ಸುಧಾ ಮೂರ್ತಿ ಒಂದು ಬಾರಿ ಎಜೆಪಿ ಅಬ್ದುಲ್ ಕಲಾಂ ಕರೆ ಮಾಡಿದ್ದಾರೆ. ಈ ವೇಳೆ ಅಬ್ದುಲ್ ಕಲಾಂ ಎಂದು ತಕ್ಷಣ ರಾಂಗ್ ನಂಬರ್ ಎಂದು ಫೋನ್ ಕಟ್ ಮಾಡಲು ಹೋದ ಸ್ವಾರಸ್ಯಕರ ಘಟನೆಯನ್ನು ಖುದ್ದು ಸುಧಾ ಮೂರ್ತಿ ಹೇಳಿದ್ದಾರೆ.  

ಬೆಂಗಳೂರು(ಜೂ.26) ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಅನುಭವಗಳು, ಸಲಹೆಗಳು ಬದುಕು ರೂಪಿಸುವ ಯುವ ಸಮೂಹಕ್ಕೆ ಮಾದರಿ. ಸುಧಾ ಮೂರ್ತಿ ತಮ್ಮ ಜೀವನದ ಅನುಭವಗಳು, ಸ್ವಾರಸ್ಯಕರ ಘಟನೆಗಳನ್ನು ಅಷ್ಟೆ ರಸವತ್ತಾಗಿ ವಿವರಿಸುತ್ತಾರೆ. ಇದೀಗ ಡಾ. ಎಪಿಜೆ ಅಬ್ದುಲ್ ಕಲಾಂ ಕರೆ ಹಾಗೂ ನಡದೆ ಸ್ವಾರಸ್ಯಕರ ಘಟನೆಯನ್ನು ವಿವರಿಸಿದ್ದಾರೆ. ಅಬ್ದುಲ್ ಕಲಾಂ ಕರೆ ಮಾಡಿದಾಗ ಇದು ರಾಂಗ್ ನಂಬರ್ ಎಂದು ಫೋನ್ ಕಟ್ ಮಾಡಲು ಹೋಗಿದ್ದ ಘಟನೆಯನ್ನು ಹೇಳಿದ್ದಾರೆ.

ಒಂದು ದಿನ ನನಗೆ ಫೋನ್ ಕಾಲ್ ಬಂದಿತ್ತು. ಫೋನ್ ಮಾಡಿದ ವ್ಯಕ್ತಿ ಹೇಳಿದರು, ಡಾ. ಅಬ್ದುಲ್ ಕಲಾಂ ನಿಮ್ಮ ಜೊತೆ ಮಾತನಾಡಬೇಕು ಎಂದಿದ್ದಾರೆ ಎಂದರು. ನನಗೆ ಅಚ್ಚರಿಯಾಗಿತ್ತು. ಏನೂ ಆಲೋಚನೆ ಮಾಡಿದ ನಾನು ಹೇಳಿದೆ ರಾಂಗ್ ನಂಬರ್. ಕಾರಣ ಅಬ್ದುಲ್ ಕಲಾಂ ನನಗೆ ಫೋನ್ ಮಾಡಿ ಮಾತನಾಡುವ ಯಾವುದೇ ಘಟನೆ, ಸನ್ನಿವೇಶಗಳು ಇರಲಿಲ್ಲ. ನೀವು ನಾರಾಯಣ ಮೂರ್ತಿಗೆ ಕರೆ ಮಾಡಿರಬೇಕು, ಮಿಸ್ಟರ್ ಮೂರ್ತಿಗೆ ಫೋನ್ ಮಾಡುವ ಬದಲು ನೀವು ಮಿಸೆಸ್ ಮೂರ್ತಿಗೆ ಕರೆ ಮಾಡಿರುವ ಸಾಧ್ಯತೆ ಇದೆ ಎಂದು ನಾನು ಹೇಳಿದೆ. ಈ ವೇಳೆ ಇಲ್ಲ, ಕಲಾಂ ಮಿಸೆಸ್ ಮೂರ್ತಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದರು. 

ಸುಖೀ ದಾಂಪತ್ಯಕ್ಕೆ ಸುಧಾ ಮೂರ್ತಿ ನೀಡಿದ 22 ಸೂತ್ರಗಳು, ಫಾಲೋ ಮಾಡಿ ನೋಡಿ!

ನನಗೆ ಭಯ ಶುರುವಾಗಿತ್ತು. ಅಬ್ದುಲ್ ಕಲಾಂ ನನಗೆ ಫೋನ್ ಮಾಡುವಂತೆ ನಾನು ಏನು ಮಾಡಿದೆ? ಸರಿ ಎಂದು ಮಾತು ಆರಂಭಿಸಿದೆ. ಅತ್ತ ಕಡೆಯಿಂದ ಅಬ್ದುಲ್ ಕಲಾಂ, ನೀವ ಬರೆದಿರುವ ಐಟಿ ಕಾಲಂ ಅಂಕಣವನ್ನು ಓದಿದೆ. ನನಗೆ ನಗು ತಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ನಿಮಗೆ ಕರೆ ಮಾಡಿ ಮಾತನಾಡಬೇಕು ಎಂದುಕೊಂಡೆ. ನೀವು ಬರೆಯುವ ಪ್ರತಿ ಅಂಕಣವನ್ನು ನಾನು ಓದುತ್ತೇನೆ ಎಂದು ಅಬ್ದುಲ್ ಕಲಾಂ ಹೇಳಿದರು. ಕಲಾಂ ಜೊತೆ ಮಾತನಾಡಿ ನನಗೂ ಖುಷಿಯಾಗಿತ್ತು ಎಂದು ಸುಧಾ ಮೂರ್ತಿ ವಿಶೇಷ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.

Scroll to load tweet…

ನಾನು ಅಂಗಡಿ ಹೋಗಿ ಮಾವಿನ ಹಣ್ಣು ಖರೀದಿಸಲು ಮುಂದಾಗಿದ್ದೆ. ಅಂಗಡಿ ಮಾಲೀಕ, 100 ರೂಪಾಯಿ ಎಂದು ಬೆಲೆ ಹೇಳಿದ್ದ. ಇದೇ ವೇಳೆ ನನ್ನ ವಿದ್ಯಾರ್ಥಿಯೊಬ್ಬಳು ಅಂಗಡಿಗೆ ಆಗಮಿಸಿದ್ದಳು. ಆಕೆ ನಮ್ಮ ಇನ್ಫೋಸಿಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಆಕೆ ಬಂದು ಮಾವಿನ ಹಣ್ಣು ಖರೀದಿಸಿದಳು. ಆಕೆಗೆ ಅಂಗಡಿಯಾತ 200 ರೂಪಾಯಿ ಎಂದು ಹೇಳಿದ. ಆಕೆ ಪಾವತಿಸಿ ಹೊರಟಳು. ನಾನು ಅಂಗಡಿ ಮಾಲೀಕನ ಬಳಿ ಕೇಳಿದೆ, ಈಗಷ್ಟೆ ನನಗೆ 100 ರೂಪಾಯಿ ಎಂದುಹೇಳಿದೆ. ಆದರೆ ಆಕೆಗೆ 200 ರೂಪಾಯಿಗೆ ನೀಡಿದ್ದು ಯಾಕೆ ಎಂದು ಕೇಳಿದೆ. ಅದಕ್ಕ ಆತ ಉತ್ತರಿಸಿದ, ನೀವು ಶಾಲಾ ಟೀಚರ್, ನಿಮಗೆ ಅರ್ಥವಾಗುವುದಿಲ್ಲ. ಆಕೆ ಐಟಿ ಉದ್ಯೋಗಿ, ಪ್ರತಿಷ್ಠಿತ ಇನ್ಫೋಸಿಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ ಎಂದು ಉತ್ತರಿಸಿದ. ಇದೇ ಘಟನೆಯನ್ನು ಐಟಿ ಡಿವೈಡ್ ಅಂಕಣದಲ್ಲಿ ನಾನು ಬರೆದಿದ್ದೆ. ಈ ಅಂಕ ಓದಿದ ಅಬ್ದುಲ್ ಕಲಾಂ ತುಂಬಾ ನಕ್ಕಿದ್ದರು. ಹೀಗಾಗಿ ಕರೆ ಮಾಡಿ ಅಭಿನಂದಿಸಿದ್ದರು ಎಂದು ರಾಜ್ಯ ಸಭಾ ಸದಸ್ಯೆ ಸುಧಾ ಮೂರ್ತಿ ಹೇಳಿದ್ದಾರೆ.

ಸುಧಾಮೂರ್ತಿ ನಿಸ್ವಾರ್ಥ ಹರಕೆಗೆ ಒಲಿದ ಡಾ.ಸಿ.ಎನ್. ಮಂಜುನಾಥ್ ಗೆಲುವು