸೇನಾ ನೆಲೆಯೂ ಧ್ವಂಸ

ಪಾಕಿಸ್ತಾನ ಅಧಿಕೃತ ಟ್ವೀಟ್‌ನಲ್ಲಿ ಏನಿದೆ?
ಶತ್ರುಗಳಿಂದ ಉಂಟಾದ ಭಾರೀ ನಷ್ಟವನ್ನು ಸರಿದೂಗಿಸಲು ಅಂತರಾರಾಷ್ಟ್ರೀಯ ಪಾಲುದಾರರಿಂದ ಹೆಚ್ಚಿನ ಸಾಲಗಳನ್ನು ನೀಡುವಂತೆ ಪಾಕಿಸ್ತಾನ ಸರ್ಕಾರ ಮನವಿ ಮಾಡಿದೆ. ದಾಳಿಯಿಂದ ಆಗಿರುವ ಅಪಾರ ಪ್ರಮಾಣದ ನಷ್ಟ, ಯುದ್ಧದ ಪರಿಸ್ಥಿತಿಯಲ್ಲಿ ಷೇರು ಮಾರುಕಟ್ಟೆ ಕುಸಿತವು ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರಿದೆ. ಭಾರೀ ನಷ್ಟವನ್ನು ಸರಿದೂಗಿಸಲು ಹೆಚ್ಚಿನ ಹಣದ ಅವಶ್ಯಕತೆಯಿದೆ. ದಯವಿಟ್ಟು ಸಹಾಯ ಮಾಡಿ ಎಂದು ಟ್ವೀಟ್‌ನಲ್ಲಿ ಹೇಳಿದೆ.

ಖಾತೆ ಹ್ಯಾಕ್ ಎಂದು ಪಾಕಿಸ್ತಾನ ಸ್ಪಷ್ಟನೆ
ಪಾಕಿಸ್ತಾನ ಟ್ವೀಟ್ ವೈರಲ್ ಆಗುತ್ತಿದ್ದಂತೆ ಪಾಕಿಸ್ತಾನ ಎಚ್ಚೆತ್ತುಕೊಂಡಿದೆ. ಎಕ್ಸ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಪಾಕಿಸ್ತಾನ ಯಾವುದೇ ರೀತಿಯ ಅಂತಾರಾಷ್ಟ್ರೀಯ ಪಾಲುದಾರರಿಂದ ಸಾಲ ಕೇಳಿಲ್ಲ. ಪಾಕಿಸ್ತಾನದ ಖಾತೆಯನ್ನು ಹ್ಯಾಕ್ ಮಾಡಿ ಈ ಕೃತ್ಯ ಮಾಡಿದ್ದಾರೆ.ಪಾಕಿಸ್ತಾನಕ್ಕೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಈ ಮೂಲಕ ಪಾಕಿಸ್ತಾನ ಸರ್ಕಾರ ಸ್ಪಷ್ಟಪಡಿಸುತ್ತಿದೆ ಎಂದಿದೆ.

ಪಾಕಿಸ್ತಾನವು ಹಣದುಬ್ಬರ ಮತ್ತು ಬೆಳವಣಿಗೆಯಲ್ಲಿ ಸ್ವಲ್ಪ ಪ್ರಗತಿ ಸಾಧಿಸಿದ್ದರೂ, ದೇಶದ ಆರ್ಥಿಕತೆಯು ಇನ್ನೂ ದುರ್ಬಲವಾಗಿದೆ. ಸರ್ಕಾರಿ ಆದಾಯದ ಸುಮಾರು 50% ಬಡ್ಡಿ ಪಾವತಿ ಮತ್ತು ಸಾರ್ವಜನಿಕ ಸಾಲಕ್ಕೆ ಹೋಗುತ್ತದೆ, ಅಂದರೆ GDPಯ 70% ಕ್ಕಿಂತ ಹೆಚ್ಚು! ಹಣದುಬ್ಬರ ತೀವ್ರವಾಗಿ ಏರುತ್ತಿರುವುದರಿಂದ ಪಾಕಿಸ್ತಾನ ಈಗಾಗಲೇ ದೊಡ್ಡ ಆರ್ಥಿಕ ಬಿಕ್ಕಟ್ಟಿನಲ್ಲಿದೆ. ಭಾರತದ ವಿರುದ್ಧ ಮುಂದಿನ ಕ್ರಮಗಳು ಪಾಕಿಸ್ತಾನಕ್ಕೆ ಲಭ್ಯವಿರುವ ಹಣಕಾಸಿನ ನೆರವನ್ನು ಕಡಿತಗೊಳಿಸಬಹುದು. ಪಾಕಿಸ್ತಾನದ ವಿದೇಶಿ ವಿನಿಮಯ ನಿಕ್ಷೇಪಗಳು ಪ್ರಸ್ತುತ ಕೇವಲ 15 ಬಿಲಿಯನ್ ಡಾಲರ್‌ಗಳಷ್ಟಿವೆ. ಮುಂಬರುವ ವರ್ಷಗಳಲ್ಲಿ ಸಾಲಗಳನ್ನು ತೀರಿಸಲು ಸಹ ಇದು ಸಾಕಾಗುವುದಿಲ್ಲ. ಹಣಕಾಸಿನ ನೆರವು ಸಿಗದಿದ್ದರೆ ಆರ್ಥಿಕ ಬಿಕ್ಕಟ್ಟು ಉಂಟಾಗಬಹುದು.

Pakistan seek more loan after hefty losses official clarifies account hack

ಇಂದು ಐಎಂಎಫ್ ನಿರ್ಧಾರ
ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ಮತ್ತೆ ಸಾಲ ಕೇಳಿದೆ. ಕೆಲ ತಿಂಗಳ ಹಿಂದೆ ಪಾಕಿಸ್ತಾನ ಅಂತಾರಾಷ್ಟ್ರೀಯ ಹಣಕಾಸು ನಿಧಿಗೆ ಸಾಲ ಕೇಳಿದೆ. ಇದರ ನಡುವೆ ಪೆಹಲ್ಗಾಂ ದಾಳಿ ಸಂಭವಿಸಿದೆ. ಇದಕ್ಕೆ ಪ್ರತಿಯಾಗಿ ಭಾರತ ಆಪರೇಶನ್ ಸಿಂದೂರ್ ದಾಳಿ ನಡೆಸಿದೆ. ಇಷ್ಟೇ ಅಲ್ಲ ಐಎಂಎಫ್‌ಗೆ ಮನವಿಯೊಂದನ್ನು ಭಾರತ ಸಲ್ಲಿಸಿದೆ. ಪಾಕಿಸ್ತಾನಕ್ಕೆ ನೀಡುವ ಹಣಕಾಸು ನೆರವನ್ನು ತನ್ನ ಆರ್ಥಿಕತೆಗೆ ಬಳಸಿಕೊಳ್ಳುತ್ತಿಲ್ಲ, ಆರ್ಥಿಕ ಸಂಕಷ್ಟದಿಂದ ಪಾರಾಗಲು ಈ ಹಣ ವಿನಿಯೋಗವಾಗುತ್ತಿಲ್ಲ. ಈ ಹಣವನ್ನು ಭಯೋತ್ಪಾದಕರು, ಭಾರತ ವಿರುದ್ದ ಕಾರ್ಯಾಚರಣೆಗೆ ಬಳಕೆ ಮಾಡುತ್ತಿದೆ. ಹೀಗಾಗಿ ಪಾಕಿಸ್ತಾನಕ್ಕೆ ಹಣಕಾಸು ನೆರವು ನೀಡಬಾರದು ಎಂದು ಮನವಿ ಮಾಡಿದೆ. ಈ ಕುರಿತು ಇಂದು ಹಣಕಾಸು ನಿಧಿ ನಿರ್ಧಾರ ಕೈಗೊಳ್ಳಲಿದೆ.

ಪಾಕ್‌ ಸಂಸತ್ತಿನಲ್ಲಿ ಟಿಪ್ಪು ಸುಲ್ತಾನ್‌ ಮಾತು, ನಮ್ಮ ಪ್ರಧಾನಿ 'ಪುಕ್ಕಲ' ಎಂದ ಪಾಕ್‌ ಸಂಸದ!
 

Download App

Latest Videos