ಕುಗೋ ಕೋಳಿಗೆ ಖಾರ ಮಸಾಲೆ  ಹಾಡು ನೀವು ಕೇಳಿರುತ್ತೀರಿ. ಕೋಳಿಗೆ ಖಾರ ಮಸಾಲೆ ಅಂದರೆ ಅದು ಖಾರವೇ ಆಗಿರಬೇಕು ಅನ್ನೋದು ಹಲವರ ಕಂಡೀಷನ್. ಇದಲ್ಲಿ ಸ್ವಲ್ಪ ಹೆಚ್ಚು ಕಮ್ಮಿ ಅದರೂ ಕತೆ ಮುಗೀತು. ಇದೀಗ ಚಿಕನ್ ಮಸಾಲೆ ಖಾರ ಆಗಿಲ್ಲ ಎಂದು ಪತ್ನಿಯನ್ನು ಮೊದಲ ಮಹಡಿಯಿಂದ ಕೆಳಕ್ಕೆ ದಬ್ಬಿದ ಘಟನೆ ನಡೆದಿದೆ. ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ಲಾಹೋರ್(ಜು.11) ಕಾಫಿ ಮಾಡಿಲ್ಲ, ಊಟ ಬಿಸಿಯಾಗಿಲ್ಲ, ಸಾರು ಸರಿಯಾಗಿಲ್ಲ ಎಂದು ಡಿವೋರ್ಸ್ ನೀಡಿದ ಘಟನೆ, ಹಲ್ಲೆ ನಡೆಸಿದ ಘಟನೆಗಳಿಗೇನು ಕಡಿಮೆ ಇಲ್ಲ. ಈ ಸಾಲಿಗೆ ಮತ್ತೊಂದು ಸೇರಿಕೊಂಡಿದೆ. ಪತ್ನಿ ಮಾಡಿದ ಕೋಳಿ ಸಾರಿನ ಖಾರ ಮಿತವಾಗಿದೆ. ಇಷ್ಟೇ ನೋಡಿ, ಪತಿ ಹಾಗೂ ಪತಿಯ ಕುಟುಂಬಸ್ಥರ ಪಿತ್ತ ನೆತ್ತಿಗೇರಿದೆ. ಚಿಕನ್‌ಗೆ ಖಾರ ಮಾಸಾಲೆ ಯಾಕಿಲ್ಲ ಎಂದು ಪತ್ನಿ ವಿರುದ್ಧ ಕೆಂಡಾಮಂಡಲವಾದ ಪತಿ ಹಾಗೂ ಅತ್ತೆ ಜಗಳ ಶುರುಮಾಡಿದ್ದಾರೆ. ಇಷ್ಟಕ್ಕೆ ನಿಂತಿಲ್ಲ, ಮೊಹಲ ಮಹಡಿಯಿಂದ ಪತ್ನಿಯನ್ನು ಕಳಕ್ಕೆ ತಳ್ಳಿದ ಘಟನೆ ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದಿದೆ.

ಮಹಿಳೆ ಮೊದಲ ಮಹಡಿಯಿಂದ ಕೆಳಕ್ಕೆ ಬೀಳುತ್ತಿರುವ ದೃಶ್ಯ, ಅಕ್ಕ ಪಕ್ಕದ ಮನೆಯವರು ಮಹಿಳೆಯ ನೆರವಿಗೆ ಧಾವಿಸಿರುವ ದೃಶ್ಯ ಸೆರೆಯಾಗಿದೆ. ಘಟನೆ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಚಿಕನ್‌ಗೆ ಖಾರ ಮಸಾಲೆ ಅರೆದಿಲ್ಲ ಅನ್ನೋ ಕಾರಣಕ್ಕೆ ಪತ್ನಿಯ್ನು ಮೊದಲ ಮಹಡಿಯಿಂದ ಹೊರದಬ್ಬಲಾಗಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಪ್ರಕರಣ ದಾಖಲಾಗಿತ್ತು ಪತಿ, ಪತಿಯ ಸಹೋದರ ಹಾಗೂ ತಾಯಿಯನ್ನು ಲಾಹೋರ್ ಪೊಲೀಸರು ಬಂಧಿಸಿದ್ದಾರೆ.

ಪತ್ನಿಯ ನಾಲ್ಕೇ ನಾಲ್ಕು ಪೆಗ್‌ಗೆ ಗಿರಗಿರ ತಿರುಗಿದ ಗಂಡ, ಡಿವೋರ್ಸ್ ಕೇಳಿದವನಿಗೆ ನೆಟ್ಟಿಗರ ಸಲಹೆ!

ಚಿಕನ್‌ಗೆ ಮಸಾಲೆ ಖಾರ ಇರಬೇಕು ಅನ್ನೋದು ಪತಿ ಹಾಗೂ ಆತನ ಕುಟುಂಬಸ್ಥರ ಷರತ್ತು. ಆದರೆ ಹಲವು ಬಾರಿ ಪತಿ ಮಾಡಿದ ಕೋಳಿ ಸಾರು ಖಾರವಿಲ್ಲದ ಆಕ್ರೋಶಕ್ಕೆ ಕಾರಣವಾಗಿದೆ. ಪತಿಯ ಸ್ಪಷ್ಟ ಸೂಚನೆ ಹೊರತಾಗಿಯೂ ಪತ್ನಿ ಮಾಡಿದ ಕೋಳಿ ಸಾರು ಮಿತವಾದ ಕಾರದಿಂದ ಕೂಡಿತ್ತು. ಆದರೆ ಕೋಳಿ ಸಾರು ಖಾರ ಯಾಕಿಲ್ಲ, ತನ್ನ ಸೂಚನೆ, ಹಲವು ಎಚ್ಚರಿಕೆಯನ್ನೂ ಕಡೆಗಣಿಸಲಾಗಿದೆ ಎಂದು ಪತಿ ಹಾಗೂ ಪತಿಯ ತಾಯಿ ಆಕ್ರೋಶಗೊಂಡಿದ್ದಾರೆ. ಬಳಿಕ ಜಗಳ ಶುರುವಾಗಿದೆ.

Scroll to load tweet…

ಪತ್ನಿ ಮೇಲೆ ಪತಿ, ಆತನ ಸಹೋದರ ಹಾಗೂ ಅತ್ತೆ ಮುಗಿಬಿದ್ದಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಜಗಳ ತಾರಕಕ್ಕೇರಿದೆ.ಬಾಲ್ಕನಿ ಬದಿಯಲ್ಲಿದ್ದ ಪತ್ನಿಯನ್ನು ಕೆಳಕ್ಕೆ ತಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಮಹಿಳೆ ಮೇಲಿಂದ ಬಿದ್ದ ಮುರಿತಕ್ಕೊಳಗಾದ ದೃಶ್ಯಗಳು ಸೆರೆಯಾಗಿದೆ. ನೆರೆ ಮನೆಯವರು ಓಡಿ ಬಂದು ಮಹಿಳೆಯನ್ನು ಎಬ್ಬಿಸುವ ಪ್ರಯತ್ನ ಮಾಡಿದ್ದಾರೆ. ಬಳಿಕ ಒಂದಷ್ಟು ಜನ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಮಾಹಿತಿ ತಿಳಿದ ಪೊಲೀಸರು ಆಸ್ಪತ್ರೆಗೆ ತೆರಳಿ ಮಹಿಳೆ ವಾದ ಆಲಿಸಿದ್ದಾರೆ. ಈ ವೇಳೆ ಖಾರ ಚಿಕನ್ ಮಸಾಲೆ ನೀಡದ ಕಾರಣ ಪತ್ನಿ ಬಿಲ್ಡಿಂಗ್ ಮೇಲಿಂದ ತಳ್ಳಿದ್ದಾರೆ ಎಂದು ದೂರು ನೀಡಿದ್ದಾಳೆ. ದೂರು ಆಧರಿಸಿ ಪತಿ , ಆತನ ಸಹೋದರ ಹಾಗೂ ಅತ್ತೆಯನ್ನು ಬಂಧಿಸಲಾಗಿದೆ. ಆದರೆ ಪೊಲೀಸರ ಕೆಲ ಅನುಮಾನಗಳು ವ್ಯಕ್ತಪಡಿಸಿದ್ದಾರೆ. ಪತಿ, ಅತ್ತೆ ಹಾಗೂ ಪತಿಯ ಕುಟುಂಸ್ಥರ ಜೊತೆಗಿನ ಜಗಳದಿಂದ ಮಹಿಳೆ ಮೇಲಿಂದ ಜಿಗಿದಿರುವ ಸಾಧ್ಯತೆ ಇದೆ ಎಂದಿದ್ದಾರೆ.

ಉಪ್ಪಿನಕಾಯಿ ತಿನ್ನಲು ಬಿಡದ ಗಂಡನ ಜೊತೆ ನಾನೇಕೆ ಇರಲಿ; ನನಗೆ ಡಿವೋರ್ಸ್ ಕೊಡಿ ಎಂದ ಪತ್ನಿ