Asianet Suvarna News Asianet Suvarna News

10 ಹಿಂದೂ ಹತ್ಯೆ ಮಾಡಿ ಮಾಧುರಿ ದೀಕ್ಷಿತ್ ಕಿಡ್ನಾಪ್ ಮಾಡ್ತೇನೆ, ಪಾಕಿಸ್ತಾನ ತಾತನ ದುರಾಸೆ ವೈರಲ್!

ಪಾಕಿಸ್ತಾನ ಜನರ ಮನಸ್ಥಿತಿ ಎಷ್ಟು ಕೆಳಮಟ್ಟದಲ್ಲಿದೆ ಅನ್ನೋದು ಈ ವಿಡಿಯೋ ಸಾಬೀತುಪಡಿಸುತ್ತದೆ. ಯುದ್ಧ ನಡೆದರೆ 10 ಹಿಂದೂಗಳ ಹತ್ಯೆ ಮಾಡಿ, ಮಾಧುರಿ ದೀಕ್ಷಿತ್ ಅಪಹರಣ ಮಾಡುತ್ತೇನೆ ಎಂದು ಪಾಕಿಸ್ತಾನ ತಾತ ನೀಡಿದ ಸ್ಫೋಟಕ ಹೇಳಿಕೆ ವೈರಲ್ ಆಗಿದೆ.
 

I will kill Hindus and kidnap Madhuri dixit Pakistan old man shocking video viral ckm
Author
First Published Jul 11, 2024, 9:04 PM IST

ಲಾಹೋರ್(ಜು.11) ಪಾಕಿಸ್ತಾನ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದೆ. ಇನ್ನು ಭಾರತದ ವಿರುದ್ಧ ಕಾಲು ಕೆರೆದಾಗೆಲ್ಲಾ ಸರಿಯಾಗಿ ಪೆಟ್ಟು ತಿಂದಿದೆ. ಬಿದ್ದರೂ ಮೀಸೆ ಮಣ್ಣಾಗಿಲ್ಲ ಅನ್ನೋ ಹಾಗೆ ಪಾಕಿಸ್ತಾನದ ಮಾತುಗಳಿಗೇನು ಬರವಿಲ್ಲ. ಇದೀಗ ಪಾಕಿಸ್ತಾನ ತಾತನೊಬ್ಬನ ದುರಾಸೆಗೆ ಏನೂ ಕಡಿಮೆ ಇಲ್ಲ. ಒಂದು ವೇಳೆ ಭಾರತದ ವಿರುದ್ಧ ಯುದ್ಧವಾದರೆ 10 ಹಿಂದೂಗಳ ಹತ್ಯೆ ಮಾಡಿ, ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಕಿಡ್ನಾಪ್ ಮಾಡುತ್ತೇನೆ ಎಂದು ಪಾಕಿಸ್ತಾನತ ತಾತ ಹೇಳಿದ್ದಾನೆ. ಈತನ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕ್ ಪ್ರಾಯೋಜಿತ ಭಯೋತ್ಪಾದಕ ಕೃತ್ಯ ಹೆಚ್ಚಾಗುತ್ತಿದೆ. ಕಣಿವೆ ರಾಜ್ಯದಲ್ಲಿ ಉದ್ವಿಘ್ನ ವಾತಾವರಣ ನಿರ್ಮಾವಾಗಿದೆ. ಸೇನೆ, ನಾಗರೀಕರನ್ನು ಗುರಿಯಾಗಿಸಿ ನಡೆಯುತ್ತಿರುವ ಉಗ್ರ ದಾಳಿ ಭಾರತೀಯರ ಆಕ್ರೋಶ ಹೆಚ್ಚಿಸಿದೆ. ಇದರ ನಡುವೆ ಈ ತಾತನ ದುರಾಸೆಯ ಮಾತುಗಳು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. 

ಪಾಕಿಸ್ತಾನದಲ್ಲಿ 6 ದಿನಗಳ ಕಾಲ ಫೇಸ್ಬುಕ್, ವಾಟ್ಸಾಪ್, ಯೂಟ್ಯೂಬ್ ಬ್ಯಾನ್?! ಕಾರಣವೇನು?

ಭಾರತ ಕುರಿತು ಕೆಲ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಈ ತಾತ, ಏಕಾಏಕಿ ಒಂದು ವೇಳೆ ಭಾರತದ ವಿರುದ್ದ ಯುದ್ದವಾದರೆ ನಾನು 10 ಹಿಂದೂಗಳನ್ನು ಹತ್ಯೆ ಮಾಡುತ್ತೇನೆ ಎಂದಿದ್ದಾನೆ. ತಕ್ಷಣವೆ ಮರು ಪ್ರಶ್ನಿಸಿದ ನಿರೂಪಕ, ಅವರು ಮನುಷ್ಯರು, ಈ ರೀತಿಯ ಆಲೋಚನೆ ಬದಲಿಸಬೇಕು ಎಂದು ಅನಿಸುತ್ತಿಲ್ಲವೇ ಎಂದಿದ್ದಾರೆ. ಆದರೆ ತಾತನ ದುರಾಸೆಯನ್ನು ಹೇಳದೆ ಇರಲು ಸಾಧ್ಯವಾಗಲಿಲ್ಲ. ನೋಡಿ, ಯುದ್ಧ ಆರಂಭಗೊಂಡರೆ ಮೊದಲು ನಾನು ಭಾರತಕ್ಕೆ ತೆರಳಿ ಮಾಧುರಿ ದೀಕ್ಷಿತ್ ಅಪಹರಿಸುತ್ತೇನೆ ಎಂದಿದ್ದಾನೆ. ಈ ಮಾತುಗಳನ್ನು ಕೇಳಿದ ನಿರೂಪಕನಿಗೂ ಅಚ್ಚರಿಯಾಗಿದೆ. ನಿಮ್ಮ ವಯಸ್ಸು ಹಾಗೂ ನೀವು ಹೇಳಿಕ ಮಾತು ಏನು ಅನ್ನೋದು ಒಂದು ಬಾರಿ ನೋಡಿ ಎಂದು ನಿರೂಪಕ ಹೇಳಿದ್ದಾನೆ.

 

 

ಇದು ಪಾಕಿಸ್ತಾನದಲ್ಲಿರುವ ಬಹುತೇಕರ ಮನಸ್ಥಿತಿ ಎಂದು ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಪಾಕಿಸ್ತಾನ ಜನರಿಂದ ಇದಕ್ಕಿಂತ ಇನ್ನೇನು ನಿರೀಕ್ಷಿಸಲು ಸಾಧ್ಯ. ಜೀವಮಾನದಲ್ಲಿ ಪಾಕಿಸ್ತಾನ ಬದಲಾಗಲ್ಲ. ಮತ್ತೆ ಕೆಲವರು ನನಗೆ ತಾತನ ಮಾತುಗಳಿಂದ ಭಯವಾಗುತ್ತಿಲ್ಲ. ಆದರೆ ಆ ತಾತ ಕೈಯಲ್ಲಿ ಹಿಡಿದಿರುವ ಬೆಕ್ಕಿನ ಚಿಂತೆಯಾಗಿದೆ ಎಂದು ಮಾರ್ಮಿಕವಾಗಿ ತಿರುಗೇಟು ನೀಡಿದ್ದಾರೆ. 1971ರಲ್ಲಿ ತಮ್ಮ ದೇಶವನ್ನು ಉಳಿಸಲು ಸಾಧ್ಯವಾಗದ ಜನ ಇದೀಗ ಹಿಂದೂ ಹತ್ಯೆ ಮಾತನಾಡುತ್ತಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. 

ಪಾಕಿಸ್ತಾನದಲ್ಲಿ ಪೆಟ್ರೋಲ್‌ಗಿಂತ ದುಬಾರಿಯಾದ ಹಾಲು, ಲೀಟರ್‌ಗೆ 370 ರೂಪಾಯಿ!

ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳ ಬೆನ್ನಲ್ಲೇ ಈ ವಿಡಿಯೋ ವೈರಲ್ ಆಗಿದೆ. ಪಾಕಿಸ್ತಾನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಅಗತ್ಯ ವಸ್ತುಗಳ ಬೆಲೆ ನಿರೀಕ್ಷೆ, ಕಲ್ಪನೆಗೂ ಮೀರಿದೆ. ಆದರೆ ಇಂತಹ ಮಾತುಗಳಿಗೆ ಯಾವುದೇ ಕಡಿಮೆ ಇಲ್ಲ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ
 

Latest Videos
Follow Us:
Download App:
  • android
  • ios