Asianet Suvarna News Asianet Suvarna News

ಫ್ರಾನ್ಸ್ ಆಯ್ತು ಕಾಬೂಲ್ ವಿವಿ ಮೇಲೆ ಉಗ್ರ ದಾಳಿ, 19 ಮಂದಿ ಹತ್ಯೆ

ಫ್ರಾನ್ಸ್ ಆಯ್ತು ಈಗ ಅಪ್ಘಾನಿಸ್ತಾನದಲ್ಲಿ ಉಗ್ರರ ಅಟ್ಟಹಾಸ/ ವಿಶ್ವವಿದ್ಯಾನಿಲಯದ ಮೇಲೆ ದಾಳಿ/ 19 ಮಂದಿ ಹತ್ಯೆ/ ಯಾವ ಸಂಘಟನೆಯೂ ಹೊಣೆ ಹೊತ್ತಿಲ್ಲ

Attack on Afghan university leaves 19 dead 22 wounded mah
Author
Bengaluru, First Published Nov 2, 2020, 11:58 PM IST

ಕಾಬೂಲ್(ನ. 02) ಅಪ್ಘಾನಿಸ್ತಾದ ರಾಜಧಾನಿ ಕಾಬೂಲ್ ನ ವಿಶ್ವವಿದ್ಯಾನಿಲಯದ ಮೇಲೆ ಉಗ್ರರು ಸೋಮವಾರ ನಡೆಸಿದ ದಾಳಿಯಲ್ಲಿ 19 ಮಂದಿ ಹತ್ಯೆಯಾಗಿದ್ದು,  22 ಮಂದಿ ಗಾಯಗೊಂಡಿದ್ದಾರೆ.

ಫ್ರಾನ್ಸ್ ನಂತರ ಕಾಬೂಲ್ ನಲ್ಲಿಯೂ ಉಗ್ರರು ಅಟ್ಟಹಾಸ ಮೆರೆದಿದ್ದಾರೆ.  ವಿವಿ ಮೇಲೆ ಸುಮಾರು 1 ಗಂಟೆ ಕಾಲ ನಡೆದ ಭಯೋತ್ಪಾದಕ ದಾಳಿಯನ್ನು ಭದ್ರತಾ ಪಡೆಗಳು ಹಿಮ್ಮೆಟ್ಟಿಸಿದವು. ಮೂವರು ಭಯೋತ್ಪಾದಕರಲ್ಲಿ ಓರ್ವ ತನ್ನನ್ನು ತಾನು ಸ್ಫೋಟಿಸಿಕೊಂಡು ಸತ್ತರೆ ಇನ್ನಿಬ್ಬರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ.

ಅಲ್ ಖೈದಾ ಜತೆ ಸೇರಿ ಸಂಚು ರೂಪಿಸಿದ್ದ ಮದರಸಾ ಶಿಕ್ಷಕ ಅರೆಸ್ಟ್

ಈ ದಾಳಿಗೆ ನಾವು ಹೊಣೆಯಲ್ಲ ಎಂದು ತಾಲಿಬಾನ್‌  ಮೊದಲೆ ಹೇಳಿಕೊಂಡಿದೆ. ಯಾವ ಸಂಘಟನೆಯೂ ದಾಳಿಯ ಹೊಣೆ ಹೊತ್ತಿಲ್ಲ. ಇರಾನಿಯನ್‌ ಪುಸ್ತಕ ಮೇಳವನ್ನು ವಿವಿ ಕ್ಯಾಂಪಸ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದರ ಉದ್ಘಾಟನೆಗೆ ಸರಕಾರಿ ಅಧಿಕಾರಿಗಳು ಆಗಮಿಸುತ್ತಿದ್ದಂತೆ ಈ ದಾಳಿ ನಡೆದಿದೆ.

ಮೂವರು ಉಗ್ರರು ಒಂದೇ ಸಮನೆ ಗುಂಡಿನ ದಾಳಿ ಮಾಡಿದ್ದು  19  ಜನರು ಸಾವನ್ನಪ್ಪಿದ್ದು ಹೆಚ್ಚಿನವರು ವಿದ್ಯಾರ್ಥಿಗಳು.  ಕಳೆದ ವಾರ ಪಶ್ಚಿಮ ಕಾಬೂಲ್‌ನಲ್ಲಿರುವ ಶಿಕ್ಷಣ ಕೇಂದ್ರದ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 24 ಜನರು ಸಾವನ್ನಪ್ಪಿದ್ದರು. 

Follow Us:
Download App:
  • android
  • ios