ಇಸ್ಲಾಮಾಬಾದ್‌ (ಏ.09) : ಪಾಕಿಸ್ತಾನದಲ್ಲಿ ಅತ್ಯಾಚಾರ ಮತ್ತು ಲೈಂಗಿಕ ಶೋಷಣೆ ಹೆಚ್ಚಾಗಲು ಮಹಿಳೆಯರು ಧರಿಸುವ ಬಟ್ಟೆಯೇ ಕಾರಣ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ದೇಶದಲ್ಲಿನ ಲೈಂಗಿಕ ಶೋಷಣೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಖಾನ್‌, ‘ಪುರುಷರು ಆಕರ್ಷಣೆಗೆ ಒಳಗಾಗದಂತೆ ಮಹಿಳೆಯರು ದುಪ್ಪಟಾದಿಂದ ತಮ್ಮ ಮೈಯನ್ನು ಪೂರ್ತಿ ಮುಚ್ಚಿಕೊಳ್ಳಬೇಕು. ಮುಸ್ಲಿಂ ಧರ್ಮದಲ್ಲಿರುವ ‘ಪರ್ಧಾ’ ಪರಿಕಲ್ಪನೆಯ ಉದ್ದೇಶವೇ ಅದಾಗಿದೆ’ ಎಂದಿದ್ದಾರೆ. 

ಭಾರತದಿಂದ ಸಕ್ಕರೆ-ಹತ್ತಿ ಆಮದು ಮಾಡಲ್ಲ; ಉಲ್ಟಾ ಹೊಡೆದ ಪಾಕಿಸ್ತಾನ! ..

ಖಾನ್‌ ಅವರ ಈ ಹೇಳಿಕೆಗೆ ಮಾಜಿ ಪತ್ನಿ ಜೆಮಿಯಾ ಗೋಲ್ಡ್‌ಸ್ಮಿತ್‌ ಸೇರಿದಂತೆ ವಿಶ್ವಾದ್ಯಂತ ಅನೇಕರು ಖಂಡನೆ ವ್ಯಕ್ತಪಡಿಸಿದ್ದಾರೆ. ‘ಪುರುಷರು ತಮ್ಮ ಕಣ್ಣನ್ನು ಅಂಕೆಯಲ್ಲಿಟ್ಟು, ಖಾಸಗಿ ಭಾಗಗಳನ್ನು ರಕ್ಷಿಸಿಕೊಳ್ಳಬೇಕು. ಆ ಹೊಣೆಗಾರಿಕೆ ಪುರುಷರ ಮೇಲಿದೆ’ ಎಂದು ಜೆಮಿಯಾ ಗೋಲ್ಡ್‌ಸ್ಮಿತ್‌ ತಿರುಗೇಟು ನೀಡಿದ್ದಾರೆ.