ಅಮೆರಿಕಾ: ಕಾರಿನಲ್ಲೇ ಗುಂಡಿಕ್ಕಿ 26 ವರ್ಷದ ಭಾರತೀಯ ವಿದ್ಯಾರ್ಥಿಯ ಹತ್ಯೆ
ಅಮೆರಿಕಾದಲ್ಲಿ ಪಿಹೆಚ್ಡಿ ಮಾಡ್ತಿದ್ದ ಭಾರತೀಯ ವಿದ್ಯಾರ್ಥಿಯೋರ್ವನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಕಾರಿನಲ್ಲಿದ್ದಾಗಲೇ ಆತನ ಮೇಲೆ ಗುಂಡಿನ ದಾಳಿ ನಡೆದಿದ್ದು, 2 ದಿನಗಳ ಬಳಿಕ ಆತ ಸಾವನ್ನಪ್ಪಿದ್ದಾನೆ. ಅಮೆರಿಕಾದ ಓಹಿಯೋ ಬಳಿ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ,
ಅಮೆರಿಕಾದಲ್ಲಿ ಪಿಹೆಚ್ಡಿ ಮಾಡ್ತಿದ್ದ ಭಾರತೀಯ ವಿದ್ಯಾರ್ಥಿಯೋರ್ವನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಕಾರಿನಲ್ಲಿದ್ದಾಗಲೇ ಆತನ ಮೇಲೆ ಗುಂಡಿನ ದಾಳಿ ನಡೆದಿದ್ದು, 2 ದಿನಗಳ ಬಳಿಕ ಆತ ಸಾವನ್ನಪ್ಪಿದ್ದಾನೆ. ಅಮೆರಿಕಾದ ಓಹಿಯೋ ಬಳಿ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ,
ಗುಂಡಿನ ದಾಳಿ ಕೇಳಿ ಬಂದ ಹಿನ್ನೆಲೆ ಗುಂಡಿನ ದಾಳಿಯನ್ನು ಗುರುತಿಸಬಲ್ಲ, ಶಾಟ್ ಸ್ಪೋಟರ್ ಮುಂಜಾನೆ 6.20ರ ಸುಮಾರಿಗೆ ಗುಂಡಿನ ದಾಳಿ ಆದ ಬಗ್ಗೆ ವರದಿ ಮಾಡಿದ್ದು, ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ 2 ದಿನದ ನಂತರ ಯುಸಿ ಮೆಡಿಕಲ್ ಸೆಂಟರ್‌ನಲ್ಲಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. 26 ವರ್ಷದ ಆದಿತ್ಯ ಅಡ್ಲಖ ಮೃತ ವಿದ್ಯಾರ್ಥಿ, ಈತ ಅಮೆರಿಕಾದಲ್ಲಿ 4ನೇ ವರ್ಷದ ಪಿಹೆಚ್‌ಡಿ ವ್ಯಾಸಂಗ ಮಾಡ್ತಿದ್ದ.
ಜಿಮ್‌ನಲ್ಲಿ ಭಾರತೀಯ ಮೂಲದ ಅಮೆರಿಕ ವಿದ್ಯಾರ್ಥಿ ಮೇಲೆ ಹಲ್ಲೆ, ಚಿಕಿತ್ಸೆ ಫಲಕಾರಿಯಾಗದೆ ಸಾವು!
ಗುಂಡಿನ ದಾಳಿ (Gun Fire) ನಂತರ ಈತ ಚಲಾಯಿಸುತ್ತಿದ್ದ ಕಾರು ಹಲವು ಬಾರಿ ಅಪಘಾತಕ್ಕೊಳಗಾಗಿದೆ. ಡ್ರೈವಿಂಗ್ ಮಾಡ್ತಿದ್ದ ಜಾಗದ ಮುಂಬದಿಯ ಗ್ಲಾಸ್ ಮೇಲೆ ಮೂರು ಬುಲೆಟ್ಗಳು ತಾಗಿದ ಗುರುತಿದೆ ಎಂದು ಪೊಲೀಸರು ಹೇಳಿದ್ದಾರೆ. ಆದಿತ್ಯ ಅದ್ಲಾಖಾ ಅವರು ಅಮೆರಿಕಾದ ಓಹಿಯೋ ರಾಜ್ಯದ ವಿಶ್ವವಿದ್ಯಾನಿಲಯದಲ್ಲಿ ಆಣ್ವಿಕ ಮತ್ತು ಅಭಿವೃದ್ಧಿಯ ಜೀವಶಾಸ್ತ್ರದಲ್ಲಿ ಪಿಹೆಚ್‌ಡಿ ಮಾಡ್ತಿದ್ದರು. ಅವರು ಸಿನ್ಸಿನಾಟಿ ವೈದ್ಯಕೀಯ ಶಾಲೆಯಲ್ಲಿ ನಾಲ್ಕನೇ ವರ್ಷದ ಡಾಕ್ಟರೇಟ್ (PHD Student) ವಿದ್ಯಾರ್ಥಿಯಾಗಿದ್ದರು.
'ಆತ್ಮಸಾಕ್ಷಿಯ ಮಾತನ್ನು ಕೇಳಿದೆ' ಖಲಿಸ್ತಾನಿ ಪ್ರತಿಭಟನೆಯ ವೇಳೆ ದೇಶದ ಧ್ವಜ ರಕ್ಷಿಸಿದ ವಿದ್ಯಾರ್ಥಿಯ ಮಾತು!
ನವದೆಹಲಿಯ ದೆಹಲಿ ವಿಶ್ವವಿದ್ಯಾಲಯದ (Delhi Univercity) ರಾಮಜಾಸ್ ಕಾಲೇಜಿನಿಂದ 2018 ರಲ್ಲಿ ಪ್ರಾಣಿಶಾಸ್ತ್ರದಲ್ಲಿ ತಮ್ಮ ಸ್ನಾತಕೋತ್ತರ ಪದವಿ ಪಡೆದಿದ್ದರು. ನಂತರ ಅವರು 2020 ರಲ್ಲಿ ನವದೆಹಲಿಯಲ್ಲಿರುವ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಿಂದ ಶರೀರಶಾಸ್ತ್ರದಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಪಡೆದರು. ನಂತರ ಆದಿತ್ಯ ವೈದ್ಯಕೀಯ ಶಿಕ್ಷಣವನ್ನು ಮುಂದುವರಿಸಲು ಅಮೆರಿಕಾದ ಸಿನ್ಸಿನಾಟಿ ವೈದ್ಯಕೀಯ ಕಾಲೇಜಿಗೆ ಬಂದಿದ್ದರು.