ವಾಷಿಂಗ್ಟನ್[ಜ.09]: ಇರಾನ್‌ನ ‘ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ ಕೋರ್‌ (ಐಆರ್‌ಜಿಸಿ)’ ಕ್ವಾಡ್ಸ್‌ ಫೋರ್ಸ್‌ ಘಟಕದ ಮುಖ್ಯಸ್ಥ ಜನರಲ್‌ ಖಾಸಿಮ್‌ ಸುಲೈಮಾನಿಯನ್ನು ಅಮೆರಿಕ ಇತ್ತೀಚೆಗೆ ಏರ್‌ಸ್ಟೆ್ರೖಕ್‌ ನಡೆಸಿ ಕೊಂದು ಹಾಕಿದೆ. ಇದೇ ವಿಷಯವಾಗಿ ಅಮೆರಿಕ-ಇರಾನ್‌ನ ನಡುವೆ ಯುದ್ಧ ಎದುರಾಗಬಹುದಾದ ಸನ್ನಿವೇಶ ಉಂಟಾಗುತ್ತಿದೆ.

Fact Check| ವೈರಲ್ ಸುದ್ದಿ ಹಿಂದಿನ ವಾಸ್ತವತೆ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆದರೆ ಈ ಘಟನೆ ಬೆನ್ನಲ್ಲೇ ಡ್ರೋನ್‌ ಬಳಸಿ ಅಮೆರಿಕ ಸುಲೈಮಾನಿಯನ್ನು ಹತ್ಯೆ ಮಾಡಿದ್ದು ಹೇಗೆ ಗೊತ್ತಾ ಎಂದು ಡ್ರೋನ್‌ ದಾಳಿಯ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾಗುತ್ತಿದೆ. ವಿಶಾನ್‌ ಪ್ರಕಾಶ್‌ ಎಂಬ ಫೇಸ್‌ಬುಕ್‌ ಬಳಕೆದಾರರು ಡ್ರೋನ್‌ ದಾಳಿಯ ವಿಡಿಯೋವೊಂದನ್ನು ಪೋಸ್ಟ್‌ ಮಾಡಿ, ‘ಸುಲೈಮಾನಿಯ ಮೇಲೆ ಅಮೆರಿಕ ದಾಳಿ ನಡೆಸಿದ್ದು ಹೀಗೆ. ಮಾನವ ಹಕ್ಕುಗಳ ಬಗೆಗಿನ ಮಾತುಗಳನ್ನು ಕಿವಿ ಮೇಲೆ ಹಾಕಿಕೊಳ್ಳಬೇಡಿ’ ಎಂದು ಒಕ್ಕಣೆ ಬರೆದಿದ್ದಾರೆ. ಬಳಿಕ ಈ ವಿಡಿಯೋ ಬಾರೀ ವೈರಲ್‌ ಆಗುತ್ತಿದೆ.

ಆದರೆ ನಿಜಕ್ಕೂ ಇದು ಸುಲೈಮಾನಿ ಮೇಲೆ ಅಮೆರಿಕ ದಾಳಿ ನಡೆಸಿದ್ದ ವಿಡಿಯೋವೇ ಎಂದು ಇಂಡಿಯಾ ಟು ಡೇ ಆ್ಯಂಟಿ ಫೇಕ್‌ ನ್ಯೂಸ್‌ ವಾರ್‌ ರೂಮ್‌ ಪರಿಶೀಲಿಸಿದಾಗ ಇದು ನಕಲಿ ವಿಡಿಯೋ ಎಂದು ತಿಳಿದುಬಂದಿದೆ. ವಾಸ್ತವವಾಗಿ ವೈರಲ್‌ ಆಗಿರುವ ವಿಡಿಯೋ ವಿಡಿಯೋ ಗೇಮ್‌ನದ್ದು. ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಕೆಲ ವೆಬ್‌ಸೈಟ್‌ಗಳು ಇದು ಎಸಿ-130 ಗನ್‌ಶಿಪ್‌ ಸಿಮ್ಯುಲೇಟರ್‌ ಗೇಮ್‌ಗೆ ಸಂಬಂಧಿಸಿದ ವಿಡಿಯೋ ಎಂಬ ಸುಳಿವು ನೀಡಿದ್ದವು. ಬಳಿಕ ಇಂಟರ್‌ನೆಟ್‌ನಲ್ಲಿ ಪರಿಶೀಲಿಸಿದಾಗ ವೈರಲ್‌ ಆಗಿರುವ ವಿಡಿಯೋ ಎಸಿ-130 ಗನ್‌ಶಿಪ್‌ ಸಿಮ್ಯುಲೇಟರ್‌ ವಿಡಿಯೋ ಗೇಮ್‌ನದ್ದೇ ಎಂಬುದು ದೃಢವಾಯಿತು.