Asianet Suvarna News Asianet Suvarna News

ಕಾಶ್ಮೀರದಲ್ಲಿ ಕೈಯಾಡಿಸಲು ಬಂದ ಟರ್ಕಿ ಅಧ್ಯಕ್ಷರನ್ನು ಅಟ್ಟಾಡಿಸಿದ ಭಾರತ!

ಕಾಶ್ಮೀರ ವಿಚಾರ ಪ್ರಸ್ತಾಪಿಸಿ ಬೈಯಿಸಿಕೊಂಡ ಟರ್ಕಿ ಅಧ್ಯಕ್ಷ| ಕಾಶ್ಮೀರ ವಿಚಾರ ಟರ್ಕಿಗೆ ಹತ್ತಿರವಾದುದು ಎಂದ ರಿಸೆಪ್ ತಯ್ಯಿಪ್ ಎರ್ಡೊಗನ್| ಪಾಕಿಸ್ತಾನ ಪ್ರವಾಸದಲ್ಲಿರುವ ಟರ್ಕಿ ಅಧ್ಯಕ್ಷ ಎರ್ಡೊಗಾನ್| ಪಾಕ್ ಸಂಸತ್ತಿನಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪಿಸಿದ ಎರ್ಡೊಗಾನ್|  ಭಾರತದ ಆಂತರಿಕ ವಿಚಾರದಲ್ಲಿ ತಲೆ ಹಾಕದಂತೆ ಎರ್ಡೊಗಾನ್’ಗೆ ಎಚ್ಚರಿಕೆ| ಕಾಶ್ಮೀರ ಭಾರತದ ಅವಿಭಾಜ್ಯ ಹಾಗೂ ನಾಶಪಡಿಸಲಾಗದ ಭಾಗ ಎಂದ ರವೀಶ್ ಕುಮಾರ್|

India Arrogant After Turkey President Speaks On J&K In Pak
Author
Bengaluru, First Published Feb 15, 2020, 12:21 PM IST

ನವದೆಹಲಿ(ಫೆ.15): ಕಾಶ್ಮೀರ ವಿಚಾರ ಪಾಕಿಸ್ತಾನ ಹಾಗೂ ಟರ್ಕಿಗೆ ಹತ್ತಿರವಾದುದು ಎಂದ ಅಧ್ಯಕ್ಷ  ರಿಸೆಪ್ ತಯ್ಯಿಪ್ ಎರ್ಡೊಗಾನ್ ಅವರನ್ನು ಭಾರತ ತೀವ್ರ ತರಾಟೆಗೆ ತೆಗೆದುಕೊಂಡಿದೆ

ಪಾಕಿಸ್ತಾನ ಪ್ರವಾಸದಲ್ಲಿರುವ ಟರ್ಕಿ ಅಧ್ಯಕ್ಷ ಎರ್ಡೊಗಾನ್, ಅಲ್ಲಿನ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಕಾಶ್ಮೀರ ಪ್ರಸ್ತಾಪ ಮಾಡಿದ ಎರ್ಡೊಗಾನ್, ಮೊದಲನೆ ಮಹಾಯುದ್ಧದ ಸಂದರ್ಭದಲ್ಲಿ ವಿದೇಶಿ ಪ್ರಾಬಲ್ಯದ ವಿರುದ್ಧ ಟರ್ಕಿ ಜನತೆ ನಡೆಸಿದ ಹೋರಾಟಕ್ಕೆ ಕಾಶ್ಮೀರ ಹೋರಾಟವನ್ನು ಹೋಲಿಕೆ ಮಾಡಿದರು.

ಕಾಶ್ಮೀರದ ಭಯೋತ್ಪಾದನೆಯನ್ನು ಸ್ವಾತಂತ್ರ್ಯ ಹೋರಾಟ ಎಂದು ಕರೆದಿರುವ ಎರ್ಡೊಗಾನ್, ಈ ವಿಚಾರ ಪಾಕಿಸ್ತಾನ ಹಾಗೂ ಟರ್ಕಿಗೆ ಹತ್ತಿರವಾದುದು ಎಂದು ಹೇಳಿದರು.

ಇನ್ನು ಎರ್ಡೊಗನ್ ಹೇಳಿಕೆಯನ್ನು ತಿರಸ್ಕರಿಸಿರುವ ಭಾರತ, ನಮ್ಮ ಆಂತರಿಕ ವ್ಯವಹಾರದಲ್ಲಿ ತಲೆಹಾಕದಂತೆ ಸೂಕ್ತ ತಿರುಗೇಟು ನೀಡಿದೆ. ಎರ್ಡೊಗಾನ್ ಹೇಳಿಕೆ ಅನಗತ್ಯ ಎಂದು ಭಾರತ ಜರೆದಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ  ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್, ಕಾಶ್ಮೀರ ಭಾರತದ ಅವಿಭಾಜ್ಯ ಹಾಗೂ ನಾಶಪಡಿಸಲಾಗದ ಭಾಗವಾಗಿದೆ ಎಂದು ಹೇಳಿದ್ದಾರೆ.

ಕಾಶ್ಮೀರ ವಿಚಾರವಾಗಿ ಪಾಕ್‌ಗೆ ಬೆಂಬಲ: ಈ ದೇಶದ ಪ್ರವಾಸ ರದ್ದುಗೊಳಿಸಿದ ಮೋದಿ!

ಭಾರತದ ವಿರುದ್ಧ ಪಾಕಿಸ್ತಾನ ನಡೆಸುತ್ತಿರುವ ಭಯೋತ್ಪಾದನೆಯ ಅರವಿರದ ಎರ್ಡೊಗಾನ್, ಭಾರತದ ಆಂತರಿಕ ವ್ಯವಹಾರದಲ್ಲಿ ತಲೆ ಹಾಕುವ ವಿಫಳ ಯತ್ನ ಮಾಡಿದ್ದಾರೆ ಎಂದು ರವೀಶ್ ಕಿಡಿಕಾರಿದ್ದಾರೆ.

#NewsIn100Seconds ಈ ಕ್ಷಣದ ಪ್ರಮುಖ ಸುದ್ದಿಗಳು

"

Follow Us:
Download App:
  • android
  • ios