ಲಂಡನ್[ಜ.07]: ರೆನ್ಹಾರ್ಡ್ ಸನಾಗಾನನ್ನು ಬ್ರಿಟನ್ ನ 'ಖತರ್ನಾಕ್ ರೇಪಿಸ್ಟ್' ಎನ್ನಲಾಗುತ್ತೆ. ಇತ್ತೀಚೆಗಷ್ಟೇ 159 ಲೈಂಗಿಕ ಅಪರಾಧ ನಡೆಸಿದ್ದ ಈ ಅಪರಾಧಿಯ ಗುರುತು ಬಹಿರಂಗಪಡಿಸಲಾಗಿದೆ. 36 ವರ್ಷದ ಈ ವ್ಯಕ್ತಿ ಎಸಗಿರುವ 159 ಲೈಂಗಿಕ ಅಪರಾಧಗಳಲ್ಲಿ, 136 ರೇಪ್ ಪ್ರಿಕರಣಗಳಾಗಿವೆ. ನ್ಯಾಯಾಲಯದನ್ವಯ ಈತ 48 ಪುರುಷರನ್ನು ಪುಸಲಾಯಿಸಿ ಫ್ಲ್ಯಾಟ್ ಗೆ ಕರೆದೊಯ್ದು, ಅತ್ಯಾಚಾರ ನಡೆಸಿದ್ದಾನೆ. ಪೊಲೀಸರು ನೀಡಿರುವ ಮಾಹಿತಿ ಅನ್ವಯ 190 ಪುರುಷರು ಈತನ ಹುಚ್ಚಾಟಕ್ಕೆ ಗುರಿಯಾಗಿದ್ದಾರೆ.

ಇಂಡೋನೇಷ್ಯಾದ ವ್ಯಕ್ತಿ ಈತ

ಬ್ರಿಟನ್ ನಲ್ಲಿರುವ ಇಂಡೋನೇಷ್ಯಾದ ಪ್ರಜೆ ರೆನ್ಹಾರ್ಡ್ ಸನಾಗಾನನ್ನು ನಾಲ್ಕು ವಿಭಿನ್ನ ಮೊಕದ್ದಮೆಗಳಲ್ಲಿ 136 ಅತ್ಯಾಚಾರ, 8 ಅತ್ಯಾಚಾರಕ್ಕೆ ಯತ್ನ ಹಾಗೂ 14 ಅನ್ಯ ಲೈಂಗಿಕ ಅಪರಾಧಗಳಲ್ಲಿ ದೋಷಿ ಎಂದು ಪರಿಗಣಿಸಲಾಗಿದೆ. ಆತ 190 ಪುರುಷರನ್ನು ತನ್ನ ಗುರಿಯಾಗಿಸಿಕೊಂಡಿದ್ದ ಎಂಬುವುದಕ್ಕೆ ಸಾಕ್ಷಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಈತ ಈ ಮೊದಲೇ 2 ಪ್ರಕರಣಗಳಿಗೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.

ಅಪ್ರಾಪ್ತ ಬಾಲಕಿಗೆ ಮುತ್ತಿಟ್ಟವಗೆ 8 ವರ್ಷ ಜೈಲು

ಪುರುಷರನ್ನು ಹೀಗೆ ತನ್ನ ಗುರಿಯಾಗಿಸುತ್ತಿದ್ದ

ವರದಿಗಳನ್ವಯ ರೆನ್ಹಾರ್ಡ್ ನೈಟ್ ಕ್ಲಬ್ ಹಾಗೂ ಬಾರ್ ನಿಂದ ಹೊರ ಬರುವ ಪುರುಷರಿಗಾಗಿ ಕಾಯುತ್ತಿದ್ದ. ಬಳಿಕ ಆತನ ಅವರನ್ನು ಪುಸಲಾಯಿಸಿ ತನ್ನ ಫ್ಲಾಟ್ ಗೆ ಕರೆದೊಯ್ಯುತ್ತಿದ್ದ. ತಾನು ಆಯ್ಕೆ ಮಾಡಿಕೊಳ್ಳುತ್ತಿದ್ದ ಪುರುಷರನ್ನು ಓಲೈಸಲು ಡ್ರಿಂಕ್ಸ್ ಅಥವಾ ಟ್ಯಾಕ್ಸಿ ಕೂಡಾ ಕರೆಸುತ್ತಿದ್ದ. ಇನ್ನು ಅತ್ಯಾಚಾರಕ್ಕೂ ಮುನ್ನ ವರನ್ನು ಪ್ರಜ್ಞಾಹೀನರನ್ನಾಗಿಸುತ್ತಿದ್ದ. ಹೀಗಾಗಿ ಆತ ರೇಪ್ ಮಾಡಿದ್ದಾನೆಂಬ ವಿಚಾರ ಹಲವರಿಗೆ ತಿಳಿಯುತ್ತಿರಲಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಅರೆಸ್ಟ್ ಆಗುವುದಕ್ಕೂ ಮೊದಲು PhD ಮಾಡುತ್ತಿದ್ದ

ಹಲವಾರು ವರ್ಷದಿಂದ ಪುರುಷರನ್ನು ಅತ್ಯಾಚಾರ ಮಾಡುತ್ತಿದ್ದ ರೆನ್ಹಾರ್ಡ್ ಅರೆಸ್ಟ್ ಆಗುವುದಕ್ಕೂ ಮೊದಲು 'ಯುನಿವರ್ಸಿಟಿ ಆಫ್ ಲೀಡ್ಸ್'ನಲ್ಲಿ Ph.D ಮಾಡುತ್ತಿದ್ದ. ಆದರೆ 2017ರಲ್ಲಿ ರೆನ್ಹಾರ್ಡ್ ಅತ್ಯಾಚಾರ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬನಿಗೆ ಪ್ರಜ್ಞೆ ಬಂದ ಪರಿಣಾಮ ಈತನ ಬಂಡವಾಳ ಬಯಲಾಗಿತ್ತು. ಕೂಡಲೇ ಆತ ಪೊಲೀಸರನ್ನು ಕರೆದಿದ್ದ. ಸ್ಥಲಕ್ಕಾಗಮಿಸಿದ್ದ ಪೊಲೀಸರು ರೆನ್ಹಾರ್ಡ್ ಮೊಬೈಲ್ ಪರಿಶೀಲಿಸಿದಾಗ ಎಲ್ಲವೂ ಬಹಿರಂಗಗೊಂಡಿತ್ತು. 

‘ಅತ್ಯಾಚಾರ ಎಸಗಿ ಇಸ್ಲಾಂಗೆ ಮತಾಂತರಕ್ಕೆ ಒತ್ತಡ’

ಬಿಡುಗಡೆಗೊಳಿಸಿದ್ರೆ ಬಹಳ ಅಪಾಯ

ತನಿಖೆಯಲ್ಲಿ ರೆನ್ಹಾರ್ಡ್ ಸಲಿಂಗಿಗಳನ್ನು ತನ್ನ ಗುರಿಯಾಗಿಸುತ್ತಿರಲಿಲ್ಲ ಎಂಬುವುದು ಬಹಿಎರಂಗಗೊಂಡಿದೆ. ಬ್ರಿಟನ್ ನ ನ್ಯಾಯಾಂಗ ಇತಿಹಾದಲ್ಲೇ ರೆನ್ಹಾರ್ಡ್ ಅತ್ಯಂತ ಡೇಂಜರಸ್ ರೇಪಿಸ್ಟ್ ಎನ್ನಲಾಗಿದೆ. ಸೋಮವಾರದಂದು ನಡೆದ ವಿಚಾರಣೆ ವೇಳೆ ರೆನ್ಹಾರ್ಡ್ ನನ್ನು ಬಿಡುಗಡೆಗೊಳಿಸುವುದು ಅತ್ಯಂತ ಅಪಾಯಕಾರಿ ಎಂದು ನ್ಯಾಯಮೂರ್ತಿ ತಿಳಿಸಿದ್ದಾರೆ.

ಇನ್ನು ನ್ಯಾಯಾಲಯದಲ್ಲಿ ತನ್ನ ಪರ ವಾದ ಮಂಡಿಸಿದ್ದ ರೆನ್ಹಾರ್ಡ್ ತಾನು ಪುರುಷರ ಅನುಮತಿ ಪಡೆದೇ ಹೀಗೆ ಮಾಡುತ್ತಿದ್ದೆ. ಅವರ ಅನುಮತಿ ಪಡೆದ ಬಳಿಕವೇ ವಿಡಿಯೋ ಚಿತ್ರೀಕರಿಸುತ್ತಿದ್ದೆ ಎಂದಿದ್ದಾರೆ. ಆದರೆ ವಾದ ಆಲಿಸಿದ ನ್ಯಾಯಮೂರ್ತಿಗಳು ಇದು ಸುಳ್ಳು ಎಂದಿದ್ದಾರೆ.

ಕತ್ತರಿಸಿ ಹಾಕಿದ ಮಾನವ ದೇಹದ ಕಾಲುಗಳು ಪತ್ತೆ : ತನಿಖೆಗಿಳಿದ ಪೊಲೀಸರು