ಯಾಂಗೊ​ನ್(ಮಾ.04)‌: ಪ್ರಜಾ​ಸ​ತ್ತಾ​ತ್ಮಕ ಸರ್ಕಾ​ರ​ ವಜಾ​ಗೊ​ಳಿಸಿ ದೇಶದ ಆಡ​ಳಿ​ತ​ವನ್ನು ತನ್ನ ಕೈಗೆ​ತ್ತಿ​ಕೊಂಡ ಸೇನಾ​ಡ​ಳಿ​ತದ ವಿರುದ್ಧ ಮ್ಯಾನ್ಮಾರ್‌ ಜನತೆ ಬೀದಿ​ಗಿ​ಳಿ​ದಿ​ದ್ದಾರೆ. ಈ ಹಿನ್ನೆ​ಲೆ​ಯಲ್ಲಿ ಈ ಪ್ರತಿ​ಭ​ಟ​ನಾಕಾ​ರ​ರನ್ನು ಬೆದ​ರಿ​ಸ​ಲು ಮ್ಯಾನ್ಮಾರ್‌ ಭದ್ರತಾ ಪಡೆ ಹಿಂಸೆಯ ಹಾದಿ ಹಿಡಿ​ದಿದ್ದು, ಸೇನೆಯ ದಾಳಿ​ಯಲ್ಲಿ 33 ಮಂದಿ ಪ್ರತಿ​ಭ​ಟ​ನಾ​ಕಾ​ರರು ಸಾವ​ನ್ನ​ಪ್ಪಿ​ದ್ದಾರೆ ಎಂದು ಸ್ಥಳೀಯ ಮಾಧ್ಯ​ಮ​ಗಳು ಮತ್ತು ಸಾಮಾ​ಜಿಕ ಮಾಧ್ಯ​ಮ​ಗ​ಳಲ್ಲಿ ವರ​ದಿ​ಯಾ​ಗಿದೆ.

ತನ್ಮೂ​ಲಕ ಫೆ.1ರಂದು ಮಿಲಿ​ಟರಿ ಆಡ​ಳಿತ ಜಾರಿ​ಯಾದ ಬಳಿಕ ನಡೆ​ಯು​ತ್ತಿ​ರುವ ಪ್ರತಿ​ಭ​ಟ​ನೆ​ಯಲ್ಲಿ ಸಾವ​ನ್ನ​ಪ್ಪಿ​ದ​ವರ ಸಂಖ್ಯೆ 51ಕ್ಕೆ ಏರಿ​ಕೆ​ಯಾ​ಗಿದೆ. ಈ ಬಗ್ಗೆ ವಿಶ್ವ​ಸಂಸ್ಥೆಯ ಮಾನವ ಹಕ್ಕು​ಗಳ ಕಚೇರಿ ಕಳ​ವಳ ವ್ಯಕ್ತ​ಪ​ಡಿ​ಸಿದೆ.

ಮಿಲಿ​ಟರಿ ಆಡ​ಳಿ​ತದ ವಿರುದ್ಧ ದೇಶದ ವಿವಿಧ ನಗರಗ​ಳಲ್ಲಿ ಭಾರೀ ಪ್ರಮಾ​ಣದ ಪ್ರತಿ​ಭ​ಟ​ನೆ​ಗಳು ನಡೆ​ಯು​ತ್ತಿದ್ದು, ಪ್ರತಿ​ಭ​ಟ​ನಾ​ಕಾ​ರರನ್ನು ಚದು​ರಿ​ಸಲು ಮ್ಯಾನ್ಮಾರ್‌ ಭದ್ರತಾ ಪಡೆ​ಗಳು ಗುಂಡಿನ ದಾಳಿ, ರಬ್ಬರ್‌ ಬುಲೆಟ್‌, ಅಶ್ರು​ವಾಯು ದಾಳಿ​ಗಳ ಮೊರೆ ಹೋಗಿದೆ.

ಫೆ.1ರಂದು ನಡೆದ ಕ್ಷಿಪ್ರ​ಕ್ರಾಂತಿ​ಯ ಭಾಗ​ವಾಗಿ ಸರ್ಕಾ​ರ​ವನ್ನು ವಜಾ​ಗೊ​ಳಿ​ಸಿ​ದ ಮಿಲಿ​ಟರಿ ಆಡ​ಳಿ​ತ​ವನ್ನು ತನ್ನ ತೆಕ್ಕೆಗೆ ತೆಗೆ​ದು​ಕೊಂಡಿತು. ಆ ಬಳಿಕ ಪ್ರಜಾ​ಪ್ರ​ಭು​ತ್ವದ ಹೋರಾ​ಟ​ಗಾರ್ತಿ ಆಂಗ್‌ ಸ್ಯಾನ್‌ ಸೂಕಿ ಅವ​ರನ್ನು ಬಂಧ​ನ​ದ​ಲ್ಲಿ​ಟ್ಟಿತ್ತು.