Women Health : ಪ್ರವಾಸ ಹೊರಟಾಗ ಬೇಗೆ ಪಿರಿಯಡ್ಸ್ ಆಗುವುದೇಕೆ?
ಮುಟ್ಟು ಅನೇಕ ಬಾರಿ ಅನಿಯಮಿತವಾಗಿ ಮಹಿಳೆಯರನ್ನು ಕಾಡುತ್ತದೆ. ಬೇಡವಾದ ಸಂದರ್ಭದಲ್ಲಿ ಪಿರಿಯಡ್ಸ್ ಆಗೋದೇ ಹೆಚ್ಚು. ಇದಕ್ಕೆ ಅನೇಕ ಕಾರಣವಿದೆ. ಪ್ರಯಾಣದ ವೇಳೆ ನಿಮಗೂ ಮುಟ್ಟು ಕಾಡಿದ್ರೆ ಯಾಕೆ ಎಂಬ ಉತ್ತರ ಇಲ್ಲಿದೆ.
ನಿಮ್ಮ ನೆಚ್ಚಿನ ಸ್ಥಳಕ್ಕೆ ಹೋಗ್ಬೇಕು, ಅಲ್ಲಿ ಏನೆಲ್ಲ ಎಂಜಾಯ್ ಮಾಡ್ಬೇಕು ಎನ್ನುವ ಬಗ್ಗೆ ನೀವು ಅನೇಕ ಕನಸನ್ನು ಕಂಡಿರ್ತೀರಿ. ಆದ್ರೆ ನಿಮ್ಮ ಕನಸೆಲ್ಲ ಪಿರಿಯಡ್ಸ್ ನುಂಗುತ್ತದೆ. ಪ್ರಯಾಣ ಶುರುವಾದ ಸಂದರ್ಭದಲ್ಲೇ ಪಿರಿಯಡ್ಸ್ ಆಗೋದಿದೆ. ಯಾವಾಗ್ಲೂ ನನಗೆ ಹೀಗೆ ಆಗುತ್ತೆ ಎನ್ನುವವರನ್ನು ನೀವು ಕೇಳಿರಬಹುದು. ವಿದೇಶಕ್ಕೆ ಹೋಗುವ ಪ್ಲಾನ್ ಮಾಡಿರಲಿ ಇಲ್ಲ ಬೇರೆ ಪ್ರವಾಸಿ ತಾಣಕ್ಕೆ ಹೋಗೋದಿರಲಿ, ಅನೇಕರಿಗೆ ಪ್ರವಾಸದ ಮಧ್ಯೆ ಪಿರಿಯಡ್ಸ್ ಆಗ್ತಿರುತ್ತದೆ. ಇನ್ನೂ ಪಿರಿಯಡ್ಸ್ ಬರಲು ನಾಲ್ಕೈದು ದಿನ ಬಾಕಿ ಇತ್ತು, ಇಷ್ಟುಬೇಕ ಹೇಗಾಯ್ತು ಎಂದು ಮಹಿಳೆಯರು ಕಂಗಾಲಾಗ್ತಾರೆ. ಮತ್ತೆ ಕೆಲವರು ನಾಲ್ಕೈದು ದಿನದ ಮೊದಲೇ ಪಿರಿಯಡ್ಸ್ ಬರಬೇಕಿತ್ತು. ಬೇಕು ಅಂತಲೇ ಮುಂದೆ ಹೋಗಿ ಈಗ ಬಂದಿದೆ ಎಂತಾ ಗೋಳಾಡ್ತಾರೆ.
ಪಿರಿಯಡ್ಸ್ (Periods) ಏಕೆ ಪ್ರಯಾಣ (Travel) ದ ವೇಳೆ ಬರುತ್ತೆ, ಪ್ರವಾಸಕ್ಕೂ ಪಿರಿಯಡ್ಸ್ ಗೂ ಏನು ಸಂಬಂಧ ಎಂಬುದನ್ನು ನಾವಿಂದು ನಿಮಗೆ ಹೇಳ್ತೇವೆ. ಮುಟ್ಟು ಹೇಗೆ ಕಾರ್ಯನಿರ್ವಹಿಸುತ್ತದೆ ಗೊತ್ತಾ? : ಮೆದುಳಿ (Brain) ನ ಭಾಗವಾಗಿರುವ ಪಿಟ್ಯುಟರಿ ಗ್ರಂಥಿ ಮತ್ತು ಹೈಪೋಥಾಲಮಸ್‌ನಿಂದ ಸ್ರವಿಸುವ ಹಾರ್ಮೋನ್ ಮುಟ್ಟನ್ನು ನಿಯಂತ್ರಿಸುತ್ತದೆ. ಇದರರ್ಥ ನಿಮ್ಮ ದೈಹಿಕ ಅಥವಾ ಭಾವನಾತ್ಮಕ ಸ್ಥಿತಿಯಲ್ಲಿನ ಯಾವುದೇ ಬದಲಾವಣೆಯಾದ್ರೆ, ಆಹಾರದ ಬದಲಾವಣೆಯಾದ್ರೆ ಮತ್ತು ದೈಹಿಕ ಬಳಲಿಕೆ, ಒತ್ತಡ ನಿಮ್ಮನ್ನು ಕಾಡಿದ್ರೆ, ನಿಮ್ಮ ಹಾರ್ಮೋನ್ ಬಿಡುಗಡೆಯಲ್ಲಿ ಬದಲಾವಣೆಯಾಗುತ್ತದೆ. ಇದ್ರಿಂದ ಮುಟ್ಟು ಯಾವಾಗ್ಲೋ ಕಾಡುವ ಸಾಧ್ಯತೆ ಇರುತ್ತದೆ.
WOMEN HEALTH: ಕಫ ದೋಷ ಪಿರಿಯಡ್ಸ್ ಮೇಲೂ ಪರಿಣಾಮ ಬೀರುತ್ತಾ?
ಅಂಡೋತ್ಪತ್ತಿಗೆ ಸರಿಯಾದ ಹಾರ್ಮೋನ್ ಬಿಡುಗಡೆಯಾಗೋದು ಮುಖ್ಯ. ಇದ್ರಲ್ಲಿ ಏರುಪೇರಾದಾಗ ಅವಧಿಗಳು ಪರಿಣಾಮ ಬೀರುತ್ತವೆ. ಪ್ರಯಾಣ ಮಾಡುವಾಗ್ಲೇ ಮುಟ್ಟು ಕಾಡೋದೇಕೆ ಎನ್ನುವ ನಿಮ್ಮ ಪ್ರಶ್ನೆಗೆ ಉತ್ತರಿಸೋದಾದ್ರೆ ಪ್ರಯಾಣಕ್ಕೂ, ಮುಟ್ಟಿಗೂ ನೇರ ಸಂಬಂಧವಿಲ್ಲ. ಆದ್ರೆ ಪ್ರಯಾಣದ ಕೆಲ ಅಂಶಗಳು ನಮ್ಮ ದೇಹದ ಮೇಲೆ ಪ್ರಭಾವ ಬೀರುತ್ತವೆ. ಅದು ಪರೋಕ್ಷವಾಗಿ ಮುಟ್ಟಿನ ಹಾರ್ಮೋನ್ ಮೇಲೆ ಕಾಣಿಸುತ್ತದೆ.
ಒತ್ತಡ (Stress) : ವಿವಿಧ ಪ್ರದೇಶಕ್ಕೆ ನಾವು ಪ್ರಯಾಣ ಬೆಳೆಸುವಾಗ ಒತ್ತಡ ಉಂಟಾಗುತ್ತದೆ. ಇದು ದೇಹದ ನೈಸರ್ಗಿಕ ಸಿರ್ಕಾಡಿಯನ್ ಲಯವನ್ನು ಅಡ್ಡಿಪಡಿಸುತ್ತದೆ. ಒತ್ತಡ ಮತ್ತು ಜೆಟ್ ಲ್ಯಾಗ್, ಹಾರ್ಮೋನ್ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಇದು ಮುಟ್ಟನ್ನು ಅನಿಯಮಿತಗೊಳಿಸುತ್ತದೆ.
ಆಹಾರ ಮತ್ತು ವ್ಯಾಯಾಮದಲ್ಲಿ ವ್ಯತ್ಯಾಸ (Differ in Food and exercise) : ಮನೆಯಲ್ಲಿ ನಿತ್ಯವಿದ್ದಂತೆ ನಾವು ಪ್ರವಾಸಕ್ಕೆ ಹೋದಾಗ ಇರಲು ಸಾಧ್ಯವಿಲ್ಲ. ಕೆಲವೊಮ್ಮೆ ಪ್ರವಾಸಕ್ಕೆ ಹೋಗುವ ಮೊದಲೆರಡು ದಿನಗಳಿಂದಲೇ ತಯಾರಿ ಶುರುವಾಗುವ ಕಾರಣ ಆಹಾರ ಹಾಗೂ ವ್ಯಾಯಾಮದಲ್ಲಿ ಏರುಪೇರಾಗಿರುತ್ತದೆ. ಹೊರಗಿನ ಆಹಾರ ಸೇವನೆ ಸೇರಿದಂತೆ ವಿಶ್ರಾಂತಿಯಿಲ್ಲದ ಪ್ರಯಾಣ ಹಾರ್ಮೋನ್ ಸಮತೋಲದ ಮೇಲೆ ಪರಿಣಾಮ ಬೀರುತ್ತದೆ. ಮುಟ್ಟಿನ ಕ್ರಮವನ್ನು ಅಡ್ಡಿಪಡಿಸುತ್ತದೆ.
ಸಂಬಂಧದಲ್ಲಿ ತುಂಬಾ ಸೂಕ್ಷ್ಮವಾಗಿರಬೇಡಿ, ಸ್ವಲ್ಪ ಸ್ಟ್ರಾಂಗ್ ಆಗಿರೋದೂ ಕಲೀರಿ!
ಬದಲಾದ ವಾತಾವರಣ (Climate Change) : ಪ್ರಯಾಣ ಮಾಡುವ ವೇಳೆ ವಾತಾವರಣ ಬದಲಾಗುತ್ತದೆ. ಉದಾಹರಣೆಗೆ ಉಷ್ಣ ಪ್ರದೇಶದಿಂದ ತಂಪಾದ ಹವಾಮಾನಕ್ಕೆ ದೇಹ ಹೊಂದಿಕೊಳ್ಳಲು ಸಮಯಬೇಕು. ಇದು ದೇಹದ ಹಾರ್ಮೋನ್ ಬಿಡುಗಡೆ ಮೇಲೆ ಪ್ರಭಾವ ಬೀರುತ್ತದೆ. ಇದ್ರಿಂದ ಮುಟ್ಟು ಕೂಡ ಬೇಗ ಅಥವಾ ತಡವಾಗಿ ಬರಬಹುದು.
ನಿತ್ಯ ಕೆಲಸದಲ್ಲಾಗುವ ಬದಲಾವಣೆ (Differ in Routine Work) : ನಮ್ಮ ದೇಹ ಒಂದು ಟೈಂ ಟೇಬಲ್ ಗೆ ಹೊಂದಿಕೊಂಡಿರುತ್ತದೆ. ಸರಿಯಾದ ಸಮಯಕ್ಕೆ ಊಟದ ಜೊತೆ ನಿದ್ರೆಯೂ ಮುಖ್ಯವಾಗಿರುತ್ತದೆ. ಆದ್ರೆ ಪ್ರವಾಸದ ವೇಳೆ ಎಲ್ಲವನ್ನೂ ಸರಿಯಾದ ಸಮಯಕ್ಕೆ ಮಾಡಲು ಸಾಧ್ಯವಾಗೋದಿಲ್ಲ. ಇದು ಪರೋಕ್ಷವಾಗಿ ಮುಟ್ಟಿನ ಹಾರ್ಮೋನ್ ಮೇಲೆ ಪರಿಣಾಮ ಬೀರುತ್ತದೆ. ಪ್ರವಾಸದ ವೇಳೆಯೇ ದಿಢೀರ್ ಮುಟ್ಟು ಕಾಣಿಸಿಕೊಳ್ಳಬಹುದು.
ಪ್ರವಾಸಕ್ಕೆ ಹೋಗುವ ಮುನ್ನ : ಪ್ರವಾಸಕ್ಕೆ ಹೋಗುವ ಮೊದಲು, ಪಿರಿಯಡ್ಸ್ ಹತ್ತಿರ ಬಂದಿರಲಿ ಇಲ್ಲ ಡೇಟ್ ದೂರವಿರಲಿ ನೀವು ಬ್ಯಾಗ್ ನಲ್ಲಿ ಪ್ಯಾಡ್ ಇಟ್ಟುಕೊಳ್ಳೋದನ್ನು ಮರೆಯಬೇಡಿ. ವಿಪರೀತ ಹೊಟ್ಟೆ ನೋವಿನ ಕಾರಣಕ್ಕೆ ಮಾತ್ರೆ ನುಂಗುವವರು ನೀವಾಗಿದ್ದರೆ ಅದನ್ನು ಕೂಡ ಜೊತೆಯಲ್ಲಿಟ್ಟುಕೊಳ್ಳಿ. ಅಪರಿಚಿತ ಪ್ರದೇಶದಲ್ಲಿ ಪ್ಯಾಡ್, ಮಾತ್ರೆ ಹುಡುಕ್ತಾ ಅಲೆಯೋದು ತಪ್ಪುತ್ತದೆ.