Asianet Suvarna News Asianet Suvarna News

ತಿರುಪತಿ ಭಕ್ತರಿಗೆ ವಂಚನೆ: 19 ನಕಲಿ ವೆಬ್ ಪತ್ತೆ!

ತಿರುಪತಿ ಹೆಸರಲ್ಲಿ ಭಕ್ತರಿಗೆ ವಂಚನೆ: 19 ವೆಬ್‌ಸೈಟ್‌ ಗುರುತಿಸಿ, ಟಿಟಿಡಿ ಕ್ರಮ| ನಕಲಿ ವೆಬ್‌ಸೈಟ್‌ಗಳ ತಡೆಗೆ ದೇವಸ್ಥಾನದ ಆಡಳಿತ ಮಂಡಳಿ ಅಗತ್ಯ ಕ್ರಮ

TTD steps up vigil on 19 sites cheating devotees urges to be cautious with fake websites
Author
Bangalore, First Published Feb 7, 2020, 12:16 PM IST

ತಿರುಪತಿ[ಫೆ.07]: ಆಂಧ್ರಪ್ರದೇಶದ ಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ)ಗೆ ಟಿಟಿಡಿ ಹೆಸರಿನಲ್ಲಿ ಭಕ್ತಾದಿಗಳಿಗೆ ವಂಚಿಸುತ್ತಿರುವ ನಕಲಿ ವೆಬ್‌ಸೈಟ್‌ಗಳ ಜಾಲ ಸಮಸ್ಯೆ ಹೊಸ ಮತ್ತ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಇಂಥ 19 ನಕಲಿ ವೆಬ್‌ಸೈಟ್‌ ಜಾಲಗಳನ್ನು ಭೇದಿಸಿರುವ ಟಿಟಿಡಿಯ ಭದ್ರತಾ ಘಟಕ, ಈ ಸಂಬಂಧ ದೂರು ದಾಖಲಿಸಿದೆ. ಅಲ್ಲದೆ, ನಕಲಿ ವೆಬ್‌ಸೈಟ್‌ಗಳ ತಡೆಗೆ ದೇವಸ್ಥಾನದ ಆಡಳಿತ ಮಂಡಳಿ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

ತಿರುಪತಿಗೆ ಹೋಗುವ ಪ್ರತಿ ಭಕ್ತರಿಗೂ 1 ಉಚಿತ ಲಡ್ಡು!

ಈ ನಕಲಿ ವೆಬ್‌ಸೈಟ್‌ಗಳಲ್ಲಿ ಭಕ್ತಾದಿಗಳಿಗೆ 300 ರು.ಗೆ ವಿಶೇಷ ದರ್ಶನ, ಸೇವೆಗಳು ಹಾಗೂ ವಸತಿ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ಎಂದು ಆಮಿಷವೊಡ್ಡಿ ವಂಚಿಸಲಾಗುತ್ತಿದೆ. ಈ ಬಗ್ಗೆ ಭಕ್ತರ ದೂರಿನ ಹಿನ್ನೆಲೆ ಟಿಟಿಡಿ ಈ ಕ್ರಮ ಕೈಗೊಂಡಿದೆ.

ತಿಮ್ಮಪ್ಪನ ದೇವಾಲಯದ ಮೇಲೆ ವಿಮಾನ ಹಾರಾಟ: ಆತಂಕ, ಟಿಟಿಡಿ ಆಕ್ಷೇಪ

ವಿಶ್ವವಿಖ್ಯಾತ ಶ್ರೀ ವೆಂಕಟೇಶ್ವರ ದೇವಾಲಯದ ಮೇಲೆ ಎರಡು ದಿನಗಳ ಹಿಂದೆ ಖಾಸಗಿ ವಿಮಾನವೊಂದು ಹಾರಾಟ ನಡೆಸಿದ್ದು, ಆತಂಕಕ್ಕೆ ಕಾರಣವಾಗಿತ್ತು. ಬಳಿಕ ಅದು ಸರ್ವೇ ಆಫ್‌ ಇಂಡಿಯಾಕ್ಕೆ ಸಂಬಂಧಿಸಿದ ವಿಮಾನ ಎಂಬುದು ತಿಳಿದುಬಂದಿದೆ.

ಸಹೋದ್ಯೋಗಿ ಜತೆ ‘ಸರಸ ಸಲ್ಲಾಪದ ಮಾತು’: TTD ಚಾನೆಲ್‌ ಮುಖ್ಯಸ್ಥ ರಾಜೀನಾಮೆ!

ಫೆಬ್ರವರಿ 6ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios