Asianet Suvarna News Asianet Suvarna News

ಬಾಂಗ್ಲಾದಲ್ಲಿ ಹಿಂದೂಗಳ ಹತ್ಯೆ ವಿರೋಧಿಸಿ ಅಮೆರಿಕಾದಲ್ಲಿ ಪ್ರತಿಭಟನೆ!

-ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿದೆ ಹಿಂದೂಗಳ ಮೇಲಿನ ಹಿಂಸಾಚಾರ
-ಹಿಂದೂಗಳ ಹತ್ಯೆಯನ್ನು ಖಂಡಿಸಿದ ಅಮೆರಿಕಾ ಸರ್ಕಾರ
-ವಾಷಿಂಗ್ಟನ್‌ ಡಿಸಿಯಲ್ಲಿ ಹಿಂದೂಗಳಿಂದ ಪ್ರತಿಭಟನೆ
-ಶೀಘ್ರ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷ ಜೋ ಬೈಡೆನ್‌ಗೆ ಆಗ್ರಹ

Hindu groups protest in US over Bangladesh attacks
Author
Bengaluru, First Published Oct 19, 2021, 1:44 PM IST
  • Facebook
  • Twitter
  • Whatsapp

ಯುಎಸ್ಎ (ಅ. 19): ಬಾಂಗ್ಲಾದೇಶದಲ್ಲಿ (Bangladesh) ಕೋಮು ಹಿಂಸಾಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದೇಶದಲ್ಲಿ ಹಿಂದೂಗಳನ್ನು (Hindu) ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಹಿಂದೂಗಳ ದೇವಾಲಯ ಸೇರಿದಂತೆ ಮನೆಗಳ ಮೇಲೆ ದಾಳಿಗಳು ನಡೆಯುತಿದ್ದು ಮನೆಗಳಿಗೆ ಬೆಂಕಿ ಇಟ್ಟ ಪ್ರಕರಣ ಬೆಳಕಿಗೆ ಬಂದಿವೆ. ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ನಡೆಸಲಾಗುತ್ತಿರುವ ದಾಳಿಯನ್ನು ವಿರೋಧಿಸಿ ಅಮೆರಿಕಾದ ನ್ಯೂಯಾರ್ಕ್‌ನ (New York)  ವಿಶ್ವಸಂಸ್ಥೆ ಕಚೇರಿಯ (UN) ಮುಂದೆ ಈಗ ಪ್ರತಿಭಟನೆ ನಡೆಸಲಾಗುತ್ತಿದೆ. ರ‍್ಯಾಡಿಕಲ್ (Radical Islam) ಇಸ್ಲಾಮ್‌ನಿಂದ ಹಿಂದೂಗಳನ್ನು ರಕ್ಷಿಸಿ ಎಂಬ ಪೋಸ್ಟರ್‌ಗಳನ್ನು (Posters0 ಪ್ರತಿಭಟನಾಕಾರರು ಪ್ರದರ್ಶಿಸಿದ್ದಾರೆ. ವಾಷಿಂಗ್ಟನ್ ಡಿಸಿಯಲ್ಲಿರುವ ಬಾಂಗ್ಲಾದೇಶದ ರಾಯಭಾರಿ ಕಚೇರಿ ಮುಂದೆ ಕೂಡ ಬಾಂಗ್ಲಾದ ಹಿಂದೂಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಯಭಾರಿ ಕಚೇರಿಯಿಂದ  ಪ್ರತಿಭಟನಾಕರರು ವೈಟ್‌ ಹೌಸ್‌ ತಲುಪಿದ್ದು, ಈ ಹಿಂಸಾಚಾರದ ಮೇಲೆ ಶೀಘ್ರದಲ್ಲಿ ಕ್ರಮ ಕೈಗೊಳ್ಳುವಂತೆ  ಅಮೆರಿಕಾ ಸರ್ಕಾರ ಮತ್ತು ಅಧ್ಯಕ್ಷ ಜೋ ಬೈಡೆನ್‌ರನ್ನು ಒತ್ತಾಯಿಸಿದ್ದಾರೆ.

ಬಾಂಗ್ಲಾ 66 ಹಿಂದೂ​ಗಳ ಮನೆ ಧ್ವಂಸ, 20 ಮನೆಗೆ ಬೆಂಕಿ!

ಬಾಂಗ್ಲಾದೇಶದಲ್ಲಿ ವಾಸಿಸುತ್ತಿರುವ ಹಿಂದೂಗಳಿಗೆ ಮತ್ತೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಎಂದು ಅಮೆರಿಕಾದ ಸರ್ಕಾರಕ್ಕೆ ಬಾಂಗ್ಲಾದೇಶ ಹಿಂದೂ ಸಮುದಾಯವನ್ನು ಪ್ರತಿನಿಧಿಸಿರುವ ಪ್ರಾಣೇಶ್‌ ಹಲ್ದೇರ್‌ (Pranesh Halder) ಪತ್ರ ಬರೆದಿದ್ದಾರೆ. ಅಲ್ಲದೇ ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಮಾಧ್ಯಮಗಳಲ್ಲಿ ನಿರಂತರವಾಗಿ ಪ್ರಸಾರ ಮಾಡುವಂತೆ ಆಗ್ರಹಿಸಿದ್ದಾರೆ.  ಇನ್ನೊಂಡೆದ ಇಸ್ಕಾನ್‌ ಅಧಿಕಾರಿಗಳು ವಿಶ್ವಸಂಸ್ಥೆಯ ಮೊರೆ ಹೋಗಿದ್ದು, ಶೀಘ್ರದಲ್ಲೇ ಈ ಬಗ್ಗೆ ಪ್ರತಿಕ್ರಿಯಿಸುವಂತೆ ಕೋರಿದ್ದಾರೆ.

ಅಮೆರಿಕಾ ಸರ್ಕಾರದ ವಕ್ತಾರರೊಬ್ಬರು (Spokesperson) ಬಾಂಗ್ಲಾದಲ್ಲಿ ಹಿಂದೂ ಅಲ್ಪ ಸಂಖ್ಯಾತರ ಮೇಲೆ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿದ್ದಾರೆ. ʼಧಾರ್ಮಿಕ ಸ್ವಾತಂತ್ರ್ಯ ಮತ್ತು ನಂಬಿಕೆಗಳು ಮೂಲಭೂತ ಹಕ್ಕಿಗೊಳಗಾಗಿವೆ (Fundamental Right). ಯಾವುದೇ ಧರ್ಮದ ಮೇಲೆ ನಂಬಿಕೆಯುಳ್ಳ ಜನರು ರಾಷ್ಟ್ರದಲ್ಲಿ ಸುರಕ್ಷಿತವಾಗಿರಬೇಕು ಮತ್ತು ಅವರಿಗೆ ಮುಖ್ಯ ರಜಾ ದಿನಗಳನ್ನು ಆಚರಿಸಲು ಅವಕಾಶವಿರಬೇಕು.  ಹಿಂದೂ ಅಲ್ಪ ಸಂಖ್ಯಾತರ ಮೇಲೆ ನಡೆಯುತ್ತಿರುವ ಹಿಂಸಾಚಾರವನ್ನು ನಾವು ಖಂಡಿಸುತ್ತೇವೆʼ ಎಂದು ಅವರು ಹೇಳಿದ್ದಾರೆ. 

ದುರ್ಗಾ ಪೂಜೆ ಮೇಲೆ ದಾಳಿ; ಹಿಂದೂಗಳ ರಕ್ಷಿಸಲು ಬಾಂಗ್ಲಾ ಸರ್ಕಾರ ಆಗ್ರಹಿಸಿದ ವಿಶ್ವ ಹಿಂದೂ ಪರಿಷತ್!

ದುರ್ಗಾ ಪೂಜೆ ವೇಳೆ ಮಂದಿರದ ಹಾಗೂ ಹಿಂದೂ ಕುಟುಂಬದ ಮೇಲೆ ದಾಳಿ ವಿರೋಧಿಸಿ ಅಲ್ಪಸಂಖ್ಯಾತ ಸಮುದಾಯ ಪ್ರತಿಭಟನೆ ನಡೆಸಿತ್ತು. ಈ ಪ್ರತಿಭಟನೆ ವೇಳೆ ಪ್ರಚೋದನಕಾರಿ ಫೇಸ್‌ಬುಕ್ ಪೋಸ್ಟ್ ಹಾಕಲಾಗಿದೆ ಎಂದು ಆರೋಪಿಸಿ ದುಷ್ಕರ್ಮಿಗಳ ತಂಡ ಪ್ರತಿಭಟನೆ ನಡೆಸಿದ ಹಿಂದೂ ಕುಟುಂಬದ ಮನೆ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದ್ದರು. ದುರ್ಗಾ ಪೂಜೆ ವೇಳೆ ನಡೆದ ದಾಳಿಯಲ್ಲಿ ನಾಲ್ವರು ಹಿಂದೂಗಳು ಹತ್ಯೆಯಾಗಿದ್ದು, ಈ ಘಟನೆಗೆ ಸಂಬಂಧಿಸಿ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಜತೆಗೆ ಬಾಂಗ್ಲಾದ ಇಸ್ಕಾನ್‌ ದೇವಾಲಯದ ಮೇಲೆ ಕೂಡ ದಾಳಿ ನಡೆದಿದ್ದು ಗಲಭೆಯಲ್ಲಿ ದೇವಾಲಯದ ಇಬ್ಬರು ಸದಸ್ಯರು ಪ್ರಾಣ ಕಳೆದುಕೊಂಡಿದ್ದಾರೆ, ಒಬ್ಬರ ಪರಿಸ್ಥಿತಿ ಗಂಭೀರವಾಗಿದೆ. ಈ ವೇಳೆ ದೇವಾಲಯದಲ್ಲಿ ನೆರೆದಿದ್ದ ಭಕ್ತರ ಮೇಲೆ ಕೂಡ ದಾಳಿ ನಡೆದಿದ್ದು ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ಟ್ವೀಟ್‌ ಮಾಡಿದ್ದ ಇಸ್ಕಾನ್‌ ಶೀಘ್ರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತ್ತು.

 

ಬಾಂಗ್ಲಾ ಹಿಂದೂಗಳ ಮೇಲೆ ತಾಲಿಬಾನ್ ಟಾರ್ಗೆಟ್, ಹೆಚ್ಚಾಗ್ತಿದೆ ದಾಳಿ, ಆತಂಕದ ವಾತಾವರಣ

 

Follow Us:
Download App:
  • android
  • ios