ರೋಮ್[ಮಾ.14]: ಇಟಲಿಯಲ್ಲಿ ಕೊರೋನಾ ವೈರಸ್ ಪ್ರಭಾವ ಭಯಾನಕ ರೂಪ ಪಡೆದಿದೆ. ವರದಿಗಳನ್ವಯ ಶುಕ್ರವಾರಂದು ಈ ಮಾರಕ ವೈರಸ್ ಗೆ 250 ಮಂದಿ ಬಲಿಯಾಗಿದ್ದು, ಈವರೆಗೆ ಒಟ್ಟು 1200 ಮಂದಿ ಮೃತಪಟ್ಟಿದ್ದಾರೆ. ಹೀಗಿರುವಾಗ ಲೂಕಾ ಪ್ರೆಂಜೀ ಎಂಬಾತ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕೊರೋನಾ ಕಾಟ: ಸರ್ಕಾರಿ ಬಸ್‌ನಲ್ಲಿ ಫ್ರಿ ಮಾಸ್ಕ್‌!

ಹೌದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿ ಮನವಿ ಮಾಡಿಕೊಮಡಿರುವ ಲೂಕಾ, 'ನನ್ನ ತಂಗಿ ಈ ವೈರಸ್ ನಿಂದಾಗಿ ಮೃತಪಟ್ಟಿದ್ದಾಳೆ. ಕಳೆದೆರಡು ದಿನಗಳಿಂದ ತಾನು ಆಕೆ ಶವದೊಂದಿಗೆ ಮನೆಯಲ್ಲಿದ್ದೇನೆ. ನನಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ನಾನು ಆಕೆಯ ಅಂತಿಮ ಸಂಸ್ಕಾರ ಮಾಡಲು ಸಾಧ್ಯವಿಲ್ಲ ಯಾಕೆಂದರೆ ನಾನಿಲ್ಲಿ ಏಕಾಂಗಿಯಾಗಿದ್ದೇನೆ' ಎಂದಿದ್ದಾರೆ.

ವಿಡಿಯೋದಲ್ಲಿ ಹಿಂಬದಿಯಲ್ಲಿರುವ ಬೆಡ್ ಮೇಲೆ ತಂಗಿಯ ಶವವಿರುವ ದೃಶ್ಯಗಳೂ ಇವೆ. ಇನ್ನು ಇಲ್ಲಿನ ಸರ್ಕಾರಿ ಅಧಿಕಾರಿಗಳು ಲೂಕಾನಿಗೂ ಈ ಸೋಂಕು ತಗುಲಿರುವ ಅನುಮಾನದ ಮೇರೆಗೆ ಐಸೋಲೇಷನ್ ನಲ್ಲಿಟ್ಟಿದ್ದಾರೆನ್ನಲಾಗಿದೆ. ಇನ್ನು ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಅಲ್ಲಿನ ಸಿಬ್ಬಂದಿ ಲೂಕಾ ತಂಗಿಯ ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಪ್ರಕಟಿಸಿವೆ.

ಎಣ್ಣೆ ಪ್ರಿಯರಿಗೆ ಬಿಗ್ ಶಾಕ್: ರಾಜ್ಯಾದ್ಯಂತ ಬಾರ್‌ಗಳು ಬಂದ್!