ಗಂಡನಿಗಿಂತಲೂ ಹೆಚ್ಚು ಆದಾಯ ಪಡೆಯೋ ಹೆಂಡ್ತಿಯ ಜೀವನಾಂಶ ರದ್ದುಗೊಳಿಸಿದ ಕೋರ್ಟ್
ಗಂಡ-ಹೆಂಡ್ತಿ ಮಧ್ಯೆ ಡಿವೋರ್ಸ್ ಆದ ನಂತರ ಸಾಮಾನ್ಯವಾಗಿ ಪತಿ, ತನ್ನ ಪತ್ನಿಗೆ ಜೀವನಾಂಶ ಕೊಡುವಂತೆ ಕೋರ್ಟ್ ಆದೇಶಿಸುತ್ತದೆ. ಆದರೆ, ಮುಂಬೈ ಸೆಷನ್ಸ್ ನ್ಯಾಯಾಲಯ ಎಲ್ಲರೂ ಅಚ್ಚರಿಪಡುವಂತಹಾ ತೀರ್ಪೊಂದನ್ನು ನೀಡಿದೆ.
ಮುಂಬೈ: ಗಂಡ-ಹೆಂಡ್ತಿ ಮಧ್ಯೆ ಡಿವೋರ್ಸ್ ಆದ ನಂತರ ಸಾಮಾನ್ಯವಾಗಿ ಪತಿ, ತನ್ನ ಪತ್ನಿಗೆ ಜೀವನಾಂಶ ಕೊಡುವಂತೆ ಕೋರ್ಟ್ ಆದೇಶಿಸುತ್ತದೆ. ಆದರೆ, ಮುಂಬೈ ಸೆಷನ್ಸ್ ನ್ಯಾಯಾಲಯವು ಇತ್ತೀಚೆಗೆ ಮ್ಯಾಜಿಸ್ಟ್ರೇಟ್ ನೀಡಿದ್ದ ಮಧ್ಯಂತರ ಆದೇಶವನ್ನು ರದ್ದುಗೊಳಿಸಿದೆ. ಪತ್ನಿ, ಪತಿಗಿಂತ ಗಣನೀಯವಾಗಿ ಹೆಚ್ಚು ಆದಾಯವನ್ನು ಪಡೆಯುತ್ತಿದ್ದಾಳೆಂದು ಕಂಡುಹಿಡಿದ ನಂತರ ಪತಿ ತನ್ನ ದೂರವಾದ ಹೆಂಡತಿಗೆ ಜೀವನಾಂಶವಾಗಿ ಕೇವಲ 10,000 ರೂ. ಪಾವತಿಸುವಂತೆ ಸೂಚಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಸ್‌ಬಿ ಪವಾರ್ ಅವರು ಮಾತನಾಡಿ, ಜೀವನಾಂಶವನ್ನು ನೀಡುವ ಉದ್ದೇಶ ಡಿವೋರ್ಸ್‌ನ ನಂತರ ಆದಾಯವಿಲ್ಲದೆ ಹೆಂಡತಿ (Wife) ಬೀದಿಗೆ ಬೀಳಬಾರದು ಎಂಬುದಾಗಿದೆ. ಅದರೆ ಇಲ್ಲಿ ಪತ್ನಿ ದುಡಿಯುತ್ತಿರುವ ಕಾರಣ ಮತ್ತು ಪತಿ (Husband) ಅತೀ ಕಡಿಮೆ ಸ್ಯಾಲರಿಯನ್ನು ಪಡೆಯುತ್ತಿರುವ ಕಾರಣ ಆಕೆಗೆ ಜೀವನಾಂಶದ ಅಗತ್ಯವಿಲ್ಲವೆಂದು ತಿಳಿದುಬರುತ್ತದೆ ಎಂದು ತಿಳಿಸಿದರು. ಪತ್ನಿ ಸ್ವತಂತ್ರ ಆದಾಯದ ಮೂಲವನ್ನು ಹೊಂದಿದ್ದಾಳೆ. ಹೀಗಾಗಿ ಗಂಡನ ಆದಾಯದ ಅಗತ್ಯ ಆಕೆಗಿಲ್ಲ ಎಂದು ಕೋರ್ಟ್ ತಿಳಿಸಿತು.
ಡಿವೋರ್ಸ್ ಆಗಬಾರದು ಅಂದ್ರೆ ಯಾವ ವಯಸ್ಸಲ್ಲಿ ಮದ್ವೆಯಾದ್ರೆ ಬೆಸ್ಟ್?
ಪತ್ನಿ ಮತ್ತು ಪತಿ ಗಳಿಸುವ ಆದಾಯದ ನಡುವೆ ಭಾರೀ ವ್ಯತ್ಯಾಸ
ಪ್ರಸ್ತುತ ಪ್ರಕರಣದಲ್ಲಿ, ಪತ್ನಿ ಮತ್ತು ಪತಿ ಗಳಿಸುವ ಆದಾಯದ ನಡುವಿನ ವ್ಯತ್ಯಾಸವು (Difference) ಅಗಾಧವಾಗಿದೆ ಎಂದು ನ್ಯಾಯಾಲಯವು ಕಂಡುಹಿಡಿದಿದೆ, ಪತ್ನಿ ತನ್ನ ಪತಿಗಿಂತ ಅತಿ ಹೆಚ್ಚು ಸಂಪಾದಿಸುತ್ತಾಳೆ. 'ಪ್ರಸ್ತುತ ಸಂದರ್ಭದಲ್ಲಿ, ಎರಡೂ ಪಕ್ಷಗಳ ಆದಾಯವು ಹೆಚ್ಚು ಅಸಮಾನವಾಗಿದೆ. ಪತ್ನಿಯ 2020-2021 ರ ವಾರ್ಷಿಕ ಆದಾಯವನ್ನು 89,35,720 ರೂ. ಎಂದು ತೋರಿಸಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಗಂಡನ ಆದಾಯ (Income) ಸುಮಾರು 3,50,000 ರೂ. ಮತ್ತು ಅದೂ ಕೂಡ ಪತ್ನಿಯ ವ್ಯವಹಾರದಿಂದ ಬಂದ ಸಂಬಳವಾಗಿದೆ' ಎಂದು ನ್ಯಾಯಾಲಯ ಗಮನಿಸಿದೆ.
ಮ್ಯಾಜಿಸ್ಟ್ರೇಟ್ ಅವರು ಜೀವನಾಂಶ ಆದೇಶವನ್ನು ರವಾನಿಸುವಾಗ ಪತ್ನಿಯ ಆರ್ಥಿಕ ಸ್ಥಿತಿಯನ್ನು ಪರಿಗಣಿಸಲು ವಿಫಲರಾಗಿದ್ದಾರೆ ಮತ್ತು ಆದ್ದರಿಂದ ಅದನ್ನು ಬದಿಗಿರಿಸಿದ್ದಾರೆ ಎಂದು ನ್ಯಾಯಾಧೀಶ ಪವಾರ್ ಅಭಿಪ್ರಾಯಪಟ್ಟರು. 'ನ್ಯಾಯಾಧೀಶರು ಮಧ್ಯಂತರ ನಿರ್ವಹಣೆಯನ್ನು ನೀಡಲು ಮುಂದಾದರು, ಅದು ನನ್ನ ದೃಷ್ಟಿಯಲ್ಲಿ ಕಾನೂನಿನ ಇತ್ಯರ್ಥಪಡಿಸಿದ ತತ್ವಗಳ ಪ್ರಕಾರ ಅಲ್ಲ. ಆದೇಶವು ನ್ಯಾಯಸಮ್ಮತವಲ್ಲ, ಕಾನೂನು ಮತ್ತು ಸಮಂಜಸವಲ್ಲ ಎಂಬ ತೀರ್ಮಾನಕ್ಕೆ ನಾನು ಬರುತ್ತೇನೆ' ಎಂದು ಸೆಷನ್ಸ್ ನ್ಯಾಯಾಧೀಶರು ಹೇಳಿದರು.
ಮದ್ಯವ್ಯಸನಿ ಗಂಡನಿಂದ ಮುಕ್ತಿ ಕೊಡಿಸಿದ ಹೈಕೋರ್ಟ್: ಯಾಕೆ ಗೊತ್ತಾ?
ಕೌಟುಂಬಿಕ ಹಿಂಸಾಚಾರ ಕಾಯ್ದೆಯಡಿ ಅರ್ಜಿಯಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸುವ ಮೇಲ್ಮನವಿಯಲ್ಲಿ ಈ ಅವಲೋಕನಗಳು ಬಂದವು. ಪತ್ನಿ, ಪತಿ ನನಗೆ ಮಾನಸಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದು, ವಿಚ್ಛೇದನ ಕೇಳಿದಾಗ ನನ್ನನ್ನು ಸುಲಿಗೆ ಮಾಡುತ್ತಿದ್ದಾನೆ. ಪತಿ ತನ್ನಿಂದ 4 ಕೋಟಿಗೆ ಬೇಡಿಕೆ ಇಟ್ಟಿದ್ದಾನೆ ಎಂದು ಪತ್ನಿ ತಿಳಿಸಿದ್ದಾಳೆ. ಪತಿ ಈ ಆರೋಪಗಳನ್ನು ಅಲ್ಲಗಳೆದಿದ್ದು, ತನ್ನ ವಿಚ್ಛೇದಿತ ಪತ್ನಿಗೆ ಅನೇಕ ಸಂಬಂಧಗಳಿವೆ ಎಂದು ಆರೋಪಿಸಿದ್ದಾರೆ.
ಡಿಸೆಂಬರ್‌ನಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆಕೆಗೆ ಮಧ್ಯಂತರ ಜೀವನಾಂಶ ನೀಡಿತು. ಇದರಿಂದ ನೊಂದ ಪತಿ ಸೆಷನ್ಸ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಹೆಂಡತಿ ಆರ್ಥಿಕವಾಗಿ ಸದೃಢಳಾಗಿದ್ದಾಳೆ ಮತ್ತು ತನ್ನನ್ನು ತಾನೇ ಬೆಂಬಲಿಸಲು ಸಾಕಾಗುವ ಸ್ವತಂತ್ರ ಆದಾಯವನ್ನು ಹೊಂದಿದ್ದಳು ಎಂದು ಕಂಡುಹಿಡಿದ ನಂತರ ಸೆಷನ್ಸ್ ನ್ಯಾಯಾಲಯವು ಜೀವನಾಂಶ ಆದೇಶವನ್ನು ರದ್ದುಗೊಳಿಸಿತು.