ಇಂಗ್ಲಿಷ್​ನಲ್ಲಿ ಎಂ. ಎ, ಬ್ರಿಟಿಷ್​ ಕೌನ್ಸಿಲ್​ನಲ್ಲಿ ಕೆಲಸ, ಎಲ್ಲಾ ಬಿಟ್ಟು ಟೀ ಮಾರ್ತಿರೋ ಯುವತಿ!

ಅಡುಗೆ ಮಾಡುವುದು ಕೆಲವೊಬ್ಬರ ಪಾಲಿಗೆ ಬೆಟ್ಟ ಹತ್ತಿದಷ್ಟು ಕಷ್ಟವಾದರೆ ಇನ್ನು ಕೆಲವರ ಪಾಲಿಗೆ ಚಿಟಿಕೆ ಹೊಡೆಯುವಷ್ಟು ಈಝಿಯಾಗಿರುವ ಕೆಲಸ. ಕೆಲವೊಬ್ರು ಕುಕ್ಕಿಂಗ್ ಅಂದ್ರೇನೆ ಸ್ಟ್ರೆಸ್ ಮಾಡಿಕೊಳ್ತಾರೆ, ಇನ್ನು ಕೆಲವರಿಗೆ ಅಡುಗೆ ಮಾಡೋದು ಮೈಂಡ್ ರಿಲ್ಯಾಕ್ಸಿಂಗ್ ಥೆರಪಿ. ಹಾಗೇ ಇಲ್ಲೊಬ್ಬ ಮಹಿಳೆ ಬ್ರಿಟಿಷ್​ ಕೌನ್ಸಿಲ್​ನ ಕೆಲಸ ತೊರೆದು ದೆಹಲಿಯಲ್ಲಿ ಕನಸಿನ ಟೀ ಸ್ಟಾಲ್ ಓಪನ್ ಮಾಡಿದ್ದಾರೆ. 

Woman quits British Council job to start roadside tea stall in Delhi Vin

ಇತ್ತೀಚಿನ ವರ್ಷಗಳಲ್ಲಿ ಸ್ಟ್ರೀಟ್ ಫುಡ್‌ಗಳು, ಪಾನೀಯಗಳು ಹೆಚ್ಚು ಫೇಮಸ್ ಆಗುತ್ತಿವೆ. ವೆರೈಟಿಯಾಗಿ ಇವುಗಳನ್ನು ತಯಾರಿಸುವ ಕಾರಣ ಜನರು ಹೆಚ್ಚು ಸ್ಟ್ರೀಟ್‌ಫುಡ್‌ಗಳತ್ತ ಆಕರ್ಷಿತರಾಗುತ್ತಿದ್ದಾರೆ. ಬೀದಿ ಬದಿ ವ್ಯಾಪಾರದಿಂದ ಆದಾಯವೂ ಹೆಚ್ಚಿರುವ ಕಾರಣ ಡಿಗ್ರಿಯಾದವರು ಸಹ ರಸ್ತೆಬದಿ ಸ್ಟಾಲ್‌ ಹಾಕಲು ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿಯೇ ಇತ್ತೀಚಿನ ಕೆಲ ವರ್ಷಗಳಲ್ಲಿ ಬಿಕಾಂ ಪದವೀಧರೆ, ಇಂಜಿನಿಯರ್ ಆದವರು ಟೀ, ಫುಡ್ ಸ್ಟಾಲ್‌ ಇಟ್ಟುಕೊಳ್ಳುವುದು ಸಾಮಾನ್ಯವಾಗಿದೆ. ಅಡುಗೆ ಮಾಡುವುದು ಕೆಲವೊಬ್ಬರ ಪಾಲಿಗೆ ಬೆಟ್ಟ ಹತ್ತಿದಷ್ಟು ಕಷ್ಟವಾದರೆ ಇನ್ನು ಕೆಲವರ ಪಾಲಿಗೆ ಚಿಟಿಕೆ ಹೊಡೆಯುವಷ್ಟು ಈಝಿಯಾಗಿರುವ ಕೆಲಸ. ಕೆಲವೊಬ್ರು ಕುಕ್ಕಿಂಗ್ ಅಂದ್ರೇನೆ ಸ್ಟ್ರೆಸ್ ಮಾಡಿಕೊಳ್ತಾರೆ, ಇನ್ನು ಕೆಲವರಿಗೆ ಅಡುಗೆ ಮಾಡೋದು ಮೈಂಡ್ ರಿಲ್ಯಾಕ್ಸಿಂಗ್ ಥೆರಪಿ. ಹಾಗೇ ಇಲ್ಲೊಬ್ಬ ಮಹಿಳೆ ಬ್ರಿಟಿಷ್​ ಕೌನ್ಸಿಲ್​ನ ಕೆಲಸ ತೊರೆದು ದೆಹಲಿಯಲ್ಲಿ ಕನಸಿನ ಟೀ ಸ್ಟಾಲ್ ಓಪನ್ ಮಾಡಿದ್ದಾರೆ. 

ಬ್ರಿಟಿಷ್​ ಕೌನ್ಸಿಲ್​ನ ಕೆಲಸ ತೊರೆದು ಟೀ ಸ್ಟಾಲ್ ತೆರೆದ ದೆಹಲಿಯ ಮಹಿಳೆ
ಇಂಗ್ಲಿಷ್​ನಲ್ಲಿ ಎಂ.ಎ ಮಾಡಿ ಬ್ರಿಟಿಷ್ ಕೌನ್ಸಿಲ್​ನಲ್ಲಿ ಉದ್ಯೋಗಿಯಾಗಿದ್ದ ಇವರು ತಮ್ಮ ಕನಸಿನ ಟೀ ಸ್ಟಾಲ್​ ತೆರೆಯಲೆಂದೇ ಈ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಚಹಾ ಅಂಗಡಿ (Tea stall) ನಡೆಸುತ್ತಿರುವ ಪೋಸ್ಟ್ ಲಿಂಕ್ಡ್​ಇನ್​ನಲ್ಲಿ ಈ ಪೋಸ್ಟ್​ ವೈರಲ್ ಆಗುತ್ತಿದೆ. ಶರ್ಮಿಷ್ಠಾ ಘೋಷ್,​ ದೆಹಲಿಯ ಕಾಂಟ್ಸ್​ ಗೋಪಿನಾಥ್ ಬಜಾರ್​ನಲ್ಲಿ (Delhi Cantt’s Gopinath Bazar) ಟೀ ಸ್ಟಾಲ್​ ನಡೆಸುತ್ತಿರುವುದಾಗಿ ಪೋಸ್ಟ್‌ನಲ್ಲಿ ತಿಳಿಸಲಾಗಿದೆ.. ನಿವೃತ್ತ ಬ್ರಿಗೇಡಿಯರ್​, ಇಂಡಿಯನ್ ಆರ್ಮಿ ಸಂಜಯ್​ ಖನ್ನಾ ಇವರ ಕುರಿತು ಲಿಂಕ್ಡ್​ಇನ್​ನಲ್ಲಿ ಪೋಸ್ಟ್ ಮಾಡಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಟೀ ಅಂಗಡೀಲಿ ಕ್ರಿಪ್ಟೋ ಸ್ವೀಕಾರ: ವಿದ್ಯಾರ್ಥಿ ಶುಭಂ ಸೈನಿ ಬಗ್ಗೆ ಹರ್ಷ್‌ ಗೋಯೆಂಕಾ ಟ್ವೀಟ್‌

ಯಾವ ಕೆಲಸವೂ ಚಿಕ್ಕದು ಅಥವಾ ದೊಡ್ಡದಲ್ಲ
ಸಂಜೆ ಚಹಾ ಕುಡಿಯಲೆಂದು ಈ ರಸ್ತೆಗೆ ಬಂದಾಗ ಇಂಗ್ಲಿಷ್​ನಲ್ಲಿ ಮಾತನಾಡುತ್ತಾ ಚುರುಕಾಗಿ ಅಂಗಡಿ ನಡೆಸುತ್ತಿದ್ದ ಈ ಯುವತಿ ಕಣ್ಣಿಗೆ ಬಿದ್ದಳು. ಮಾತನಾಡಿಸುತ್ತಾ ಆಕೆಯ ಬಗ್ಗೆ ವಿಚಾರಿಸಿದ್ದಾಗಿ ಸಂಜಯ್ ಖನ್ನಾ ಹೇಳಿದ್ದಾರೆ. ತನ್ನ ಹೆಸರು ಶರ್ಮಿಷ್ಠಾ ಘೋಷ್, ತನ್ನ ಸ್ನೇಹಿತೆ ಭಾವನಾ ರಾವ್​ ಜೊತೆ ಸೇರಿ ಈ ಚಹಾ ಅಂಗಡಿ ನಡೆಸುತ್ತಿರುವುದಾಗಿ ಆಕೆ ಹೇಳಿದಳು' ಎಂದು ಮಾಹಿತಿ ನೀಡಿದ್ದಾರೆ. ಭಾವನಾ ಲುಫ್ತಾನ್ಸಾದ ಉದ್ಯೋಗಿಯಾಗಿದ್ದು ಈಕೆಯದು ಈ ಸಣ್ಣ ಹೂಡಿಕೆಯಲ್ಲಿ ಪಾಲಿದೆ. ಸಂಜೆಹೊತ್ತಿಗೆ ಇಬ್ಬರೂ ಸೇರಿ ಈ ಅಂಗಡಿಯನ್ನು ನಡೆಸುತ್ತಾರೆ ಎಂದು ತಿಳಿದುಬಂದಿದೆ.

ಯಾವ ಕೆಲಸವೂ ಚಿಕ್ಕದು ಅಥವಾ ದೊಡ್ಡದಲ್ಲ. ಎಲ್ಲವೂ ನಮ್ಮ ಭಾವನೆಗೆ ಮತ್ತು ಕನಸಿಗೆ (Dream) ಸಂಬಂಧಿಸಿದ್ದು. ನಮ್ಮ ಕನಸನ್ನು ಈಡೇರಿಸಿಕೊಳ್ಳಲು, ಗುರಿಯನ್ನು ಮುಟ್ಟಲು ಉತ್ಸಾಹ ಇರಬೇಕಾದುದು ಮುಖ್ಯ. ಕನಸನ್ನು ನನಸಾಗಿಸಿಕೊಳ್ಳುವವರು ಎಂದೂ ಉನ್ನತ ಹುದ್ದೆ, ಉನ್ನತ ಮಟ್ಟದ ಉದ್ಯೋಗದ (Job) ಬಗ್ಗೆ ಯೋಚಿಸಬಾರದು ಎನ್ನುವುದನ್ನು ನಾನು ಬಲವಾಗಿ ನಂಬುತ್ತೇನೆ. ಗುರಿಯನ್ನು ತಲುಪಲು ಸಣ್ಣ ಮಾರ್ಗಗಳನ್ನೇ ಅನುಸರಿಸಬೇಕು ಎಂದೂ ಖನ್ನಾ ಹೇಳಿದ್ದಾರೆ. ಶರ್ಮಿಷ್ಠಾ ಘೋಷ್​ ಮತ್ತು ಭಾವನಾ ಅವರ ಈ ಪ್ರಯತ್ನವು ನಿಜಕ್ಕೂ ಶ್ಲಾಘನೀಯ ಎಂದು ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಸ್ವಂತ ಕನಸನ್ನು ಅನುಸರಿಸುವುದರೊಂದಿಗೆ ಸ್ವಂತ ಉದ್ಯೋಗದಿಂದ ಇತರರಿಗೂ ಅವಕಾಶ ಕಲ್ಪಿಸಿಕೊಡುವುದು ಹೆಚ್ಚು ಪ್ರಶಂಸನೀಯ ಎಂದಿದ್ಧಾರೆ. 

ಭಾರತದ ಕೊನೆಯ ಟೀ ಸ್ಟಾಲ್‌ನಲ್ಲಿ ಡಿಜಿಟಲ್ ಪೇಮೆಂಟ್‌ಗೆ ಅವಕಾಶ; ಆನಂದ್ ಮಹೀಂದ್ರಾ ಟ್ವೀಟ್

ಇನ್ನು ಕೆಲವರು ಶರ್ಮಿಷ್ಠಾಳ ನಡೆಯನ್ನು ವಿರೋಧಿಸಿದ್ದಾರೆ. ಇಂಗ್ಲಿಷ್​ನಲ್ಲಿ ಎಂ. ಎ. ಓದಿ ಚಹಾ ಅಂಗಡಿ ನಡೆಸುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಕಚೇರಿ ಕೆಲಸ ಬೇಡವೆಂದರೆ ಬೋಧನೆಯಲ್ಲಿ ತೊಡಗಿಕೊಳ್ಳಬಹುದಿತ್ತಲ್ಲ ಎಂದು ಸಲಹೆ ನೀಡಿದ್ದಾರೆ. ಚಹಾದ ಅಂಗಡಿಯನ್ನೇ ಮಾಡುವುದಾದಲ್ಲಿ ಎಂ.ಎ. ಮುಗಿಯುವ ತನಕ ಯಾಕೆ ಕಾಯಬೇಕಿತ್ತು? ಎಂದಿದ್ಧಾರೆ ಇನ್ನೊಬ್ಬರು. ಒಟ್ನಿನಲ್ಲಿ ಎಂಎ ಆಗಿ ಟೀ ಸ್ಟಾಲ್ ಇಟ್ಕೊಂಡಿರೋ ಯುವತಿಗೆ ಮೆಚ್ಚುಗೆ ಹಾಗೂ ಬೈಗುಳ ಎರಡೂ ಸಹ ಸಿಗ್ತಿದೆ.

Latest Videos
Follow Us:
Download App:
  • android
  • ios