Asianet Suvarna News Asianet Suvarna News

ರಾತ್ರಿ ಹೊತ್ತು ಮೊಬೈಲ್ ಚಾರ್ಜ್‌ಗೆ ಹಾಕಿ ಮಲಗ್ತೀರಾ? ಬಂದಿದೆ ಹೊಸ ಫೀಚರ್

ರಾತ್ರಿ ವೇಳೆ ಮೊಬೈಲ್ ಚಾರ್ಜ್‌ಗೆ ಹಾಕಲು ಭಯವೇ? ಹಾಗಾದ್ರೆ ಇನ್ಮುಂದೆ ಆ ಟೆನ್ಶನ್ ಇರಲ್ಲ ; ಒನ್‌ಪ್ಲಸ್‌ ಹೊಸ ಫೀಚರ್‌ ಆಪ್ಟಿಮೈಸ್ಡ್‌ ಚಾರ್ಜಿಂಗ್‌! ಹಾಗಂದ್ರೆ ಏನು? ಈ ಸ್ಟೋರಿ ಓದಿ
 

Optimized Charging Oneplus launches New Feature For Night Charging
Author
Bengaluru, First Published Jan 11, 2020, 6:25 PM IST

ಮೊಬೈಲ್‌ನಲ್ಲಿ ಚಾರ್ಜಿಲ್ಲ, ರಾತ್ರಿ ಹೊತ್ತು ಚಾರ್ಜ್‌ಗೆ ಹಾಕಿ ಮಲಗೋದಿಕ್ಕೆ ಏನೋ ಭಯ. ಓವರ್‌ಚಾರ್ಜ್‌ ಆಗಿ ಏನಾದ್ರೂ ಆಗ್ಬಿಟ್ರೆ ಎಂಬ  ಎಂಬ ಆತಂಕ. ಆದರೆ ಈಗ ರಾತ್ರಿ ಹೊತ್ತು ಚಾರ್ಜ್ ಹಾಕಿ ನಿದ್ದೆ ಹೋಗುವವರಿಗೆ ಹ್ಯಾಪಿ ನ್ಯೂಸ್‌ ಬಂದಿದೆ.

ಒನ್‌ ಪ್ಲಸ್‌ ಕಂಪನಿ ಹೊಸತೊಂದು ಫೀಚರ್‌ ಜಗತ್ತಿಗೆ ಅರ್ಪಿಸಿದೆ. ಅದರ ಹೆಸರು ಆಪ್ಟಿಮೈಸ್ಡ್‌ ಚಾರ್ಜಿಂಗ್‌. ಈ ಫೀಚರ್‌ ಜಾಸ್ತಿ ಚಾರ್ಜ್ ಆಗುವುದನ್ನು ತಪ್ಪಿಸುತ್ತದೆ. ರಾತ್ರಿ ಫೋನ್‌ ಚಾರ್ಜ್ ಹಾಕಿಟ್ಟರೆ ಪೂರ್ತಿ ಚಾರ್ಜ್ ಆದ ಮೇಲೆ ಚಾರ್ಜ್ ಆಗುವುದು ನಿಲ್ಲುತ್ತದೆ. 

ಇದನ್ನೂ ಓದಿ | ಹೊಸ ವರ್ಷಕ್ಕೆ ಜಿಯೋ ಧಮಾಕಾ; ಹೊಸ ಸೇವೆ, ಹೊಸ ಸೌಲಭ್ಯ, ಬಿಲ್‌ಕುಲ್ ಉಚಿತ..

ಹಾಗಾಗಿ ಅತಿಯಾಗಿ ಚಾರ್ಜ್ ಆಗುತ್ತದೆ ಎಂಬ ಟೆನ್ಷನ್‌ ಇಲ್ಲವಾಗಲಿದೆ. ಒನ್‌ ಪ್ಲಸ್‌ 7 ಸೀರೀಸ್‌ ಫೋನ್‌ಗಳಲ್ಲಿ ಈ ಫೀಚರ್‌ ಲಭ್ಯವಾಗಲಿದೆ. ಮುಂದಿನ ದಿನಗಳಲ್ಲಿ ಈ ಫೀಚರ್‌ ಇತರ ಫೋನ್‌ಗಳಿಗೂ ಬರಬಹುದು.

Follow Us:
Download App:
  • android
  • ios