ಡೊನಾಲ್ಡ್ ಟ್ರಂಪ್ ಹಮಾಸ್‌ಗೆ ಎಚ್ಚರಿಕೆ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಸ್ರೇಲಿ ಒತ್ತೆಯಾಳುಗಳನ್ನ ಬಿಡುಗಡೆ ಮಾಡೋಕೆ ಗಡುವು ಕೊಟ್ಟಿದ್ದಾರೆ. ಬಿಡದಿದ್ರೆ ಹಮಾಸ್ ದೊಡ್ಡ ಬೆಲೆ ತೆರಬೇಕಾಗುತ್ತೆ ಅಂತಾ ಹೇಳಿದ್ದಾರೆ.
ವಾಷಿಂಗ್ಟನ್ ಡಿಸಿ; ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಇಸ್ರೇಲ್ ಕಾರ್ಯಸೂಚಿಗೆ ಮರಳಿದ್ದಾರೆ. ಗಾಜಾದಲ್ಲಿ ಒತ್ತೆಯಾಳುಗಳಾಗಿ ಇರಿಸಲಾಗಿರುವ ಇಸ್ರೇಲಿ ನಾಗರಿಕರನ್ನು ಮರಳಿ ಕರೆತರುವಂತೆ ಟ್ರಂಪ್ ಹಮಾಸ್‌ಗೆ ಕಠಿಣ ಮತ್ತು ಅಂತಿಮ ಎಚ್ಚರಿಕೆ ನೀಡಿದ್ದಾರೆ. ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ, ಹಮಾಸ್ ಅದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಡೊನಾಲ್ಡ್ ಟ್ರಂಪ್ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.
ಈ ಕುರಿತು ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣದ ಟ್ರೂತ್‌ನಲ್ಲಿ ಬರೆದುಕೊಂಡಿದ್ದಾರೆ. ಇಸ್ರೇಲ್‌ಗೆ ಎಲ್ಲಾ ರೀತಿಯ ಬೆಂಬಲವನ್ನು ಕಳುಹಿಸುತ್ತಿದ್ದೇನೆ ಮತ್ತು ಹಮಾಸ್ ತನ್ನ ಮಾತನ್ನು ಕೇಳದಿದ್ದರೆ, ಯಾವುದೇ ಹಮಾಸ್ ಸದಸ್ಯರು ಸುರಕ್ಷಿತವಾಗಿರುವುದಿಲ್ಲ ಎಂದು ಹೇಳಿದ್ದಾರೆ. ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ಅವರು ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿರುವ ಡೊನಾಲ್ಡ್ ಟ್ರಂಪ್, ಎಲ್ಲಾ ಒತ್ತೆಯಾಳುಗಳನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಹೇಳಿದ್ದಾರೆ.
ಇದರ ಜೊತೆಯಲ್ಲಿ ಯೇ ನಾಗರಿಕರು ಗಾಜಾವನ್ನು ತೊರೆಯುವಂತೆ ಟ್ರಂಪ್ ಕರೆ ನೀಡಿದ್ದಾರೆ. ಹಮಾಸ್ ಒತ್ತೆಯಾಳುಗಳನ್ನು ಹಿಡಿದಿಟ್ಟುಕೊಳ್ಳುವುದನ್ನು ಮುಂದುವರಿಸಿದರೆ ಗಾಜಾದ ಭವಿಷ್ಯ ಅಪಾಯದಲ್ಲಿದೆ ಎಂಬ ಎಚ್ಚರಿಕೆಯನ್ನು ಡೊನಾಲ್ಡ್ ಟ್ರಂಪ್ ನೀಡಿದ್ದಾರೆ.
ಇದನ್ನೂ ಓದಿ: ಟ್ರಂಪ್ ಜೂಜಾಟ: ಯುರೋಪ್ ಮತ್ತು ಜೆಲೆನ್ಸ್‌ಕಿ ವಿಧಿಯನ್ನೇ ಬದಲಿಸಬಲ್ಲದು ಅಮೆರಿಕಾದ ಆಟ!
"ಗಾಜಾದ ಜನರಿಗೆ ಸುಂದರವಾದ ಭವಿಷ್ಯ ಕಾಯುತ್ತಿದೆ, ಆದರೆ ನೀವು ಒತ್ತೆಯಾಳುಗಳನ್ನು ಹಿಡಿದಿಟ್ಟುಕೊಳ್ಳುವವರೆಗೆ ಅಲ್ಲ. ನೀವು ಹಾಗೆ ಮಾಡಿದರೆ, ನೀವು ಮುಗಿದು ಹೋಗುತ್ತೀರಿ" ಎಂದು ಟ್ರಂಪ್ ಗಾಜಾ ನಿವಾಸಿಗಳಿಗೆ ಎಚ್ಚರಿಕೆ ನೀಡಿದರು. ಇತ್ತೀಚೆಗೆ ಅವರು ಶ್ವೇತಭವನದಲ್ಲಿ ಕದನ ವಿರಾಮದ ಅಡಿಯಲ್ಲಿ ಬಿಡುಗಡೆಯಾದ ಇಸ್ರೇಲಿ ಒತ್ತೆಯಾಳುಗಳ ಗುಂಪನ್ನು ಭೇಟಿಯಾದ ನಂತರ ಡೊನಾಲ್ಡ್ ಟ್ರಂಪ್ ಅವರಿಂದ ಈ ಪೋಸ್ಟ್ ಬಂದಿದೆ.
ಇದನ್ನೂ ಓದಿ: ಯುದ್ಧ ಕೊನೆಗಾಣಿಸಲು ಮತ್ತೆ ಸಂಧಾನಕ್ಕೆ ಅಮೆರಿಕ, ಉಕ್ರೇನ್!
