Covid 19| ಭಾರತಕ್ಕೆ ಶಾಕ್ ಕೊಟ್ಟ ವಿಶ್ವ ಆರೋಗ್ಯ ಸಂಸ್ಥೆಯ ವರದಿ!
* ಲಸಿಕೆ ಪಡೆದವರಲ್ಲೂ ಕಾಣಿಸುತ್ತಿದೆ ಕೊರೋನಾ ಸೋಂಕು
* ಡೆಲ್ಟಾ ರೂಪಾಂತರಿಯಿಂದ ಕಿರಿಯರಲ್ಲಿ ಹೆಚ್ಚಿನ ಸೋಂಕು: ವರದಿ
ವಿಶ್ವಸಂಸ್ಥೆ/ಜಿನೇವಾ(ಅ.09): ಕೋವಿಡ್ ಸೋಂಕಿನ(Covid 19) ಪ್ರಮಾಣ ಇಳಿಯುತ್ತಿದ್ದರೂ ಡೆಲ್ಟಾರೂಪಾಂತರದಿಂದಾಗಿ(Delta Varient) ಲಸಿಕೆ ಪಡೆದ ನಂತರವೂ ಭಾರತದಲ್ಲಿ(India) 19 ವರ್ಷದೊಳಗಿನವರಲ್ಲಿ ಹಾಗೂ ಮಹಿಳೆಯರಲ್ಲಿ ಸೋಂಕು, ಮರಣ ಪ್ರಮಾಣದಲ್ಲಿ(Death Rate) ಹೆಚ್ಚಳ ಕಂಡು ಬಂದಿದೆ ಎಂದು ಭಾರತದಲ್ಲಿ ನಡೆಸಲಾದ ಅಧ್ಯಯನದಲ್ಲಿ ಕಂಡುಬಂದಿದೆ.
ವಿಶ್ವ ಆರೋಗ್ಯ ಸಂಸ್ಥೆ(World Health Organisation) ಬಿಡುಗಡೆ ಮಾಡಿದ ಕೋವಿಡ್ 19(Covid 19) ವಾರದ ವರದಿಯಲ್ಲಿ ಇದನ್ನು ತಿಳಿಸಲಾಗಿದೆ. ಇನ್ನೂ ಉನ್ನತ ಮಟ್ಟದ ಪರಿಶೀಲನೆಗೆ ಒಳಪಡದ ಅಂತರ್ ವಿಭಾಗೀಯ ಅಧ್ಯಯನವು ಅನಾರೋಗ್ಯದ ತೀವ್ರತೆ ಹಾಗೂ ಮರಣ ಪ್ರಮಾಣ ಸೇರಿದಂತೆ ಜನಸಂಖ್ಯಾ ಗುಣಲಕ್ಷಣಗಳ ಮೇಲೆ ಕೇಂದ್ರೀಕರಿಸಿದೆ. ಭಾರತದಲ್ಲಿ ಕಳವಳಕಾರಿಯಲ್ಲದ ಹಾಗೂ ಕೋವಿಡ್ ತಳಿ ಹಾಗೂ ಡೆಲ್ಟಾಸೋಂಕಿತರ ಮೇಲೆ ಈ ಅಧ್ಯಯನ ನಡೆಸಲಾಗಿದೆ.
‘9,500 ಕೋವಿಡ್ ರೋಗಿಗಳಿಂದ ಮಾದರಿ ಸಂಗ್ರಹಿಸಿ ಈ ಅಧ್ಯಯನ ನಡೆಸಲಾಗಿದ್ದು, 0-19 ವರ್ಷದೊಳಗಿನವರಲ್ಲಿ ಹಾಗೂ ಮಹಿಳೆಯರಲ್ಲಿ ಹೆಚ್ಚಿನ ಸೋಂಕು ಕಂಡುಬಂದಿದೆ. ಸೋಂಕು ಹಾಗೂ ರೋಗ ಲಕ್ಷಣದ ಅನಾರೋಗ್ಯ, ಮರಣ ಪ್ರಮಾಣವು ಕಳವಳಕಾರಿಯಲ್ಲದ ರೂಪಾಂತರಕ್ಕೆ ಹೋಲಿಸಿದರೆ ಲಸಿಕೆ ಪಡೆದ ನಂತರವೂ ಡೆಲ್ಟಾ ರೂಪಾಂತರದಿಂದ ಅಪಾಯ ಹೆಚ್ಚಾಗಿದ್ದು ಕಂಡು ಬಂದಿದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ. ಆದರೆ ಜಾಗತಿಕ ಮಟ್ಟದಲ್ಲಿ ಸೋಂಕು, ಮರಣ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ ಎಂದು ಅಧ್ಯಯನ ವರದಿ ತಿಳಿಸಿದೆ. ಡೆಲ್ಟಾರೂಪಾಂತರ ಇದುವರೆಗೆ 192 ದೇಶಗಳಲ್ಲಿ ಕಂಡುಬಂದಿದೆ.
ನಕಲಿ ಕೋವಿಡ್ ಲಸಿಕೆ ಬಗ್ಗೆ ಎಚ್ಚರ ವಹಿಸಿ
ನಕಲಿ ಕೋವಿಶೀಲ್ಡ್(Covishiled) ಕೋವಿಡ್ ಲಸಿಕೆಗಳು(Covid 19 Vaccine) ಚಲಾವಣೆಯಲ್ಲಿವೆ ಎಂಬ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಕೇಂದ್ರ ಸರ್ಕಾರ ಭಾರತದಲ್ಲೂ ಹೈಅಲರ್ಟ್ ಘೋಷಿಸಿದೆ. ಇಂಥ ನಕಲಿ ಲಸಿಕೆಗಳ ಬಗ್ಗೆ ಎಚ್ಚರ ವಹಿಸುವಂತೆ ರಾಜ್ಯ ಸರ್ಕಾರಗಳಿಗೆ ಸುತ್ತೋಲೆ ರವಾನಿಸಿರುವ ಕೇಂದ್ರ ಸರ್ಕಾರ, ಅಸಲಿ ಮತ್ತು ನಕಲಿ ಬಾಟಲ್‌ಗಳನ್ನು ಗುರುತಿಸುವ ಕುರಿತ ಮಾರ್ಗಸೂಚಿಗಳನ್ನು ರಾಜ್ಯಗಳಿಗೆ ಕಳುಹಿಸಿಕೊಟ್ಟಿದೆ.
ಅಸಲಿ ಕೋವಿಡ್ ಲಸಿಕೆ ಬಾಟಲ್ ಹೇಗಿರುತ್ತೆ?
1. ಕೋವಿಶೀಲ್ಡ್
- SII (ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ) ಉತ್ಪನ್ನ ಲೇಬಲ್
- ಲೇಬಲ್‌ನ ಬಣ್ಣ ಕಡು ಹಸಿರು. ಬಾಟಲ್‌ನ ಅಲ್ಯುಮಿನಿಯಂ ಫ್ಲಿಪ್‌ನ ಬಣ್ಣ ಕಡು ಹಸಿರು.
- ಟ್ರೇಡ್‌ಮಾರ್ಕ್ ಜೊತೆಗೆ ಬ್ರ್ಯಾಂಡ್ ಹೆಸರು, ಅಂದರೆ COVISHIELD
- ಲಸಿಕೆಯ ಜನೆರಿಕ್ ಅನ್ನು ಬರೆದಿರುವ ಅಕ್ಷರದ ಫಾಂಟ್ ಬೋಲ್ಡ್ ಆಗಿಲ್ಲ.
- CGS NOT FOR ALL ಎಂದು ಮುದ್ರಿಸಲಾಗಿದೆ.
- Recombinant ಅನ್ನು ಜನೆರಿಕ್ ಹೆಸರಿನ ಕಡೆಯಲ್ಲಿ ಮುದ್ರಿಸಲಾಗಿದೆ.
- ಲೇಬಲ್ ಅಂಟಿಸಿದ ಬದಿಯಲ್ಲಿ ಖಐಐ ಲೋಗೋ ಮುದ್ರಿಸಲಾಗಿದೆ. ಇದನ್ನು ವಿಶಿಷ್ಟಆ್ಯಂಗಲ್ ಮತ್ತು ಸ್ಥಳದಲ್ಲಿ ಮುದ್ರಿಸಿರುವ ಕಾರಣ, ಸೂಕ್ತ ಮಾಹಿತಿ ಇದ್ದವರು ಮಾತ್ರವೇ ಇದನ್ನು ಗುರುತಿಸಬಹುದಾಗಿದೆ.
- ಹೆಚ್ಚು ಸ್ಪಷ್ಟಮತ್ತು ಓದಬಲ್ಲವಂತೆ ಮಾಡಲು ಅಕ್ಷರಗಳನ್ನು ಬಿಳಿಯ ಇಂಕ್‌ನಲ್ಲಿ ಮುದ್ರಿಸಲಾಗಿದೆ.
- ಪೂರ್ಣ ಲೇಬಲ್‌ಗೆ ವಿಶೇಷವಾದ ಹನಿಕೂಂಬ್ ಎಫೆಕ್ಟ್ ನೀಡಲಾಗಿದ್ದು ಅದನ್ನು ನಿರ್ದಿಷ್ಟಕೋನದಲ್ಲಿ ಮಾತ್ರವೇ ಕಾಣಬಹುದು.
* ಕೋವ್ಯಾಕ್ಸಿನ್
- ಲೇಬಲ್ ಮೇಲೆ ಯುವಿ ಲೈಟ್‌ನಲ್ಲಿ ಮಾತ್ರ ನೋಡಬಹುದಾದ ಯುವಿ ಹೆಲಿಕ್ಸ್ (ಡಿಎನ್‌ಎ ರೀತಿಯ ಸಂರಚನೆ) ಮುದ್ರಿಸಲಾಗಿದೆ.
- ಲೇಬಲ್ ಮೇಲಿನ ಡಾಟ್ಸ್‌ಗಳಲ್ಲಿ ಮೈಕ್ರೋ ಟೆಕ್ಟಸ್ ರೂಪದಲ್ಲಿ COVAXIN ಎಂದು ಎಂದು ಮುದ್ರಿಸಲಾಗಿದೆ.
- COVAXIN ಎಕ್ಸ್‌ನಲ್ಲಿ ಗ್ರೀನ್ ಫಾಯಿಲ್ ಎಫೆಕ್ಟ್
- COVAXIN ಮೇಲೆ ಹಾಲೋಗ್ರಾಫಿಕ್ ಎಫೆಕ್ಟ್
* ಸ್ಪುಟ್ನಿಕ್
ರಷ್ಯಾದಿಂದ ಆಮದು ಮಾಡಿಕೊಳ್ಳಲಾದ ಸ್ಪುಟ್ನಿಕ್ ಲಸಿಕೆ ಇಬ್ಬರು ಉತ್ಪಾದಕರಿಂದ ಬಂದಿದೆ. ಹೀಗಾಗಿ ಎರಡೂ ಬೇರೆ ಬೇರೆ ಲೇಬಲ್ ಹೊಂದಿವೆ. ಆದರೆ ಉಳಿದಂತೆ ವಿನ್ಯಾಸ, ಮಾಹಿತಿ ಒಂದೇ ಇದೇ. ಉತ್ಪಾದಕರ ಹೆಸರು ಮಾತ್ರವೇ ಬೇರೆ ಬೇರೆ ಇದೆ.ಇದುವರೆಗೆ ಆಮದಾದ ಎಲ್ಲಾ ಸ್ಪುಟ್ನಿಕ್ ಉತ್ಪನ್ನಗಳಲ್ಲಿ, ಮುಂಭಾಗ ಮತ್ತು ಹಿಂಭಾಗ ಮಾತ್ರವೇ ಇಂಗ್ಲಿಷ್ ಲೇಬಲ್ ಇದೆ. ಬಾಟಲ್‌ನ ಇನ್ನೊಂದು ಬದಿಯ ಪೂರ್ಣ ಮಾಹಿತಿ ರಷ್ಯನ್ ಭಾಷೆಯಲ್ಲಿದೆ.