ಫೈಟಿಂಗ್ ಅಂದ್ರೆ ಇದು, ಪ್ಯಾಂಟ್ ಬಿಚ್ಚಿದ್ರೂ ಕುಗ್ಗದ ಹುಡುಗಿ!
ಸೋಶಿಯಲ್ ಮೀಡಿಯಾದಲ್ಲಿ ಹುಡುಗಿಯರ ಕಬಡ್ಡಿ ವಿಡಿಯೋ ವೈರಲ್ ಆಗಿದೆ. ಅದೇನ್ ಬಡಿದಾಡ್ಕೊಂಡಿದ್ದಾರೆ ಅಂದ್ರೆ ಪ್ಯಾಂಟ್ ಬಿಚ್ಚಿದ್ರು ಕ್ಯಾರೆ ಎಂದಿಲ್ಲ. ಜುಟ್ಟು ಹಿಡಿದು ಕಿತ್ತಾಡಿದ್ದಲ್ಲದೆ ಎಲ್ಲ ವೆರೈಟಿ ಫೈಟಿಂಗ್ ಪ್ರಯೋಗ ಮಾಡಿದ್ದಾರೆ.
ಹುಡುಗಿಯರು (Girls) ಬೀದಿಯಲ್ಲಿ ಕಿತ್ತಾಡೋದನ್ನು ನೋಡೋದೇ ಚೆಂದ. ಜಡೆ ಜಡೆ ಹಿಡಿದು ಹೊಡೆದಾಡ್ತಿದ್ದರೆ ನೆರೆದವರು ನಿಂತು ನೋಡ್ತಾರೇ ವಿನಃ ಸಹವಾಸಕ್ಕೆ ಹೋಗಲ್ಲ. ಯಾಕೆಂದ್ರೆ ಇಬ್ಬರ ಮಧ್ಯೆ ಮೂರನೇಯವರು ಬಂದ್ರೆ ಬಂದವನೇ ವಿಲನ್ ಆಗೋಗ್ತಾನೆ. ಸೋಶಿಯಲ್ ಮೀಡಿಯಾ (social media) ದಲ್ಲಿ ಬೀದಿ ಬದಿ ಜಗಳಗಳ ಸಾಕಷ್ಟು ವಿಡಿಯೋ ವೈರಲ್ (video viral) ಆಗ್ತಾನೆ ಇರುತ್ತೆ. ಗಂಡ ಹೆಂಡತಿ ಜಗಳ, ಹುಡುಗಿಯರ ಕಿತ್ತಾಟದ ಅನೇಕ ವಿಡಿಯೋಗಳು ಆಗಾಗ ಸದ್ದು ಮಾಡ್ತಿರುತ್ತವೆ. ಈಗ ಮತ್ತೊಂದು ವಿಡಿಯೋ ಪೋಸ್ಟ್ ಆಗಿದೆ. ಜಗಳ ಅಂದ್ರೆ ಇದು ಗುರು ಎನ್ನುತ್ತಿದ್ದಾರೆ ನೆಟ್ಟಿಗರು. ಪ್ಯಾಂಟ್ ಕಳಚಿಬಿದ್ರೂ ಕ್ಯಾರೇ ಎನ್ನದ ಹುಡುಗಿ, ಒಂದೇಟು ಹಾಕಿ ನಂತ್ರ ಪ್ಯಾಂಟ್ ಹಾಕಿಕೊಳ್ಳೋದನ್ನು ನೋಡಿ ಬಳಕೆದಾರರು ದಂಗಾಗಿದ್ದಾರೆ.
ಸೋಶಿಯಲ್ ಮೀಡಿಯಾ ಎಕ್ಸ್ ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ನಾಗಾಲ್ಯಾಂಡ್ ಹುಡುಗಿಯರು ಬೀದಿಯಲ್ಲಿ ಅಟ್ಟಾಡಿಸಿಕೊಂಡು ಹೊಡೆದಾಡಿದ್ದಾರೆ. ಗಲಾಟೆ ಎಷ್ಟು ಭಯಾನಕ ತಿರುವು ಪಡೀತು ಅಂದ್ರೆ ಒಬ್ಬ ಹುಡುಗಿ ಮೂರ್ಛೆ ಹೋದ್ಲು. ಆಕೆಯನ್ನು ರಕ್ಷಿಸಲು ನಿಂತಿದ್ದವರೆಲ್ಲ ಓಡಿ ಬಂದ್ರು. ಎಲ್ಲರೂ ಒಂದೇ ರೀತಿ ಡ್ರೆಸ್ ಹಾಕಿರೋದ್ರಿಂದ ಯಾವುದೋ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಇವರು ಎಂದು ಅಂದಾಜಿಸಲಾಗಿದೆ. ಆದ್ರೆ ಇದು ಸ್ಪಷ್ಟವಾಗಿಲ್ಲ. ಆರಂಭದಲ್ಲಿ ಜಗಳ ಹೇಗೆ ಶುರುವಾಯ್ತು ಎಂಬುದು ಗೊತ್ತಾಗಿಲ್ಲ. ಜಗಳದ ಮಧ್ಯೆ ಏಟು ತಿನ್ನುತ್ತಿರುವ ಹುಡುಗಿ, ಏಟು ನೀಡ್ತಿರೋ ಹುಡುಗಿ ಪ್ಯಾಂಟ್ ಹಿಡಿದು ಎಳೀತಾಳೆ. ಪ್ಯಾಂಟ್ ಕೆಳಗೆ ಬಿದ್ರೂ, ಹುಡುಗಿಗೆ ಪ್ರಜ್ಞೆ ಇರೋದಿಲ್ಲ. ಹೊಡೆಯೋದನ್ನು ಬಿಡದ ಹುಡುಗಿ, ನಾಲ್ಕೇಟು ಹಾಕಿದ್ಮೇಲೆ ಪ್ಯಾಂಟ್ ಮೇಲೆ ಏರಿಸಿಕೊಳ್ತಾಳೆ. ನಂತ್ರ ಆಕೆಯನ್ನು ಕೆಳಗೆ ಬೀಳಿಸಿ, ಮತ್ತೊಂದಿಷ್ಟು ಹೊಡೀತಾಳೆ. ಕೆಳಗೆ ಬೀಳುವ ಹುಡುಗಿ ಮೂರ್ಛೆ ಹೋಗ್ತಾಳೆ. ಇತ್ತ ಇನ್ನಿಬ್ಬರು ಹುಡುಗಿಯರು ಕೂಡ ಕಬಡ್ಡಿ ಆಡೋದನ್ನು ನೀವು ನೋಡ್ಬಹುದು. ಫಟ್ ಫಟ್ ಅಂತ ಕಪಾಳಮೋಕ್ಷ ಮಾಡುವ ಹುಡುಗಿ, ಬಾಲ್ ಎಸೆದಂತೆ ಇನ್ನೊಬ್ಬಳನ್ನು ಎತ್ತಿ ಬೀಸಾಕಿ ಆಕೆಗೆ ಒದೆಯುತ್ತಾಳೆ.
ಭಾರತದ ಈ ಫ್ಯಾಕ್ಟರಿಯಿಂದ ಯುರೋಪ್ ದೇಶಗಳಿಗೆ ಪೂರೈಕೆ ಆಗಲಿವೆ 2000 ಮಷೀನ್ ಗನ್
ಹುಡುಗಿ ಮೂರ್ಛೆ ಹೋಗ್ತಿದ್ದಂತೆ ಪರಿಸ್ಥಿತಿ ಸ್ವಲ್ಪ ತಿಳಿಯಾಗುತ್ತೆ. ನೆರೆದಿದ್ದವರು ಆಕೆಯನ್ನು ಎತ್ತಿ, ರಕ್ಷಿಸುವ ಕೆಲಸ ಮಾಡಿದ್ರೆ, ಮತ್ತೊಂದಿಷ್ಟು ಮಂದಿ ಕೋಪದಲ್ಲಿ ಕುದಿಯುತ್ತಿರುವ ಹುಡುಗಿಯನ್ನು ಶಾಂತಗೊಳಿಸುವ ಪ್ರಯತ್ನ ಮಾಡ್ತಿದ್ದಾರೆ. ವಿಡಿಯೋದಲ್ಲಿ ಹುಡುಗಿಯರು ಕಿರುಚಾಡೋದನ್ನು ನೀವು ಕೇಳ್ಬಹುದು.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ಪೊಲೀಸರು ಕ್ರಮಕೈಗೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು, ಯಾರ ಮಧ್ಯೆ ಜಗಳ ನಡೆದಿದೆ ಎಂಬುದನ್ನು ಪರಿಶೀಲನೆ ನಡೆಸ್ತಿದ್ದಾರೆ. ಈಗಿನ ಕಾಲದಲ್ಲಿ ರೀಲ್ ಮಾಡೋರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಈ ಹುಡುಗಿಯರು ರೀಲ್ ಗಾಗಿ ಹೊಡೆದಾಡಿದ್ದಾರಾ ಇಲ್ಲ ರಿಯಲ್ ಫೈಟಿಂಗಾ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಡಿದಾಡಿದ್ದು ನೋಡಿದ್ರೆ ಇದು ರೀಲ್ ಅಲ್ಲ ರಿಯಲ್ ಅನ್ನೋದು ಸ್ಪಷ್ಟವಾಗ್ತಿದೆ.
ಓದಿದ್ದೀರಿ, ಕೆಲಸ ಹುಡುಕಿಕೊಳ್ಳಿ: ಡಿವೋರ್ಸ್ ಕೇಸಲ್ಲಿ ಮಹಿಳೆಗೆ ಸಿಜೆ ಅಡ್ವೈಸ್
ಈ ಹುಡುಗಿಯರು ಡಬ್ಲ್ಯೂ ಡಬ್ಲ್ಯೂ ಇ ನೋಡಿ, ಸಖತ್ತಾಗಿ ಪ್ರಾಕ್ಟೀಸ್ ಮಾಡಿದಂತಿದೆ. ಎಲ್ಲ ವೆರೈಟಿ ಫೈಟಿಂಗನ್ನು ನೀವು ಇಲ್ಲೇ ನೋಡ್ಬಹುದು. ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ ಹುಡುಗಿಯರು ಇವರಾದ್ರೆ ಮೊದಲು ವಿವಿಯಿಂದ ಇವರನ್ನು ಹೊರಗೆ ಹಾಕಿ. ಇಂಥವರಿಂದ ವಾತಾವರಣ ಹದಗೆಡುತ್ತಿದೆ. ಹಾಗೆ ಬಿಟ್ರೆ ಮುಂದಿನ ದಿನಗಳಲ್ಲಿ ಇಂಥ ಘಟನೆ ಹೆಚ್ಚಾಗುತ್ತೆ ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ.
ಎರಡು ತಿಂಗಳ ಹಿಂದೆ ಹುಡುಗಿಯರ ಇಂಥದ್ದೇ ವಿಡಿಯೋ ಒಂದು ವೈರಲ್ ಆಗಿತ್ತು. ಲಕ್ನೋದ ಅಂಬೇಡ್ಕರ್ ಸ್ಮಾರಕ ಉದ್ಯಾನವನದಲ್ಲಿ ನಾಲ್ಕೈದು ಹುಡುಗಿಯರು ಕಿತ್ತಾಡಿಕೊಂಡಿದ್ದರು. ಇದನ್ನು ನೋಡಿದ ಬಳಕೆದಾರರು, ಬಿದ್ದು ಬಿದ್ದು ನಕ್ಕಿದ್ದರು. ಬೋಳು ತಲೆಯವರೇ ಸೇಫ್ ಅಂತ ಕಮೆಂಟ್ ಮಾಡಿದ್ರು.
Fainted after being beaten by a stick... #GirlsFight pic.twitter.com/JK7uLbPujG
— AndhBhakts Official (@a_bhaktOff) September 30, 2024