Asianet Suvarna News Asianet Suvarna News

ನೀವ್ಯಾಕೆ ಎದೆ ಸೀಳು ಕಾಣಿಸೋ ಡ್ರೆಸ್ ಹಾಕ್ತೀರೆಂದು ಕೇಳಿದವನಿಗೆ ಆಪ್ ನಾಯಕಿ ರಿಯಾಕ್ಷನ್!

ಹೆಣ್ಣಿನ ಡ್ರೆಸ್ಸಿನಿಂದಲೇ ಮಹಿಳೆಯ ವಿರುದ್ಧ ದೌರ್ಜನ್ಯಗಳು ನಡೆಯೋದು ಎನ್ನುವ ಆರೋಪ ಇವತ್ತು, ನಿನ್ನೆಯದಲ್ಲ. ಮತ್ತದೇ ಆರೋಪಕ್ಕೆ ಆಪ್ ನಾಯಕಿ ಸುರಭಿ ರೇಣುಕಾಂಬಿಕೆ ನೀಡಿದ ಉತ್ತರ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಏನಿದು ಪೋಸ್ಟ್? 

Karnataka AAP leader Surabhi Renukambike post on women dress goes viral
Author
First Published Sep 19, 2024, 4:38 PM IST | Last Updated Sep 19, 2024, 7:01 PM IST

ಸಮಾಜದಲ್ಲಿ ಮಹಿಳೆಯರ ವಿರುದ್ಧ ನಡೆಯುವ ಅಪರಾಧ ಕೃತ್ಯಗಳಿಗೆ ಹೆಣ್ಣು ತೊಡುವ ಬಟ್ಟೆಯೇ ಕಾರಣವೇ? ಅಕಸ್ಮಾತ್ ಉತ್ತರ ಹೌದು ಎಂದಾಗಿದ್ದರೆ ಎಳೆಯ ಕಂದಮ್ಮಗಳ ಮೇಲಾದರೂ ಇಂಥ ಪೈಶಾಚಿಕ ಕೃತ್ಯಗಳು ನಡೆಯೋದು ತಪ್ಪುತ್ತಿತ್ತು. ಏನೇ ಅನ್ನಿ ಹೆಣ್ಣು ತೊಡೋ ಬಟ್ಟೆ ಮೇಲೆ ಕಮೆಂಟ್ಸ್ ಸಹಜ. ಅಂಥದ್ದೇ ಕಮೆಂಟ್‌ಗೆ ಆಪ್ ನಾಯಕಿ ಸುರಭಿ ರೇಣುಕಾಂಬಿಕೆ ತಮ್ಮ ಫೇಸ್‌ಬುಕ್ ಅಕೌಂಟಿನಲ್ಲಿ ಮಾಡಿದ ಪೋಸ್ಟಿಗೆ, ಪರ, ವಿರೋಧ ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಅಷ್ಟಕ್ಕೂ ಅವರು ಬರೆದು ಕೊಂಡಿದ್ದು ಏನು? ಓದಿ. 

ಒಬ್ರಲ್ಲಾ ಒಬ್ರು ಯಾವಾಗ್ಲೂ 'ನೀವ್ಯಾಕೆ cleavage show ಮಾಡ್ತೀರಾ. ಚೂರು ಬಟ್ಟೆ ಮೇಲಿರ್ಬೇಕಿತ್ತು, ಎದೆ ಕಾಣ್ತಿದೆ...ಅದೂ ಇದೂ ಅಂತ inbox ಮಾಡೋರಿಗಾಗಿ...

ಮತ್ತೊಮ್ಮೆ ತಮ್ಮ ಎದೆ ಸೀಳು ತೋರಿಸಿ ಪಡ್ಡೆಗಳ ನಿದ್ದೆ ಕೆಡಿಸಿದ ಜ್ಯೋತಿ ರೈ

ಗುರೂ, ಹೆಣ್ಮಕ್ಳು ಮೈಗೆ ಏನೇನಾಗ್ತದೆ ಅಂತ ನಿಮಗರ್ಥವಾಗ್ತದ? ಒಂದು ವಾರಕ್ಕಿಂತ ಕಂಟಿನ್ಯುಯಸ್ಸಾಗಿ ಬ್ರಾ ಹಾಕಿದ್ರೆ, ಗಾಳಿ ಆಡದೇ ಎದೆ ಸೀಳು ಸೆಳೆತು, ಚರ್ಮದ ಸಿಬಿರು ಎದ್ದು ರಕ್ತ ಬರ್ತದೆ ಅಂತ ನಿಮ್ಮವ್ವ, ನಿಮ್ಮಕ್ಕ, ನಿಮ್ ತಂಗಿ, ಅಥ್ವ ನಿಮ್ ಗರ್ಲ್ ಫ್ರೆಂಡ್ಸ್ ಯಾರೂ ನಿಮಗೆ ಹೇಳಿಲ್ವಾ? ಅವ್ರು ಬಾಯ್ಬಿಟ್ಟು ತಮ್ಮ ದೇಹದ ಸಂಕಟಗಳನ್ನ ನಿಮ್ಮೊಟ್ಟಿಗೆ ಹಂಚ್ಕೊಂಡಿಲ್ಲ ಅಂದ್ರೆ, ನೀವಿನ್ನೆಷ್ಟರ ಮಟ್ಟಿಗೆ ಅವ್ರಿಗೆ comfort zone ಕೊಟ್ಟಿದ್ದೀರ  ಅಂತ ನಿಮ್ಮನ್ನ ನೀವು ಪ್ರಶ್ನೆ ಮಾಡ್ಕೊಳಿ. 

ನಿಮ್ breast ದಪ್ಪ ಇದೆ, sexy ಕಾಣ್ತೀರ ಈ ವಯಸ್ಸಲ್ಲೂ, ಅನ್ನೋರಿಗೆ 'ಹಾಗಂತ ಕುಯ್ದು ಮನೇಲಿ ಇಡ್ಬೇಕಾ...ನನ್ body ನಂದು ಗುರು...ಇಷ್ಟು size ಇರ್ಬೇಕು, ಇಷ್ಟು ಅಳತೆ ಇರ್ಬೇಕು  ಅಂತ order ಕೊಟ್ಟು manufactur ಮಾಡ್ಸಕೆ, ಹೆಣ್ಮಕ್ಳು ದೇಹ ಏನು ಫರ್ನಿಚರ್ ಕೆಟ್ಟೋಯ್ತಾ?
 
ಅಷ್ಟಕ್ಕೂ ನಿಮ್ಗಳ inbox ಹಲ್ಕ ಕೆಲ್ಸಗಳಿಗಿಂತ, ನಾವ್ಗಳು ಹೀಗಿರೋದು ನೂರು ಪಟ್ಟು ವಾಸಿ ಗುರು...ಒಬ್ಬ ಬೇವರ್ಸಿ ತಂಟೆಗೂ ಹೋಗ್ದೇ ನಮ್ ಪಾಡಿಗೆ ನಾವಿರೋದೇ ನಿಮ್ಗೆ ಸಂಕಟವಾ?
 
ಅಯ್ಯೋ seductive ಇದೆ, ಹಾಗ್ ಕಾಣುತ್ತೆ, ಹೀಗ್ ಕಾಣುತ್ತೆ ಅಂತ ಹೇಳೋರಿಗೆ....'ಅಲ್ಲಾ ಬ್ರೋ...ಗಂಡುಸ್ರು ಒಂದು ಚಡ್ಡಿ ಹಾಕ್ಕೊಂಡು ಪ್ರಪಂಚ ಎಲ್ಲಾ ಸುತ್ತುತಾರೆ...ನೀರಿಗೆ ಇಳಿದಾಗ, ಬರಿ ಮೈಯಲ್ಲಿ ಸಲೀಸಾಗಿ ಇಳೀತಾರೆ, ದೇವಸ್ಥಾನಗಳಲ್ಲಿ ಗಂಟೆ ಕಾಣಿಸೋ ಹಂಗ್ ತಂಡಿ ಪಂಚೆ ಉಟ್ಟು ಅಡ್ಡಾಡ್ತಿರ್ತಾರೆ. ಹಾಗಂತ ನೋಡಿದ್ ಗಂಡಸ್ರು ಮೇಲೆಲ್ಲಾ ಅಲ್ಲಿ ತಿರುಗಾಡೋ ಹೆಣ್ಮಕ್ಳು seduce ಆಗ್ತಾರಾ?

ಹೀಟ್‌ವೇವ್‌ನಲ್ಲಿ ಹಾರ್ಟ್‌ಬೀಟ್‌ ಏರಿಸಿದ ಅಮಿಷಾ ಪಟೇಲ್‌ 'ಹಾಟ್‌' ಲುಕ್‌!

ಅಷ್ಟಕ್ಕೂ seduce ಆದ್ರೆ, ಅದು ನಿಮ್ಗಳ weakness ಗುರು. You should work on yourself, not on women. ನೋಡ್ ನೋಡಿದವ್ರ ಮೇಲೆಲ್ಲಾ seduce ಆಗ್ತೀರಾ ಅಂದ್ರೆ ನೀವಿನ್ನೆಂತ ಗಂಡ್ ಮಿಂಡ್ರಿ ಮಕ್ಳು ಅಂತ ನಿಮ್ಮನ್ನ ನೀವು ಪ್ರಶ್ನೆ ಮಾಡ್ಕೋಬೇಕು. ಇದಕ್ಕೂ ಮೀರಿ ಜಟ್ಕಾ ಹೊಡ್ಕೊಂಡ್ ಸಾಯ್ತೀರಾ ಅಂದ್ರೆ, ಅದು ನಿಮ್ ಹಣೆಬರಹ, ನಿಮ್ಗಿರೋ ದರಿದ್ರ ಗುರು...ಹೆಣ್ಮಕ್ಳು ಏನೂ ಮಾಡಕಾಗಲ್ಲ. 
ನಮ್ಮ ದೇಹಕ್ಕೂ ಗಾಳಿ, ಬಿಸಿಲು ಬೀಳಬೇಕಲ್ವಾ? ಪ್ರಪಂಚದ ಮೂಲೆ ಮೂಲೆಯಿಂದ ಬಿಸಿಲನ್ನ ಹುಡುಕಿ, ಲಕ್ಷಾಂತರ ಜನ ನಮ್ ದೇಶಕ್ಕೆ ಬರ್ತರೆ. ಅಂತದ್ರಲ್ಲಿ ನಮ್ಮೂರಲ್ಲಿ, ನಮ್ಮ comfort ಬಟ್ಟೆ ಹಾಕ್ಕೊಂಡು ಅಡ್ಡಾಡೋಕೆ ನೀನ್ಯಾವ ದೊಣ್ಣೆ ನಾಯ್ಕ ಗುರು ಪರ್ಮಿಷನ್ ಕೇಳಕೆ. ಇಷ್ಟ ಇದ್ರೆ ನೋಡ್ಕೋ, ಕಷ್ಟ ಇದ್ರೆ ಕಣ್ಮುಚ್ಕೋ...ಇಲ್ವಾ unfriend ಮಾಡ್ಕೊಂಡ್ ಓಯ್ತಾ ಇರು. ಬ್ಲಾಕ್ ಮಾಡ್ಕೋ. ಬೇಜಾನ್ options ಇವೆ.  ಅದು ಬಿಟ್ಡು ನೀನ್ಯಾವ್ ಲಬಕ್ ದಾಸ ಗುರು ನನ್ನ ಹಂಗಿರಿ, ಹಿಂಗಿರಿ ಅನ್ನೋಕೆ? ನಿನ್ ಮನೆ ಜೀತಕ್ಕಿದ್ದೀನಾ ನಾನೇನು? 

ಹೆಣ್ಮಕ್ಳು ದೇಹಕ್ಕಾಗೋ ಬಾಧೆಗಳು ಅರ್ಥವಾಗಿಲ್ಲ ಅಂದ್ರೆ ಅದು, ಇಷ್ಟೂ ಶತಮಾನಗಳಲ್ಲಿ ಈ ಸಮಾಜದಲ್ಲಿ ಅಳವಡಿಸಿಕೊಂಡು ಬಂದಿರೋ practicesನಿಂದ ಬೇರೂರಿರೋ ಕೀಳು ಮನಸ್ಥಿತಿ...ನಾವೇನ್ ಮಾಡಣ? ನಿಮ್ಮ ದೇಹಕ್ಕೆ ಮಾತ್ರ ಗಾಳಿ, ನೀರು, ಬೆಳಕು, ಬಿಸಿಲು ಬೇಕು.‌ ಆ ಹಕ್ಕು, ಆ ಸ್ವಾತಂತ್ರ್ಯ ಹೆಣ್ಮಕ್ಳಿಗೆ ಬೇಡ ಅನ್ನೋಕೆ ನೀನ್ಯಾವ ಕಿತ್ತೋದ್ ನನ್ಮಗ ಗುರು... ಇನ್ನೂ ಎಷ್ಟು ಕಾಲ ಅಂತ ಸುಮ್ನಿರೋದು.

Latest Videos
Follow Us:
Download App:
  • android
  • ios