ಇಲ್ಲೊಬ್ಬಳು ಮಹಿಳೆ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡವಳು, ಈ ಫಾಸ್ಟ್ ಗಮ್ ಹಾಕಿ ಕೈಯನ್ನೇ ರಸ್ತೆಗಂಟಿಸಿಕೊಂಡಿದ್ದಾಳೆ. ಈಕೆಯ ಕಿತಾಪತಿಯಿಂದ ಅಗ್ನಿಶಾಮಕ ಸಿಬ್ಬಂದಿಗೆ ದೊಡ್ಡ ಕೆಲಸವೇ ಆಗಿದೆ.
ಫಾಸ್ಟ್ ಗಮ್ ಎಲ್ಲರಿಗೂ ಗೊತ್ತು, ಅದರಲ್ಲೂ ಈ ಫ್ಯಾನ್ಸಿ ಚಪ್ಪಲ್ ಮಾರ್ಗ ಮಧ್ಯೆಯೇ ಕಿತ್ತು ಹೋದಾಗ ಮೊದಲಿಗೆ ನೆನಪಾಗುವುದೇ ಈ ಫಾಸ್ಟ್ ಗಮ್. ತುರ್ತು ಸಂದರ್ಭಗಳಲ್ಲಿ ಇದು ಬಹಳ ಪ್ರಯೋಜನಕ್ಕೆ ಬರುತ್ತದೆ. ಆದರೆ ಈ ಫಾಸ್ಟ್ ಗಮ್‌ನಂತೆ ಫಾಸ್ಟ್ ಸಿಮೆಂಟ್ ಇರುವುದರ ಬಗ್ಗೆ ನಿಮಗೆ ಗೊತ್ತಾ. ಹಾಕಿದ ನಿಮಿಷದಲ್ಲಿಇದು ಗಟ್ಟಿಯಾಗಿ ಸೆಟ್ ಆಗಿ ಬಿಡುತ್ತದೆ. ಅದರ ವಿಚಾರ ಈಗೇಕೆ ಅಂತೀರಾ? ಇಲ್ಲೊಬ್ಬಳು ಮಹಿಳೆ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡವಳು, ಈ ಫಾಸ್ಟ್ ಸಿಮೆಂಟ್ ಹಾಕಿ ಕೈಯನ್ನೇ ರಸ್ತೆಗಂಟಿಸಿಕೊಂಡಿದ್ದಾಳೆ. ಈಕೆಯ ಕಿತಾಪತಿಯಿಂದ ಅಗ್ನಿಶಾಮಕ ಸಿಬ್ಬಂದಿಗೆ ದೊಡ್ಡ ಕೆಲಸವೇ ಆಗಿದೆ. ರಸ್ತೆಗಂಟಿಕೊಂಡಿದ್ದ ಮಹಿಳೆಯ ಕೈಯನ್ನು ಸಿಮೆಂಟ್‌ನಿಂದ ಬೇರ್ಪಡಿಸುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಸಾರ್ವಜನಿಕವಾಗಿ ಪ್ರತಿಭಟನೆ ಮಾಡುವವರು ಜನರ ಆಡಳಿತದ ಗಮನ ಸೆಳೆಯುವುದಕ್ಕಾಗಿ ಬ್ಯಾನರ್ ಹಿಡಿದುಕೊಂಡು ಘೋಷಣೆ ಕೂಗುವುದು, ಧಿಕ್ಕಾರ ಕೂಗುವುದು ಕಪ್ಪು ಪಟ್ಟಿ ಪ್ರದರ್ಶಿಸುವುದು, ವಾಹನಗಳ ಅಡ್ಡಗಟ್ಟುವುದು, ಕರಪತ್ರ ಹಂಚುವುದು ಹೀಗೆ ನಮ್ಮ ಭಾರತದಲ್ಲಿ ವಿವಿಧ ರೀತಿಯಲ್ಲಿ ಜನ ತಮ್ಮ ಆಕ್ರೋಶವನ್ನು ಪ್ರತಿಭಟನೆ ರೂಪದಲ್ಲಿ ಹೊರಸೂಸುತ್ತಾರೆ. ಆದರೆ ವಿದೇಶದಲ್ಲಿ ಒಬ್ಬಳು ಪ್ರತಿಭಟನೆ ಮಾಡುತ್ತಿದ್ದವಳು, ತನ್ನ ಕೈಯನ್ನೇ ಫಾಸ್ಟ್ ಗಮ್ ಹಾಕಿ ರಸ್ತೆಗಂಟಿಸಿಕೊಂಡಿದ್ದು, ಆಕೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದಕ್ಷಿಣ ಭಾರತದ ಕೊನೆಯ ರಸ್ತೆ: ಧನುಷ್ಕೋಡಿಯ ವೈಮಾನಿಕ ನೋಟದ ವೀಡಿಯೋ ವೈರಲ್
@HowThingsWork ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ವೀಡಿಯೋ ನೋಡಿದ ಜನ ತರಹೇವಾರಿ ಕಾಮೆಂಟ್ ಮಾಡಿದ್ದಾರೆ. ನೆಲದಿಂದ ಆಕೆಯ ಕೈಯನ್ನು ಬೇರ್ಪಡಿಸಿ ಆಕೆಯ ಕೈಯಲ್ಲಿರುವ ಸಿಮೆಂಟ್ ಅನ್ನು ಹಾಗೆಯೇ ಬಿಡುವಂತೆ ಮನವಿ ಮಾಡಿದ್ದಾರೆ. 20 ಸೆಕೆಂಡ್‌ನ ಈ ವೀಡಿಯೋವನ್ನು 14 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ಪೊಲೀಸರು ಆಕೆಯ ಕೈಯನ್ನು ರಸ್ತೆಯಿಂದ ಬೇರ್ಪಡಿಸಲು ಇನ್ನಿಲ್ಲದ ಸಾಹಸ ಮಾಡುವುದನ್ನು ಕಾಣಬಹುದು.
ವೀಡಿಯೋ ನೋಡಿದ ಒಬ್ಬರು ನಾನೇನಾದರೂ ಆ ಪೊಲೀಸ್ ಅಥವಾ ಅಗ್ನಿಶಾಮಕ ಸಿಬ್ಬಂದಿ ಆಗಿದ್ದಲ್ಲಿ ಆಕೆಯ ಕೈಯನ್ನು ಮೊದಲು ರಸ್ತೆಯನ್ನು ಅಗೆಯುವ ಮೂಲಕ ರಸ್ತೆಯಿಂದ ಬೇರ್ಪಡಿಸುತ್ತಿದ್ದೆ. ಬಳಿಕ ಆಕೆ ತಾನೇ ಕೈಯಲ್ಲಿ ಅಂಟಿಸಿಕೊಂಡ ಸಿಮೆಂಟ್ ಬ್ಲಾಕ್ ಜೊತೆ ನೆರವಿಗಾಗಿ ಸುತ್ತಾಡುವಂತೆ ಮಾಡ್ತಿದ್ದೆ ಬಳಿಕ ಅಗೆದ ರಸ್ತೆಯನ್ನು ಮತ್ತೆ ಮುಚ್ಚುತ್ತಿದ್ದೆ ಎಂದು ಕಾಮೆಂಟ್ ಮಾಡಿದ್ದಾರೆ. ಆಕೆಯನ್ನು ಇಡೀ ರಾತ್ರಿ ರಸ್ತೆಯಲ್ಲೇ ಮಲಗಲು ಬಿಡಿ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇಂತಹವರಿಗೆ ಏನು ಸಹಾಯ ಮಾಡಬಾರದು ಸ್ವಯಂಕೃತ ಅಪರಾಧಕ್ಕೆ ಇನ್ಯಾರೋ ಏಕೆ ಕಷ್ಟಪಡಬೇಕು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಹಿಂದೆ ಮುಂದೆ ನೋಡದೇ ಕಾರು ಡೋರ್ ಒಪನ್... ಲಾರಿಯಡಿಗೆ ಬಿದ್ದ ಬೈಕ್ ಸವಾರ: ವೀಡಿಯೋ
ಒಟ್ಟಿನಲ್ಲಿ ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ವೀಡಿಯೋದಲ್ಲಿ ಉಲ್ಲೇಖವಿಲ್ಲ, ಈ ವೀಡಿಯೋವನ್ನು ನೀವೂ ನೋಡಿ.