Home Bar: ಮನೆಯಲ್ಲೇ ಮಿನಿ ಬಾರ್ ಬೇಕಾ? ಹೀಗೆ ವಿನ್ಯಾಸ ಮಾಡಿ
ಮನೆಯಲ್ಲೇ ಮಿನಿ ಬಾರ್ ಈಗಿನ ಟ್ರೆಂಡ್. ಮನೆ ಕಟ್ಟಿಸುವಾಗಲೇ ಮಿನಿ ಬಾರ್ ಇಟ್ಟುಕೊಳ್ಳುವ ಸ್ಥಳಕ್ಕಾಗಿ ವಿನ್ಯಾಸ ಮಾಡಿಸುವವರು ಹೆಚ್ಚಾಗಿದ್ದಾರೆ. ಮನೆಯ ಬಾರ್ ರಿಚ್ ಲುಕ್ ನಲ್ಲಿರಬೇಕಾದರೆ ಕೆಲವು ಅಂಶಗಳತ್ತ ಗಮನ ಕೊಡಿ.
ಮನೆಯಲ್ಲೇ ಮಿನಿ ಬಾರ್ (Mini Bar) ಇರಿಸಿಕೊಳ್ಳುವುದು ಇತ್ತೀಚಿನ ಟ್ರೆಂಡ್ (Trend). ಬಾರ್ ಗಳಿಗೆ ಹೋಗಿ ಕುಳಿತುಕೊಂಡು ಪೆಗ್ (Peg) ಏರಿಸುವ ಬದಲು ಮನೆಯಲ್ಲೇ ಕೆಲಸ ಮಾಡಿಕೊಂಡು, ತಮಗೆ ಬೇಕಾದಷ್ಟನ್ನು ಮಾತ್ರವೇ ಸೇವಿಸುವ ಮಂದಿ ಹೆಚ್ಚುತ್ತಿದ್ದಾರೆ. ಅಲ್ಲದೆ, ಮನೆ ವಾತಾವರಣದ ಖುಷಿಯೇ ಬೇರೆ. ಅಷ್ಟಕ್ಕೂ ಹೊರಗೆಲ್ಲಾದರೂ ಹೋಗಿ ಸೇವನೆ ಮಾಡುವಷ್ಟು ಪುರುಸೊತ್ತೂ ಬಹಳಷ್ಟು ಜನರಿಗೆ ಇರುವುದಿಲ್ಲ. ಹೀಗಾಗಿ, ಮನೆಯಲ್ಲೇ ಮಿನಿ ಬಾರ್ ಇರಿಸಿಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಮನೆ ಕಟ್ಟಿಸುವಾಗಲೇ ಮಿನಿ ಬಾರ್ ಬಗ್ಗೆ ಯೋಚಿಸುವವರಿದ್ದಾರೆ. ಸೀಮಿತ ಗೆಸ್ಟ್ (Guest) ಗಳನ್ನು ಆದರಿಸಲು ಅನುಕೂಲವಾಗುವಂತೆ ಬಾರ್ ವಿನ್ಯಾಸ (Design) ಮಾಡಿಕೊಳ್ಳುವ ಬಗ್ಗೆ ಯೋಚಿಸುತ್ತಾರೆ. ಹಣಕಾಸು (Financial) ಚೆನ್ನಾಗಿರುವವರು ಬಾರ್ ಗಾಗಿ ದೊಡ್ಡ ರೂಮ್ (Room) ಇಟ್ಟುಕೊಳ್ಳಲು ಯೋಚಿಸಿದರೆ, ಹೊರಗಿನವರಿಗೆ ಯಾರಿಗೂ ತಿಳಿಯಪಡಿಸದಂತೆ ಹಿಡನ್ ಬಾರ್ (Hidden Bar) ಇಟ್ಟುಕೊಳ್ಳಲೂ ಕೆಲವರು ಬಯಸುತ್ತಾರೆ.
ಮನೆಯಲ್ಲೇ ಮಿನಿ ಬಾರ್ ಇದ್ದರೆ ನಿಮ್ಮಲ್ಲಿರುವ ಯಾವುದೇ ರೀತಿಯ ಪಾನೀಯ, ಆಲ್ಕೋಹಾಲ್ (Alcohol), ವೈನ್ (Wine)ಗಳನ್ನು ನೀಟಾಗಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲವಾದರೆ, ಕಬೋರ್ಡಿನಲ್ಲೋ, ಬಟ್ಟೆಗಳ ಮಧ್ಯವೋ ಬಾಟಲಿಗಳನ್ನು ಇಟ್ಟುಕೊಂಡು ಫಜೀತಿ ಪಡಬೇಕಾಗುತ್ತದೆ. ಅಷ್ಟೇ ಅಲ್ಲ, ಒಂದೆಡೆ ಬಾಟಲಿಗಳನ್ನು ಶೇಖರಿಸಿ ಇಟ್ಟುಕೊಳ್ಳುವುದರಿಂದ ಯಾರಿಗೆ ಯಾವಾಗ ಬೇಕೋ ಆಗ ಬಹುಬೇಗ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಹೀಗಾಗಿ, ಮನೆಯಲ್ಲೇ ಬಾರ್ ಇಟ್ಟುಕೊಳ್ಳುವುದು ಇತ್ತೀಚೆಗೆ ಸಾಕಷ್ಟು ಜನಪ್ರಿಯವಾಗುತ್ತಿದೆ.
ನೀವು ಸಹ ಈ ಕೆಟೆಗರಿಗೆ ಸೇರಿದ್ದರೆ ಹೇಗೆಂದರೆ ಹಾಗೆ, ಎಲ್ಲೆಂದರಲ್ಲಿ ಬಾರ್ ನಿರ್ಮಿಸಿಕೊಳ್ಳಲು ಮುಂದಾಗಬೇಡಿ. ಬಾರ್ ವಿನ್ಯಾಸದ ಬಗೆಗೆ ಗಮನವಿರಲಿ. ವಿನ್ಯಾಸ ಮಾಡುವಾಗ ಪ್ರಮುಖವಾಗಿ ಮೂರು ಅಂಶಗಳ ಕುರಿತು ಆದ್ಯತೆ ನೀಡಿ.
Parenting Tips: ಹೊಟ್ಟೆಕಿಚ್ಚು ಪಡುವ ಮಕ್ಕಳ ಪಾಲಕರಿಗೆ ಕಿವಿಮಾತು
* ಗಾಢ (Dark) ಬಣ್ಣದ ಪೇಂಟ್ (Paint) ಇರಲಿ:
ಗಾಢ ಬಣ್ಣದ ಪೇಂಟ್ ಇರುವ ವಾತಾವರಣದಲ್ಲಿ ಕುಳಿತಿದ್ದರೆ ವ್ಯಕ್ತಿಗಳ ನಡುವೆ ಆಪ್ತತೆ ನಿರ್ಮಾಣವಾಗುತ್ತದೆ. ರೋಮ್ಯಾಂಟಿಕ್ ವಾತಾವರಣವೂ ಅರಿಯದೆಯೇ ಮೂಡುತ್ತದೆ. ಮನೆಯ ಬಾರ್ ಗೆ ಗಾಢ ವರ್ಣದ ಪೇಂಟಿಂಗ್ ಮಾಡುವುದು ಅತ್ಯಂತ ವೆಚ್ಚದಾಯಕ ಅಲ್ಲ. ಇದರಿಂದ ಆ ಸ್ಥಳಕ್ಕೆ ಸರಳವಾಗಿ ಲಕ್ಸುರಿಯಸ್ ಲುಕ್ ಬರುವಂತೆ ಮಾಡಬಹುದು. ಆಗ ವಾತಾವರಣಕ್ಕೊಂದು ಘನತೆ ತನ್ನಿಂತಾನೇ ದಕ್ಕಿಬಿಡುತ್ತದೆ. ಗೋಡೆಗಳಿಗೆ ಮಾತ್ರವೇ ಪೇಂಟ್ ಮಾಡಬೇಕೆಂದಿಲ್ಲ. ನಿಮ್ಮ ವಿನ್ಯಾಸಕ್ಕೆ ತಕ್ಕಂತೆ ಬಾಗಿಲು, ಕಿಟಕಿ, ಸೀಲಿಂಗ್ ಗೆ ಕೂಡ ದಟ್ಟ ವರ್ಣದ ಪೇಂಟ್ ಮಾಡಿಸಬಹುದು. ಅಥವಾ ಅವು ಕಾಂಟ್ರಾಸ್ಟ್ ಬಣ್ಣದಲ್ಲಿ ಕಾಣಿಸಲು ಹಾಗೆಯೇ ಇರಿಸಲೂಬಹುದು.
Alcohol Myths: ಮದ್ಯದ ಬಗ್ಗೆ ನೀವು ಅಂದ್ಕೊಂಡಿರೋದೆಲ್ಲ ನಿಜ ಅಲ್ಲಾರೀ..!
* ಮನೆಗೆ ತಕ್ಕಂತೆ ವಿನ್ಯಾಸ(Design) ಇರಲಿ
ಆಧುನಿಕ ಮನೆಗಳ ಬಾರ್ ಗಳೆಂದರೆ ಅದೊಂದು ಆಕರ್ಷಣೆಯ ಕೇಂದ್ರ ಎನಿಸುತ್ತದೆ. ಅಲ್ಲಿಯೇ ಸಾಕಷ್ಟು ಮನರಂಜನೆಯೂ ಆಗುವುದರಿಂದ ಬಾರ್ ಸ್ಥಳ ಸ್ವಲ್ಪ ವಿಸ್ತಾರವಾಗಿರಬೇಕು. ಲೈಟಿಂಗ್ ವ್ಯವಸ್ಥೆ ಚೆನ್ನಾಗಿರಲಿ. ತೀರ ಕಣ್ಣು ಕುಕ್ಕುವಂತಹ ಲೈಟ್ ಬೇಡ. ಸ್ವಲ್ಪ ಮಂದವಾಗಿರುವ ಲೈಟ್ ಗಳು ಅಲ್ಲಲ್ಲಿ ಇರಲಿ. ಹಾಗೂ ಕಂಫರ್ಟ್ ಫೀಲ್ ಬರುವಂತಹ ಆಸನಗಳನ್ನು ಹಾಕಿಸಿ. ಆದರೆ, ಹೇಗೆ ಇದ್ದರೂ ಮನೆಯ ವಿನ್ಯಾಸಕ್ಕೆ ತಕ್ಕಂತೆ ಬಾರ್ ಇರಲಿ. ಹೀಗಾಗಿ, ಹೂಡಿಕೆಯ ಗಾತ್ರದ ಬಗ್ಗೆಯೂ ಯೋಚನೆ ಮಾಡಿ. ಮನೆಯ ಮೌಲ್ಯಕ್ಕೆ ತಕ್ಕಂತೆ ಬಾರ್ ಕೂಡ ಇದ್ದರೆ ಅತ್ಯುತ್ತಮ.
* ಕನ್ನಡಿಗಳನ್ನು (Mirror) ಅಳವಡಿಸಿ
ಬಾರ್ ನ ಒಂದು ಬದಿಯಲ್ಲಿ ಮಿರರ್ ಅಳವಡಿಸುವುದು ಗ್ರೇಟ್ ಐಡಿಯಾ. ಇದರಿಂದ ಬಾರ್ ಗೆ ಕಮರ್ಷಿಯಲ್ ಲುಕ್ ಬರುತ್ತದೆ. ಕನ್ನಡಿಗಳನ್ನು ಅಳವಡಿಸುವುದರಿಂದ ಸ್ಥಳವೂ ದೊಡ್ಡದಾಗಿರುವಂತೆ ಭಾಸವಾಗುತ್ತದೆ. ಬಾರ್ ನಲ್ಲಿ ಹೆಚ್ಚು ಗ್ಲಾಸ್ ಶೆಲ್ಫ್ ಗಳನ್ನೇ ಬಳಸಿ. ಪ್ರತಿಫಲಿಸುವ ಗ್ಲಾಸ್ ಗಳಿಂದ ರಿಚ್ ಲುಕ್ ಬರುತ್ತದೆ. ಗ್ಲಾಸ್ ಗಳನ್ನು ಹೆಚ್ಚು ಬಳಸಿದಷ್ಟೂ ಅಲ್ಲಿನ ಸ್ಥಳ ವಿಸ್ತಾರವಾಗಿರುವಂತಹ ಭಾವನೆ ಮೂಡುತ್ತದೆ.
ಇನ್ನು ಹಿಡನ್ ಬಾರ್ ಇಟ್ಟುಕೊಳ್ಳಲು ಬಯಸುವವರಿಗೂ ಸಹ ಅವರದ್ದೇ ವ್ಯಾಪ್ತಿಯಲ್ಲಿ ಸಾಕಷ್ಟು ಅವಕಾಶಗಳಿವೆ. ಕಬೋರ್ಡ್ ಹಿಂದುಗಡೆ, ಡ್ರೆಸಿಂಗ್ ಟೇಬಲ್ ಹಿಂಭಾಗ, ಎದುರಿಗೆ ಮಿರರ್ ಇರುವಂತಹ ಕಬೋರ್ಡ್ ನಲ್ಲಿಯೂ ಮಿನಿ ಬಾರ್ ಸೆಟ್ ಮಾಡಿಕೊಳ್ಳಬಹುದು.