Women Power: ಪುರುಷರಿಗಿಂತ ಮಹಿಳಾ ಬಾಸ್ ಇರುವ ಕಂಪನಿಯೇ ಲಾಭದಲ್ಲಿ ಮುಂದೆ!

ಒಂದು ಕಂಪನಿಯಲ್ಲಿ ಎಲ್ಲರೂ ಮಹಿಳಾ ಉದ್ಯೋಗಿಗಳಾಗಿದ್ದರೂ ಬಾಸ್ ಮಾತ್ರ ಪುರುಷನಾಗಿರ್ತಾನೆ. ಮಹಿಳೆಯರಿಗೆ ಲೀಡರ್ಶಿಪ್ ನೀಡುವ ಕಂಪನಿಗಳು ಬೆರಳೆಣಿಕೆಯಷ್ಟು. ದೇಶ-ವಿದೇಶಗಳಲ್ಲಿ ಈಗ್ಲೂ ಲಿಂಗ ತಾರತಮ್ಯವಿದೆ. ಆದ್ರೆ ಕಂಪನಿಗೆ ಹೆಚ್ಚಿನ ಲಾಭ ಬೇಕೆಂದ್ರೆ ಅಧಿಕಾರ ಚುಕ್ಕಾಣಿಯನ್ನು ಯಾರಿಗೆ ನೀಡಬೇಕು ಗೊತ್ತಾ?
 

Companies With Female Leaders Outperform Those Dominated By Men

ನೂರು ರೂಪಾಯಿ ಇರಲಿ, ಲಕ್ಷಾಂತರ ರೂಪಾಯಿ ಇರಲಿ, ಇರೋದ್ರಲ್ಲಿ ಅಚ್ಚುಕಟ್ಟಾಗಿ ಸಂಸಾರ (Family) ನಿಭಾಯಿಸುವವಳು ಮಹಿಳೆ (Woman). ಪತಿ (Husband )ನೀಡಿದ ಹಣ (Money)ದಲ್ಲಿಯೇ ಮನೆ ನಡೆಸುವ ಜೊತೆಗೆ ಸ್ವಲ್ಪ ಪ್ರಮಾಣದಲ್ಲಿ ಹಣವನ್ನು ಉಳಿತಾಯ (Savings) ಮಾಡ್ತಾಳೆ. ಕುಟುಂಬ ನಿರ್ವಹಣೆ ಮಾತ್ರವಲ್ಲ ಒಂದು ಕಂಪನಿ (Company)ಯನ್ನು ನಡೆಸುವ ಚಾಕಚಕ್ಯತೆ, ಜಾಣ್ಮೆ, ಬುದ್ದಿವಂತಿಕೆ ಮಹಿಳೆಗಿದೆ. ಅನೇಕ ಕೆಲಸಗಳಿಗೆ ಮಹಿಳೆಯನ್ನೇ ಕಂಪನಿಗಳು ಆಯ್ಕೆ ಮಾಡಿಕೊಳ್ಳುತ್ತವೆ. ಇದಕ್ಕೆ ಮಹಿಳೆಯರ ತಾಳ್ಮೆ ಹಾಗೂ ಅಚ್ಚುಕಟ್ಟಾದ ಕೆಲಸವೇ ಕಾರಣ. ಮಹಿಳೆ ಒಂದು ಜವಾಬ್ದಾರಿವಹಿಸಿಕೊಂಡ್ರೆ ಅದನ್ನು ಸರಿಯಾಗಿ ನಿಭಾಯಿಸುತ್ತಾಳೆ. ಕಂಪನಿಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗ್ತಾಳೆ. ಇದಕ್ಕೆ ಇತ್ತೀಚಿಗೆ ನಡೆದ ವರದಿಯೊಂದು ಸಾಕ್ಷ್ಯವಾಗಿದೆ. 

ಯುರೋಪಿಯನ್ ದೇಶಗಳಲ್ಲಿ ಕೊರೊನಾ ಸೋಂಕಿನ ನಂತರ ಮಹಿಳೆ ಮುನ್ನಡೆಸುತ್ತಿರುವ ಕಂಪನಿಗಳು ವೇಗವಾಗಿ ಬೆಳೆಯುತ್ತಿವೆಯಂತೆ. ಬ್ರಿಟನ್‌ನ ಹೌಸ್ ಆಫ್ ಕಾಮನ್ಸ್ ನ ಅಧ್ಯಯನದಲ್ಲಿ ಇದು ಬಹಿರಂಗವಾಗಿದೆ. ವರದಿಯ ಪ್ರಕಾರ, ಪುರುಷರ ಪ್ರಾಬಲ್ಯ ಹೊಂದಿರುವ ಕಂಪನಿಗಳಿಗಿಂತ ಮಹಿಳೆಯರ ನೇತೃತ್ವದ ಕಂಪನಿಗಳ ಕಾರ್ಯಕ್ಷಮತೆ ಹಲವು ಪಟ್ಟು ಉತ್ತಮವಾಗಿದೆಯಂತೆ. ಈ ವರದಿಯನ್ನು ಬ್ರಿಟಿಷ್ ಪತ್ರಿಕೆ ದಿ ಗಾರ್ಡಿಯನ್ ಪ್ರಕಟಿಸಿದೆ. ಅದರ ಪ್ರಕಾರ, ಪುರುಷ ನಡೆಸುವ ಕಂಪನಿಗಳಿಗಿಂತ,ಮಹಿಳೆಯರು ನಡೆಸುವ ಕಂಪನಿಗಳು ಸುಮಾರು ಶೇಕಡಾ 40ರಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಬ್ರಿಟನ್‌ನಲ್ಲಿ ಆರ್ಥಿಕತೆಯನ್ನು ಮರಳಿ ಟ್ರ್ಯಾಕ್‌ಗೆ ತರಲು ಮಹಿಳೆಯರ ನಾಯಕತ್ವಬೇಕು ಎನ್ನುವ ಅಭಿಪ್ರಾಯ ನೀಡಲಾಗಿದೆ.  ಮಹಿಳೆಯರ ನೇತೃತ್ವದ ಸಂಸ್ಥೆಗಳ ಪ್ರಗತಿಯು ಸಾಂಕ್ರಾಮಿಕ ರೋಗದ ನಂತರ ಹೆಚ್ಚು ಕಂಡುಬರುತ್ತಿದೆ ಎಂಬುದಕ್ಕೆ ಬಲವಾದ ಪುರಾವೆಗಳಿವೆ. ಇದೇ ವೇಳೆ ಸಾಂಕ್ರಾಮಿಕ ರೋಗದಲ್ಲಿ ಮಹಿಳೆಯರ ಅಗತ್ಯಗಳನ್ನು ಕಡೆಗಣಿಸಲಾಗಿದೆ ಎಂದು ಈ ವರದಿಯಲ್ಲಿ ಆರೋಪಿಸಲಾಗಿದೆ.  

ಅಧ್ಯಯನದಲ್ಲಿ ಭಾಗಿಯಾದವರು ಏನು ಹೇಳ್ತಾರೆ?
ಈ ಅಧ್ಯಯನದಲ್ಲಿ ಭಾಗಿಯಾಗಿರುವ ಬ್ರಿಟನ್‌ನ ಲೇಬರ್ ಪಕ್ಷದ ನಾಯಕಿ ಅನ್ನೆಲೀಸ್ ಡಾಡ್ಸ್, ಬ್ರಿಟನ್‌ನಲ್ಲಿ ಕೊರೊನಾ ಸಾಂಕ್ರಾಮಿಕ ರೋಗದ ನಂತರದ ಆರ್ಥಿಕ ಸುಧಾರಣೆಗಳಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುವ ಅಗತ್ಯವಿದೆ. ಹೂಡಿಕೆಯ ಕೊರತೆ ಮತ್ತು ದೇಶದ ಕೆಲವು ಭಾಗಗಳಲ್ಲಿ ಮಕ್ಕಳ ಪಾಲನೆ ಕಾರಣಕ್ಕೆ ಕೆಲಸ ತೊರೆದವರಿಗೆ  ಅವಕಾಶಗಳನ್ನು ನೀಡಲಾಗಿಲ್ಲ. ಆದರೆ ಈಗಿನ ಸರಕಾರ ಮಹಿಳೆಯರ ಕಾಳಜಿ ಹಾಗೂ ಅವರಿಗೆ ಅವಕಾಶ ನೀಡಲು ಮುಂದಾಗಿದೆ ಎಂದವರು ಹೇಳಿದ್ದಾರೆ. 
ಕಾರ್ಯನಿರ್ವಾಹಕ ತಂಡಗಳಲ್ಲಿನ ಲಿಂಗ ತಾರತಮ್ಯದ ಕಾರಣದಿಂದಾಗಿ ಉನ್ನತ ಕಂಪನಿಗಳು ಶೇಕಡಾ 25ರಷ್ಟು ಲಾಭವನ್ನು ಪಡೆಯುತ್ತಿವೆ. ಆದರೆ, ಮಹಿಳಾ ನೇತೃತ್ವದಲ್ಲಿರುವ ಶೇಕಡಾ 30 ಕ್ಕಿಂತ ಹೆಚ್ಚು ಕಂಪನಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಮಹಿಳಾ ದಿನದಂದು ರೊಚ್ಚಿಗೆದ್ದ ನಾರಿಯರು... ಕ್ಷಮೆಯಾಚಿಸಿದ ಫ್ಲಿಪ್‌ಕಾರ್ಟ್

ಸಾಲ ಪಡೆಯೋದ್ರಲ್ಲೂ ಹಿಂದಿದ್ದಾರೆ ಮಹಿಳೆಯರು
ಪುರುಷರಿಗಿಂತ ಮಹಿಳೆಯರು ಕಡಿಮೆ ಸಾಲ ಪಡೆಯುತ್ತಾರೆ ಎಂಬುದಕ್ಕೂ ಪುರಾವೆಗಳಿವೆ. 15 ರಷ್ಟು ಬ್ಯಾಂಕ್‌ಗಳು ಮಾತ್ರ ಮಹಿಳೆಯರಿಂದ ಸಾಲಕ್ಕಾಗಿ ಅರ್ಜಿ ಸ್ವೀಕರಿಸಿವೆ. ಶೇಕಡಾ 22 ರಷ್ಟು ಮಹಿಳೆಯರು ಮಾತ್ರ ಹೊಸ ವ್ಯವಹಾರಕ್ಕಾಗಿ ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆಯುತ್ತಾರೆ. ಮಹಿಳೆಯರಿಗೆ ಸಮಾನತೆ ನೀಡಲು ಹೊಸ ಆಲೋಚನೆಗಳೊಂದಿಗೆ ಸುಮಾರು 1 ಲಕ್ಷ ಸ್ಟಾರ್ಟಪ್‌ಗಳನ್ನು ಆರಂಭಿಸಬೇಕು ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ. 

Mysore Queen Trishika: ಮೈಸೂರು ಮಹಾರಾಣಿ ತ್ರಿಶಿಕಾ ಲೈಫ್‌ಸ್ಟೈಲ್‌ ಹೇಗಿದೆ?

ಮಹಿಳಾ ಉದ್ಯಮಿಗಳ ಸಂಖ್ಯೆಯೂ ಕಡಿಮೆ
ಮಹಿಳಾ ನೇತೃತ್ವದ ಎಸ್‌ಎಂಇಗಳು (ಸಣ್ಣ ಮತ್ತು ಮಧ್ಯಮ ಉದ್ಯಮಗಳು) ಆರ್ಥಿಕ ಉತ್ಪಾದನೆಯಲ್ಲಿ ಸುಮಾರು 8.59 ಲಕ್ಷ ಕೋಟಿ ರೂಪಾಯಿ ಯೋಗದಾನ ನೀಡ್ತಿವೆ. ಆದರೆ ಬ್ರಿಟನ್ ನ ಬಿಇಐಎಸ್ ಇಲಾಖೆ (Business, Energy and Industrial Strategy) ಸಂಶೋಧನೆಯ ಪ್ರಕಾರ, ಕೇವಲ ಶೇಕಡಾ 16ರಷ್ಟು ಸಣ್ಣ ಉದ್ಯಮವಿದ್ದು, ಅದ್ರಲ್ಲಿ ಮೂರರಲ್ಲಿ ಒಬ್ಬರು ಮಾತ್ರ ಮಹಿಳಾ ಉದ್ಯಮಿಗಳಿದ್ದಾರೆಂದು ವರದಿಯಲ್ಲಿ ಹೇಳಲಾಗಿದೆ.  

Latest Videos
Follow Us:
Download App:
  • android
  • ios