ನಿಜ್ಜರ್ ಹತ್ಯೆ ಮಾಡಿಸಿದ್ದು ಚೀನಾ, ಭಾರತ ವಿರುದ್ಧ ಯುಎಇಗೆ ಕೆನಡಾ ಪ್ರಧಾನಿ ದೂರು
ಭಾರತ-ಕೆನಡಾ ನಡುವಿನ ರಾಜತಾಂತ್ರಿಕ ಸಂಘರ್ಷ ಹದಗೆಡುತ್ತಿರುವ ನಡುವೆಯೇ ಕೆನಡಾ ಅಧ್ಯಕ್ಷ ಜಸ್ಟಿನ್ ಟ್ರೂಡೋ ಈ ವಿಷಯದಲ್ಲಿ ಜಾಗತಿಕ ನಾಯಕರ ಬೆಂಬಲ ಗಿಟ್ಟಿಸುವ ಯತ್ನ ಮಾಡುತ್ತಿದ್ದಾರೆ.

ನವದೆಹಲಿ (ಅ.10): ಭಾರತ-ಕೆನಡಾ ನಡುವಿನ ರಾಜತಾಂತ್ರಿಕ ಸಂಘರ್ಷ ಹದಗೆಡುತ್ತಿರುವ ನಡುವೆಯೇ ಕೆನಡಾ ಅಧ್ಯಕ್ಷ ಜಸ್ಟಿನ್ ಟ್ರೂಡೋ ಈ ವಿಷಯದಲ್ಲಿ ಜಾಗತಿಕ ನಾಯಕರ ಬೆಂಬಲ ಗಿಟ್ಟಿಸುವ ಯತ್ನ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಂಗಳವಾರ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೇದ್‌ಗೆ ಭಾರತದ ಬಗ್ಗೆ ದೂರಿದ್ದಾರೆ
‘ಇಂದು ಬೆಳಗ್ಗೆ ನಾನು ಮತ್ತು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೇದ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದು, ಭಾರತ-ಕೆನಡಾ ನಡುವಿನ ಬಿಕ್ಕಟ್ಟಿನ ಕುರಿತು ನೆಲದ ಕಾನೂನನ್ನು ಪಾಲಿಸುವುದು ಮತ್ತು ಗೌರವಿಸುವುದು ನಮ್ಮ ಆದ್ಯತೆ ಎಂಬುದಾಗಿ ತಿಳಿಸಿದ್ದು ಅದಕ್ಕೆ ಅವರು ಸಕಾರಾತ್ಮಕ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ’ ಎಂದು ಟ್ರೂಡೋ ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.
ನಮ್ಮಿಂದ 1 ಕಿ.ಮೀ. ದೂರದಲ್ಲೇ ಹಮಾಸ್ ಉಗ್ರರು ಹಾರಿಸಿದ
ಹಾಗೆಯೇ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರಿಗೂ ಕಳೆದ ಶುಕ್ರವಾರ ಕರೆ ಮಾಡಿ ವಸ್ತುಸ್ಥಿತಿ ವಿವರಿಸಿದ್ದು, ನೆಲದ ಕಾನೂನ್ನು ಗೌರವಿಸಬೇಕೆಂಬ ನಮ್ಮ ನಿಲುವನ್ನು ತಾವೂ ಬೆಂಬಲಿಸುತ್ತೇವೆ ಎಂದು ರಿಷಿ ಹೇಳಿದ್ದಾಗಿ ಟ್ರೂಡೋ ತಿಳಿಸಿದ್ದಾರೆ.
ಕೆನಡಾದಲ್ಲಿ ನಿಜ್ಜರ್ ಹತ್ಯೆ ಮಾಡಿಸಿದ್ದು ಚೀನಾ, ಬ್ಲಾಗರ್ ಸ್ಫೋಟಕ ಮಾಹಿತಿ
ಭಾರತ ಹಾಗೂ ಕೆನಡಾ ನಡುವೆ ತೀವ್ರ ಸಂಘರ್ಷಕ್ಕೆ ಕಾರಣವಾಗಿರುವ ಖಲಿಸ್ತಾನಿ ಉಗ್ರ ಹರದೀಪ್ ಸಿಂಗ್ ನಿಜ್ಜರ್‌ನನ್ನು ಹತ್ಯೆ ಮಾಡಿಸಿದ್ದು ಚೀನಾ ಎಂಬ ಸ್ಫೋಟಕ ಆರೋಪವನ್ನು ಚೀನಾ ಮೂಲದ ಬ್ಲಾಗರ್ ಒಬ್ಬರು ಮಾಡಿದ್ದಾರೆ. ಭಾರತ ಹಾಗೂ ಪಾಶ್ಚಾತ್ಯ ದೇಶಗಳ ನಡುವೆ ದ್ವೇಷ ಮೂಡಿಸಲು ಚೀನಾದ ಕಮ್ಯುನಿಸ್ಟ್ ಪಾರ್ಟಿಯ ಏಜೆಂಟರು ಈ ಹತ್ಯೆ ಮಾಡಿಸಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ.
ಚೀನಾದಲ್ಲೇ ಜನಿಸಿದ, ಈಗ ಅಮೆರಿಕದಲ್ಲಿ ನೆಲೆಸಿರುವ ಜೆನ್ನಿಫರ್ ಜೆಂಗ್ ಎಂಬ ಇಂಡಿಪೆಂಡೆಂಟ್ ಬ್ಲಾಗರ್ ಈ ಕುರಿತು ವಿಡಿಯೋ ಒಂದನ್ನು ಎಕ್ಸ್‌ನಲ್ಲಿ (ಟ್ವೀಟರ್) ಪೋಸ್ಟ್ ಮಾಡಿದ್ದಾರೆ. ಅದರಲ್ಲಿ, ‘ಭಾರತ ಹಾಗೂ ಪಾಶ್ಚಾತ್ಯ ದೇಶಗಳ ನಡುವೆ ಒಡಕು ಮೂಡಿಸಲು ಚೀನಾದ ಕಮ್ಯುನಿಸ್ಟ್ ಪಕ್ಷದ ಏಜೆಂಟರು ಕೆನಡಾದಲ್ಲಿ ಈ ಹತ್ಯೆ ಮಾಡಿಸಿದ್ದಾರೆ. ಅದರ ಬಗ್ಗೆ ನನಗೆ ಕಮ್ಯುನಿಸ್ಟ್ ಪಾರ್ಟಿಯ ಮೂಲಗಳಿಂದಲೇ ಮಾಹಿತಿ ಲಭಿಸಿದೆ. ತೈವಾನ್ ವಿಷಯದಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇರಿಸುತ್ತಿರುವ ನಡೆಗಳನ್ನು ವಿರೋಧಿಸುತ್ತಿರುವ ಪಾಶ್ಚಾತ್ಯ ರಾಷ್ಟ್ರಗಳ ಗಮನ ಬೇರೆಡೆ ಸೆಳೆಯುವ ಉದ್ದೇಶವೂ ಇದರ ಹಿಂದಿದೆ’ ಎಂದು ಹೇಳಿದ್ದಾರೆ.
ಹಮಾಸ್ ಉಗ್ರರ ದಾಳಿಗೆ ರಕ್ತಸಿಕ್ತವಾಯ್ತು ಇಸ್ರೇಲ್: 2005ರಿಂದಲೂ ಧಗಧಗಿಸುತ್ತಲೇ ಇದೆ ದ್ವೇಷದ ಜ್ವಾಲೆ..!
‘ಈ ವರ್ಷದ ಜೂನ್‌ನಲ್ಲಿ ಚೀನಾದ ಗೃಹ ಇಲಾಖೆಯಿಂದ ಉನ್ನತ ಅಧಿಕಾರಿಯೊಬ್ಬರನ್ನು ಅಮೆರಿಕದ ಸಿಯಾಟಲ್‌ಗೆ ಕಳುಹಿಸಲಾಗಿತ್ತು. ಅವರು ರಹಸ್ಯ ಸಭೆ ನಡೆಸಿ ಭಾರತ ಹಾಗೂ ಪಾಶ್ಚಾತ್ಯ ದೇಶಗಳ ನಡುವೆ ದ್ವೇಷ ಬಿತ್ತಲು ಸಂಚು ರೂಪಿಸಿದರು. ಅದರಂತೆ ಕೆನಡಾದಲ್ಲಿರುವ ಸಿಖ್ ಧಾರ್ಮಿಕ ನಾಯಕ ಹರದೀಪ್ ಸಿಂಗ್ ನಿಜ್ಜರ್‌ನನ್ನು ರಹಸ್ಯವಾಗಿ ಹತ್ಯೆ ಮಾಡಲಾಯಿತು. ಈ ವಿಷಯವನ್ನು ನನಗೆ ಕೆನಡಾದಲ್ಲಿ ನೆಲೆಸಿರುವ ಚೀನಾದ ಲೇಖಕ ಹಾಗೂ ಯೂಟ್ಯೂಬರ್ ಲಾವೋ ಡೆಂಗ್ ತಿಳಿಸಿದ್ದಾರೆ’ ಎಂದು ಜೆನ್ನಿಫರ್ ಮಾಹಿತಿ ನೀಡಿದ್ದಾರೆ.