ಅಯ್ಯೋ ಪಾಪಿ.. ಮಗು ಹುಟ್ಟಿದ ಕೆಲ ಕ್ಷಣಗಳಲ್ಲಿ ಇರಿದು ಕೊಂದ ತಾಯಿ

ಅಮೆರಿಕದಲ್ಲಿ ತಾಯಿಯೊಬ್ಬಳು ತನ್ನ ಮಗುವನ್ನು ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಇರಿದು ಕೊಂದಿದ್ದಾಳೆ. ಆಕೆ ಲೋಹದ ವಸ್ತುವಿನಿಂದ ಮಗುವಿಗೆ ಇರಿದು, ನಂತರ ಕಸದ ಚೀಲದಲ್ಲಿ ಹಾಕಿದ್ದಳು

New Mother in the US Arrested for Stabbing Newborn to Death

ತಾಯಿಗೆ ನಮ್ಮಲ್ಲಿ ದೇವರ ಸ್ಥಾನವಿದೆ. ತಾಯಿಗಿಂತ ಬಂಧುವಿಲ್ಲ ಎಂಬ ಗಾದೆ ಮಾತೇ ಇದೆ. ಹಾಗೆಯೇ ಇನ್ನು ಅನೇಕ ಮಕ್ಕಳಿಲ್ಲದ ವಿವಾಹಿತ ಜೋಡಿ ಮಕ್ಕಳಿಲ್ಲವೆಂದು ಸದಾ ಕೊರಗುತ್ತಿರುತ್ತಾರೆ. ಆದರೆ ಇಲ್ಲೊಬ್ಬಳು ಪಾಪಿ ತಾಯಿ ಮಗು ಜನಿಸಿದ ಕೆಲವೇ ಕ್ಷಣಗಳಲ್ಲಿ ಮಗುವನ್ನು ಇರಿದು ಕೊಂದಿದ್ದಾಳೆ. ಅಮೆರಿಕಾದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಪತ್ರವನ್ನು ತೆರೆಯುವುದಕ್ಕೆ ಬಳಸುವಂತಹ ಲೋಹದ ಒಪನರ್‌ನಿಂದ ಆಕೆ (metal letter opener) ಆಕೆ ಆಗಷ್ಟೇ ಜನಿಸಿದ ಕಂದನ ಕತೆ ಮುಗಿಸಿದ್ದಾಳೆ. ಬಳಿಕ ಶವವನ್ನು ಕಸ ಎಸೆಯುವುದಕ್ಕೆ ಬಳಸುವ ಬ್ಯಾಗ್‌ನಲ್ಲಿ ತುಂಬಿದ್ದಾಳೆ. 

ಹೀಗೆ ಮಗುವನ್ನು ಕೊಂದ ಪಾಪಿ ತಾಯಿಯನ್ನು ಎನ್ ಟಿ ಎನ್‌ಗೊ( An T. Ngo) ಎಂದು ಗುರುತಿಸಲಾಗಿದೆ. ಸೌತ್ ಕೆರೋಲಿನಾ ಮೂಲದ 31 ವರ್ಷದ ಈ ಮಹಿಳೆ ಮಾರ್ಚ್ 7 ರಂದು ಮಗುವಿಗೆ ಜನ್ಮ ನೀಡಿದ್ದಳು. ತನ್ನ ಅಪಾರ್ಟ್‌ಮೆಂಟ್‌ನ ಕಟ್ಟಡದಲ್ಲೇ ಈಕೆ ಮಗುವಿಗೆ ಜನ್ಮ ನೀಡಿದ್ದು, ಇದಾಗಿ ಸೆಕೆಂಡ್‌ನಲ್ಲಿ ಈಕೆ ಹೊಕ್ಕುಳ ಬಳಿಯನ್ನು ಈ ಲೆಟರ್ ಒಪನರ್‌ನಲ್ಲಿಯೇ ಕತ್ತರಿಸಿದ್ದಾಳೆ. ಬಳಿಕ ಅದರಲ್ಲೇ ಹಲವು ಬಾರಿ ಮಗುವಿಗೆ ಇರಿದು ಕೊಂದಿದ್ದಾಳೆ. 

ಘಟನೆಯ ತನಿಖೆಗಿಳಿದ ಈಸ್ಲಿ ಪೊಲೀಸ್ ಮುಖ್ಯಸ್ಥ ಬ್ರಾಂಡನ್ ಲೈನರ್ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ನಾನು ನಿಮ್ಮೊಂದಿಗೆ ಪ್ರಾಮಾಣಿಕವಾಗಿ ಹೇಳುತ್ತೇನೆ. ನಾನು  ಎರಡೂವರೆ ದಶಕಗಳಿಂದ ಈ ವೃತ್ತಿ ಮಾಡುತ್ತಿದ್ದೇನೆ. ಆದರೆ ಇಷ್ಟು ಭಯಾನಕವಾದದ್ದನ್ನು ನಾನು ಎಂದಿಗೂ ನೋಡಿಲ್ಲ. ಇಷ್ಟು ಕೆಟ್ಟದ್ದನ್ನು ನಾನು ಎಂದಿಗೂ ನೋಡಿಲ್ಲ ಎಂದು ಆಘಾತ ವ್ಯಕ್ತಪಡಿಸಿದ ಬಗ್ಗೆ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. 

ಮಗುವನ್ನು ಇರಿದು ಕೊಂದ ನಂತರ, 31 ವರ್ಷದ ಮಹಿಳೆ ನವಜಾತ ಶಿಶುವಿನ ದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ಇರಿಸಿ ಅವಶೇಷಗಳನ್ನು ಮತ್ತೊಂದು ಕೋಣೆಯಲ್ಲಿ ಇಟ್ಟಿದ್ದಳು, ಆದರೆ  ಮಹಿಳೆಯ ಗೆಳೆಯ ಪೊಲೀಸರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದು, ನವಜಾತ ಶಿಶುವನ್ನು ಹುಡುಕಲು ಅಧಿಕಾರಿಗಳು ಬಂದು ನೋಡಿದಾಗ ಮಗು ಸಾವನ್ನಪ್ಪಿತ್ತು ಇತ್ತ ಮಗುವನ್ನು ಕೊಂದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯ್ತು ಎಂದು ಪೊಲೀಸರು ತಿಳಿಸಿದ್ದಾರೆ. 

ಈ ಮಗುವನ್ನು ಹೀಗೆ ಕ್ರೂರವಾಗಿ ಕೊಂದವರು ಮಿಸ್ ಎನ್‌ಗೋ ಎಂಬುದು ಬಹಳ ಸ್ಪಷ್ಟವಾಗಿತ್ತು ಎಂದು ಈಸ್ಲಿ ಪೊಲೀಸ್ ಮುಖ್ಯಸ್ಥರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ನಾವು ಈ ಮಗುವಿನ ಪರವಾಗಿ ಮಾತನಾಡುತ್ತೇವೆ, ಈ ಮಗುವಿಗೆ ನ್ಯಾಯ ಸಿಗುವಂತೆ ನಾವು ಖಚಿತಪಡಿಸಿಕೊಳ್ಳುತ್ತೇವೆ. ಅದಕ್ಕೆ ಬದುಕುವ ಸಣ್ಣ ಅವಕಾಶವೂ ಸಿಗಲಿಲ್ಲ ಎಂದು ಅಧಿಕಾರಿಗಳೇ ಬೇಸರ ಪಟ್ಟಿದ್ದಾರೆ. ಇದಾದ ನಂತರ ಮಹಿಳೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ನಂತರ ಪೊಲೀಸರು ಮಾರ್ಚ್ 11 ರಂದು ಬಂಧಿಸಿದ್ದಾರೆ. ಮಕ್ಕಳ ಮೇಲಿನ ದೌರ್ಜನ್ಯ, ಕೊಲೆ ಆರೋಪ ಹೊರಿಸಲಾಗಿದ್ದು, ಜಾಮೀನು ನಿರಾಕರಿಸಲಾಗಿದೆ ಎಂದು ಮಾಧ್ಯಮ ವರದಿ ಮಾಡಿದೆ. ಮೇ 15 ರಂದು ಅವರ ಮುಂದಿನ ನ್ಯಾಯಾಲಯದ ಹಾಜರಾತಿಗೆ ಮುಂಚಿತವಾಗಿ ಅವರನ್ನು ಕಸ್ಟಡಿಯಲ್ಲಿ ಇರಿಸಲಾಗಿದೆ.

Latest Videos
Follow Us:
Download App:
  • android
  • ios